ಯುಗಾದಿ, ಏಪ್ರಿಲ್ ಫೂಲ್ ದಿನ ಮತ್ತು ರೋಮನ್ ಹೊಸ ವರ್ಷಗಳ ನಡುವಿನ ಸಂಬಂಧ | Ugadi, Roman (Christian) new year, April Fool’s Day relationship in Kannada
ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.
ಭಗವಂತ ಶ್ರೀ ವಿಷ್ಣುವಿನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!
ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.
#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.
“ಯುಗಾದಿ, ಏಪ್ರಿಲ್ ಫೂಲ್ ದಿನ ಮತ್ತು ರೋಮನ್ ಹೊಸ ವರ್ಷಗಳ ನಡುವಿನ ಸಂಬಂಧ | Ugadi, Roman (Christian) new year, April Fool’s Day relationship in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪ್ರಿಯ ಗೆಳೆಯರೆ, ನಾವು ಕೆಲವು ತರಕಾರಿಗಳು ಅಥವಾ ಹಣ್ಣುಗಳನ್ನು ಖರೀದಿಸಲು ಪ್ರಯತ್ನಿಸಿದಾಗ, ನಾವು ಅದರ ಬಗ್ಗೆ ಎಲ್ಲಾ ರೀತಿಯ ಸಂಶೋಧನೆಗಳನ್ನು ಮಾಡುತ್ತೇವೆ.
ತರಕಾರಿ ಅಥವಾ ಹಣ್ಣು ತಾಜಾವಾಗಿದೆಯೇ ಅಥವಾ ಇಲ್ಲವೇ ಎಂದು ನಾವು ನೋಡುತ್ತೇವೆ.
ಇದು ಯಾವುದೇ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿದೆಯೇ? ಇದು ಕೆಲವು ಹುಳುಗಳಿಂದ ಪ್ರಭಾವಿತವಾಗಿದೆಯೋ ಇಲ್ಲವೋ?
ನಾವು ಎಲ್ಲಾ ರೀತಿಯ ಪತ್ತೇದಾರಿ ಕೆಲಸಗಳನ್ನು ಮಾಡುತ್ತೇವೆ.
ನಮ್ಮ ಮಗುವನ್ನು ಶಾಲೆಗೆ ಸೇರಿಸಬೇಕಾದರೆ, ನಾವು ನಮ್ಮ ನೆರೆಹೊರೆಯವರೆಲ್ಲರನ್ನು, ನಮ್ಮ ಸ್ನೇಹಿತರನ್ನು, ನಮ್ಮ ಸಂಬಂಧಿಕರನ್ನು ವಿವಿಧ ಶಾಲೆಗಳ ಬಗ್ಗೆ ಕೇಳುತ್ತೇವೆ.
ಭಾರೀ ಸಂಶೋಧನೆ ಮಾಡಿದ ನಂತರ ನಾವು ನಮ್ಮ ಮಕ್ಕಳನ್ನು ಸಾಧ್ಯವಾದಷ್ಟು ಉತ್ತಮ ಶಾಲೆಗೆ ಸೇರಿಸುತ್ತೇವೆ.
ಅದೇ ರೀತಿ ನಾವು ನಮ್ಮ ಆರೋಗ್ಯದ ಬಗ್ಗೆ ಅಭಿಪ್ರಾಯ ತೆಗೆದುಕೊಳ್ಳಬೇಕಾದರೆ ನಾವು ಖಾಸಗಿ ಆರೋಗ್ಯ ಚಿಕಿತ್ಸಾಲಯಗಳು / ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯರ ಬಳಿಗೆ ಹೋಗಲು ಬಯಸುತ್ತೇವೆ.
ನಿರ್ದಿಷ್ಟ ಆಸ್ಪತ್ರೆ ಮತ್ತು ವೈದ್ಯರ ಬಗ್ಗೆ ನಾವು ನಮ್ಮ ಹಲವಾರು ಸ್ನೇಹಿತರು, ಸಂಬಂಧಿಕರು ಇತ್ಯಾದಿಗಳೊಂದಿಗೆ ವಿಚಾರಿಸುತ್ತೇವೆ.
