ಮಕರ ಸಂಕ್ರಾಂತಿ ಹಬ್ಬದ ಮಹತ್ವ ಕನ್ನಡದಲ್ಲಿ (Makara Sankranti habbada mahatva in Kannada)

ನಮಸ್ತೆ ಸ್ನೇಹಿತರೆ, ಹೇಗಿದ್ದೀರಾ ನೀವು? ಭಗವಂತ ಶ್ರೀ ಕೃಷ್ಣನ ಆಶೀರ್ವಾದ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಮೇಲೆ ಸದಾ ಇರಲಿ.

ಮಕರ ಸಂಕ್ರಾಂತಿ: ‘ಮಕರ ಸಂಕ್ರಾಂತಿ’ ಪದಗಳ ಅರ್ಥವೇನು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳೋಣ:

‘ಮಕರ’ ಎಂಬುದು ‘ರಾಶಿ’ಗಳಲ್ಲಿ ಒಂದು ಮತ್ತು ‘ಸಂಕ್ರಾಂತಿ ಅಥವಾ ಸಂಕ್ರಮಣ’ ಎಂದರೆ ಶ್ರೀ ಸೂರ್ಯ ದೇವನ ಚಲನೆ ಎಂದು ಅರ್ಥ. 

ಅಂದರೆ ಶ್ರೀ ಸೂರ್ಯ ದೇವ ‘ಧನೂರಾಶಿ’ ಯಿಂದ ‘ಮಕರ ರಾಶಿ’ ಯತ್ತ ಚಲಿಸುತ್ತಾರೆ. ಇಲ್ಲಿ ಸಂಕ್ರಾಂತಿ / ಸಂಕ್ರಮಣ ಎಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು ಎಂದು ಅರ್ಥ. ಸಂಕ್ರಮಣ = ಸಂ + ಕ್ರಮಣ. ಇಲ್ಲಿ ಕ್ರಮಣ ಎಂದರೆ ಚಲನೆ ಎಂದು ಅರ್ಥ.

ಸೂರ್ಯ ದೇವರು ಧನೂರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ಕಾರ್ಯವು, ಸೂರ್ಯೋದಯದ ಸಮಯದಲ್ಲಿ ಸಂಭವಿಸದಿದ್ದರೆ, ಅದನ್ನು ಮಕರ ಸಂಕ್ರಾಂತಿಯ ಹಬ್ಬದ ದಿನವೆಂದು ಪರಿಗಣಿಸಬಾರದು.

ಸಂಕ್ರಾಂತಿ ಯಾವಾಗ ಆಚರಿಸಬೇಕು:

ಶ್ರೀ ಸೂರ್ಯ ದೇವರು ‘ಧನೂರಾಶಿ’ಯಿಂದ ‘ಮಕರ ರಾಶಿ’ಗೆ ಪ್ರವೇಶಿಸುವ ದಿನವು, ಭಾರತೀಯ ಪಂಚಾಂಗದ ಪ್ರಕಾರ ‘ಸೂರ್ಯೋದಯ’ದ ಸಮಯದಲ್ಲಿ ಈ ಚಲನೆಯು ಸಂಭವಿಸದಿದ್ದರೆ, ನಾವು ಅದನ್ನು ಹಬ್ಬದ ದಿನವೆಂದು ಪರಿಗಣಿಸಲು ಸಾಧ್ಯವಿಲ್ಲ. 

ಭಾರತೀಯ ಸಂಸ್ಕೃತದ ಪ್ರಕಾರ, ಸೂರ್ಯೋದಯದ ಸಮಯದಲ್ಲಿ ಏನಾದರೂ ಸಂಭವಿಸಿದಲ್ಲಿ ಮಾತ್ರ ನಾವು ಅದನ್ನು ಶುಭ ಸಂದರ್ಭ ಮತ್ತು ಸರಿಯಾದ ಸಂದರ್ಭವೆಂದು ಪರಿಗಣಿಸುತ್ತೇವೆ. 

ಸೂರ್ಯೋದಯದ ಸಮಯದಲ್ಲಿ, ಇನ್ನೂ ಶ್ರೀ ಸೂರ್ಯ ದೇವರು ಮಕರ ರಾಶಿಯತ್ತ ಚಲಿಸುತ್ತಿರುವ ಕಾರಣದಿಂದ ಸೂರ್ಯೋದಯದ ಸಮಯದಲ್ಲಿ ಮಾತ್ರ ಎಲ್ಲರೂ ‘ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣ’ವನ್ನು ಆಚರಿಸಬೇಕು (ಬಹುಶಃ ಮರುದಿನ – ದಯವಿಟ್ಟು ಈ ಬಗ್ಗೆ ತಿಳಿಯಲು ನಿಮ್ಮ ಸ್ಥಳೀಯ ಪಂಡಿತರನ್ನು ಸಂಪರ್ಕಿಸಿ).

