ಹಿಂದೂ ಧರ್ಮದಲ್ಲಿ ನಿಜವಾದ ದೇವರು ಯಾರು? | ಹಿಂದೂ ಧರ್ಮದಲ್ಲಿ ಒಬ್ಬ ದೇವರು ಇದ್ದಾನೆಯೇ ಅಥವಾ ಅನೇಕ ದೇವರುಗಳಿದ್ದಾರೆಯೇ? | Who is the real God in Hinduism in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣುವಿನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ಹಿಂದೂ ಧರ್ಮದಲ್ಲಿ (ನಿಜವಾದ) ದೇವರು ಯಾರು? | ಹಿಂದೂ ಧರ್ಮದಲ್ಲಿ ಒಬ್ಬ ದೇವರು ಇದ್ದಾನೆಯೇ ಅಥವಾ ಅನೇಕ ದೇವರುಗಳಿದ್ದಾರೆಯೇ? | Who is the (real) God in Hinduism in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಹಿಂದೂ ಧರ್ಮದಲ್ಲಿನ ಶ್ರೇಣಿಯ / ಅನುಕ್ರಮದ ಬಗ್ಗೆ ತಿಳಿಯಲು, ಭಗವಂತ ಮತ್ತು ದೇವತೆಗಳ ನಡುವಿನ ವ್ಯತ್ಯಾಸವೇನು ಎಂದು ನಾವು ತಿಳಿಯಬೇಕು. 

ದೇವರು ಬೇರೆ ಮತ್ತು ದೇವತೆಗಳು ಬೇರೆದೇವರು ಒಬ್ಬನೇ, ಆದರೆ ದೇವತೆಗಳು ಅನೇಕರಿದ್ದಾರೆ.

ದೇವತೆಗಳು ಸೇರಿದಂತೆ ಎಲ್ಲರೂ ದೇವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಪ್ರಪಂಚದೆಲ್ಲೆಡೆ ಅನೇಕ ಜನರು ಎಲ್ಲಾ ಹಿಂದೂ ದೇವತೆಗಳು ಒಂದೇ ಎಂದು ಭಾವಿಸುತ್ತಾರೆ.

ಹಿಂದೂ ಧರ್ಮದಲ್ಲಿ ಕೋಟಿ ಕೋಟಿ ದೇವರುಗಳಿದ್ದಾರೆ ಎಂದು ಅನೇಕ ಜನರು ಹೇಳುತ್ತಾರೆ. 

ಶ್ರೀ ರುದ್ರ ದೇವರು / ಶ್ರೀ ಶಿವ, ಶ್ರೀ ಹರಿಗೆ ಸಮಾನ ಎಂದು ಹಲವರು ಭಾವಿಸುತ್ತಾರೆ.

ಶ್ರೀ ಶಿವ ಮತ್ತು ಶ್ರೀ ವಿಷ್ಣು ಇಬ್ಬರೂ ಒಬ್ಬರೆ ಎಂದು ಹಲವರು ಭಾವಿಸುತ್ತಾರೆ.

ಶ್ರೀ ರುದ್ರ ದೇವರು ಶ್ರೀ ಹನುಮಂತನೇ, ಅಂದರೆ ಶ್ರೀ ಹನುಮಂತ ಮತ್ತು ಶ್ರೀ ಶಿವನ (ಶ್ರೀ ರುದ್ರ ದೇವರು) ಅವತಾರ ಎಂದು ಹಲವರು ಬರೆದಿದ್ದಾರೆ.

ಭಗವಂತ ಶ್ರೀ ಹರಿ ಎಲ್ಲರನ್ನು ಕಾಪಾಡುವವ.

ಶ್ರೀ ಶಿವನಿಗೆ ಶ್ರೀ ಮಹಾದೇವ ಎಂಬ ಹೆಸರು ಬಂದಿರುವುದರಿಂದ ಅವರೆ ಪರಮ ಎಂದು ಹಲವರು ಭಾವಿಸುತ್ತಾರೆ. ಆದರೆ ಶ್ರೀ ಮಹಾದೇವ ಎಂಬ ಹೆಸರಿನ ನಿಜವಾದ ಅರ್ಥ ಜನರಿಗೆ ಅರ್ಥವಾಗುತ್ತಿಲ್ಲ ಮತ್ತು ಹಲವರು ಅದನ್ನು ಅರ್ಥ ಮಾಡಿಕೊಂಡಿಲ್ಲ. 

