ಶ್ರೀ ರಾಮ ಲಕ್ಷ್ಮಣ ಭರತ ಶತ್ರುಘ್ನರ ಮಕ್ಕಳು, ಹೆಂಡತಿಯರು, ತಂದೆ, ತಾಯಿಯರ ಹೆಸರುಗಳು | Sri Rama Lakshmana Bharata Shatrughna’s Children, Wives Mother Father names in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ಶ್ರೀ ರಾಮ ಲಕ್ಷ್ಮಣ ಭರತ ಶತ್ರುಘ್ನರ ಮಕ್ಕಳು, ಹೆಂಡತಿಯರು, ತಂದೆ, ತಾಯಿಯರ ಹೆಸರುಗಳು | Sri Rama Lakshmana Bharata Shatrughna’s Children, Wives Mother Father names in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಭಗವಂತ ಶ್ರೀ ರಾಮ, ಸೂರ್ಯವಂಶದಲ್ಲಿ ಜನಿಸಿದನು. ಈ ಸೂರ್ಯವಂಶದಲ್ಲಿ ಮಹಾನ್ ರಾಜರಾದ ರಘು, ಇಶ್ಕ್ವಾಕು, ಮಾಂದಾತ, ಇತರೆ ರಾಜರುಗಳಿದ್ದರು.

ಈ ವಂಶದ ಮೂಲ ಸ್ವಯಂ ಭಗವಂತ ಶ್ರೀ ಹರಿ. ಶ್ರೀ ಹರಿಯ ಮಗ ಶ್ರೀ ಬ್ರಹ್ಮ ದೇವರು. ಈ ವಂಶದಲ್ಲಿ ಕೇವಲ ದೈವಿ ಪುರುಷರು ಮತ್ತು ಮಹಿಳೆಯರು ಮಾತ್ರ ಜನನ ತೆಗೆದುಕೊಂಡಿದ್ದಾರೆ.

ಈ ವಂಶದಲ್ಲಿ ಜನನ ತೆಗೆದುಕೊಳ್ಳಬೇಕೆಂದರೆ, ಮಹಾನ್ ದೈವಿ ಭಕ್ತರಾಗಿರಬೇಕು ಮತ್ತು ಭಗವಂತ ಶ್ರೀ ಹರಿಯ ಕೃಪೆ ಇರಬೇಕು. ಹೀಗಿದ್ದರೆ ಮಾತ್ರ ಈ ವಂಶದಲ್ಲಿ ಜನನ, ಅಥವಾ ಇಲ್ಲವೇ ಇಲ್ಲ.

ಎಡ: ಧಶರಥ ತಮ್ಮ ನಾಲ್ಕು ಮಕ್ಕಳೊಂದಿಗೆ. ಬಲ: ಶ್ರೀ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ

ಶ್ರೀ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ತಂದೆ ದಶರಥ ಮಹಾರಾಜ.

ಶ್ರೀ ರಾಮನ ತಾಯಿ ಕೌಸಲ್ಯ ದೇವಿ. ಲಕ್ಷ್ಮಣನ ತಾಯಿ ಸುಮಿತ್ರ ದೇವಿ. ಭರತನ ತಾಯಿ ಕೈಕೇಯಿ ದೇವಿ. ಶತ್ರುಘ್ನನ ತಾಯಿಯೂ ಸುಮಿತ್ರ ದೇವಿ.

ಇವರೆಲ್ಲರೂ ಸೂರ್ಯವಂಶದಲ್ಲಿ (ರಘು ವಂಶ, ಇಕ್ಷ್ವಾಕು ವಂಶ) ಜನ್ಮ ತೆಗೆದುಕೊಳ್ಳುತ್ತಾರೆ.

