ಹಿಂದೂ (ಧರ್ಮ) ಮತ್ತು ಹಿಂದುತ್ವದ ವ್ಯತ್ಯಾಸವೇನು? | What is Hinduism (ಹಿಂದೂ ಧರ್ಮ) and Hindutva difference in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣುವಿನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ಹಿಂದೂ (ಧರ್ಮ) ಮತ್ತು ಹಿಂದುತ್ವದ ವ್ಯತ್ಯಾಸವೇನು? | What is Hinduism (ಹಿಂದೂ ಧರ್ಮ) and Hindutva difference in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಹಿಂದೂ ಧರ್ಮ ಮತ್ತು ಹಿಂದುತ್ವದ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳುವ ಮೊದಲು, ಹಿಂದೂ ಧರ್ಮ, ಹಿಂದುತ್ವ ಮತ್ತು ಸನಾತನ ಧರ್ಮದ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಈ ಪೋಸ್ಟ್‌ನಲ್ಲಿ ನೀವು ಈ ಕೆಳಗಿನವುಗಳನ್ನು ತಿಳಿಯುವಿರಿ:

ಹಿಂದೂ ಧರ್ಮ ಅಥವಾ ಹಿಂದುತ್ವವನ್ನು ಯಾರು ಪ್ರಾರಂಭಿಸಿದರು? ಹಿಂದುತ್ವದ ನಿಜವಾದ ಅರ್ಥವೇನು?

ಹಿಂದುತ್ವದ ಸಿದ್ಧಾಂತ ಏನು? ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವೇನು?

ಹಿಂದೂ ಧರ್ಮದ (ಹಿಂದೂಗಳು) ಪ್ರಮುಖ ನಂಬಿಕೆಗಳು ಯಾವುವು? ಹಿಂದೂ ಧರ್ಮ ಮತ್ತು ಹಿಂದುತ್ವದ ಅರ್ಥವೇನು? ಮತ್ತು ಇನ್ನೂ ಅನೇಕ…

ಇಂದಿನ ಕಾಲದಲ್ಲಿ ಈ ಭೂಮಿಯ ಮೇಲೆ ಇರುವ ಏಕೈಕ ಅದ್ವಿತೀಯ ಧರ್ಮವೆಂದರೆ ಅದು ಹಿಂದೂ ಧರ್ಮ ಮಾತ್ರ.

ಹಿಂದೂ ಧರ್ಮವು “ಆದಿ ಕಾಲಮ್” (ಆದಿ ಕಾಲದಿಂದ) ಅಸ್ತಿತ್ವದಲ್ಲಿದೆ ಮತ್ತು “ಅನಂತ ಕಾಲಮ್” (ಅನಂತ ಕಾಲದವರೆಗೆ) ಅಸ್ತಿತ್ವದಲ್ಲಿರುತ್ತದೆ. ಇದರ ಬಗ್ಗೆ ಯಾವುದೇ ಸಂಶವಬೇಡ.

ಹಿಂದೂ ಧರ್ಮ ಮತ್ತು ಹಿಂದುತ್ವವು ಭಗವಂತ ಶ್ರೀ ವಿಷ್ಣುವಿನಷ್ಟೇ ಹಳೆಯದು. ಖಂಡಿತವಾಗಿ ಹಿಂದೂ ಧರ್ಮ ಮತ್ತು ಹಿಂದುತ್ವ ಎರಡೂ ನಮಗೆ ಹೊಸ ಪದಗಳು.

ಮೂಲ ಪದಗಳು ಸನಾತನ ಮತ್ತು ಸನಾತನ ಧರ್ಮ. ಇಲ್ಲಿ ಸನಾತನ ಎಂದರೆ, ಅದು ಎಂದಿಗೂ ಅನಾಥವಾಗಲಾರದು ಎಂದರ್ಥ.

ಸನಾತನ ಎಂದರೆ, ಆದಿ ಕಾಲದಿಂದ ಅಸ್ತಿತ್ವದಲ್ಲಿರುವುದು, ಯಾವುದು ಪರಮ ಶಾಶ್ವತ, ಯಾವುದು ಆದಿ ಕಾಲದಿಂದ ಇರುವುದೋ, ಯಾವುದು ಸಾರ್ವಕಾಲಿಕ, ಯಾವುದು ಅತ್ಯಂತ ಪ್ರಾಚೀನವೋ, ಯಾವುದಕ್ಕೆ ಅಂತ್ಯವಿಲ್ಲವೋ, ಇತ್ಯಾದಿ ಇತ್ಯಾದಿ ಇತ್ಯಾದಿಗೆ ಸನಾತನ ಧರ್ಮವೆಂದು ಕರೆಯಲಾಗುತ್ತದೆ.

ಸನಾತನ ಮತ್ತು ಸನಾತನ ಧರ್ಮಕ್ಕೆ ಒಂದು ಅಥವಾ ಎರಡು ಅರ್ಥವಿಲ್ಲ. ಇದು ಅನಂತ ಸಂಖ್ಯೆಯ ಅರ್ಥಗಳನ್ನು ಹೊಂದಿದೆ.

ಆತ್ಮೀಯ ಸ್ನೇಹಿತರೇ, ನಾವು ಇಲ್ಲಿನ ರಾಜಕೀಯವನ್ನು ಮರೆಯಬೇಕು. ರಾಜಕಾರಣಿಗಳು ಏನು ಮಾತನಾಡುತ್ತಿದ್ದಾರೆ ಎಂಬುದು ನಮಗೆ ಮುಖ್ಯವಲ್ಲ.