ಇಲ್ಲಿ ಶ್ರೀ ಮಹಾದೇವ ಎಂದರೆ ಬೇರೆಯ ದೇವತೆಗಳಲ್ಲಿ ಶ್ರೇಷ್ಠನಾದ ದೇವತೆ ಎಂದು ಅರ್ಥ. 

ಅಂದರೆ ಶ್ರೀ ಇಂದ್ರದೇವನಿಗೆ ಸಮನಾಗಿರುವ ಮತ್ತು ಶ್ರೀ ಇಂದ್ರ ದೇವರಿಂತ ಕೆಳಗಿರುವ ದೇವತೆಗಳಲ್ಲಿ ಮಹಾದೇವ ಶ್ರೇಷ್ಠನಾದವರು ಎಂದು ಅರ್ಥ.

ಆದರೆ ಇದರ ಜೊತೆಗೆ ನಾವು ಸ್ವಯಂ ಶ್ರೀ ರುದ್ರ ದೇವರು ಅಥವಾ ಶ್ರೀ ಬ್ರಹ್ಮ ದೇವರು ಮಹಾನ್ ವೈಷ್ಣವರು ಎಂಬುದನ್ನೂ ತಿಳಿಯಬೇಕು.

ಅವರು ಶ್ರೀ ರಾಮ / ಶ್ರೀ ಹರಿ / ಶ್ರೀ ಕೃಷ್ಣನ ದೊಡ್ಡ ಭಕ್ತರೆಂದು ಸ್ವತಃ ಅವರೇ ಒಪ್ಪಿಕೊಳ್ಳುತ್ತಾರೆ.

ಶ್ರೀ ವಿಷ್ಣುಸಹಸ್ರನಾಮದಲ್ಲಿ, ಶ್ರೀ ರುದ್ರ ದೇವರು ಹೇಳುತ್ತಾರೆ:

“ಶ್ರೀ ರಾಮ ರಾಮ ರಾಮೇತಿ, ರಮೆ ರಾಮೆ ಮನೋರಮೆ, ಸಹಸ್ರಾ ನಾಮ ತತ್-ತುಲ್ಯಂ ರಾಮ ನಾಮ ವರನಾನೆ “.

“śrī rāma rāma rāmēti, rame rāme manōrame, sahasrā nāma tat-tulyaṁ rāma nāma varanāne”.

ಇದರರ್ಥ, ಯಾರಾದರೂ ಶ್ರೀ ರಾಮನ ಒಂದು ಹೆಸರನ್ನು ಜಪಿಸಿದರೂ ಸಹ, ಅದು ಶ್ರೀ ವಿಷ್ಣುವಿನ ಸಹಸ್ರನಾಮದಲ್ಲಿ ನೀಡಿರುವ ಶ್ರೀ ವಿಷ್ಣುವಿನ ಸಾವಿರ ಹೆಸರುಗಳಿಗೆ ಸಮಾನ ಎಂದು ಅರ್ಥ. ಇದು ಶ್ರೀ ರಾಮ / ಶ್ರೀ ವಿಷ್ಣುವಿನ ಶಕ್ತಿ. 

ನಾವು ಶ್ರೀ ಹರಿಯ ಯಾವುದೇ ಒಂದು ಹೆಸರನ್ನು ಜಪಿಸಿದರೂ, ನಮಗೆ ನಿಜವಾದ ಮೋಕ್ಷ / ಮುಕ್ತಿ ಸಿಗುತ್ತದೆ.

ಆದರೆ ಅಂತಹ ಹಂತವನ್ನು ತಲುಪಲು ನಾವು ಶ್ರೀ ಹರಿಯ ಕಡೆಗೆ “ನಿರ್ಮಲ” ಮತ್ತು “ನಿಷ್ಕಾಮ” ಭಕ್ತಿಯನ್ನು ಹೊಂದಿರಬೇಕು.

ಅನಂತಾನಂತ ಬ್ರಹ್ಮ ದೇವರುಗಳು ಭಗವಂತ ಶ್ರೀ ಕೃಷ್ಣನನ್ನು ನಮಿಸುತ್ತಿರುವುದು.

