ಗಣೇಶನ (12 / ಹನ್ನೆರಡು) ಹೆಸರುಗಳು (ದ್ವಾದಶ ನಾಮ) | Lord Ganesha (12) Names (Dwadasha namas) in Kannada
ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.
ಭಗವಂತ ಶ್ರೀ ವಿಷ್ಣುವಿನ ಮತ್ತು ಗಣೇಶನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!
ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.
#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.
“ಗಣೇಶನ (12 / ಹನ್ನೆರಡು) ಹೆಸರುಗಳು (ದ್ವಾದಶ ನಾಮ) | Lord Ganesha (12) Names (Dwadasha namas) in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.
“ಗಣೇಶನ ಹನ್ನೆರಡು ಹೆಸರುಗಳು / ದ್ವಾದಶ ನಾಮ” ಎಂದು ತಿಳಿಯುವ ಮೊದಲು, ನಾವೆಲ್ಲರೂ ಗಣೇಶ ದೇವರ ಬಗ್ಗೆ ಒಂದು ಸಣ್ಣ ಸಂಕ್ಷಿಪ್ತತೆಯನ್ನು ಹೊಂದೋಣ.
ಗಣೇಶನು ಶಿವ ಮತ್ತು ಪಾರ್ವತಿ ದೇವಿಯ ಮಗ. ಅವರು ಕಾರ್ತಿಕೇಯ ಎಂಬ ಕಿರಿಯ ಸಹೋದರನನ್ನು ಹೊಂದಿದ್ದಾರೆ.
ಗಣೇಶನು ಕೈಲಾಸದಲ್ಲಿ ಎಲ್ಲಾ ಗಣಗಳ ಮುಖ್ಯಸ್ಥನಾಗಿದ್ದಾನೆ ಮತ್ತು ಅದಕ್ಕಾಗಿಯೇ ಗಣೇಶನಿಗೆ ಅವನ ಹೆಸರು ಬಂದಿತು.
ಗಣೇಶ = ಗಣ + ಈಶಾ = ಕೈಲಾಸದ ಎಲ್ಲಾ ಗಣಗಳು + ಎಲ್ಲಾ ಗಣಗಳ ಮುಖ್ಯಸ್ಥ (ರಾಜ).
ಅಂತೆಯೇ, ಗಣೇಶನ ಸಹೋದರ ಕಾರ್ತಿಕೇಯ ಎಲ್ಲಾ ಹಾವುಗಳಿಗೆ ಮುಖ್ಯಸ್ಥ. ಕಾರ್ತಿಕೇಯನನ್ನು ಷಣ್ಮುಖ (6 ಮುಖಗಳು), ಸುಬ್ರಮಣ್ಯ, ಮುರುಗನ್, ಸ್ಕಂದ ಮುಂತಾದ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ.
ಗಣೇಶ ದೇವರಲ್ಲಿ 2 ಪತ್ನಿಗಳು (ದೈವಿಕ ಹೆಂಡತಿಯರು) ಇದ್ದಾರೆ ಮತ್ತು ಅವರ ಹೆಸರುಗಳು ಸಿದ್ಧಿ ಮತ್ತು ಬುದ್ಧಿ (ಕೆಲವರು ಅವಳನ್ನು ರಿದ್ಧಿ ಎಂದು ಕರೆಯುತ್ತಾರೆ, ಆದರೆ ಇದು ತಪ್ಪಾಗಿ ಉಚ್ಚರಿಸುವ ವಿಧಾನವಾಗಿದೆ).
ಶ್ರೀ ಗಣೇಶನ ಹನ್ನೆರಡು ಹೆಸರುಗಳು / ದ್ವಾದಷ ನಾಮ: ನಮಗೆ ಪುಣ್ಯ, ಆರೋಗ್ಯ, ಆಯಸ್ಸು, ಸಂಪತ್ತು ಮುಂತಾದ ಶುಭ ವಾರ್ತೆಗಳನ್ನು ತರುವ ಸ್ವಯಂ ಶ್ರೀ ರುದ್ರ ದೇವರು ಮತ್ತು ಶ್ರೀ ಪಾರ್ವತಿ ದೇವಿಯರ ಮಗನಾದ ಗಣೇಶನ ಹನ್ನೆರಡು ಹೆಸರುಗಳು / ದ್ವಾದಷ ನಾಮ.