ಆದರೆ ನಮಗೆ, ಹಿಂದೂ ಧರ್ಮ ಮತ್ತು ಹಿಂದುತ್ವದ ಅರ್ಥವು ಅತ್ಯಂತ ಮುಖ್ಯವಾದ ಪರಿಕಲ್ಪನೆಯಾಗಿರಬೇಕು.

ಹಿಂದೂ ಧರ್ಮ ಮತ್ತು ಹಿಂದುತ್ವ ಎರಡನ್ನೂ ಅರ್ಥಮಾಡಿಕೊಳ್ಳಲು ನಮ್ಮ ದೈವಿಕ ರಾಮಾಯಣ, ಮಹಾಭಾರತ, ಪುರಾಣಗಳು ಇತ್ಯಾದಿಗಳಿಂದ ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳೋಣ.

ಈಗ ಹಿಂದೂ ಶಾಸ್ತ್ರಗಳ (ರಾಮಾಯಣ, ಮಹಾಭಾರತ, ಪುರಾಣಗಳು, ಇತ್ಯಾದಿ) ಪ್ರಕಾರ ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವನ್ನು ತಿಳಿಯೋಣ.

ಹಿಂದೂ ಧರ್ಮ ಮತ್ತು ಹಿಂದುತ್ವದ ವ್ಯತ್ಯಾಸದ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:

1. ಭಗವಂತ ಶ್ರೀ ರಾಮ ಮತ್ತು ವರುಣ ದೇವರು

ಹಿಂದೂ ಧರ್ಮ: ಇಲ್ಲಿ ಭಗವಂತ ಶ್ರೀ ರಾಮನು ವರುಣ ದೇವರನ್ನು ಆವಾಹಿಸುತ್ತಿದ್ದಾನೆ. ಇದನ್ನು ಭಗವಂತ ಶ್ರೀ ರಾಮನು ಮಾಡಿದನು, ಆದ್ದರಿಂದ ವರುಣ ದೇವರು ಎಲ್ಲಾ ವಾನರರಿಗೆ ಸೀತಾ ದೇವಿಯನ್ನು ರಕ್ಷಿಸಲು ಸಾಗರವನ್ನು ದಾಟಲು ಜಾಗವನ್ನು ನೀಡುತ್ತಾರೆಂದು.

(ವರುಣ ದೇವರು ಸಮುದ್ರದ ಅಭಿಮಾನಿ ದೇವತೆ, ಆದುದರಿಂದ ಅವರು ಸಮುದ್ರವನ್ನು ನಿಯಂತ್ರಿಸುತ್ತಾರೆ. ಈ ಗೌರವದಿಂದ ಮಾತ್ರ ಪರಮಾತ್ಮ ಶ್ರೀ ರಾಮ ವರುಣ ದೇವರಿಗೆ ಜಾಗವನ್ನು ಕೋರಿದನು.)

ಆದರೆ ವರುಣ ದೇವರು ಭಗವಂತ ಶ್ರೀ ರಾಮನ ಮುಂದೆ ಕಾಣಿಸಿಕೊಳ್ಳಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತಾರೆ. ಇದು ಹಿಂದೂ ಧರ್ಮ.

ಹಿಂದುತ್ವ: ಭಗವಂತ ಶ್ರೀರಾಮ 3 ದಿನಗಳ ಕಾಲ ಕಾಯುತ್ತಾನೆ. ಆದರೆ ವರುಣ ದೇವರು ಸರ್ವಶಕ್ತನಾದ ಪರಮಾತ್ಮ ಶ್ರೀರಾಮನ ಮುಂದೆ ಬರುವುದೇ ಇಲ್ಲ.

ಈ ಕಾರಣದಿಂದ, ವರುಣ ದೇವರ ಕಡೆಗೆ ಬಾಣವನ್ನು ಪ್ರಯೋಗಿಸುವ ಮೂಲಕ ವರುಣ ದೇವರಿಗೆ ನಿಜವಾದ ಪರಮಾತ್ಮನು ಯಾರೆಂದು ಭಗವಂತ ಶ್ರೀರಾಮನು ತೋರಿಸಿದನು.

ಇದರಿಂದ ವರುಣ ದೇವರು ಭಯಭೀತರಾದರು ಮತ್ತು ಅವರು ಪರಮ ಮತ್ತು ಸರ್ವಶಕ್ತನಾದ ಭಗವಂತ ಶ್ರೀ ರಾಮನ ಮುಂದೆ ಕಾಣಿಸಿಕೊಂಡರು ಮತ್ತು ಕ್ಷಮೆಯನ್ನು ಕೇಳುತ್ತಾರೆ. ಇದು ಹಿಂದುತ್ವ.

2. ಭಗವಂತ ಶ್ರೀಕೃಷ್ಣ ಮತ್ತು ಶಿಶುಪಾಲ

ಹಿಂದೂ ಧರ್ಮ: ಸರ್ವಶಕ್ತನಾದ ಭಗವಂತ ಶ್ರೀಕೃಷ್ಣನು ಶಿಶುಪಾಲನ ತಾಯಿ ಶ್ರುತಶ್ರವಳಿಗೆ 100 ತಪ್ಪುಗಳನ್ನು ಮಾಡುವವರೆಗೂ ಶಿಶುಪಾಲನಿಗೆ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದನು. ಇದು ಹಿಂದೂ ಧರ್ಮ.

(ಶ್ರೀಕೃಷ್ಣನ ತಂದೆ ವಸುದೇವ ಮತ್ತು ಶಿಶುಪಾಲನ ತಾಯಿ ಶ್ರುತಶ್ರವಳು ಸಹೋದರ ಮತ್ತು ಸಹೋದರಿಯರು.)