ಶ್ರೀ ರುದ್ರ ದೇವರು ದ್ವಾಪರ ಯುಗದಲ್ಲಿ “ಶ್ರೀ ಅಶ್ವತ್ಥಮಾಚಾರ್ಯ” (ಗುರು ಶ್ರೀ ದ್ರೋಣಾಚಾರ್ಯ ರವರ ಮಗ) ರಾಗಿ ಅವತಾರವನ್ನು ತಾಳಿದ್ದರು ಮತ್ತು ಅವರು ಮಹಾಭಾರತ ಕಾಲದಲ್ಲಿ ಶ್ರೀ ಕೃಷ್ಣನ ದೊಡ್ಡ ಭಕ್ತರಾಗಿದ್ದರು ಎಂಬುದು ಹಲವರಿಗೆ ತಿಳಿಯದಿರಬಹುದು.

ಪ್ರತಿಯೊಬ್ಬರಲ್ಲೂ  ಶ್ರೀ ಹರಿ ಒಬ್ಬನೇ “ಅಂತರ್ಯಾಮಿ”. ಅವನು ಎಲ್ಲೆಡೆ ಇದ್ದಾನೆ. ಶ್ರೀ ಹರಿ ಇಲ್ಲದ ಸ್ಥಳವನ್ನು ನಾವು ನೋಡಲಿಕ್ಕಾಗುವುದೇ?  

“ನಾರಸಿಂಹ ಪುರಾಣ” ದಲ್ಲಿ ಶ್ರೀ ಪ್ರಹಲ್ಲಾದ ಮಹಾರಾಜರು, “ಶ್ರೀ ಹರಿ ನನ್ನ ಪ್ರತಿ ಅಣು ಅಣುವಿನಲ್ಲಿಯೂ ಇದ್ದಾರೆ” ಎಂದು ಹೇಳುತ್ತಾರೆ.

ಶ್ರೀ ಹರಿ ಒಬ್ಬನೇ ಭಗವಂತ / ಈಶ್ವರ / ಪರಮೇಶ್ವರ ಎಂದು ನಾವು ತಿಳಿದುಕೊಳ್ಳಲು ಇದಕ್ಕಿಂತ ಹೆಚ್ಚಿನ ಪುರಾವೆ ಬೇಕೇ?

ಅನೇಕ ಜನರು ಶ್ರೀ ದುರ್ಗಾ ದೇವಿ ಸರ್ವ ಶ್ರೇಷ್ಠಳು ಎಂದು ಭಾವಿಸುತ್ತಾರೆ.

ಅನೇಕ ಜನರು ಶ್ರೀ ಕಾಳಿ ದೇವಿ ಸರ್ವ ಶ್ರೇಷ್ಠಳು ಎಂದು ಭಾವಿಸುತ್ತಾರೆ.

ಇದಲ್ಲದೆ, ಶ್ರೀ ಗಣೇಶ, ಶ್ರೀ ಕಾರ್ತಿಕೇಯ, ಶ್ರೀ ಸೂರ್ಯ ದೇವರು ಮುಂತಾದವರು ಸರ್ವ ಶ್ರೇಷ್ಠರೆಂದು ಅನೇಕರು ಭಾವಿಸುತ್ತಾರೆ.

ಇನ್ನೂ ಕೆಲವರು ಶೈವಕ್ಕೆ ಸೇರಿದವರು, ಕೆಲವರು ಶಕ್ತಿಗೆ ಸೇರಿದವರು, ಕೆಲವರು ಬೇರೆಯದಕ್ಕೆ ಸೇರಿದವರು ಎಂದು ಹೇಳುತ್ತಾರೆ.

ಆದರೆ ಶ್ರೀ ಶಿವನೇ ಒಬ್ಬ ಮಹಾನ್ ವೈಷ್ಣವನಾಗಿರುವಾಗ, ಶ್ರೀ ಮಹಾಲಕ್ಷ್ಮಿ ದೇವಿ, ಶ್ರೀ ಸರಸ್ವತಿ ದೇವಿ ಮತ್ತು ಶ್ರೀ ಪಾರ್ವತಿ ದೇವಿಯರೇ ದೊಡ್ಡ ವೈಷ್ಣವರಾಗಿರುವಾಗ, ಹೇಗೆ ಇಷ್ಟೊಂದು ವಿಭಿನ್ನ ನಂಬಿಕೆಗಳಿರಲು ಸಾಧ್ಯಾ?

