ಶಿಕ್ಷಕರ ದಿನಾಚರಣೆಯ ನಿಜವಾದ ಅರ್ಥ ಏನು (ದ್ವೈತ ಗುರು ಪರಂಪರೆ) | What is the real meaning of Teacher’s Day (Dvaita Guru Parampare) in Kannada
ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್ಸೈಟ್ / ಬ್ಲಾಗ್ಗೆ ಸುಸ್ವಾಗತ.
ಭಗವಂತ ಶ್ರೀ ವಿಷ್ಣುವಿನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!
ಈ ವೆಬ್ಸೈಟ್ / ಬ್ಲಾಗ್ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.
#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.
“ಶಿಕ್ಷಕರ ದಿನಾಚರಣೆಯ ನಿಜವಾದ ಅರ್ಥ ಏನು (ದ್ವೈತ ಗುರು ಪರಂಪರೆ) | What is the real meaning of Teacher’s Day (Dvaita Guru Parampare) in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.
ಶಿಕ್ಷಕರ ದಿನಾಚರಣೆ | ನಾವೆಲ್ಲರೂ ಕೂಡಿ ಅವರೆಲ್ಲರನ್ನು ಸ್ಮರಣೆ ಮಾಡೋಣ:
ನಮ್ಮ ಶಾಲಾ ಮತ್ತು ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕಿ ಅವರುಗಳಿಗೆ ವಂದನೆಗಳನ್ನು ಅರ್ಪಿಸೋಣ. ಇವರು ನಮಗೆ ಈ ಜಗತ್ತಿನ ಭೌತಿಕ ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ನಮಗೆ ವ್ಯಾಸಂಗವನ್ನು ಮಾಡಿಸೀರುತ್ತಾರೆ.
ಪ್ರತಿ ಒಬ್ಬ ಶಿಕ್ಷಕರನ್ನು ನಾವು ಸ್ಮರಣೆ ಮಾಡೋಣ. ಆವರು ನಮ್ಮನ್ನು ಒಳ್ಳೆಯದು ಮಾಡಿರಬಹುದು ಅಥವಾ ಅವರಿಂದ ನಮಗೆ ಸ್ವಲ್ಪ ತೊಂದರೆಯೂ ಆಗಿರಬಹುದು. ಹೇಗಿದ್ದರು ಸಹ, ನಾವು ಅವರೆಲ್ಲರ ಚಿರರುಣಿಗಳಾಗಿರಬೇಕು.
ಅವರು ಕಲಿಸಿದ ಪ್ರೊತಿವೊಂದು ಪಾಠ, ಅವರು ಹೇಳಿಕೊಟ್ಟಿರುವ ಒಂದೊಂದು ಮಾತು ನಮಗೆ ಆಶೀರ್ವಾದವೇ ಆಗಿರುತ್ತದೆ ಹೊರತು, ಬೇರೇನು ಆಗಲು ಸಾಧ್ಯವಿಲ್ಲ.
ನಾವೆಲ್ಲರೂ ನಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಕರಿಗೆ ಧನ್ಯವಾದಗಳನ್ನು ಹೇಳೋಣ.
ಈ ಜಗತ್ತಿನಲ್ಲಿ ನಮ್ಮ ಭೌತಿಕ ಜೀವನವನ್ನು ಹೇಗೆ ನಡೆಸಬೇಕೆಂದು ಈ ಶಿಕ್ಷಕರು ನಮಗೆ ಕಲಿಸುತ್ತಿದ್ದರು.
ಪ್ರತಿಯೊಬ್ಬ ಶಿಕ್ಷಕರನ್ನು ನಾವೆಲ್ಲರೂ ನೆನಪಿಸಿಕೊಳ್ಳೋಣ.
ಈ ಶಿಕ್ಷಕರಿಂದಾಗಿ, ನಾವು ನಮ್ಮ ಜೀವನದಲ್ಲಿ ಸಕಾರಾತ್ಮಕ ವಿಷಯಗಳನ್ನು ಪಡೆದಿದ್ದೇವೆ ಅಥವಾ ನಾವು ಸಮಸ್ಯೆಗೆ ಸಿಲುಕಿರಬಹುದು.