ಎಡ: ಶ್ರೀ ಸೂರ್ಯ ದೇವರು ತಮ್ಮ ಸಾರಥಿ ಅರುಣನೊಂದಿಗೆ. ಬಲ: ಶ್ರೀ ಸೂರ್ಯ ದೇವರು ತಮ್ಮ ಮಡದಿಯರೊಂದಿಗೆ.

ಭಾರತವನ್ನು ಹೊರತುಪಡಿಸಿ, ಮಕರ ಸಂಕ್ರಾಂತಿಯನ್ನು ಇತರೆ ಕೆಲವು ದೇಶಗಳಲ್ಲಿಯೂ ಆಚರಿಸಲಾಗುತ್ತದೆ:

1. ನೇಪಾಳವು ತಮ್ಮ ಕ್ಯಾಲೆಂಡರ್ ಪ್ರಕಾರ ಜನವರಿಯಲ್ಲಿ ಇದನ್ನು ‘ಮಾಘೆ ಸಂಕ್ರಾಂತಿ’ ಎಂದು ಆಚರಿಸುತ್ತದೆ, ಇದು ಮಾಘ ತಿಂಗಳದ ಆರಂಭ ಮತ್ತು ಪುಷ್ಯ ತಿಂಗಳದ ಅಂತ್ಯವನ್ನು ಸೂಚಿಸುತ್ತದೆ.

2. ಥಾಯ್ ನ ಸಾಂಪ್ರದಾಯಿಕ ಹೊಸ ವರ್ಷದ ದಿನವಾದ ‘ಸಾಂಗ್‌ಕ್ರಾನ್’ ಅನ್ನು ಸಂಕ್ರಾಂತಿ ಎಂಬ ಶಬ್ದದಿಂದ ಪಡೆಯಲಾಗಿದೆ.

3. ಮ್ಯಾನ್ಮಾರ್‌ನ ‘ಥಿಂಗ್ಯಾನ್’, ಲಾವೋಸ್‌ನ ‘ಪಿ ಮಾ ಲಾವ್‌’ ಮತ್ತು ಕಾಂಬೋಡಿಯಾದ ‘ಮೋಹಾ ಸಾಂಗ್‌ಕ್ರಾನ್’ ಸಹ ಆಯಾ ಸಂಸ್ಕೃತಿಗಳಲ್ಲಿ ಸಂಕ್ರಾಂತಿಯ ವಿಭಿನ್ನ ರೂಪಾಂತರಗಳಾಗಿವೆ.

ಮೂಲತಃ ಸಂಕ್ರಾಂತಿಯ ದಿನದಂದು, ಇಲ್ಲಿ ಏನಾಗುತ್ತದೆ ಎಂದರೆ, ಭೂಮಿಯು ಸೂರ್ಯನನ್ನು ಪರಿಭ್ರಮಿಸುತ್ತಿದ್ದಂತೆ, ಚಳಿಗಾಲವನ್ನು ಅನುಭವಿಸುತ್ತಿರುವ ಸೂರ್ಯನಿಂದ ದೂರವಿದ್ದ ಭೂಮಿಯ ಅರ್ಧ ಭಾಗವು, ಈಗ ಸೂರ್ಯನ ಕಡೆಗೆ ಮುಖಮಾಡುತ್ತದೆ ಮತ್ತು ಇದು ಬೇಸಿಗೆಯ ಆರಂಭವನ್ನು ಸೂಚಿಸುತ್ತದೆ. 

ರೈತರಿಗೆ ಇದು ಮಹತ್ವಪೂರ್ಣವಾದ ಸಮಯ, ಏಕೆಂದರೆ ಇದು ದೀರ್ಘ ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ಆರಂಭ ಮತ್ತು ಹೊಸ ಸುಗ್ಗಿಯ ಕಾಲವನ್ನು ಸೂಚಿಸುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಸೂರ್ಯನ ದಕ್ಷಿಣಾಯನ (ದಕ್ಷಿಣ ಪ್ರಯಾಣ) ಇಲ್ಲಿ ಕೊನೆಗೊಳ್ಳುತ್ತದೆ, ಮತ್ತು ಕರ್ಕರೇಖೆಯ ಕಡೆಗೆ ಉತ್ತರಾಯಣ (ಉತ್ತರ ಪ್ರಯಾಣ) ಪ್ರಾರಂಭವಾಗುತ್ತದೆ. 