ಇವೆಲ್ಲವೂ ಮನುಷ್ಯ ಮಾಡಿರುವುದು ಎಂದು ನಾವು ನೆನಪಿನಲ್ಲಿಡಬೇಕು.

ಮನುಷ್ಯನು ಯಾವಾಗಲೂ ದುರಾಸೆಯವನಾಗಿರಲು ಬಯಸುತ್ತಾನೆ,

ಶಕ್ತಿಶಾಲಿಯಾಗಿರಲು ಬಯಸುತ್ತಾನೆ, ಅವನು ತನ್ನ ನೆರಳಿನ ಕೆಳಗೆ ಎಲ್ಲವನ್ನೂ

ಬಯಸುತ್ತಾನೆ. ಈ ರೀತಿಯ ಮನುಷ್ಯನು ಅನೇಕ ಬಗೆಯ ನಂಬಿಕೆಗಳನ್ನು ಹುಟ್ಟಿಸಿದ್ದಾನೆ.

ಶ್ರೀ ಕೃಷ್ಣ / ಶ್ರೀ ಹರಿಗೆ ನಮಸ್ಕಾರ ಮಾಡುತ್ತಿರುವ ಅನಂತ ಸಂಖ್ಯೆಯ ಶ್ರೀ ಬ್ರಹ್ಮ ದೇವರುಗಳ ಈ ಚಿತ್ರವು ನಮಗೆ ಮತ್ತೆ ನಿಜವಾದ ಭಗವಂತನ ಸರ್ವ 

ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ.

ಭಗವಂತ ನಾರಾಯಣ ಎಲ್ಲೆಡೆಯಲ್ಲೂ ಇದ್ದಾನೆ, ಎಲ್ಲದರಲ್ಲೂ ಇದ್ದಾನೆ, ಎಲ್ಲರಲ್ಲೂ ಇದ್ದಾನೆ.

ಎಲ್ಲರೂ ಸರ್ವ ಶ್ರೇಷ್ಠರಾಗಿದ್ದರೆ, ನಿಜವಾದ ಸರ್ವೋತ್ತಮ / ಸರ್ವ ಶ್ರೇಷ್ಠ ದೇವರು ಯಾರು?

ಸರ್ವೋಚ್ಚ ಭಗವಂತನು ಯಾರು?

ನಿಜವಾದ ಭಗವಂತನು ಯಾರು?

ನಿಜವಾದ ಶ್ರೀ ಮಹಾದೇವ ಯಾರು?

ನಿಜವಾದ ಶ್ರೀ ಆದಿ ದೇವರು ಯಾರು?

ಬನ್ನಿ ನಾವು ಇದನ್ನು ತಿಳಿದುಕೊಳ್ಳೋಣ:

ಏನೂ ಇಲ್ಲದಿದ್ದ ಸಮಯದಲ್ಲಿ ಶ್ರೀ ಹರಿ / ಶ್ರೀ ವಿಷ್ಣು ಇದ್ದ. ಅವನು ಪರಮ, ಅವನು ಸರ್ವ ಸರ್ವೋಚ್ಚ, ಅವನು ಸರ್ವ ಶ್ರೇಷ್ಠ.

ಅವನೇ ನಿಜವಾದ ಭಗವಂತನು ಮತ್ತು ಉಳಿದವರೆಲ್ಲರೂ ಅವನ ಅನುಯಾಯಿಗಳು (ದೇವತೆಗಳು) ಮತ್ತು ಶ್ರೀ ಹರಿ ಮಾತ್ರ ಭಗವಂತನು.

ಹೌದು, ಬ್ರಹ್ಮ ದೇವರಿಗೆ ಬ್ರಹ್ಮಾಂಡವನ್ನು ಸೃಷ್ಟಿಸುವ ದೊಡ್ಡ ಸಾಮರ್ಥ್ಯವಿದೆ. ಆದರೆ ಶ್ರೀ ಹರಿಯ ಸಹಾಯವಿಲ್ಲದೆ ಶ್ರೀ ಬ್ರಹ್ಮ ದೇವರಿಂದಲೂ ಏನೂ ಮಾಡಲು ಸಾಧ್ಯವಿಲ್ಲ.

