ಮಹಾಭಾರತ (ಕುರುಕ್ಷೇತ್ರ) ಯುದ್ಧದಲ್ಲಿ ನಿಷೇಧಿಸಲಾಗಿದ್ದ ಆಯುಧಗಳು (ಶಸ್ತ್ರಾಸ್ತ್ರಗಳು) | Arms (Weapons) banned in Mahabharata war in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ, ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಮತ್ತು ಶ್ರೀ ತುಳಸಿ ದೇವಿಯ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ಮಹಾಭಾರತ ಯುದ್ಧದಲ್ಲಿ ನಿಷೇಧಿಸಲಾಗಿದ್ದ ಆಯುಧಗಳು (ಶಸ್ತ್ರಾಸ್ತ್ರಗಳು) | Arms (Weapons) banned in Mahabharata war in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಹಾಭಾರತದ ಯುದ್ಧದ ಸ್ಥಳವನ್ನು ಉತ್ತರ ಭಾರತದಲ್ಲಿರುವ ಒಂದು ಪ್ರದೇಶವಾದ ಕುರುಕ್ಷೇತ್ರದಲ್ಲಿ ಸಂಭವಿಸಿದೆ ಎಂದು ಮಹಾಭಾರದ ಗ್ರಂಥದಲ್ಲಿ ವಿವರಿಸಲಾಗಿದೆ.

ಮಹಾಭಾರದ ಯುದ್ಧವು ಕೇವಲ ಹದಿನೆಂಟು ದಿನಗಳವರೆಗೆ ಇದ್ದರೂ ಸಹ, ಯುದ್ಧದ ನಿರೂಪಣೆ ಗ್ರಂಥದ ಕಾಲು ಭಾಗಕ್ಕಿಂತ ಹೆಚ್ಚಿನದಲ್ಲಿ ವಿವರಿಸಲಾಗಿದೆ, ಇದು ಇಡೀ ಮಹಾಭರತದ ಸಾಪೇಕ್ಷ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

ಮಹಾಭಾರತದ ನಿರೂಪಣೆ ಪಾಂಡವರು ಮತ್ತು ಕೌರವರ ವಿವಿಧ ವೀರರ ವೈಯಕ್ತಿಕ ಯುದ್ಧಗಳು ಮತ್ತು ಸಾವುಗಳು, ಸೈನ್ಯದ ರಚನೆಗಳು, ಯುದ್ಧದ ರಾಜತಾಂತ್ರಿಕತೆ, ಪಾತ್ರಗಳ ನಡುವೆ ಸಭೆಗಳು ಮತ್ತು ಚರ್ಚೆಗಳು ಮತ್ತು ಬಳಸಿದ ಆಯುಧಗಳನ್ನು (ಶಸ್ತ್ರಾಸ್ತ್ರಗಳನ್ನು) ವಿವರಿಸುತ್ತದೆ.

ಮಹಾಭಾರತ ಅಥವಾ ಕುರುಕ್ಷೇತ್ರ ಯುದ್ಧ ಒಟ್ಟು ೧೮ ದಿನಗಳವರೆಗೆ ನಡೆಯಿತು. ಈ ಮಹಾನ್‌ ಯುದ್ಧದಲ್ಲಿ ಹಲವಾರು ನಿಯಮಗಳ್ಳಿದ್ದವು.

ಅದರಲ್ಲಿ, ಕೆಲ ಶಸ್ತ್ರಾಸ್ತ್ರಗಳನ್ನು / ಆಯುಧಗಳನ್ನು ಬಳಸಲೇಬಾರದು ಎಂದು ಕಟ್ಟುನಿಟ್ಟಾದ ನಿಯಮಗಳ್ಳಿದ್ದವು.

ಅಂತಹ ಶಸ್ತ್ರಾಸ್ತ್ರಗಳು ಅಥವಾ ಆಯುಧಗಳು ಯಾವುವು, ಏತಕ್ಕಾಗಿ ಬಳಸಲೇಬಾರದು ಎಂಬುವ ಕಾರಣಗಳನ್ನು ನಾವೆಲ್ಲರೂ ತಿಳಿದುಕೊಳ್ಳೋಣ.