ನಂತರ ಸಾಕಷ್ಟು ಸಂಶೋಧನೆಗಳನ್ನು ಮಾಡಿದ ನಂತರ ಮಾತ್ರ ನಾವು ನಿರ್ದಿಷ್ಟ ಆಸ್ಪತ್ರೆ ಮತ್ತು ನಿರ್ದಿಷ್ಟ ವೈದ್ಯರನ್ನು ಆಯ್ಕೆ ಮಾಡುತ್ತೇವೆ.
ನಾವು ಈ ಎಲ್ಲಾ ಕೆಲಸಗಳನ್ನು ಮಾಡುತ್ತಿರುವಾಗ:
ನಾವು ಹೊಸ ವರ್ಷವನ್ನು ಯಾವಾಗ ಆಚರಿಸಬೇಕು ಎಂದು ನಾವು ಏಕೆ ಯೋಚಿಸುವುದಿಲ್ಲ?
ಹೊಸ ವರ್ಷದ ಅರ್ಥವೇನು ಎಂದು ಏಕೆ ಯೋಚಿಸುವುದಿಲ್ಲ?
ನಾವು ಹೊಸ ವರ್ಷವನ್ನು ಏಕೆ ಆಚರಿಸಬೇಕೆಂದು ಏಕೆ ಯೋಚಿಸುವುದಿಲ್ಲ?
ಜನವರಿ 1 ರಂದು ಹೊಸ ವರ್ಷವನ್ನು ಆಚರಿಸುವುದು ಸರಿಯೇ ಅಥವಾ ಇಲ್ಲವೇ ಎಂದು ಏಕೆ ಯೋಚಿಸುವುದಿಲ್ಲ?
ಬನ್ನಿ ಸ್ನೇಹಿತರೆ ಈಗ ಇದರ ಬಗ್ಗೆ ತಿಳಿದುಕೊಳ್ಳೋಣ:
ಮುಂಚೆ ಇಂಗ್ಲೀಷ್ ಕ್ಯಾಲೆಂಡರ್ ಅನ್ನು ಜೂಲಿಯಸ್ ಕ್ಯಾಲೆಂಡರ್ ಎಂದು ಕರೆಯಲಾಗುತ್ತಿತ್ತು, ಅದರಲ್ಲಿ ಕೇವಲ 10 ತಿಂಗಳುಗಳು ಮಾತ್ರ ಇದ್ದವು, ಅಂದರೆ:
ಮಾರ್ಚ್ – March 1ನೇ ತಿಂಗಳು
ಏಪ್ರಿಲ್ – April 2ನೇ ತಿಂಗಳು
ಮೇ – May 3ನೇ ತಿಂಗಳು
ಜೂನ್ – June 4ನೇ ತಿಂಗಳು
ಕ್ವಿಂಟಿಲಿಸ್ – Quintilis (ಇಂದಿನ ಜುಲೈ) – 5ನೇ ತಿಂಗಳು
ಸೆಕ್ಸ್ ಟಿಲಿಸ್ – Sextilis (ಇಂದಿನ ಆಗಸ್ಟ್) – 6ನೇ ತಿಂಗಳು
ಸೆಪ್ಟೆಂಬರ್ – September 7ನೇ ತಿಂಗಳು
ಅಕ್ಟೋಬರ್ – October 8ನೇ ತಿಂಗಳು
ನವೆಂಬರ್ – November 9ನೇ ತಿಂಗಳು ಮತ್ತು
ಡಿಸೆಂಬರ್ – December 10ನೇ ತಿಂಗಳು
ಆದರೆ ನಂತರ ಕ್ರೈಸ್ತರ ಈಸ್ಟರ್ ಒಂದು ನಿರ್ದಿಷ್ಟ ಸಮಯದಲ್ಲಿ ನಿಖರವಾಗಿ ಬರದ ಕಾರಣ ಅದನ್ನು ಪೂರ್ಣ ವರ್ಷವನ್ನಾಗಿ ಮಾಡಲು ಇನ್ನೂ ಎರಡು ತಿಂಗಳುಗಳನ್ನು (ಜನವರಿ ಮತ್ತು ಫೆಬ್ರವರಿ) ಸೇರಿಸಲಾಯಿತು.