ಅಂತರ್ಯಾಮಿ ಎಂದು ಕರೆಯಲ್ಪಡುವ ಶ್ರೀ ಹರಿ, ಶ್ರೀ ಬ್ರಹ್ಮ ದೇವರ ಒಳಗೆ ಕುಳಿತು ಎಲ್ಲಾ ಸೃಷ್ಟಿಯನ್ನು ಮಾಡುತ್ತಾನೆ.

ಹೌದು, ಕಲ್ಪದ ಕೊನೆಯಲ್ಲಿ ಯಾವುದನ್ನಾದರೂ ಮತ್ತು ಎಲ್ಲವನ್ನೂ ನಾಶಮಾಡುವ ದೊಡ್ಡ ಸಾಮರ್ಥ್ಯವನ್ನು ಶ್ರೀ ರುದ್ರ ದೇವರು ಹೊಂದಿದ್ದಾರೆ ಆದರೆ ಇದನ್ನು ಯಾರು ಮಾಡುತ್ತಾರೆ?

(ನೆನಪಿಡಿ, ನಮ್ಮ ಸನಾತನ ಧರ್ಮದಲ್ಲಿ, ಪ್ರತಿ ಅಂತ್ಯದ ನಂತರವೂ ಒಂದು ಹೊಸ ಪ್ರಾರಂಭವಿದೆ. ಅಂದರೆ, ನಿರ್ದಿಷ್ಟ ಕಲ್ಪದ ನಂತರ, ಮತ್ತೆ ಮತ್ತೊಂದು ಹೊಸ ಕಲ್ಪ ಪ್ರಾರಂಭವಾಗುತ್ತದೆ)

ಅಂತರ್ಯಾಮಿಯಾದ ಶ್ರೀ ಹರಿ, ಶ್ರೀ ರುದ್ರ ದೇವರ ಒಳಗೆ ಕುಳಿತು ಎಲ್ಲಾ ವಿನಾಶವನ್ನು ಮಾಡುತ್ತಾನೆ.

ಹೌದು, ಶ್ರೀ ದುರ್ಗಾ ದೇವಿ ಅನೇಕ ಅಂಶಗಳ ದೊಡ್ಡ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಇದನ್ನು ಯಾರು ಮಾಡುತ್ತಾರೆ?

ಅಂತರ್ಯಾಮಿಯಾದ ಶ್ರೀ ಹರಿ, ಶ್ರೀ ದುರ್ಗಾ ದೇವಿಯೊಳಗೆ ಕುಳಿತು ಅಗತ್ಯಕ್ಕೆ ತಕ್ಕಂತೆ ಎಲ್ಲವನ್ನೂ ಮಾಡುತ್ತಾನೆ.

ಶ್ರೀ ವಿಷ್ಣು ಎಲ್ಲೆಡೆ ಇದ್ದಾನೆ

ಅದೇ ರೀತಿ ಮಳೆಯನ್ನು ಶ್ರೀ ಇಂದ್ರ ದೇವರ ಮೂಲಕ ಭೂಮಿಗೆ ತರಲಾಗುತ್ತದೆ, ಆದರೆ ಏಕಾಂಗಿಯಾಗಿ ಅಲ್ಲ, ಬದಲಿಗೆ ಅಂತರ್ಯಾಮಿಯಾದ ಶ್ರೀ ಹರಿಯ ಸಹಾಯದಿಂದ ಇದಾಗುತ್ತದೆ.

ಶ್ರೀ ವಾಯು ದೇವರಿಂದಾಗಿ ವಾಯು (ಗಾಳಿ) ಇದೆ, ಆದರೆ ಶ್ರೀ ಹರಿ, ಶ್ರೀ ವಾಯು ದೇವರ ಅಂತರ್ಯಾಮಿ. 

ಭಗವಂತ ಶ್ರೀ ಹರಿ ಭೇದಭಾವವಿಲ್ಲದೆ ಎಲ್ಲರಿಗೂ ಅವರವರ ಯೋಗ್ಯತೆಯ ಪ್ರಕಾರವಾಗಿ ಆಶೀರ್ವಧಿಸುತ್ತಾನೆ.

ಶ್ರೀ ವರುಣ ದೇವರು (ಸಮುದ್ರದ ದೇವರು) ಇದ್ದಾರೆ, ಆದರೆ ಶ್ರೀ ಹರಿ, ಶ್ರೀ ವರುಣ ದೇವರ ಅಂತರ್ಯಾಮಿ.