ಬನ್ನಿ, ನಾವೆಲ್ಲರು ಈ ಹೆಸರುಗಳನ್ನು ತಿಳಿಯೋಣ ಮತ್ತು ಪಠಣ ಮಾಡೋಣ:
ಶ್ರೀ ಗಣೇಶ / ಶ್ರೀ ವಿನಾಯಕನ ಮೊದಲ ಹನ್ನೆರಡು (12) ಪ್ರಮುಖ ಹೆಸರುಗಳು ಈ ಕೆಳಗಿನಂತಿವೆ:
ಇವುಗಳನ್ನು ದ್ವಾದಶಾ ನಾಮ (12 ಹೆಸರುಗಳು) ಎಂದು ಕರೆಯಲಾಗುತ್ತದೆ:
1. ಸುಮುಖಾ: ಶ್ರೀ ಗಣೇಶನ ಹೆಸರು, ಶ್ರೀ ಸುಮುಖಾ ಎಂದು, ಏಕೆಂದರೆ ಆತ ಎಷ್ಟು ಸುಂದರವೆಂದರೆ, ಸ್ವಯಂ ಶ್ರೀ ಚಂದ್ರದೇವನು ಕೂಡ ನಾಚುತ್ತಾನೆ.
ಸುಮೂಖಾ = ಸು = ಸುಂದರ, ಅತೀ ಸುಂದರ / ಮುಖಾ = ಮುಖಾ, ತ್ವಚೆ, ಅಂಗ.
2. ಏಕದಂತ: ಶ್ರೀ ಗಣೇಶನಿಗೆ ಒಂದು ದಂತ ಇರುವುದರಿಂದ, ಆತನಿಗೆ ಏಕದಂತ ಎಂದು ಹೆಸರು.
ಭಗವಂತ ಶ್ರೀ ವೇದವ್ಯಾಸರು ಶ್ರೀ ಮಹಾಭಾರತವನ್ನು ಬರೆಯುವುದ್ದಕ್ಕಾಗಿ ನಮ್ಮ ಶ್ರೀ ಗಣೇಶನಿಗೆ ನೇಮಕ ಮಾಡುತ್ತಾರೆ.
ಬರಿಯುವ ಸಮಯದಲ್ಲಿ, ನಮ್ಮ ಶ್ರೀ ಗಣೇಶನ ಹತ್ತಿರ ಲೇಖನಿ ಇರುವುದಿಲ್ಲ. ಆದುದರಿಂದ, ಶ್ರೀ ಗಣೇಶ ತನ್ನ ಒಂದು ದಂತವನ್ನು ಕಿತ್ತು ಲೇಖನಿಯನ್ನಾಗಿ ಮಾಡಿಕೊಳ್ಳುತ್ತಾನೆ.
ಆದುದರಿಂದ ನಮ್ಮ ಶ್ರೀ ಗಣೇಶನಿಗೆ, ಶ್ರೀ ಏಕದಂತ ಎಂದು ಹೆಸರು ಬಂತು. ಏಕದಂತ = ಏಕ = ಒಂದು, ದಂತ = ದಂತ / ಹಲ್ಲು.
3. ಕಪಿಲ: ಶ್ರೀ ಗಣೇಶನಿಗೆ ಶ್ರೀ ಕಪಿಲ ಎಂದು ಹೆಸರು. ಶ್ರೀ ಗಣೇಶನ ಮೈಬಣ್ಣ ಕೆಂಪು. ಸಂಸ್ಕೃತದಲ್ಲಿ ಕಪಿಲ ಎಂದರೆ, ಕೆಂಪು ಎಂದು ಅರ್ಥ.