ಏನೇ ಇರಲಿ, ಆದರೆ ಅವರೆಲ್ಲರಿಗೂ ನಾವು ಕೃತಜ್ಞರಾಗಿರಬೇಕು.
ಅವರು ನಮಗೆ ಕಲಿಸಿದ ಪ್ರತಿಯೊಂದು ಪಾಠ, ಅವರು ನಮಗೆ ಕಲಿಯುವಂತೆ ಮಾಡಿದ ಎಲ್ಲವೂ ನಮಗೆ ಜೀವನದ ಕಲಿಕೆಯ ಪ್ರಕ್ರಿಯೆಯಾಗಿದೆ ಮತ್ತು ಬೇರೇನೂ ಅಲ್ಲ.
ಒಟ್ಟಾರೆ ಅವರನ್ನು ನಮಿಸುತ್ತ, ಅವರನ್ನು ಸ್ಮರಣೆಮಾಡುತ್ತ ಮತ್ತೊಂದು ಸಲ ಧನ್ಯವಾದಗಳನ್ನು ಹೇಳುತ್ತ ಅವರಿಗೆ ನಮ್ಮ ಶಿರವನ್ನು ಬಾಗಿಸೋಣ. ಎಲ್ಲರಿಗೂ ನಮೋ ನಮಃ ಹೇಳೋಣಾ.
ಒಟ್ಟಿನಲ್ಲಿ, ನಾವೆಲ್ಲರೂ ಅವರಿಗೆ ಧನ್ಯವಾದ ಹೇಳೋಣ, ನಾವೆಲ್ಲರೂ ಅವರನ್ನು ನೆನಪಿಸಿಕೊಳ್ಳೋಣ ಮತ್ತು ಅವರಿಗೆ ತಲೆ ತಗ್ಗಿಸಿ ಧನ್ಯವಾದ ಹೇಳೋಣ. ನಾವೆಲ್ಲರೂ ನಮೋ ನಮಃ ಎಂದು ಹೇಳೋಣ.
ಈಗ ನಮ್ಮ ಆಧ್ಯಾತ್ಮಿಕ ಗುರುಗಳನ್ನು ಸ್ಮರಣೆ ಮಾಡೋಣ.
ನಮ್ಮ ಹರಿದಾಸ ಪರಂಪರೆಯ ಗುರುಗಳಾದ:
ಶ್ರೀ ಗೋಪಾಲ ದಾಸರನ್ನು ಸ್ಮರಣೆ ಮಾಡೋಣ
ಶ್ರೀ ವಿಜಯ ದಾಸರನ್ನು ಸ್ಮರಣೆ ಮಾಡೋಣ
ಸ್ವಯಂ ಯಮ ಧರ್ಮರ ಅವತಾರ ರೂಪಿಯಾದ ಶ್ರೀ ಕನಕ ದಾಸರನ್ನು ಸ್ಮರಣೆ ಮಾಡೋಣ.
ಸ್ವಯಂ ನಾರದ ಮಹಾರುಷಿಗಳಾದ ಶ್ರೀ ಪುರಂಧರ ದಾಸರನ್ನು ಸ್ಮರಣೆ ಮಾಡೋಣ
ಒಟ್ಟಾರೆ ಎಲ್ಲಾ ವೈಷ್ಣವ ದಾಸ ಪರಂಪರೆಯನ್ನು ಸ್ಮರಣೆ ಮಾಡೋಣ
ನಮ್ಮ ತಂದೆಯಾಗಿ ನಮ್ಮ ತಾಯಿಯಾಗಿ ನಮ್ಮನ್ನು ಆಶೀರ್ವದಿಸುತ್ತಿರುವ, ನಮ್ಮ ಗುರುಗಳಾದ ಸ್ವಯಂ ಶ್ರೀ ಶಂಕೂಕರ್ಣರು ಆಗಿದ್ದ, ಸ್ವಯಂ ಶ್ರೀ ಪ್ರಹಲಾದ ಮಹಾರಾಜರು ಆಗಿದ್ದ,
ಸ್ವಯಂ ಶ್ರೀ ಬಹಲ್ಲಿಕ ಮಹಾರಾಜರು ಆಗಿದ್ದ, ಸ್ವಯಂ ಶ್ರೀ ವ್ಯಾಸತಿರ್ಥರು ಆಗಿದ್ದ, ನಮ್ಮ ಕೇವಲ ನಮ್ಮ ವೈಷ್ಣವ ಗುರುಗಳಾದ ಶ್ರೀ ರಾಘವೇಂದ್ರ ಗುರುಸಾರ್ವಭೌಮರನ್ನು ಸ್ಮರಣೆ ಮಾಡೋಣ.