ಶ್ರೀ ಅಗ್ನಿ ದೇವರು ಇದ್ದಾರೆ, ಆದರೆ ಶ್ರೀ ಹರಿ, ಶ್ರೀ ಅಗ್ನಿ ದೇವರ ಅಂತರ್ಯಾಮಿ. ಅದೇ ರೀತಿ ಭಾರತೀಯ ಸನಾತನ ಧರ್ಮದ ಪ್ರಕಾರ ವಿವಿಧ, ವಿವಿಧ ಸಂಖ್ಯೆಯ ದೇವತೆಗಳಿದ್ದಾರೆ. 

ಆದರೆ ಎಲ್ಲರೂ ಶ್ರೀ ಕೃಷ್ಣ / ಶ್ರೀ ರಾಮನ ಅನುಯಾಯಿಗಳು (ಶ್ರೀ ಹರಿಯ ಬೇರೆಯ ಹೆಸರುಗಳು).

ಪ್ರತಿಯೊಂದೂ ಮತ್ತು ಎಲ್ಲವೂ ಸಂಪೂರ್ಣವಾಗಿ ಶ್ರೀ ಹರಿಯ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ, ಅವನು ಶ್ರೀ ಪರಬ್ರಹ್ಮ, 

ಅವನು ಶ್ರೀ ಪರಮಾತ್ಮ, ಅವನು ಶ್ರೀ ಪರಮಮೂಲ, ಅವನು ಶ್ರೀ ಭಗವಂತ, ಅವನು ಆದಿ ಮೂಲ, ಅವನು ಆದಿ ದೇವ,

ಅವನು ಆದಿ ಬೀಜಾ, ಅವನು ನಿಜವಾದ ಶ್ರೀ ಮಹಾದೇವ, ಅವನು ನಿಜವಾದ ಶ್ರೀ ಪರಮೇಶ್ವರ, ಅವರು ಎಲ್ಲೆಡೆ ಮತ್ತು ಎಲ್ಲದರಲ್ಲೂ ಅಂತರ್ಯಾಮಿಯಾಗಿದ್ದಾನೆ.

ಅವನು ಶ್ರೀ ಮಹಾಲಕ್ಷ್ಮಿ ದೇವಿ ಅಲ್ಲ, ಅವನು ಶ್ರೀ ಬ್ರಹ್ಮ ದೇವರಲ್ಲ, ಅವನು ಶ್ರೀ ಮುಖ್ಯಪ್ರಾಣ ದೇವರಲ್ಲ (ಮುಂದಿನ ಶ್ರೀ ಬ್ರಹ್ಮ ದೇವರು), ಅವನು ಶ್ರೀ ಸರಸ್ವತಿ ದೇವಿ ಅಲ್ಲ,

ಅವನು ಶ್ರೀ ಭಾರತಿ ದೇವಿ ಅಲ್ಲ (ಮುಂದಿನ ಶ್ರೀ ಸರಸ್ವತಿ ದೇವಿ), ಅವನು ಶ್ರೀ ರುದ್ರ ದೇವರಲ್ಲ, ಅವನು ಶ್ರೀ ತುಳಸಿ ದೇವಿಯಲ್ಲ, ಅವನು ಶ್ರೀ ಪಾರ್ವತಿ ದೇವಿ ಅಲ್ಲ,

ಅವನು ಶ್ರೀ ಇಂದ್ರ ದೇವರಲ್ಲ, ಅವನು ಶ್ರೀ ಸೂರ್ಯ ದೇವರಲ್ಲ, ಅವನು ಶ್ರೀ ಅಗ್ನಿ ದೇವರಲ್ಲ, ಅವನು ಶ್ರೀ ಗಣೇಶನಲ್ಲ, ಅವನು ಶ್ರೀ ಕಾರ್ತಿಕೇಯನಲ್ಲ, ಅವನು ಶ್ರೀ ಅಶ್ವಿನಿ ಕುಮಾರರಲ್ಲ, ಅವನು ಯಾವುದೇ ದೇವತೆಯಲ್ಲ.

ಶ್ರೀ ಹರಿ ಎಲ್ಲರಿಗಿಂತ ಸರ್ವ ಸರ್ವ ಶ್ರೇಷ್ಠ, ಸರ್ವೋತ್ತಮ ಪ್ರಭು.