(ಹೀಗೆ ಶ್ರೀಕೃಷ್ಣನು ಶ್ರುತಶ್ರವಳ ಸೋದರಳಿಯನಾಗಿದ್ದನು ಮತ್ತು ಇದರ ಪರಿಣಾಮವಾಗಿ ಪರಮಾತ್ಮನಾದ ಶ್ರೀಕೃಷ್ಣ ಮತ್ತು ಶಿಶುಪಾಲರು ಸೋದರ ಸಂಬಂಧಿಗಳಾಗಿದ್ದರು.)

ಹಿಂದುತ್ವ: ಯುಧಿಷ್ಠಿರನ ರಾಜಸೂಯ ಯಜ್ಞದ ಸಮಯದಲ್ಲಿ, ನೆರೆದಿದ್ದ ಜನರೆಲ್ಲರೂ ಸರ್ವಾನುಮತದಿಂದ ಶ್ರೀಕೃಷ್ಣನನ್ನು ಸರ್ವೋತ್ತಮ ಪರಮಾತ್ಮನೆಂದು (ದೇವರೆಂದು) ಒಪ್ಪಿಕೊಂಡಿದ್ದರಿಂದ ಶಿಶುಪಾಲ ಕ್ರೂರವಾಗಿ ಆಕ್ರೋಶಗೊಳ್ಳುತ್ತಾನೆ.

ಹೀಗೆ, ಶಿಶುಪಾಲನು ಸರ್ವಶಕ್ತನಾದ ಶ್ರೀಕೃಷ್ಣನ ಕಡೆಗೆ ನಿಂದನೀಯ ಪದಗಳನ್ನು ಬಳಸಿ 101 ನೇ ತಪ್ಪನ್ನು ಮಾಡುತ್ತಾನೆ.

ಶಿಶುಪಾಲ ತನ್ನ ಎಲ್ಲಾ ಮಿತಿಗಳನ್ನು ದಾಟಿದ್ದಲ್ಲದೆ 100 ತಪ್ಪುಗಳನ್ನು ದಾಟಿ 101ನೇ ತಪ್ಪನ್ನು ಮಾಡಿದ್ದ.

ಈ ಕಾರಣಕ್ಕಾಗಿ, ಪರಮ ಮತ್ತು ಸರ್ವಶಕ್ತನಾದ ಭಗವಂತ ಶ್ರೀ ಕೃಷ್ಣನು ಶಿಶುಪಾಲನ ತಲೆಯನ್ನು ಕತ್ತರಿಸುತ್ತಾನೆ. ಇದು ಹಿಂದುತ್ವ.

3. ಲಕ್ಷ್ಮಣ ಮತ್ತು ಸುಗ್ರೀವ

ಹಿಂದೂ ಧರ್ಮ : (ರಾಮ ಮತ್ತು ಸುಗ್ರೀವರ ವಚನಗಳು). ಭಗವಂತ ಶ್ರೀ ರಾಮನು ವಾಲಿಯನ್ನು ಕೊಲ್ಲಲು ವಚನ ನೀಡಿರುತ್ತಾನೆ ಮತ್ತು ಸುಗ್ರೀವನು ತನ್ನ ವಾನರ ಸೇನೆಯೊಂದಿಗೆ ಭಗವಂತ ಶ್ರೀ ರಾಮನಿಗೆ ಸೀತಾ ದೇವಿಯನ್ನು ಹುಡುಕಲು ಸಹಾಯ ಮಾಡಲು ವಚನ ನೀಡಿರುತ್ತಾನೆ.

ಭಗವಂತ ಶ್ರೀ ರಾಮನ ವಾಗ್ದಾನ ಮಾಡಿದಂತೆ, ಭಗವಂತ ಶ್ರೀ ರಾಮನು ಬಲಿಷ್ಠ ವಾಲಿಯನ್ನು ಕೊಂದನು, ಸುಗ್ರೀವನನ್ನು ಕಿಷ್ಕಿಂಧೆಯ ರಾಜನನ್ನಾಗಿ ಮಾಡಲಾಯಿತು. ಇದು ಹಿಂದೂ ಧರ್ಮ.

ಹಿಂದುತ್ವ: ಆದರೆ ಸುಗ್ರೀವನು ತನ್ನ ವಚನವನ್ನು ಸಂಪೂರ್ಣವಾಗಿ ಮರೆತು ತನ್ನ ಹೆಂಡತಿ ರುಮಾಳೊಂದಿಗೆ ಭೌತಿಕ ಆನಂದದಲ್ಲಿ ತೊಡಗುತ್ತಾನೆ.

ಶ್ರೀರಾಮ ಮತ್ತು ಲಕ್ಷ್ಮಣ ಇಬ್ಬರೂ 4 ತಿಂಗಳು ಕಾಯುತ್ತಾರೆ, ಏಕೆಂದರೆ ಅದು ಚಾತುರ್ಮಾಸವಾಗಿರುತ್ತದೆ (ನಾಲ್ಕು ತಿಂಗಳ ಮಳೆಗಾಲ).

ಆದರೆ ಚಾತುರ್ಮಾಸದ ನಂತರವೂ ಸುಗ್ರೀವನು ತನ್ನ ರಾಜ್ಯದಿಂದ ಹೊರಬರುವುದಿಲ್ಲ ಮತ್ತು ಅವನ ಹೆಂಡತಿ ರುಮಾಳೊಂದಿಗೆ ಭೌತಿಕ ಆನಂದದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾನೆ.