ಮುಂದಿನ ಬ್ರಹ್ಮದೇವರು ಆಗುವವರು, ನಮ್ಮ ಸ್ವಾಧಿಪುರ ನಿವಾಸಿಯಾಗಿರುವ ನಮ್ಮ ಚಿರಾಯುಗಳಾದ, ಯಾರಿಗೆ ಮರಣ ಹತ್ತಿರ ಕೂಡ ಸೆಳೆದಾಡಲಿಲ್ಲವೋ, ಯಾರು ಸ್ವಯಂ ಬೃಂದಾವನಸ್ತರಾದರೋ,
ಯಾರು ಭಗವಂತನ ಹಯಗ್ರಿವ ರೂಪದಲ್ಲಿ ಬರುತ್ತಿದ್ದ ಶ್ರೀ ಹರಿಯನ್ನು ಊಟ ಮಾಡಿಸುತ್ತಿದ್ದರೋ, ಯಾರು ಕರುಣಾಶಿಲರೋ,
ಯಾರು ನಮ್ಮವಂತರಿಗೆ ಸುಲಭವಾಗಿ ದೇವರ ಹತ್ತಿರ ಹೋಗಲು ಸುಲಭ ಕನ್ನಡದಲ್ಲಿ ಹಾಡುಗಳನ್ನು ಮತ್ತು ಶ್ಲೋಕಗಳನ್ನು ರಚಿಸಿದರೋ, ಯಾರು ಸ್ವಯಂ ಶ್ರೀ ವ್ಯಾಸತೀರ್ಥರ ಶಿಷ್ಯರಾಗಿದ್ದರೋ, ನಮ್ಮ ಶ್ರೀ ವಾದಿರಾಜಗುರುಸಾರ್ವಭೌಮರಿಗೆ ಸ್ವರಣೆ ಮಾಡೋಣ.
ನಮ್ಮ ತಂದೆಗೂ ಅತಿ ಆಗಿ, ನಮ್ಮ ತಾಯಿಗೂ ಅತಿಯಾಗಿ, ನಮ್ಮನ್ನು ಕಾಪಾಡುತ್ತಿರುವರೋ, ಯಾರು ಸ್ವಯಂ ಬ್ರಹ್ಮಲೋಕಲ್ಲಿ ಶ್ರೀ ಶಂಕೂಕರ್ಣರಾಗಿದ್ದರೊ,
ಯಾರು ಸ್ವಯಂ ಶ್ರೀ ಹರಿಯ ರೂಪವಾದ ಶ್ರೀ ಲಷ್ಷ್ಮಿನರಸಿಂಹದ ಅವತಾರ ಎತ್ತಿಕೊಂಡು ನಮ್ಮನೆಲ್ಲ ಉದ್ಧಾರ ಮಾಡಲು ಬರಲು ಕಾರಣವಾದ ಶ್ರೀ ಪ್ರಹಲ್ಲಾದ ಮಹಾರಾಜರ ಅವತಾರವೋ,
ಯಾರು ನಮಗೋಸ್ಕರ ಕನ್ನಡದಲ್ಲಿ ನಮ್ಮ ಭಾರತಿಯ ಸಂಸ್ಕೃತವನ್ನು ಹೇಳಿಹೋದರೋ, ಯಾರು ಶ್ರೀ ಕೃಷ್ಣನ ಅಧ್ಭುತವಾದ “ಕೃಷ್ಣಾನೀ ಬೇಗನೆ ಬಾರೋ” ಎಂಬ ಹಾಡನ್ನು ನಮ್ಮಂತವರಿಗೆ ಕೊಟ್ಟರೋ,
ಯಾರು ಪರಂದಯಾಶೀಲರೋ, ಆ ನಮ್ಮ ಗುರುಸಾರ್ವಭೌಮರಾದ ಶ್ರೀ ವ್ಯಾಸರಾಜ ಗುರುಗಳಿಗೆ ಸ್ಮರಣೆ ಮಾಡೋಣ.