ಹಿಂದೆ ಈಸ್ಟರ್ ಒಂದು ನಿಖರವಾದ ತಿಂಗಳಲ್ಲಿ ಬರುತ್ತಿರಲಿಲ್ಲ. ಅಂದರೆ, ಇದು ಒಮ್ಮೆ ಮಾರ್ಚ್‌ನಲ್ಲಿ ಬರುತ್ತಿತ್ತು, ಒಮ್ಮೆ ಏಪ್ರಿಲ್ ನಲ್ಲಿ ಬರುತ್ತಿತ್ತು, ಒಮ್ಮೆ ಮೇ ನಲ್ಲಿ, ಹೀಗೆ ಬರುತ್ತಿತ್ತು.
ಇದನ್ನು ಸರಿಹೊಂದಿಸಲು, ಯೂರೋಪ್ ನವರು ಮೊದಲು ಹಿಂದೂ ಪಂಚಾಂಗವನ್ನು (ಕ್ಯಾಲೆಂಡರ್) ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು ಮತ್ತು ಅವರು ಹಿಂದೂ ಪಂಚಾಂಗದ ಪ್ರಕಾರ ಸರಿಹೊಂದಿಸಿದರು.
ಹೀಗೆ ಒಟ್ಟು ಹನ್ನೆರಡು ತಿಂಗಳುಗಳು ಅಸ್ತಿತ್ವಕ್ಕೆ ಬಂದವು.
ಈ ಹೊಸ ಇಂಗ್ಲೀಷ್ ಕ್ಯಾಲೆಂಡರ್ ಅನ್ನು ಗ್ರಿಗೋರಿಯನ್ ಕ್ಯಾಲೆಂಡರ್ ಎಂದು ಕರೆಯಲಾಗುತ್ತದೆ, ಇದನ್ನು ಸುಮಾರು 500 ವರ್ಷಗಳ ಹಿಂದೆಯಷ್ಟೇ ಪ್ರಾರಂಭಿಸಲಾಗಿತ್ತು.
(ಕೆಲವರು ಇದನ್ನು ಕ್ರಿ.ಪೂ. ವರ್ಷದಲ್ಲಿ ಸೇರಿಸಲಾಗಿದೆ ಎಂದು ಹೇಳುತ್ತಾರೆ – ಇದು ಖಚಿತವಾಗಿಲ್ಲ, ಆದರೆ ಖಂಡಿತವಾಗಿಯೂ ತಿಂಗಳುಗಳನ್ನು ಸೇರಿಸಲಾಗಿದೆ ಎಂಬುದು ನೂರಕ್ಕೆ ನೂರರಷ್ಟೂ ನಿಜ).
ಜೂಲಿಯಸ್ (ಹಳೆಯ ಕ್ಯಾಲೆಂಡರ್) ಕ್ಯಾಲೆಂಡರ್‌ನಲ್ಲಿ ಕೇವಲ ಹತ್ತು ತಿಂಗಳುಗಳಿದ್ದವು:
ಅದರಲ್ಲಿ ಕೊನೆಯ ಆರು ತಿಂಗಳುಗಳಾದ ಕ್ವಿಂಟಿಲಿಸ್ (ಇಂದಿನ ಜುಲೈ ತಿಂಗಳು – 5ನೇ ತಿಂಗಳು), ಸೆಕ್ಸ್ ಟಿಲಿಸ್ (ಇಂದಿನ ಆಗಸ್ಟ್ ತಿಂಗಳು – 6ನೇ ತಿಂಗಳು), ಸೆಪ್ಟೆಂಬರ್ (7ನೇ ತಿಂಗಳು),
ಅಕ್ಟೋಬರ್ (8ನೇ ತಿಂಗಳು), ನವೆಂಬರ್ (9ನೇ ತಿಂಗಳು) ಮತ್ತು ಡಿಸೆಂಬರ್ (10ನೇ ತಿಂಗಳು) ಶುದ್ಧ ಭಾರತೀಯ ಸಂಸ್ಕೃತದ ಹೆಸರುಗಳೇ ಆಗಿವೆ.