ಇದು ಲಕ್ಷ್ಮಣನಿಗೆ ಸುಗ್ರೀವನ ವಿರುದ್ಧ ಕೋಪಗೊಳ್ಳುವಂತೆ ಮಾಡಿತು ಮತ್ತು ಬಹುತೇಕವಾಗಿ ಲಕ್ಷ್ಮಣನು ಸುಗ್ರೀವನ ಮೇಲೆ ಆಕ್ರಮಣವೇ ಮಾಡಿದಂತೆ ತೋರಿಸುತ್ತಾನೆ. ಇದು ಹಿಂದುತ್ವ.

4. ಭಗವಂತ ಶ್ರೀ ಕೃಷ್ಣ, ಭೀಮ ಮತ್ತು ಜರಾಸಂಧ

ಹಿಂದೂ ಧರ್ಮ : ಯುಧಿಷ್ಠಿರನು ರಾಜಸೂಯ ಯಜ್ಞವನ್ನು ಮಾಡಲು ನಿರ್ಧರಿಸಿದಾಗ, ಅವನು ಪ್ರಪಂಚದ ಎಲ್ಲಾ ರಾಜರನ್ನು ವಶಪಡಿಸಿಕೊಳ್ಳಬೇಕಾಗಿತ್ತು.

ಆದರೆ ಶ್ರೀಕೃಷ್ಣನು ಜರಾಸಂಧನ ಬಗ್ಗೆ ಯುಧಿಷ್ಠಿರನಿಗೆ ತಿಳಿಸಿದಾಗ, ಯುಧಿಷ್ಠಿರನು ತನ್ನ ಸೋಲನ್ನು ಒಪ್ಪಿಕೊಳ್ಳುತ್ತಾನೆ ಮತ್ತು ರಾಜಸೂಯ ಯಜ್ಞವನ್ನು ಮಾಡುವುದಿಲ್ಲ ಎಂದು ಶ್ರೀಕೃಷ್ಣನಿಗೆ ಹೇಳುತ್ತಾನೆ.

ಏಕೆಂದರೆ ಜರಾಸಂಧನು ಬಹಳ ಶಕ್ತಿಶಾಲಿಯಾಗಿರುತ್ತಾನೆ. ಇದು ಹಿಂದೂ ಧರ್ಮ.

ಹಿಂದುತ್ವ: ಆದರೆ ಭೀಮನು ಜರಾಸಂಧನನ್ನು ಸೋಲಿಸಲು ಹೆಚ್ಚು ಸಮರ್ಥನಾಗಿದ್ದರಿಂದ ಅವನು ರಾಜಸೂಯ ಯಜ್ಞವನ್ನು ಸುಲಭವಾಗಿ ಪೂರ್ಣಗೊಳಿಸಬಹುದು ಎಂದು ಶ್ರೀಕೃಷ್ಣನು ಯುಧಿಷ್ಠಿರನಿಗೆ ತಿಳಿಸುತ್ತಾನೆ.

ಭಗವಂತ ಶ್ರೀ ಕೃಷ್ಣ, ಅರ್ಜುನ ಮತ್ತು ಮಹಾನ್ ಮತ್ತು ಪರಾಕ್ರಮಿ ಭೀಮನ ಜೊತೆಗೆ ಮಗಧಕ್ಕೆ (ಜರಾಸಂಧದ ರಾಜ್ಯಕ್ಕೆ) ಹೋಗುತ್ತಾನೆ.

ಭಗವಂತ ಶ್ರೀ ಕೃಷ್ಣನು ಜರಾಸಂಧನನ್ನು ಯುದ್ಧಕ್ಕೆ ಮೂವರಲ್ಲಿ (ಶ್ರೀ ಕೃಷ್ಣ, ಅರ್ಜುನ ಮತ್ತು ಭೀಮ) ಯಾರನ್ನಾದರೂ ಆಯ್ಕೆ ಮಾಡಲು ಆಹ್ವಾನಿಸುತ್ತಾನೆ. ಜರಾಸಂಧನು ಭೀಮನ ವಿರುದ್ಧ ಹೋರಾಡಲು ಸ್ವೀಕರಿಸುತ್ತಾನೆ.

ನಂತರ, ಮಹಾನ್ ಮತ್ತು ಪರಾಕ್ರಮಿ ಭೀಮನು ಶ್ರೀಕೃಷ್ಣನ ಸೂಚನೆಯಂತೆ ಜರಾಸಂಧನ ದೇಹವನ್ನು ಎರಡು ತುಂಡುಗಳಾಗಿ ಹರಿದು ಅವನನ್ನು ಸುಲಭವಾಗಿ ಕೊಲ್ಲುತ್ತಾನೆ. ಇದು ಹಿಂದುತ್ವ.

5. ಹನುಮಂತ, ರಾವಣ ಮತ್ತು ಮೇಘನಾಥ

ಹಿಂದೂ ಧರ್ಮ: ಸೀತಾ ದೇವಿಯನ್ನು ದಕ್ಷಿಣ ದಿಕ್ಕಿನಲ್ಲಿ ಹುಡುಕಲು ರಾಮನು ಹನುಮಂತನಿಗೆ ಸೂಚಿಸಿದಾಗ.