ಯಾರು ಸ್ವಯಂ ಇಂದ್ರರ ಅವತಾರವೋ, ಯಾರು ಶ್ರೀ ಮದಾನಂದತಿರ್ಥ ಭಗವದ್ಪಾದಾಚಾರ್ಯರ ಗ್ರಂಥಗಳಿಗೆ ನಮ್ಮವರಂತಹ ಬುದ್ಧಿಹೀನರನ್ನು ಉದ್ಧರಿಸಲು ಅರ್ಥ ಪೂರ್ಣವಾಗಿ ಟ್ಟಿಪ್ಪನಿ ರಚಿಸಿದರೋ, ಶ್ರೀ ಟಿಕಾಕುದಪಾದರಿಗೆ ಸ್ಮರಣೆ ಮಾಡೋಣ.
ಸ್ವಯಂ ಶ್ರೀ ಮದಾನಂದತಿರ್ಥಭಗವದ್ಪಾದಾಚಾರ್ಯರ ಶಿಷ್ಯರೋ, ಯಾರಿ ಶ್ರೀ ಮದಾಚಾರ್ಯರ ಮುಂದೆ ತಲೆಬಾಗಿಸಿ ಅವರ ಎಲ್ಲವನ್ನು ತ್ಯಾಗಮಾಡಿ ಶ್ರೀ ಆಚಾರ್ಯಯ ಶಿಷ್ಯತ್ವವನ್ನು ತಲೆ ಬಾಗಿಸಿ ಒಪ್ಪಿಕೊಂಡರೋ,
ಆ ನಮ್ಮ ಶ್ರೇಷ್ಠ ಗುರುಗಳಾದ, ಗುರುಗಳಲ್ಲೆ ಸಾರ್ವಭೌಮಚಕ್ರವರ್ತಿಯಂದುಕೊಳ್ಳುವವರಾದ ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರನ್ನು ಸ್ಮರಣೆ ಮಾಡೋಣ.
ಶ್ರೀ ಮದಾನಂದತರ್ಥಬಗವದ್ಪಾದಾಚಾರ್ಯರ ಪೂರ್ವಾಶ್ರಮದ ತಮ್ಮನಾಗಿದ್ದ, ಯಾರು ೩೨,೦೦೦ ವರ್ಷದಕಾಲ ನಮ್ಮಂತವರಿಗೆ ಪರ್ವತದ ಮೇಲೆ ಈಗಲೂ ಸಹ ತಪಸನ್ನು ಆಚರಣೆ ಮಾಡುತ್ತಿರುವರೋ,
ಸ್ವಯಂ ಶ್ರೀ ಆಚಾರ್ಯರ ಶಿಷ್ಯರಾದ ಶ್ರೀ ವಿಷ್ಣುತೀರ್ಥರನ್ನು ಸ್ಮರಣೆ ಮಾಡೋಣ.
ಮುಂದಿನ ಶ್ರೀ ಬ್ರಹ್ಮದೇವರು ಆಗಲಿರುವ, ಯಾರು ಸ್ವಯಂ ಮುಖ್ಯಪ್ರಾಣದೇವರೋ, ಯಾರು ಶ್ರೀ ಹನುಮಂತ ದೇವರಾಗಿ ಶ್ರೀ ರಾಮ ಚಂದಿರದೇವರ ಕೃಪೆಗೆ ಅಧಿಪತಿಗಳೋ,
ಯಾರು ಶ್ರೀ ಭೀಮದೇವರಾಗಿ ಶ್ರೀ ಕೃಷ್ಣ ದೇವರ ಸೇವೆ ಮಾಡಿದರೋ, ಯಾರು ಶ್ರೀ ಹರಿಯ ಆಜ್ಞೆಯಂತೆ ಈ ಕಲಿಯುಗದಲ್ಲಿಯು ನಮ್ಮಂತವರಿಗೆ ಉದ್ಧಾರ ಮಾಡಲು ಈ ಭೂಮಿಗೆ ಬಂದರೋ,
ಯಾರು ಶ್ರೇಷ್ಠವಾದ ಗ್ರಂಥಗಳನ್ನು ಅತಿ ಚಿಕ್ಕರಲ್ಲಿ ಚಿಕ್ಕರಾದ ನಮ್ಮವಂತರಿಗೆ ತಮ್ಮ ಕಾರುಣ್ಯದಿಂದ ರಚಿಸಿದರೋ ಅಂತ ಶ್ರೀ ಮದಾನಂದತೀರ್ಥ ಭಗವದ್ಪಾದಾಚಾರ್ಯರನ್ನು ಸ್ಮರಿಸೋಣ.