ಉದಾಹರಣೆಗೆ:
ಕ್ವಿಂಟಿಲಿಸ್ – Quintilis (ಜೂಲಿಯಸ್ ಕ್ಯಾಲೆಂಡರ್‌ನ ಐದನೇ ತಿಂಗಳು). ಸಂಸ್ಕೃತದಲ್ಲಿ ಪಂಚ ಎಂದರೆ 5. ಇಲ್ಲಿ ಉಚ್ಚಾರಣೆಯ ವ್ಯತ್ಯಾಸವಿದೆ, ಅಂದರೆ ಪಂಚ ಎನ್ನುವ ಬದಲು, ಯೂರೋಪ್ನವರು ಇದನ್ನು ಕ್ವಿನ್ ಎಂದು ಉಚ್ಚರಿಸಿದ್ದಾರೆ.
ಸೆಕ್ಸ್ ಟಿಲಿಸ್ – Sextilis (ಜೂಲಿಯಸ್ ಕ್ಯಾಲೆಂಡರ್‌ನ ಆರನೇ ತಿಂಗಳು). ಸಂಸ್ಕೃತದಲ್ಲಿ ಷಷ್ಠಿ ಅಥವಾ ಷಟ್ ಎಂದರೆ 6. ಇಲ್ಲಿ ಉಚ್ಚಾರಣೆಯ ವ್ಯತ್ಯಾಸವಿದೆ, ಅಂದರೆ ಷಟ್ ಬದಲಿಗೆ, ಯೂರೋಪ್ ನವರು ಇದನ್ನು ಸೆಕ್ಸ್ಟ್ ಎಂದು ಉಚ್ಚರಿಸಿದ್ದಾರೆ.
ಸೆಪ್ಟೆಂಬರ್ – September (ಜೂಲಿಯಸ್ ಕ್ಯಾಲೆಂಡರ್‌ನ ಏಳನೇ ತಿಂಗಳು). ಸಂಸ್ಕೃತದಲ್ಲಿ ಸಪ್ತ ಎಂದರೆ 7. ಮತ್ತೊಮ್ಮೆ ಉಚ್ಚಾರಣೆಯಲ್ಲಿಯೇ ವ್ಯತ್ಯಾಸ.
ಅಕ್ಟೋಬರ್ – October (ಜೂಲಿಯಸ್ ಕ್ಯಾಲೆಂಡರ್‌ನ ಎಂಟನೇ ತಿಂಗಳು). ಸಂಸ್ಕೃತದಲ್ಲಿ ಅಷ್ಟ ಎಂದರೆ 8. ಮತ್ತೊಮ್ಮೆ ಉಚ್ಚಾರಣೆಯಲ್ಲಿಯೇ ವ್ಯತ್ಯಾಸ.
ನವೆಂಬರ್ – November (ಜೂಲಿಯಸ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು). ಸಂಸ್ಕೃತದಲ್ಲಿ ನವಮ ಎಂದರೆ 9. ಮತ್ತೊಮ್ಮೆ ಉಚ್ಚಾರಣೆಯಲ್ಲಿಯೇ ವ್ಯತ್ಯಾಸ.
ಡಿಸೆಂಬರ್ – December (ಜೂಲಿಯಸ್ ಕ್ಯಾಲೆಂಡರ್‌ನ ಹತ್ತನೇ ತಿಂಗಳು). ಸಂಸ್ಕೃತದಲ್ಲಿ ದಶಮ ಎಂದರೆ 10. ಮತ್ತೊಮ್ಮೆ ಉಚ್ಚಾರಣೆಯಲ್ಲಿಯೇ ವ್ಯತ್ಯಾಸ.
ಹಿಂದೆ ಯೂರೋಪ್ನವರು, ಪಾಶ್ಚಿಮಾತ್ಯರು ಮತ್ತು ಇತರರು ಹಿಂದೂ ಹೊಸ ವರ್ಷವಾದ ಯುಗಾದಿ / ಉಗಾದಿ ಎಂದು ಕರೆಯಲ್ಪಡುವ ಹೊಸ ವರ್ಷವನ್ನು ಆಚರಿಸುತ್ತಿದ್ದರು, ಇದು ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಬರುತ್ತದೆ.
ಆದ್ದರಿಂದ ಯೂರೋಪಿಯನ್ನರ ಮುಖ್ಯಸ್ಥರು, ತಮ್ಮ ಎಲ್ಲಾ ಅನುಯಾಯಿಗಳಿಗೆ ಆದೇಶಿಸಿದರು,
ಇಂದಿನಿಂದ ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಹೊಸ ವರ್ಷವನ್ನು ಅನುಸರಿಸುವವರನ್ನು ‘ಫೂಲ್ಸ್‘ ಅಂದರೆ ‘ಮೂರ್ಖರು‘ ಎಂದು ಕರೆಯಲಾಗುತ್ತದೆ (ಏಪ್ರಿಲ್ ಫೂಲ್ಸ್ ಡೇ ಅನ್ನು ನೆನಪಿಸಿಕೊಳ್ಳಿ).