ನಮ್ಮ ಮಹಾನ್ ಮತ್ತು ಪರಾಕ್ರಮಿ ಹನುಮಂತನು ತಕ್ಷಣವೇ ತನ್ನ ಗುಂಪಿನೊಂದಿಗೆ ದಕ್ಷಿಣ ತೀರಕ್ಕೆ ಹೋಗಲು ಪ್ರಾರಂಭಿಸುತ್ತಾನೆ. ಹನುಮಂತನು ಲಂಕೆಯನ್ನು ತಲುಪುತ್ತಾನೆ.

ಅಲ್ಲಿ ಹನುಮಂತ ಮೇಘನಾಥನನ್ನು ಕಂಡು ಇಬ್ಬರೂ ಯುದ್ಧ ಮಾಡುತ್ತಾರೆ. ಅಂತಿಮವಾಗಿ ಮೇಘನಾಥನು ಹನುಮಂತನ ಕಡೆಗೆ ಬ್ರಹ್ಮಾಸ್ತ್ರವನ್ನು ಹೂಡುತ್ತಾನೆ.

ಆದರೆ, ಬ್ರಹ್ಮ ದೇವರ ಮೇಲಿನ ಗೌರವದ ಕಾರಣದಿಂದಾಗಿ, ಹನುಮಂತನು ಸೋಲನ್ನು ಒಪ್ಪಿಕೊಂಡಂತೆ ನಾಟಕವಾಡುತ್ತಾನೆ.

(ಆದರೆ ಹನುಮಂತನ ಮುಖ್ಯ ಉದ್ದೇಶ ರಾವಣನ ಮುಂದೆ ಹೋಗುವುದಾಗಿತ್ತು ಮತ್ತು ಸೀತಾದೇವಿಯ ಅಪಹರಣದ ವಿಷಯವನ್ನು ರಾವಣನೊಂದಿಗೆ ಚರ್ಚಿಸಲು ಬಯಸಿದ್ದನು.) ಇದು ಹಿಂದೂ ಧರ್ಮ.

ಹಿಂದುತ್ವ: ರಾವಣನ ಮುಂದೆ ಹನುಮಂತನನ್ನು ಕರೆತರಲಾಯಿತು. ರಾವಣ ಮತ್ತು ಹನುಮಂತ ಇಬ್ಬರೂ ಸೀತಾದೇವಿಯ ಅಪಹರಣದ ವಿಷಯವನ್ನು ಚರ್ಚಿಸುತ್ತಾರೆ.

ರಾವಣನು ಹನುಮಂತನಿಗೆ ತಾನು ಸೀತಾ ದೇವಿಯನ್ನು ಬಿಡುವುದಿಲ್ಲ ಎಂದು ತಿಳಿಸುತ್ತಾನೆ ಮತ್ತು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುವಂತೆ ತನ್ನ ಜನರಿಗೆ ಆದೇಶಿಸುತ್ತಾನೆ.

(ಅಗ್ನಿಯು ನಮ್ಮ ಮಹಾನ್ ಮತ್ತು ಪರಾಕ್ರಮಿ ಹನುಮಂತನಿಗೆ ಹಾನಿ ಮಾಡಲಾರದು, ಏಕೆಂದರೆ ಅವನು ವಾಯುದೇವರ ಅವತಾರ ಮತ್ತು ಅವರು ಮುಂದಿನ ಕಲ್ಪದಲ್ಲಿ ಮುಂದಿನ ಬ್ರಹ್ಮ ದೇವರಾಗುತ್ತಾರೆ.)

ಹೀಗಾಗಿ ಲಂಕೆಯಲ್ಲಿರುವ ರಾವಣನಿಗೆ ಮತ್ತು ಅವನ ಅನುಯಾಯಿಗಳಿಗೆ ಒಂದು ಪಾಠ ಕಲಿಸಬೇಕೆಂದು ಹನುಮಂತ ಯೋಚಿಸುತ್ತಾನೆ.

ಪರಿಣಾಮವಾಗಿ, ಹನುಮಂತನು ಲಂಕಾದ ಸುಮಾರು 50% ರಷ್ಟು ಬೆಂಕಿ ಹಚ್ಚುತ್ತಾನೆ. ಇದು ಹಿಂದುತ್ವ.

6. ಭೀಮ, ದ್ರೌಪದಿ ಮತ್ತು ದುರ್ಯೋಧನ ಮತ್ತು ಅವನ ಸಹೋದರರು

ಹಿಂದೂ ಧರ್ಮ: ದುರ್ಯೋಧನ ಎಷ್ಟು ಕ್ರೂರಿ ಎಂದು ನಮ್ಮಲ್ಲಿ ಅನೇಕರಿಗೆ ತಿಳಿದಿದೆ. ಬಹಿರಂಗ ಸಭೆಯಲ್ಲಿ, ದುರ್ಯೋಧನ ಮತ್ತು ಅವನ ಸಹೋದರರು ಪಂಚ ಪಾಂಡವರು ಮತ್ತು ದ್ರೌಪದಿ ದೇವಿಯನ್ನು ಅವಮಾನಿಸುತ್ತಾರೆ.

ಆದರೆಯೂ ಸಹ, ಭೀಮ ಮತ್ತು ಅವನ ಸಹೋದರರು ತಮ್ಮ ಹಿರಿಯರ ಮುಂದೆ ಯಾವುದೇ ಜಗಳವನ್ನು ಸಭೆಯಲ್ಲಿ ಮಾಡುವುದಿಲ್ಲ. ಇದು ಹಿಂದೂ ಧರ್ಮ.