ಇತರೆ ಹಿಂದೂ ಹಬ್ಬಗಳಿಗಿಂತ ಭಿನ್ನವಾಗಿ, ಸಂಕ್ರಾಂತಿ ಸಾಮಾನ್ಯವಾಗಿ ಜನವರಿ 14 ಅಥವಾ 15 ರಂದು ನಿಗದಿತ ದಿನಾಂಕದಂದು ಬರಲು ಇದು ಒಂದು ಕಾರಣವಾಗಿರಬಹುದು. 

ಇನ್ನೊಂದು ಅಂಶವೆಂದರೆ, ಸಂಕ್ರಾಂತಿಯು ಅಶುಭ ಸಮಯದ (ಕೆಲವೊಮ್ಮೆ ಡಿಸೆಂಬರ್ ಮಧ್ಯದಲ್ಲಿ) ಅಂತ್ಯವನ್ನು ಸೂಚಿಸುತ್ತದೆ, ಮತ್ತು ಇದನ್ನು ಆರಂಭಕ್ಕೆ ಶುಭವೆಂದು ಪರಿಗಣಿಸಲಾಗುತ್ತದೆ. 

ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಉತ್ತರಾಯಣದಂದು ನಿಧನರಾದರು ಎಂಬ ನಂಬಿಕೆ ಇದೆ, ಆದ್ದರಿಂದ ಇದು ಧಾರ್ಮಿಕ ಮಹತ್ವವನ್ನೂ ಹೊಂದಿದೆ. 

ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಹೆಚ್ಚಿನ ಭಾರತೀಯ ರಾಜ್ಯಗಳಲ್ಲಿ ಇದನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆಯಾದರೂ, ಇತರೆ ರಾಜ್ಯಗಳಲ್ಲಿ ಸ್ವಲ್ಪ ಪ್ರಾದೇಶಿಕ ವ್ಯತ್ಯಾಸಗಳಿವೆ. 

ತಮಿಳರು ಇದನ್ನು ತಾಯ್ ಪೊಂಗಲ್ ಎಂದು ಆಚರಿಸಿದರೆ, ಗುಜರಾತಿ ಜನರು ಇದನ್ನು ಉತ್ತರಾಯಣ ಎಂದು ಆಚರಿಸುತ್ತಾರೆ. ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರಿಯಾಣದಲ್ಲಿ ಇದನ್ನು ಮಾಘಿ ಎಂದು ಆಚರಿಸಿದರೆ, ಅಸ್ಸಾಮಿಗಳಿಗೆ ಇದು ಭೋಗಲಿ ಬಿಹು. 

ಕಾಶ್ಮೀರದಲ್ಲಿ ಇದನ್ನು ಶಿಶುರ್ ಸೆಂಕ್ರಾತ್ ಎಂದು ಕರೆಯಲಾಗುತ್ತದೆ, ಮತ್ತು ಕರ್ನಾಟಕ ಇದನ್ನು ಮಕರ ಸಂಕ್ರಮಣ ಎಂದು ಆಚರಿಸುತ್ತದೆ.

ಮಕರ ಸಂಕ್ರಾಂತಿ ದಿನದ ಇತರೆ ಮಹತ್ವಗಳು

1. ಶ್ರೀ ಕುರುಕ್ಷೇತ್ರದ ಯುದ್ಧದ ನಂತರ ಶ್ರೀ ಭೀಷ್ಮಾಚಾರ್ಯರುಪ್ರಾಣವನ್ನು ತ್ಯಜಿಸಬೇಕು ಎಂದು ತೀರ್ಮಾನಿಸಿದ ದಿನ ಇಂದು (ಹಸ್ತಿನಾಪುರ ಶ್ರೀ ಯುಧಿಷ್ಠಿರನ ಕೈಯಲ್ಲಿ ಸುರಕ್ಷಿತವಾಗಿದೆ ಎಂಬ ವಿಶ್ವಾಸವನ್ನು ಪಡೆದ ನಂತರ ಅವರು ಸಾವನ್ನಪ್ಪುತ್ತಾನೆ).

2. ಸಂಕ್ರಾಂತಿಯ ದಿನದಂದು ಶ್ರೀ ಸೂರ್ಯ ದೇವರು’ದಕ್ಷಿಣಾಯನ’ (ದಕ್ಷಿಣ) ದಿಂದ ‘ಉತ್ತರಾಯಣ’ (ಉತ್ತರ) ಕ್ಕೆ ಚಲಿಸುತ್ತಾರೆ.