ಅಂದಿನಿಂದ ಫೂಲ್ಸ್ ಡೇ ಅಂದರೆ ಮೂರ್ಖರ ದಿನವನ್ನು ಯೂರೋಪಿಯನ್ನರು ಆಚರಿಸಲು ಪ್ರಾರಂಭಿಸಿದರು.
ಈ ಸಂದೇಶವು ಜನರನ್ನು ನೋಯಿಸುವ ಅಥವಾ ದಾರಿ ತಪ್ಪಿಸುವ ಉದ್ದೇಶವನ್ನು ಹೊಂದಿಲ್ಲ. ಆದರೆ ಕೇವಲ ಸತ್ಯ ಮತ್ತು ವಾಸ್ತವವನ್ನು ತೋರಿಸುವ ಉದ್ದೇಶವನ್ನು ಮಾತ್ರ ಹೊಂದಿದೆ.
ಇಂಗ್ಲೀಷ್ ಮತ್ತು ಇತರ ದೇಶಗಳ ಎಲ್ಲಾ ಪದಗಳು ನಮ್ಮ ಶ್ರೇಷ್ಠ ಸಂಸ್ಕೃತ ಭಾಷೆಯಿಂದ ತೆಗೆದುಕೊಳ್ಳಲಾಗಿದೆ ಎಂಬುದನ್ನು ಇಲ್ಲಿ ನಾವು ಗಮನಿಸಬೇಕು.
ಮುಂಚೆ, ಇಡೀ ಪ್ರಪಂಚವು ಒಂದೇ ಘಟಕವಾಗಿತ್ತು, ಅದೇ ಭರತ ವರ್ಷ. ಎಲ್ಲರೂ ಅತ್ಯಮೂಲ್ಯವಾದ ಸನಾತನ ಧರ್ಮವನ್ನು ಅನುಸರಿಸುತ್ತಿದ್ದರು.
ಆದರೆ ಹೆಚ್ಚಿನ ಶಕ್ತಿ, ಖ್ಯಾತಿ ಇತ್ಯಾದಿಗಳ ದುರಾಸೆ ಮನಸ್ಸಿನಲ್ಲಿ ಹರಿಯಲು ಪ್ರಾರಂಭಿಸಿದಾಗ, ಜನರು ತಮ್ಮದೇ ಆದ ಸಿದ್ಧಾಂತಗಳು, ಆಲೋಚನೆಗಳು ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು.
ಮತ್ತು ಇದು ಭಾರತ ವಾಸಿಗಳಿಗೆ ಹೊಸ ವಿಷಯವಲ್ಲ ಎಂಬುದನ್ನು ನಾವು ಗಮನಿಸಬೇಕು.
ಇದು ಅಜ್ಞಾತ ಯುಗಗಳಿಂದಲೂ ನಡೆಯುತ್ತಿದೆ. ನಮ್ಮಲ್ಲಿ ಅನೇಕರು ಹಿರಣ್ಯಕಶಿಪು, ಕಂಸ, ಪೌಂಡರಿಕ ಮುಂತಾದವರ ಕಥೆಗಳನ್ನು ಕೇಳಿರಬೇಕು.
ಈ ಎಲ್ಲಾ ಜನರು ತಮ್ಮದೇ ಆದ ಧರ್ಮಗಳನ್ನು ಪ್ರಾರಂಭಿಸಿದ್ದರು ಮತ್ತು ಈ ಜನರೆಲ್ಲರೂ ತಾವೇ ಭಗವಂತ ಎಂದು ಭಾವಿಸಲು ಪ್ರಾರಂಭಿಸಿದ್ದರು.
ಆದರೆ ಕೊನೆಯದಾಗಿ, ಅವರೆಲ್ಲರಿಗೂ ಏನಾಯಿತು ಎಂಬುದನ್ನು ನಾವು ತಿಳಿದಿದ್ದೇವೆ.