ಹಿಂದುತ್ವ: ಕುರುಕ್ಷೇತ್ರ ಯುದ್ಧದಲ್ಲಿ (ಮಹಾಭಾರತದ ಯುದ್ಧದಲ್ಲಿ) ಪರಾಕ್ರಮಶಾಲಿ ಭೀಮನು ಸ್ವಲ್ಪವೂ ಕರುಣೆಯಿಲ್ಲದೆ ದುರ್ಯೋಧನ ಸೇರಿದಂತೆ ಎಲ್ಲಾ 100 ಕೌರವರನ್ನು ಕೊಂದನು. ಇದು ಹಿಂದುತ್ವ.

7. ಭಗವಂತ ಶ್ರೀ ನರಸಿಂಹ, ಪ್ರಹ್ಲಾದ ಮತ್ತು ಹಿರಣ್ಯಕಶಿಪು

ಹಿಂದೂ ಧರ್ಮ: ಹಿರಣ್ಯಕಶಿಪು ತನ್ನ ಸ್ವಂತ ಮಗ ಪ್ರಹ್ಲಾದನನ್ನು ವಿವಿಧ ರೀತಿಯಲ್ಲಿ ಕೊಲ್ಲಲು ಪ್ರಯತ್ನಿಸುತ್ತಾನೆ. ಆದರೆ ಪ್ರಹ್ಲಾದನು ತನ್ನ ತಂದೆಯನ್ನು ಯಾವಾಗಲೂ ಗೌರವಿಸುತ್ತಿದ್ದನು.

ಅದೇ ಸಮಯದಲ್ಲಿ, ಪ್ರಹ್ಲಾದನು ತನ್ನ ತಂದೆ ಹಿರಣ್ಯಕಶಿಪುವನ್ನು ಭಗವಂತ / ದೇವರು ಎಂದು ಎಂದಿಗೂ ಸ್ವೀಕರಿಸುವುದಿಲ್ಲ.

ಪ್ರಹ್ಲಾದನು ಯಾವಾಗಲೂ ತನ್ನ ತಂದೆಗೆ ಹೇಳುತ್ತಾನೆ, ಸರ್ವಶಕ್ತನು ಭಗವಂತ ಶ್ರೀಮನ್‌ ನಾರಾಯಣ (ವಿಷ್ಣು) ಅವರಲ್ಲದೆ ಬೇರೆ ಯಾರೂ ಅಲ್ಲ ಮತ್ತು ಯಾರೂ ಭಗವಂತ ಶ್ರೀ ನಾರಾಯಣನಿಗೆ ಸಮಾನರು ಅಥವಾ ಮೇಲಲ್ಲ. ಇದು ಹಿಂದೂ ಧರ್ಮ.

ಹಿಂದುತ್ವ: ಹಿರಣ್ಯಕಶಿಪು ತನ್ನ ಸ್ವಂತ ಮಗ ಪ್ರಹ್ಲಾದನನ್ನು ಕಷ್ಟ ಕೊಡುವುದನ್ನು ನಿರಂತರವಾಗಿ ಮಾಡಿದಾಗ, ಭಗವಂತ ಶ್ರೀಮನ್‌ ನಾರಾಯಣ (ವಿಷ್ಣು) ಭಗವಂತ ಶ್ರೀ ಲಕ್ಷ್ಮೀ ನರಸಿಂಹ (ಭಗವಂತ ಶ್ರೀ ನರಸಿಂಹ) ಅವತಾರವನ್ನು ತೆಗೆದುಕೊಳ್ಳುತ್ತಾನೆ.

ಮತ್ತು ಪರಿಣಾಮವಾಗಿ ಹಿರಣ್ಯಕಶಿಪುವನ್ನು ಅತ್ಯಂತ ಸುಲಭವಾಗಿ ಕೊಲ್ಲುತ್ತಾನೆ. ಇದು ಹಿಂದುತ್ವ.

8. ಭಗವಂತ ಶ್ರೀ ಪರಶುರಾಮ ದೇವರು ಮತ್ತು ದುಷ್ಟ ಕ್ಷತ್ರಿಯರು

ಹಿಂದೂ ಧರ್ಮ: ಭಗವಂತ ಶ್ರೀ ಪರಶುರಾಮ ದೇವರು ಪ್ರಪಂಚದಾದ್ಯಂತದ ಎಲ್ಲಾ ಕ್ಷತ್ರಿಯರನ್ನು ಎಂದಿಗೂ ಕೊಂದಿಲ್ಲ ಮತ್ತು ಅವರು ಯಾವುದೇ ಅಪ್ರಾಪ್ತ ದುಷ್ಟ ಕ್ಷತ್ರಿಯರಿಗೆ ಹಾನಿ ಮಾಡಿಲ್ಲ. ಇದು ಹಿಂದೂ ಧರ್ಮ.

ಹಿಂದುತ್ವ: ಆದರೆ ಎಲ್ಲಾ ದುಷ್ಟ ಕ್ಷತ್ರಿಯರನ್ನು ಕೊಲ್ಲಲು ಭಗವಂತ ಶ್ರೀ ಪರಶುರಾಮ ದೇವರು 28 ಬಾರಿಯ ಸಮಯವನ್ನು ತೆಗೆದುಕೊಂಡರು.

ಈಗ ನಿಮಗೆ ಪ್ರಶ್ನೆ ಬರಬಹುದು, ಶ್ರೀ ಪರಶುರಾಮ ದೇವರು ದುಷ್ಟ ಕ್ಷತ್ರಿಯರನ್ನು ಕೊಲ್ಲಲು 28 ಬಾರಿಯ ಸಮಯವನ್ನು ಏಕೆ ತೆಗೆದುಕೊಂಡರು ಮತ್ತು ಒಂದೇ ಸಮಯದಲ್ಲಿ ಏಕೆ ಕೊಲ್ಲಲಿಲ್ಲವೆಂದು?