ಆದರೆ ಅವನು ಶ್ರೀ ಅಂತರ್ಯಾಮಿಯಾಗಿ ಎಲ್ಲೆಡೆಯೂ ಮತ್ತು ಎಲ್ಲದರಲ್ಲಿಯೂ ಇದ್ದಾನೆ.

ಈಗ ನಾವೆಲ್ಲರೂ ಭಾರತೀಯ ಸನಾತನ ಧರ್ಮದ ಭಗವಂತ ಮತ್ತು ಬೇರೆಯ ದೇವತೆಗಳ ನಿಜವಾದ ಅನುಕ್ರಮವನ್ನು / ಶ್ರೇಣಿಯ ಬಗ್ಗೆ ಅರ್ಥಮಾಡಿಕೊಳ್ಳೋಣ.

1. ಶ್ರೀ ಹರಿ / ಶ್ರೀ ವಿಷ್ಣು / ಶ್ರೀ ಕೃಷ್ಣ / ಶ್ರೀ ರಾಮ

(ಪರಬ್ರಹ್ಮ, ಆದಿ ಬೀಜ / ಆದಿ ಮೂಲ / ಆದಿ ದೇವ / ಭಗವಂತ / ಪರಮಾತ್ಮ / ಪರಮೇಶ್ವರ ಇತ್ಯಾದಿ)  

2. ಶ್ರೀ ಮಹಾಲಕ್ಷ್ಮಿ ದೇವಿ

3. ಶ್ರೀ ಬ್ರಹ್ಮ ದೇವರು ಅಥವಾ ಶ್ರೀ ಮುಖ್ಯಪ್ರಾಣ ದೇವರು

(ಇಬ್ಬರೂ ಒಂದೇ ಮಟ್ಟದಲ್ಲಿದ್ದಾರೆ)

4. ಶ್ರೀ ಸರಸ್ವತಿ ದೇವಿ / ಶ್ರೀ ಭಾರತಿ ದೇವಿ

(ಇಬ್ಬರೂ ಒಂದೇ ಮಟ್ಟದಲ್ಲಿದ್ದಾರೆ)

5. ಶ್ರೀ ರುದ್ರ ದೇವರು / ಶ್ರೀ ಶಿವ

6. ಶ್ರೀ ತುಳಸಿ ದೇವಿ

7. ಶ್ರೀ ಪಾರ್ವತಿ ದೇವಿ

8. ಶ್ರೀ ಇಂದ್ರ ದೇವರು,ಶ್ರೀ ಸೂರ್ಯ ದೇವರು

(ಇಬ್ಬರೂ ಒಂದೇ ಮಟ್ಟದಲ್ಲಿದ್ದಾರೆ)

ದೇವತೆಗಳ ಪಟ್ಟಿ ಹೀಗೆ ಮುಂದುವರಿಯುತ್ತದೆ.

ನಿಜವಾದ ಭಗವಂತ / ಈಶ್ವರ ಯಾರು ಎಂಬುದರ ಬಗ್ಗೆ ನನಗೆ ಚಿಂತೆ ಇಲ್ಲ.

ಆದರೆ ಶ್ರೀ ಹರಿ ಭಗವಂತ / ಈಶ್ವರನಲ್ಲ ಎಂಬುದಕ್ಕೆ ಯಾರಾದರೂ ನನಗೆ ಒಂದು ಉದಾಹರಣೆ ನೀಡುವಿರಾ? 

ಅಥವಾ ಬೇರೆ ಯಾವುದೇ ದೇವತೆಗಳು ನಿಜವಾದ ಪರಬ್ರಹ್ಮರೇ? 

ನಿಮ್ಮಲ್ಲಿ ಒಂದು / ಹಲವು ಉತ್ತರಗಳು ಇದ್ದರೆ, ದಯವಿಟ್ಟು ನನಗೆ ತಿಳಿಸಿ.

ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.

To watch videos on #Hinduism #Sanskrit language, SUBSCRIBE to my YouTube channel from this below link:

#BhagavanBhakthi YouTube channel

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಓಂ ನಮೋ ನಾರಾಯಣಾಯ

ಶ್ರೀ ಕೃಷ್ಣಾರ್ಪಣಮಸ್ತು

Subscribe / Follow us
Share in Social Media

Leave a Reply

Your email address will not be published. Required fields are marked *