ಆದುದರಿಂದ ನಮ್ಮ ಶ್ರೀ ಗಣೇಶನಿಗೆ ಶ್ರೀ ಕಪಿಲ ಎಂದು ಹೆಸರು ಬಂತು.
ಶ್ರೀ ಗಣೇಶನಿಗೆ ತನ್ನ ಮೈಬಣ್ಣ ಕೆಂಪು ಇರುವುದರಿಂದ ಶ್ರೀ ರಕ್ತವರ್ಣ ಎಂದು ಮತೊಂದು ಹೆಸರು ಇದೆ. ಸಂಸ್ಕೃತದಲ್ಲಿ, ರಕ್ತವೆಂದರೆ ರಕ್ತವೆಂದು ಅರ್ಥ, ಆದುದರಿಂದ ಹೆಸರು ಬಂತು.
4. ಗಜಕರ್ಣಕ: ಶ್ರೀ ಗಣೇಶನ ಮತೊಂದು ಹೆಸರು ಶ್ರೀ ಗಜಕರ್ಣಕ ಎಂದು. ನಮ್ಮ ಪುಟ್ಟ ಶ್ರೀ ಗಣೇಶನ ಕಿವಿಗಳು ಗಜ / ಆನೆಯತರ ಇರುವುದರಿಂದ, ಶ್ರೀ ಗಜಕರ್ಣಕ ಎಂದು ಹೆಸರು ಬಂತು.
ಗಜಕರ್ಣಕ = ಗಜ = ಗಜ / ಆನೆ, ಕರ್ಣಕ = ಕಿವಿಗಳು ಇರವುದರಿಂದ.
5. ಲಂಬೋದರ: ನಮ್ಮ ಶ್ರೀ ಪಾರ್ವತಿ ಶಿವ ಪುತ್ರನಿಗೆ ಕಡುಬು, ಚಕ್ಕಲಿ, ನಿಪ್ಪಟ್ಟು ಇತ್ಯಾದಿ ಎಂದರೆ ಅತೀ ಪ್ರೇಮ.
ಆದುದರಿಂದ ಆತನ ಹೊಟ್ಟೆ ಸ್ವಲ್ಪ ದೊಡ್ಡದ್ದು. ಇದರಿಂದ, ನಮ್ಮ ಶ್ರೀ ಗಣೇಶನ ಹೆಸರು ಶ್ರೀ ಲಂಭೋಧರ ಎಂದು. ಲಂಬೋದರ = ಲಂಬೊ + ಉದರ.
ಲಂಬೊ = ದೊಡ್ಡದ್ದು / ದಪ್ಪದ್ದು, ಉದರ = ಉದರ / ಹೊಟ್ಟೆ.
6. ವಿಕಟ: ಶ್ರೀ ಗಣೇಶನಿಗೆ ಸಂತೋಷವಾಗಿ ಇರಲು ತುಂಬಾ ಇಷ್ಟ. ತನ್ನ ಜೊತೆಯಲ್ಲಿ ಇರುವ, ಎಲ್ಲಾ ಗಣರಿಗೆ ಸಂತೋಷದಿಂದ ನೋಡಿಕೊಳ್ಳುತ್ತಾನೆ. ಆದುರದಿಂದ, ಶ್ರೀ ಗಣೇಶನಿಗೆ ಶ್ರೀ ವಿಕಟವೆಂದ ಹೆಸರು ಬಂತು.
7. ವಿಘ್ನನಾಶಕ: ಶ್ರೀ ಗೌರೀತನಯನಿಗೆ ಮತೊಂದು ಹೆಸರು ಶ್ರೀ ವಿಘ್ನನಾಶಕ ಎಂದು. ಶ್ರೀ ಲಕ್ಷ್ಮಿನಾರಾಯಣನ ಕೃಪೆಯಿಂದ ಎಲ್ಲಾ ವಿಘ್ನಗಳನ್ನು ನಾಶ ಮಾಡುವವನು, ನಮ್ಮ ಶ್ರೀ ಗಣೇಶ.