ಉತ್ತರ – ಶ್ರೀ ಪರಶುರಾಮ ದೇವರು ಭಗವಂತ ಶ್ರೀಮನ್‌ ನಾರಾಯಣ (ವಿಷ್ಣು) ಅವರ ಅವತಾರವಾಗಿದ್ದಾರೆ ಮತ್ತು ಸಾಮಾನ್ಯ ಜನರು ಅವರಿಂದ ಕಲಿಯಬೇಕೆಂದು ಹಲವು ಧರ್ಮಗಳನ್ನು ಸರಿಯಾಗಿ ಅನುಸರಿಸುತ್ತಾರೆ.

ಶ್ರೀ ಪರಶುರಾಮ ದೇವರು ವಯಸ್ಕ ಮತ್ತು ದುಷ್ಟ ಕ್ಷತ್ರಿಯರನ್ನು ಮಾತ್ರ ಕೊಂದರು. ದುಷ್ಟ ಕ್ಷತ್ರಿಯ ರಾಜಕುಮಾರರು ಇನ್ನೂ ಅಪ್ರಾಪ್ತರಾಗಿದ್ದಾಗ, ಶ್ರೀ ಪರಶುರಾಮ ದೇವರು ಅವರಿಗೆ ಎಂದಿಗೂ ಹಾನಿ ಮಾಡಲಿಲ್ಲ.

ಆದರೆ, ಯಾವಾಗ ದುಷ್ಟ ಕ್ಷತ್ರಿಯರು ಸಾಧುಗಳಿಗೆ (ವಿಷ್ಣುವಿನ ಭಕ್ತರಿಗೆ) ಸಮಸ್ಯೆಗಳನ್ನು ಉಂಟುಮಾಡಲು ಪ್ರಾರಂಭಿಸುತ್ತಾರೆ ಮತ್ತು ಅವರು ವಯಸ್ಕರಾದಾಗ ಮಾತ್ರ, ಪರಶುರಾಮ ದೇವರು ಅಂತಹ ದುಷ್ಟ ಕ್ಷತ್ರಿಯರನ್ನು ಮಾತ್ರ ಕೊಲ್ಲುತ್ತಿದ್ದರು.

ದುಷ್ಟ ಕ್ಷತ್ರಿಯರು ಪ್ರೌಢಾವಸ್ಥೆಗೆ ಬೆಳೆಯುವವರೆಗೆ ಪರಶುರಾಮ ದೇವರು ಕಾಯುತ್ತಿದ್ದರು.

ಅವರು ವಯಸ್ಕರಾದ ನಂತರವೇ, ಪರಶುರಾಮ ದೇವರು ಅಂತಹ ದುಷ್ಟ ಮತ್ತು ವಯಸ್ಕ ಕ್ಷತ್ರಿಯರನ್ನು ಕೊಲ್ಲುತ್ತಿದ್ದರು.

ಪರಶುರಾಮ ದೇವರು ಎಲ್ಲಾ ಕ್ಷತ್ರಿಯರಿಗೆ ಎಂದೂ ಹಾನಿ ಮಾಡಿಲ್ಲ ಎಂಬುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ವಾಸ್ತವವಾಗಿ, ಪರಶುರಾಮ ದೇವರು ವಯಸ್ಕ ಮತ್ತು ದುಷ್ಟ ಕ್ಷತ್ರಿಯರಿಗೆ ಮಾತ್ರ ದಂಡ ನೀಡಿದರು.

ಆದ್ದರಿಂದ, ಎಲ್ಲಾ ವಯಸ್ಕ ಮತ್ತು ದುಷ್ಟ ಕ್ಷತ್ರಿಯರನ್ನು ಕೊಲ್ಲಲು ಪರಶುರಾಮ ದೇವರಿಗೆ 28 ಬಾರಿಯ ಸಮಯ ಬೇಕಾಯಿತು. ಇದು ಹಿಂದುತ್ವ.

9. ಭಗವಂತ ಶ್ರೀ ವಾಮನ (ವಿಷ್ಣು) ಮತ್ತು ಬಲಿ ಚಕ್ರವರ್ತಿ ಮತ್ತು ಭಗವಂತ ಶ್ರೀ ಕೃಷ್ಣ (ವಿಷ್ಣು) ಮತ್ತು ಬಾಣಾಸುರ

ಹಿಂದೂ ಧರ್ಮ: ಭಗವಂತ ಶ್ರೀ ನರಸಿಂಹ ದೇವರು (ವಿಷ್ಣು) ಪ್ರಹ್ಲಾದನಿಗೆ ಹೀಗೆ ಭರವಸೆ ನೀಡಿದ್ದರು, “ಪ್ರಹ್ಲಾದನ ಮುಂದಿನ ಪೀಳಿಗೆಯನ್ನು ಎಂದಿಗೂ ಕೊಲ್ಲುವುದಿಲ್ಲ” ಎಂದು. ಇದು ಹಿಂದೂ ಧರ್ಮ.

ಹಿಂದುತ್ವ: ಭಗವಂತ ವಾಮನನಾಗಿ ಬಲಿ ಚಕ್ರವರ್ತಿ ದುಷ್ಟ ತಪ್ಪುಗಳನ್ನು ಮಾಡಿದರೂ ಎಂದಿಗೂ ಅವನಿಗೆ ಹಾನಿ ಮಾಡಲಿಲ್ಲ.