3. ಸಂಕ್ರಾಂತಿಯ ದಿನದಂದು ದೇವತೆಗಳ ದಿನ ಪ್ರಾರಂಭವಾಗುತ್ತದೆ. ದೇವತೆಗಳಿಗೆ ಅವರ ಗ್ರಹಗಳ ಪ್ರಕಾರ ದಕ್ಷಿಣಾಯನದಿಂದ ಉತ್ತರಾಯಣದವರೆಗೆ (ಆರು ತಿಂಗಳು) ರಾತ್ರಿಯ ಸಮಯವಾಗಿರುತ್ತದೆ ಮತ್ತು ಅದೇ ರೀತಿ ಉತ್ತರಾಯಣದಿಂದ ದಕ್ಷಿಣನಾಯನದವರೆಗೆ ಹಗಲಿನ ಸಮಯವಾಗಿರುತ್ತದೆ. ಇದು ನಮ್ಮ ಭೂಮಿಯಂತೆಯೇ,ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಮತ್ತು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ದಿನವಾಗಿರುತ್ತದೆ. 

4. ಇದರೊಂದಿಗೆ,ಹಗಲು-ರಾತ್ರಿ ಎರಡೂ ಒಂದೇ ಮತ್ತು ನಿಖರವಾದ ಸಮಯವನ್ನು ಹೊಂದಿರುತ್ತವೆ. ಅಂದರೆ, ಭೂಮಿಯ ಹಗಲಿನ ಸಮಯ ಭೂಮಿಯ ರಾತ್ರಿಯ ಸಮಯಕ್ಕೆ ಸಮಾನವಾಗಿರುತ್ತದೆ. ಹಗಲಿನ ಸಮಯ = ರಾತ್ರಿಯ ಸಮಯ.

ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ, ಅಜ್ಞಾತ ಸಮಯದಿಂದ ಶ್ರೀ ಸೂರ್ಯ ದೇವರ ಚಲನೆಯ ಬಗ್ಗೆ ನಮಗೆ ಮೊದಲೇ ತಿಳಿದಿತ್ತು. 

ಅಜ್ಞಾತ ಸಮಯದಿಂದಲೂ ಭಾರತ ಯಾವಾಗಲೂ ಜಗತ್ತಿಗೆ ಶ್ರೇಷ್ಠ ವಿಜ್ಞಾನಿಗಳನ್ನು ಒದಗಿಸಿದೆ. ನಾವು ಯುಗಯುಗಗಳಿಂದಲೂ ವಿಮಾನದಲ್ಲಿ ಚಲಿಸುತ್ತಿದ್ದೇವೆ. ನಾವು ಯುಗಯುಗಗಳಿಂದ ವಿಭಿನ್ನ ಗ್ರಹಗಳ ಬಗ್ಗೆ ತಿಳಿದುಕೊಂಡಿದ್ದೇವೆ.

ಇತ್ತೀಚೆಗಷ್ಟೇ  ಮಾತ್ರ ಯೂರೋಪ್‌ ನ ಜನರು ಈ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಯಾರು ಮುಂದಿದ್ದಾರೆಂದು ನೀವೇ ಸ್ವಲ್ಪ ಯೋಚಿಸುವ ವಿಷಯವಿದು???

ಎಲ್ಲರಿಗೂ ಮಕರ ಸಂಕ್ರಾಂತಿ / ಸಂಕ್ರಮಣದ ಹಬ್ಬದ ಶುಭಾಶಯಗಳು

ಸಂಕ್ರಾಂತಿ ಹಬ್ಬದ ಬಗ್ಗೆ ಇಂಗ್ಲೀಷ್ ನಲ್ಲಿ ಓದಲು, ಈ ಲಿಂಕ್ ಅನ್ನು ಕ್ಲಿಕ್ ಮಾಡಿ:

Makara Sankranti Sankramana significances

ಸಂಕ್ರಾಂತಿ ಹಬ್ಬದ ಬಗ್ಗೆ ಹಿಂದಿಯಲ್ಲಿ ಓದಲು, ಈ ಲಿಂಕ್ ಅನ್ನು ಕ್ಲಿಕ್ ಮಾಡಿ:

मकर संक्रांति / संक्रमण का महत्व

ನೀವು ಇದನ್ನು ಲೈಕ್ ಮಾಡಬಹುದು, ಈ ಕುರಿತು ಕಾಮೆಂಟ್ ಮಾಡಬಹುದು ಮತ್ತು ಇದನ್ನು ನಿಮ್ಮ ವಿವಿಧ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳಲ್ಲಿ ಶೇರ್‌ ಮಾಡಬಹುದು ಮತ್ತು ನಮ್ಮ ಅತ್ಯಮೂಲ್ಯವಾದ ಸನಾತನ ಧರ್ಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನನ್ನ ಇತರೆ ಪೋಸ್ಟ್‌ ಗಳಿಗೆ ಭೇಟಿ ನೀಡಿ.

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ bhagavan.bhakthi.contact@gmail.com ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಓಂ ಶ್ರೀ ಕೃಷ್ಣಾಯ ನಮಃ

ಶ್ರೀ ಕೃಷ್ಣಾರ್ಪಣಮಸ್ತು

Share in Social Media

Leave a Reply

Your email address will not be published.