ಇದರಿಂದ ಈ ಹೆಸರು. ವಿಘ್ನನಾಶಕ = ವಿಘ್ನ + ನಾಶಕ = ವಿಘ್ನ = ವಿಘ್ನಗಳು, ನಾಶಕ = ನಾಷನಮಾಡುವವನು.
8. ವಿನಾಯಕ: ಶ್ರೀ ಸ್ಕಂದ ಸಹೋದರನ ಹೆಸರೇ ಶ್ರೀ ವಿನಾಯಕ. ನಮ್ಮ ಶ್ರೀ ಗಣೇಶ ತುಂಬಾ ವಿನಯಶಾಲಿ ಮತ್ತು ಯಾರು ಆತನನ್ನು ನಂಬುತ್ತಾರೋ ಅವರನ್ನು ಕೂಡ ವಿನಯಶಾಲಿಯನ್ನಾಗಿ ಮಾಡುತ್ತಾನೆ.
ಆದುದರಿಂದ ಶ್ರೀ ಗಣೇಶನಿಗೆ ಶ್ರೀ ವಿನಾಯಕ ಎಂದು ಹೆಸರು. ವಿನಾಯಕ = ವಿನಯ + ನಾಯಕ = ವಿನಯ = ವಿನಯ / ಸಾಧಾರನತೆ, ನಾಯಕ = ನಾಯಕ / ಒಡೆಯ / ಕೊಡುವವನು.
9. ಧೂಮ್ರವರ್ಣ: ಶ್ರೀ ಗಣೇಶನಿಗೆ ಧೂಪ ಎಂದರೆ ತುಂಬಾ ಇಷ್ಟ ಮತ್ತು ತನ್ನ ಮೈಬಣ್ಣ ಸಹ ಧೂಮ್ರದಿಂದ ಉತ್ಕೃಷ್ಟವಾಗಿದೆ. ಆದುದರಿಂದ ಈ ಹೆಸರು.
ಧುಮ್ರವರ್ಣ = ಧೂಮ / ಧೂಪ + ಆವರ್ಣ = ಧೂಮ = ಧೂಪವನ್ನು ಇಷ್ಟಪಡುವವನು ಮತ್ತು ತನ್ನ ಮೈಬಣ್ಣವೇ ಧೂಮ್ರ / ಧೂಪದಿಂದ ಇರುವುದರಿಂದ, ಆವರ್ಣ = ಮೈಬಣ್ಣ.
(ಶ್ರೀ ಗಣೇಶನಿಗೆ, ಶ್ರೀ ಕಪಿಲವೆಂದು ಸಹ ಹೆಸರಿಗೆ. ದೇವತೆಗಳಿಗೆ, ಮನುಷ್ಯರಂತೆ ಒಂದು ಹೆಸರು ಅಥವ ಒಂದೇ ಬಣ್ಣ ಇರಬೇಕೆಂದಿಲ್ಲ, ಅವರು ಶ್ರೀ ಹರಿಯ ಕೃಪೆಯಿಂದ ಎನ್ನನ್ನಾದರು ಮಾಡಬಲ್ಲರು).
10. ಗಜಾಧ್ಯಕ್ಷ: ಶ್ರೀ ಗಣೇಶನಿಗೆ ಶ್ರೀ ಗಜಾಧ್ಯಕ್ಷ ಎಂದು ಹೆಸರು. ನಮ್ಮ ಶ್ರೀ ಗಣೇಶ ಎಲ್ಲಾ ಗಜಗಳಿಗೆ (ಗಜಗಳು / ಆನೆಗಳು), ಗಣರಿಗೆ ಒಡೆಯ, ಅಧೆಕ್ಷ. ಆದುದರಿಂದ ಈ ಹೆಸರು.
ಗಜಾಧ್ಯಕ್ಷ = ಗಜ + ಅಧ್ಯಕ್ಷ, ಗಜ = ಆನೆಗಳು / ಗಣಗಳು, ಅಧ್ಯಕ್ಷ = ಅಧ್ಯಕ್ಷ / ವಡೆಯ / ರಾಜ / ನಿಯಂತ್ರಕ.