ನಮ್ಮ ಧರ್ಮವನ್ನು ಸನಾತನ ಧರ್ಮ ಎಂದು ಕರೆಯಲಾಗುತ್ತದೆ. ಆದರೆ ಸನಾತನ ಧರ್ಮದ ಮೂಲ ಅರ್ಥ ಏನು ಎಂದು ನಿಮಗೆ ತಿಳಿದಿದೆಯೇ? ಅನಾಥ ಎಂಬ ಶಬ್ದಕ್ಕೆ ವಿರುದ್ಧವಾದ ಶಬ್ದವೇ ಸನಾತನ.
ಯಾರು ಸನಾತನರಾಗಿದ್ದಾರೆಯೋ, ಆತ / ಆಕೆ ಎಂದಿಗೂ ಅನಾಥರಾಗಲು ಸಾಧ್ಯವಿಲ್ಲ.
ಮತ್ತು, ಯಾವುದು ಯುಗ ಯುಗಗಳಿಂದ ಅಸ್ತಿತ್ವದಲ್ಲಿದೆಯೋ, ಯಾವುದು ಪ್ರಸ್ತುತ ಕಾಲದಲ್ಲಿದೆಯೋ, ಮತ್ತು ಯಾವುದು ಶಾಶ್ವತವಾಗಿ ಅನಂತಾನಂತ ಕಾಲದವರೆಗೆ ಉಳಿಯುತ್ತದೆಯೋ, ಅದೇ ಸನಾತನ ಧರ್ಮ.
ಹೊಸ ವರ್ಷದ ಅರ್ಥವೆಂದರೆ, ಹೊಸದನ್ನು ನೋಡುವುದು ಎಂದರ್ಥ:
ವಾತಾವರಣದಲ್ಲಿ ಸ್ವಲ್ಪ ಬದಲಾವಣೆ ಇರಬೇಕು, ಹಳೆಯ ಎಲೆಗಳು ಬೀಳಬೇಕು ಮತ್ತು ಹೊಸ ಎಲೆಗಳು ಚಿಗುರಬೇಕು, ಚಳಿಗಾಲವು ಹೋಗಿ ಬೇಸಿಗೆ ಕಾಲ ಬರಬೇಕು, ಹವಾಮಾನ ಬದಲಾಗಬೇಕು, ಸಂತೋಷದ ವಾತಾವರಣ ಇರಬೇಕು ಮುಂತಾದವು.
ಏನಾದರೂ ಹೊಸದೊಂದು ಸಂಭವಿಸಿದರೇ, ನಾವು ಅದನ್ನು ಹೊಸ ವರ್ಷ ಎಂದು ಕರೆಯಬಹುದು.
ಈ ಯಾವುದೇ ಬದಲಾವಣೆಗಳು ರೋಮನ್ / ಇಂಗ್ಲೀಷ್ ತಿಂಗಳು ಜನವರಿಯಲ್ಲಿ ಆಗುವುದಿಲ್ಲ, ಭಾರತ ಅಥವಾ ಯೂರೋಪ್ ಅಥವಾ ಅಮೇರಿಕ ಅಥವಾ ಆಫ್ರಿಕಾ ಯಾವುದೇ ಸ್ಥಳದಲ್ಲಿಯೂ ಏನೂ ಬದಲಾಗುವುದಿಲ್ಲ.
ಆದರೆ, ನಮ್ಮ ಸನಾತನ ಧರ್ಮದ ಪಂಚಾಂಗದ ಪ್ರಕಾರ ಬರುವ ಚೈತ್ರ ಮಾಸದಲ್ಲಿ (ಇದು ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಬರುತ್ತದೆ) ಮೇಲೆ ಹೇಳಿರುವ ಬದಲಾವಣೆಗಳೆಲ್ಲವೂ ಸಂಭವಿಸುತ್ತವೆ.
ಈಗ ಯಾವುದು ಹೊಸ ವರ್ಷ ಎಂದು ನೀವೇ ನಿರ್ಧರಿಸಬೇಕು. ಸ್ವಲ್ಪ ಜಾಗರುಕರಾಗಿ, ನಮ್ಮ ಸನಾತನ ಧರ್ಮವು ಅಂಥ ಇಂಥ ಧರ್ಮವಲ್ಲ.