ಆಯುಧಗಳು ಅಥವಾ ಶಸ್ತ್ರಾಸ್ತ್ರಗಳ ಹೆಸರುಗಳನ್ನು ಕೆಳಗ ನೀಡಲಾಗಿದೆ:

1. ಜಿಹ್ಮಗ, | 2. ಸಂಶ್ಲಿಷ್ಟ, | 3. ವಾಸ್ತಿಗಜಾಸ್ತಿಜ, | 4. ವಸ್ತಕವಸ್ತಿ, | 5. ಕರ್ಣಿ, | 6. ಸೂಚಿ, | 7. ವಿಷಲಿಪ್ತ, | 8. ನಾಲೀಕ, | 9. ಪೂತಿ, | 10. ಪಿಶ, |

(ಈ ಶಸ್ತ್ರಾಸ್ತ್ರ ಅಥವಾ ಆಯುಧಗಳನ್ನು ಹೊರತುಪಡಿಸಿ ಇನ್ನೂ ಹಲವಾರು ಶಸ್ತ್ರಾಸ್ತ್ರ ಅಥವಾ ಆಯುಧಗಳನ್ನು ಬಳಸಬಾರದು ಎಂದು ನಿಷೇಧಿಸಲಾಗಿತ್ತು.)

ಆಯುಧಗಳು ಅಥವಾ ಶಸ್ತ್ರಾಸ್ತ್ರಗಳ ಹೆಸರುಗಳ ಸಂಕ್ಷಿಪ್ತ ವಿವರಣೆಯನ್ನು ಕೆಳಗ ನೀಡಲಾಗಿದೆ:

1. ಜಿಹ್ಮಗ: ಈ ಆಯುಧ ಒಂದು ಕಡೆಗೆ ಗುರಿ ಅಥವಾ ಲಕ್ಷ್ಯವನ್ನು ತೋರಿಸುತ್ತಿದ್ದು ಮತ್ತು ಹಾಗೆಯೇ ಮತ್ತೊಂದು ಕಡೆಗೆ ಹೋಗಿ ಬೀಳತಕ್ಕ ಬಾಣಗಳಾಗಿದ್ದವು.

2. ಸಂಶ್ಲಿಷ್ಟ: ಈ ಆಯುಧ ಎರಡು ಬಾಣಗಳಿಂದ ಕೂಡಿ ಜೋಡಿಯಾಗಿರುತ್ತಿತ್ತು. ಒಂದೇ ಬಾರಿಗೆ ಎರಡು ಕಡೆಗಳಲ್ಲಿ ಗಾಯವಾಗುವುದರಿಂದ ಈ ಬಾಣವನ್ನು ಬಿಡುವುದು ಕೆಲವರಿಗೆ ಕಷ್ಟಕರವಾಗುತ್ತಿತ್ತು.

3. ವಾಸ್ತಿಗಜಾಸ್ತಿಜ: ಈ ವಿ‍ಶೇಷ ಆಯುಧ ಹಸುವಿನ ಮೂಳೆಯಿಂದ ಮತ್ತು ಆನೆಯ ಮೂಳೆಯಿಂದ ಮಾಡುತ್ತಿದ್ದರು, ಮತ್ತು ಇದಕ್ಕೆ ವಿಷವನ್ನು ಲೇಪಿಸಲಾಗುತ್ತಿತ್ತು.

4. ವಸ್ತಕವಸ್ತಿ: ಇದರ ಅರ್ಥ, ನಾಭಿ ಅಥವಾ ಹೊಕ್ಕಳಿನ ಕೆಳಭಾಗ ಎಂದರ್ಥ. ಅಲ್ಲಿಯೇ ಉಳಿದುಕೊಳ್ಳುವುದಕ್ಕೆ ವಸ್ತಿಕ ಎಂದು ಹೆಸರು ಇದಕ್ಕು ಬಂದಿದೆ.