[ಬಲಿ ಚಕ್ರವರ್ತಿ ಪ್ರಹ್ಲಾದನ ಮೊಮ್ಮಗ ಮತ್ತು ಆದ್ದರಿಂದ, ಭಗವಂತ ವಾಮನ (ವಿಷ್ಣು) ಬಲಿ ಚಕ್ರವರ್ತಿಯನ್ನು ಉಳಿಸಿದನು.]

ಹಾಗೆಯೇ ಶ್ರೀಕೃಷ್ಣನ ಅವತಾರದಲ್ಲಿ ಶ್ರೀಕೃಷ್ಣನು ಬಾಣಾಸುರನನ್ನು ಕೊಲ್ಲಲಿಲ್ಲ. ಬಾಣಾಸುರನು ಪ್ರಹ್ಲಾದನ ಅದೇ ವಂಶಕ್ಕೆ ಸೇರಿದವನು. ಇದು ಹಿಂದುತ್ವ.

(ಬಾಣಾಸುರನಿಗೆ 1000 ಕೈಗಳಿದ್ದವು. ಆ 1000 ಕೈಗಳಲ್ಲಿ ಶ್ರೀಕೃಷ್ಣನು 998 ಕೈಗಳನ್ನು ಕತ್ತರಿಸಿ ಕೊನೆಯ 2 ಕೈಗಳನ್ನು ಉಳಿಸುತ್ತಾನೆ.)

10. ಕಾಳಿಯ (ಕಳಿಂಗಸರ್ಪ) ಹಾವು ಮತ್ತು ಶ್ರೀಕೃಷ್ಣ

ಹಿಂದೂ ಧರ್ಮ: ಕಾಳಿಯ ಹಾವು ಮಹರ್ಷಿ ಕಶ್ಯಪ ಮತ್ತು ಕದ್ರು ದೇವಿಯ ಮಗ.

ಕಾಳಿಯ ಮಹರ್ಷಿ ಕಶ್ಯಪನ ಮಗನಾಗಿದ್ದರೂ, ಅವನ ತಾಯಿ ಕದ್ರು ಆಗಿದ್ದರಿಂದ, ಅವನು ದುಷ್ಟ ಮನಃಸ್ಥಿತಿಯನ್ನು ಹೊಂದಿದ್ದನು.

ಕಾಳಿಯನು ಯಮುನಾ ನದಿಯಲ್ಲಿ ವಾಸಿಸಲು ಪ್ರಾರಂಭಿಸಿದನು ಮತ್ತು ಯಮುನಾ ನದಿಯನ್ನು ಕಲುಷಿತಗೊಳಿಸಿದನು. ಆದರೆ ಈಗಲೂ ಸಹ ಶ್ರೀಕೃಷ್ಣನು ಈ ದುಷ್ಟ ಕಾಳಿಯನಿಗೆ ಹಾನಿ ಮಾಡಲಿಲ್ಲ. ಇದು ಹಿಂದೂ ಧರ್ಮ.

ಹಿಂದುತ್ವ: ಆದರೆ ನಂತರ, ಇದೇ ಕಾಳಿಯ ಸರ್ಪವು ಗೋಪಿಕಾ ಸ್ತ್ರಿಯರಿಗೆ ಮತ್ತು ಗೋಪಾಲಕರಿಗೆ (ಶ್ರೀಕೃಷ್ಣನ ಭಕ್ತರು / ವೃಂದಾವನದ ಜನರು) ಸಮಸ್ಯೆಗಳನ್ನು ಉಂಟುಮಾಡಲು ಪ್ರಾರಂಭಿಸಿದನು.

ಯಾರಾದರೂ ತನ್ನ ಭಕ್ತರಿಗೆ ತೊಂದರೆ ಕೊಟ್ಟರೆ ಶ್ರೀಕೃಷ್ಣನು ಸಹಿಸುವುದಿಲ್ಲ.

ಹೀಗೆ, ಶ್ರೀಕೃಷ್ಣನು ಯಮುನಾ ನದಿಯನ್ನು ಪ್ರವೇಶಿಸಿದನು ಮತ್ತು ಕಾಳಿಯನನ್ನು ಯಮುನಾ ನದಿಯಿಂದ ಹೊರಹಾಕಿದನು.

ಆದರೆ ಇಲ್ಲಿ, ಶ್ರೀಕೃಷ್ಣನು ಕಾಳಿಯ ಹಾವಿನ ಜೀವವನ್ನು ಉಳಿಸಿದನು, ಏಕೆಂದರೆ ಅವನ ಹೆಂಡತಿಯರು ಶ್ರೀಕೃಷ್ಣನಲ್ಲಿ ಕ್ಷಮೆ ಕೇಳಿದರು. ಇದು ಹಿಂದುತ್ವ.

ಇದಕ್ಕೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಭೇಟಿ ನೀಡಿ.

To watch videos on #Hinduism #Sanskrit language, SUBSCRIBE to my YouTube channel from this below link:

#BhagavanBhakthi YouTube channel

To watch the YouTube video about “Hinduism and Hindutva difference“, please visit the below YouTube video link:

To know more information about Hinduism, please click the below link:

Hinduism unknown facts

To know more information about Lord Krishna, please click the below link:

Lord Krishna unknown facts

To know more information about Lord Rama, please click the below link:

Lord Rama unknown facts

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಶ್ರೀ ರಾಘವೇಂದ್ರಾಯ ನಮಃ

ಶ್ರೀ ಕೃಷ್ಣಾರ್ಪನಮಸ್ತು

Subscribe / Follow us
Share in Social Media

3 Comments

Leave a Reply

Your email address will not be published. Required fields are marked *