ದಶರಥನ ಮೊದಲ ಮಗ ಭಗವಂತ ಶ್ರೀ ರಾಮ, ಎರಡನೇಯ ಮಗ ಲಕ್ಷ್ಮಣ, ಮೂರನೇ ಮಗ ಭರತ ಮತ್ತು ನಾಲಕ್ಕನೇ ಮಗ ಶತ್ರುಘ್ನ:

1. ರಾಮನಿಗೆ ಲವ-ಕುಶ ಮಕ್ಕಳು. 2. ಲಕ್ಷ್ಮಣನಿಗೆ ಅಂಗದ-ಚಂದ್ರಕೇತು ಮಕ್ಕಳು. 3. ಭರತನಿಗೆ ತಕ್ಷ-ಪುಷ್ಕಲರು ಮಕ್ಕಳು. 4. ಶತ್ರುಘ್ನನಿಗೆ ಸುಬಾಹು-ಶತ್ರುಪಾತಿ ಮಕ್ಕಳು

ಇವರಲ್ಲಿ ಹಿರಿಯವನಾದ ಕುಶನು, ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಳಿಯಲ್ಲಿ ರಾಜ್ಯವಾಳುತ್ತಾನೆ..

ಲವನು ಶ್ರಾವಸ್ತಿ ಅಥವಾ ಲವಸ್ಥಳಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..

ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ. | ಅವನಿಂದ ನಿಷಧ | ನಭ | ಪುಂಡರೀಕ | ಕ್ಷೇಮಧನ್ವಾ | ದೇವಾನೀಕ | ಅನೀಹ | ಪಾರಿಯಾತ್ರ | ಬಲಸ್ಥಲ | 

ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ. | ಇವನ ಮಗ ಖಗಣ | ವಿಧೃತಿ |

ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡೆದ.

ಹಿರಣ್ಯನಾಭನ ಮಗ ಪುಷ್ಯ | ಧ್ರುವಸಂಧಿ | ಸುದರ್ಶನ | ಅಗ್ನಿವರ್ಣ | ಶೀಘ್ರ |

ಮರು: ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ.ಈಗಲೂ ಈ ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿವಾಸಿಸುತ್ತಿದ್ದಾನೆ.ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ.

ಮರುವಿನ ಮಗ ಪ್ರಸುಶ್ರುತ | ಸಂಧಿ | ಅಮರ್ಷಣ | ಮಹಸ್ವಂತ | ವಿಶ್ವಸಾಹ್ವ | ಪ್ರಸೇನಜಿತ್ | ತಕ್ಷಕ | ಬೃಹದ್ಬಲ-ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ.

ಬೃಹದ್ಬಲನ ಮಗ ಬೃಹದ್ರಣ | ಉರುಕ್ರಿ | ವತ್ಸವೃದ್ಧ | ಪ್ರತಿವ್ಯೋಮ | ಭಾನು | ದಿವಾಕ | ಸಹದೇವ | ಬೃಹದಶ್ವ | 

ಭಾನುಮಂತ | ಪ್ರತೀಕಾಶ್ವ | ಸುಪ್ರತೀಕ | ಮರುದೇವ | ಸುನಕ್ಷತ್ರ | ಪುಷ್ಕರ | ಅಂತರಿಕ್ಷ |

ಸುತಪಸ | ಅಮಿತ್ರಜಿತ್ | ಬೃಹದ್ರಾಜ | ಬರ್ಹಿ | ಕೃತಂಜಯ | ರಣಂಜಯ | ಸಂಜಯ | ಶಾಕ್ಯ |

ಶುದ್ಧೋದ | ಲಾಂಗಲ | ಪ್ರಸೇನಜಿತ್ | ಕ್ಷುದ್ರಕ | ರಣಕ | ಸುರಥ… ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು.

ಇವರೆಲ್ಲರೂ ಇಕ್ಷ್ವಾಕು ವಂಶಸಂಭೂತರು. ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು.

ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.

To watch videos on #Hinduism #Sanskrit language, SUBSCRIBE to my YouTube channel from this below link:

#BhagavanBhakthi YouTube channel

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ

To full list of “Chandravanshi Kings (Chandravamsha) (Lunar dynasty) family tree (members) names“, kindly click the below link:

Chandravanshi Kings (Chandravamsha) (Lunar dynasty) family tree (members) names

To know more about “Pandavas information (facts)“, please click the below link:

Pandavas information (facts)

To full list of “Suryavanshi (Solar dynasty) (Suryavamsha) family tree (members) names“, kindly click the below link:

Suryavanshi Kings (Solar dynasty) (Suryavamsha) family tree (members) names

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಶ್ರೀ ರಾಘವೇಂದ್ರಾಯ ನಮಃ

ಶ್ರೀ ಕೃಷ್ಣಾರ್ಪನಮಸ್ತು

Share in Social Media

Leave a Reply

Your email address will not be published. Required fields are marked *