ಶ್ರೀ ಲಕ್ಷ್ಮಿಪತಿಯ ಪಾದದಾಸಿಯಾದ ಶ್ರೀ ಮಹಾಲಕ್ಷ್ಮಿಯಾದ ಆ ನಮ್ಮ ತಾಯಿ ಶ್ರೀದೇವಿಯನ್ನು ಸ್ಮರಿಸೋಣ.
ಸ್ವಯಂ ಶ್ರೀ ಮಹಾಲಕ್ಷ್ಮಿದೇವಿಯಿಂದ, ಶ್ರೀ ಬ್ರಹ್ಮದೇವರಿಂದ, ಶ್ರೀ ಮುಖ್ಯಪ್ರಾಣದೇವರಿಂದ, ಶ್ರೀ ಸರಸ್ವತಿದೇವಿಯಿಂದ, ಶ್ರೀ ಭಾರತಿ ದೇವಿಯಿಂದ, ಶ್ರೀ ರುದ್ರದೇವರಿಂದ,
ಶ್ರೀ ತುಲಸಿದೇವಿಯಿಂದ, ಶ್ರೀ ಪಾವರ್ತಿ ದೇವಿಯಿಂದ, ಶ್ರೀ ಇಂದ್ರದೇವಾದಿ ಎಲ್ಲಾ ದೇವಾತ, ಮಾಹಾನ್ರುಷಿಗಳಿಂದ ಅನಂತ ಜನಸಾಮಾನ್ಯರಿಂದ ಪೂಜಿಸಲ್ಪಡುವ ಅನಂತ ನಾಮಧರನಾದ
ಶ್ರೀ ಹರಿ, ಶ್ರೀಮನ್ ನಾರಾಯಣ, ಶ್ರೀ ರಾಮ, ಶ್ರೀ ವೇದವ್ಯಾಸ, ಶ್ರೀ ಕೃಷ್ಣಾದಿ ಹೇಸರುಲ್ಲ, ಶ್ರೀದೇವಿಪತಿಯಾದ ಶ್ರೀ ಭಗವಂತನಿಗೆ ಸ್ವರಣೆಮಾಡೋಣ.
ಈ ಪೋಸ್ಟ್ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್ಗೆ ಪುನಃ ಭೇಟಿ ನೀಡಿ.
To watch videos on #Hinduism #Sanskrit language, SUBSCRIBE to my YouTube channel from this below link:
#BhagavanBhakthi YouTube channel
ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.
ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್, ಒಂದು ಸಬ್ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.
ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.
ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್ ಮಾಡಿಕೊಳ್ಳಿ.
ಏಕೆಂದರೆ “ಶೇರ್ ಮಾಡುವುದೆಂದರೆ ಕೇರ್ ಮಾಡುವುದು ಎಂದರ್ಥ”.
#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.
ವಂದನೆಗಳು!
ಶ್ರೀ ಗುರುಭ್ಯೋ ನಮಃ
ಶ್ರೀ ರಾಘವೇಂದ್ರ ಸ್ವಾಮಿ ಗುರುಭ್ಯೋ ನಮಃ
ಶ್ರೀ ಕೃಷ್ಣಂ ಒಂದೇ ಜಗದ್ ಗುರು ನಮೋ ನಮಃ
ಶ್ರೀ ಕೃಷ್ಣಾರ್ಪಣಮಸ್ತು