ಇದನ್ನು ಭಗವಂತ ಶ್ರೀ ಹರಿ ಇಂದಲೇ ಪ್ರಾರಂಭಿಸಲಾಗಿದೆ ಮತ್ತು ಇದನ್ನು ನಮ್ಮ ಪೂರ್ವಜರು ಮುಂದಕ್ಕೆ ಸಾಗಿಸಿದ್ದಾರೆ.
ಈಗ ನಾವು ಇದನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂಬುದು ಸಂಪೂರ್ಣವಾಗಿ ನಮಗೆ ಬಿಟ್ಟದ್ದು.
ಸರಿಯಾಗಿ ಯೋಚಿಸಿ ಮತ್ತು ಸರಿಯಾದ ಹೊಸ ವರ್ಷವನ್ನು ಆಚರಿಸಿ.
ನಮ್ಮ ಮಹಾನ್ ಸಂಸ್ಕೃತ ಭಾಷೆಯಿಂದ ತೆಗೆದುಕೊಳ್ಳಲಾದ ಪದಗಳನ್ನು ತಿಳಿಯಲು, ನೀವು ಈ ಲಿಂಕ್‌ಗೆ ಭೇಟಿ ನೀಡಬಹುದು.
ಅಲ್ಲಿ ನಾನು ಇತರೆ ಭಾಷೆಗಳ ಪದಗಳು ಸಂಸ್ಕೃತ ಭಾಷೆಯಿಂದ ಬಂದಿದೆ ಮತ್ತು ಹತ್ತಿರ 1000 ಕ್ಕೂ ಹೆಚ್ಚು ಪದಗಳನ್ನು ಕಂಡುಹಿಡಿದಿದ್ದೇನೆ:
English words derived (originated) from Sanskrit
ಈಗ, ನನ್ನ ಪ್ರೀತಿಯ ಸ್ನೇಹಿತರೇ, ಸ್ವಲ್ಪ ಯೋಚಿಸಿ, ನಮ್ಮ ಭಾರತೀಯ ದೇಶದಲ್ಲಿ ಈ ಫೂಲ್ಸ್ ಡೇ ಅಥವಾ ಹೊಸ ವರ್ಷವನ್ನು ಆಚರಿಸಬೇಕೆಂದು ನೀವು ಇನ್ನೂ ಬಯಸುತ್ತೀರಾ?
ನನ್ನ ಆತ್ಮೀಯ ಸ್ನೇಹಿತರೇ, ಮತ್ತೊಮ್ಮೆ ಯೋಚಿಸಿ. ಈ ಸಂದೇಶವನ್ನು ನಿಮ್ಮ ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಜೈ ಭಾರತೀಯ ಸಂಪ್ರದಾಯ. ಜೈ ಶ್ರೀ ಕೃಷ್ಣ. ಜೈ ಶ್ರೀ ರಾಮ.
ನೀವು ಇದರ ಇಂಗ್ಲೀಷ್ ಮತ್ತು ಹಿಂದಿಯ ಅನುವಾದವನ್ನು ಓದ ಬಯರಸಿದರೆ, ಈ ಲಿಂಕ್‌ಗಳನ್ನು ಕ್ಲಿಕ್ ಮಾಡಬಹುದು:
ಹಿಂದಿಗಾಗಿ:
युगादी, अप्रैल फूल डे और रोमन नए साल के बीच का सम्बंध
ಇಂಗ್ಲೀಷ್‌ಗಾಗಿ:
Yugadi, April Fools day and Roman new year relationship
ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.
To watch videos on #Hinduism #Sanskrit language, SUBSCRIBE to my YouTube channel from this below link:
#BhagavanBhakthi YouTube channel
ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.
ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.
ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.
ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್ ಮಾಡಿಕೊಳ್ಳಿ.
ಏಕೆಂದರೆ “ಶೇರ್ ಮಾಡುವುದೆಂದರೆ ಕೇರ್ ಮಾಡುವುದು ಎಂದರ್ಥ”.
#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.
ವಂದನೆಗಳು!
ಶ್ರೀ ಗುರುಭ್ಯೋ ನಮಃ
ಶ್ರೀ ಕೃಷ್ಣಾಯ ನಮಃ
ಶ್ರೀ ಕೃಷ್ಣಾರ್ಪಣಮಸ್ತು