ಇದು ನಾಭಿ ಅಥವಾ ಹೊಕ್ಕಳ ಕೆಳಭಾಗದಲ್ಲಿ ನಿಟ್ಟೊಡನೆಯೇ ಚೂಪಾದ ತುದಿಯು ವಸ್ತಿಯೊಳಗೆ ಸೇರಿಕೊಂಡು ಬಾಣದ ದಂಡ ಮಾತ್ರವೇ ಹೊರಬರುತ್ತದೆ.

5. ಕರ್ಣಿ: ಇದು ಹಿಂದು-ಮುಂದಾದ ಎರಡು ಮುಳ್ಳುಗಳಿಂದ ಕೂಡಿರುತ್ತಿತ್ತು. ಶರೀರದಿಂದ ಇದನ್ನು ಹೊರತೆಗೆಯಲು ಹೋದರೆ ಕರುಳುಗಳ ಸಮೇತವಾಗಿ ಹೊರಬರುತ್ತಿತ್ತು.

6. ಸೂಚಿ: ಈ ಆಯುಧ ಕರ್ಣಿಯಂತೆ ಇದ್ದು, ಅದರಲ್ಲಿ ಅನೇಕ ಮುಳ್ಳುಗಳಿರುತ್ತಿತ್ತು.

7. ವಿಷಲಿಪ್ತ: ಹೆಸರೇ ಸೂಚಿಸುವಂತೆ, ಈ ಬಾಣ ವಿಷದಿಂದ ಲೇಪಿತವಾಗಿರುತ್ತಿತ್ತು.

8. ನಾಲೀಕ: ಇದು ಬಹಳ ಚಿಕ್ಕದಾಗಿರುತ್ತಿತ್ತು ಮತ್ತು ಶರೀರದಲ್ಲಿ ಹೊಕ್ಕರೆ ಇದನ್ನು ಹೊರಕ್ಕೆ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ.

9. ಪೂತಿ: ಈ ಆಯುಧ ಮಲಿನವಾದ ಬಾಣ ಎಂದರ್ಥ.

10. ಪಿಶ: ಈ ಆಯುಧ ಕಪಿಯ ಮೂಳೆಯಿಂದ ಮಾಡಲಾಗುತ್ತಿತ್ತು. ಮೂಳೆಯ ಮೇಲೆ ಕಬ್ಬಿಣದ ಲೇಪನವನ್ನು ಮಾಡಿದ್ದು, ಇದು ಬಹಳ ಮೃದುವಾಗಿ ಕಂಡರೂ ದೇಹದೊಳಗೆ ಬಹಳ ಗಾಢವಾಗಿ ಗಾಯ ಮಾಡುತ್ತಿತ್ತು.

ಇದೇ ರೀತಿಯ ಬೇರೆಯ ಹಲವಾರು ಆಯುಧ ಅಥವಾ ಶಸ್ತ್ರಾಸ್ತ್ರಗಳನ್ನು ಆ ಕಾಲದಲ್ಲಿ ತಯಾರಿಸಲಾಗುತ್ತಿತ್ತು.

ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ

To watch videos on #Hinduism #Sanskrit language, SUBSCRIBE to my YouTube channel from this link: #BhagavanBhakthi YouTube channel

To know “Srimad Bhagavad Gita full lyrics in Kannada”, please visit this link: Srimad Bhagavad Gita full lyrics in Kannada

To know “Srimad Bhagavad Gita full lyrics in Sanskrit”, please visit this link: Srimad Bhagavad Gita full lyrics in Sanskrit

To know “Srimad Bhagavad Gita full lyrics in English”, please visit this link: Srimad Bhagavad Gita full lyrics in English

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಶ್ರೀ ಕೃಷ್ಣಾಯ ನಮಃ

ಶ್ರೀ ಕೃಷ್ಣಾರ್ಪನಮಸ್ತು

Share in Social Media

Leave a Reply

Your email address will not be published. Required fields are marked *