11. ಬಾಲಚಂದ್ರ: ನಮ್ಮ ಚಿಕ್ಕ, ಪುಟ್ಟ ಶ್ರೀ ಗಣೇಶನ ಪ‍್ರೀತಿಯ ಹೆಸರು ಶ್ರೀ ಬಾಲಚಂದ್ರ ಎಂದು.
ಶ್ರೀ ಗಣೇಶನ ತಂದೆ ಶ್ರೀ ಶಿವ ಮತ್ತು ತಾಯಿ ಶ್ರೀ ಪಾರ್ವತಿದೇವಿಯ ಅಚ್ಚುಮೆಚ್ಚಿನ ಮಗ ಮತ್ತು ಆತ ತನ್ನ ತಂದೆಯಂತೆಯೇ ಶ್ರೀ ಚಂದ್ರದೇವನಿಗೆ ತನ್ನ ಶಿರಸ್ಸಿನ ಮೇಲೆ ಧರಿಸಿಕೊಳ್ಳುತ್ತಾನೆ ಮತ್ತು ತನ್ನ ತಂದೆ ತಾಯಿಯರಿಗೆ ಅಚ್ಚುಮೆಚ್ಚಿನ ಪುತ್ರ.
ಆದುದರಿಂದ ಶ್ರೀ ಗಣೇಶನ ಹೆಸರು ಶ್ರೀ ಬಾಲಚಂದ್ರ. ಬಾಲಚಂದ್ರ = ಬಾಲ + ಚಂದ್ರ, ಬಾಲ = ಮಗ, ಶ್ರೀ ಶಿವ ಮತ್ತು ಶ್ರೀ ಪಾರ್ವತಿಯರ ಮಗ,
ಚಂದ‍್ರ = ಚಂದ್ರನಂತೆ ತೋರುವ ಮಗ, ನಮ್ಮ ಗಣೇಶ ಮತ್ತು ತನ್ನ ಶಿರಿದಲ್ಲಿ ಶ್ರೀ ಚಂದ್ರದೇವನಿಗೆ ಧರಿಸುವವನು ಎಂದು ಅರ್ಥ.
12. ಗಜಾನಣ: ಶ್ರೀ ಗಣೇಶನಿಗೆ ಮತೊಂದು ಶ್ರೇಷ್ಠವಾದ ಹೆಸರು ಶ್ರೀ ಗಜಾನಣ ಎಂದು. ಶ್ರೀ ಗಣಪತಿಗೆ, ಗಜ / ಆನೆಯ ಮುಖ ಇರುವುದರಿಂದ ಈ ಹೆಸರು.
ಗಜಾನಣ = ಗಜ + ಅನಣ, ಗಜ = ಗಜ / ಆನೆ, ಅನಣ = ಮುಖವುಲ್ಲ.
ಇದರ ಆಂಗ್ಲ ಅನುವಾದವನ್ನು ಓದಲು, ನೀವು ಈ ಲಿಂಕ್‌ಗೆ ಕ್ಲಿಕ್ ಮಾಡಬಹುದು:
Lord Ganesha different names – dvadasha twelve names
ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.
To watch videos on #Hinduism #Sanskrit language, SUBSCRIBE to my YouTube channel from this below link:
#BhagavanBhakthi YouTube channel
“ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:
ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ
ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.
ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.
ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.
ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್ ಮಾಡಿಕೊಳ್ಳಿ.
ಏಕೆಂದರೆ “ಶೇರ್ ಮಾಡುವುದೆಂದರೆ ಕೇರ್ ಮಾಡುವುದು ಎಂದರ್ಥ”.
#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.
ವಂದನೆಗಳು!
ಶ್ರೀ ಗುರುಭ್ಯೋ ನಮಃ
ಓಂ ನಮೋ ನಾರಾಯಣಾಯ
ಶ್ರೀ ಕೃಷ್ಣಾರ್ಪಣಮಸ್ತು
Share in Social Media