ಶ್ರೀ ವಿಷ್ಣು ಸಹಸ್ರನಾಮ (ಏಕೆ ಓದಬೇಕು / ಪಠಿಸಬೇಕು) ಓದುವ ಉಪಯೋಗಗಳು (ಮಹಿಮೆ / ಮಹತ್ವ) | ಎಲ್ಲಾ ರೋಗಗಳು ಮತ್ತು ಕಷ್ಟಗಳನ್ನು ದೂರ ಮಾಡುವುದು ಹೇಗೆ | Benefits of reading (chanting) Vishnu Sahasranama in Kannada
ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.
ಭಗವಂತ ಶ್ರೀ ವಿಷ್ಣುವಿನ ಮತ್ತು ಗಣೇಶನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!
ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.
#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.
“ಶ್ರೀ ವಿಷ್ಣು ಸಹಸ್ರನಾಮ (ಏಕೆ ಓದಬೇಕು / ಪಠಿಸಬೇಕು) ಓದುವ ಉಪಯೋಗಗಳು (ಮಹಿಮೆ / ಮಹತ್ವ) | ಎಲ್ಲಾ ರೋಗಗಳು ಮತ್ತು ಕಷ್ಟಗಳನ್ನು ದೂರ ಮಾಡುವುದು ಹೇಗೆ | Benefits of reading (chanting) Vishnu Sahasranama in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.
ಎಲ್ಲರನ್ನೂ ರೋಮಾಂಚನಗೊಳಿಸುವ ಈ ಸಣ್ಣ ಕಥೆಯನ್ನು ಬನ್ನಿ ನಾವೆಲ್ಲರೂ ಸೇರಿ ಓದೋಣ… ಶ್ರೀ ಭೀಷ್ಮಾಚಾರ್ಯರು (ಭೀಷ್ಮ ಪಿತಾಮಹ) ನೀಡಿದ ಮಂತ್ರವನ್ನು ಈ ಕೆಳಗಿನಂತೆ ನೀಡಲಾಗಿದೆ:
ನಮ್ಮ ಶಾಸ್ತ್ರಗಳ ಪ್ರಕಾರ, ಈ ಕಲಿಯುಗದಲ್ಲಿ, ಈ ಭೂಮಿಯ ಮೇಲಿನ ಮನುಷ್ಯನ ಜೀವಿತಾವಧಿಯು ನೂರ ಇಪ್ಪತ್ತು ವರ್ಷಗಳು (ಈ ಭೂಮಿಯ ಮೇಲಿನ ನಮ್ಮ ವಯಸ್ಸನ್ನು 100 ವರ್ಷಗಳು ಎಂದು ನಾವು ಪರಿಗಣಿಸೋಣ).
ಈ ನೂರು ವರ್ಷಗಳಲ್ಲಿ, 36 ಸಾವಿರ ದಿನಗಳು ಮತ್ತು 36 ಸಾವಿರ ರಾತ್ರಿಗಳಿವೆ. ನಮ್ಮ ಶಾಸ್ತ್ರದ ಪ್ರಕಾರವಾಗಿ, ಮಾನವ ದೇಹವು ಎಂದರೆ, ಒಬ್ಬಾತನ / ಆಕೆಯ ದೇಹದಲ್ಲಿ 72 ಸಾವಿರ ನರಗಳು ಇರುತ್ತವೆ.
ಈ ಒಟ್ಟು ನರಗಳಲ್ಲಿ, 36 ಸಾವಿರ ನಮ್ಮ ದೇಹದ ಎಡಭಾಗದಲ್ಲಿದೆ ಮತ್ತು 36 ಸಾವಿರ ನಮ್ಮ ದೇಹದ ಬಲಭಾಗದಲ್ಲಿದೆ.
ಈ ನರಗಳಲ್ಲಿ ರಕ್ತವು ನಮ್ಮ ಜೀವಿತಾವಧಿ ಪರ್ಯಂತ ಸರಿಯಾದ ರೀತಿಯಲ್ಲಿ ಹರಿಯುತ್ತಿದ್ದರೆ, ಅನಂತರ ಯಾವುದೇ ಮನುಷ್ಯನಿಗೆ ಯಾವುದೇ ರೂಪದಲ್ಲಿ ಯಾವುದೇ ಕಾಯಿಲೆ ಬರುವುದಿಲ್ಲ.
ಬ್ರಹತಿಸಹಸ್ರದಲ್ಲಿ (ನಮ್ಮ ಮಹಾ ವೇದಗಳ ಒಂದು ಭಾಗ), 1000 ಮಂತ್ರಗಳಿವೆ. ಈ 1000 ಮಂತ್ರಗಳಲ್ಲಿ 72,000 ಅಕ್ಷ ರಗಳು (ವರ್ಣಮಾಲೆಗಳು) ಇವೆ.
ಈ 1000 ಮಂತ್ರಗಳ ಸಾರಾಂಶ ದ ಸಾರವನ್ನು, ಮಹಾನ್ ಶ್ರೀ ವಿಷ್ಣು ಸಹಸ್ರನಾಮವಾಗಿ, ಭಗವಂತ ಶ್ರೀ ವಿಷ್ಣುವಿನ 1000 ಹೆಸರುಗಳಂತೆ ಶ್ರೀ ವೇದ ವ್ಯಾಸ ದೇವರು ನಮಗೆಲ್ಲರಿಗೂ ನೀಡಿದ್ದಾರೆ.
ಮಹಾನ್ ಶ್ರೀ ವಿಷ್ಣು ಸಹಸ್ರನಾಮವನ್ನು ಜಪಿಸುವುದು ಮತ್ತು ಓದುವುದು ಎಂದರೆ, ಬ್ರಹತಿಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸುವುದು ಎಂದರ್ಥ.
ಇದು ನಮ್ಮ ಎಲ್ಲಾ 72 ಸಾವಿರ ನರಗಳಿಗೆ ನಮ್ಮ ದೇಹದಲ್ಲಿ ಸಂಪೂರ್ಣ ರಕ್ತ ಚಲನೆಯನ್ನು ಸಕ್ರಿಯಗೊಳಿಸುತ್ತದೆ.
ಆದ್ದರಿಂದ ಮಹಾನ್ ಶ್ರೀ ವಿಷ್ಣು ಸಹಸ್ರನಾಮ ಫಠಿಸುವುದರಿಂದ, ಮಾನವನ ದೇಹವನ್ನು ಯಾವುದೇ ರೋಗಗಳಿಂದ ದೂರವಿಡುವ / ಗುಣಪಡಿಸುವಲ್ಲಿ ಬಹು ಮುಖ್ಯ ಪಾತ್ರ ಹೊಂದಿದೆ.
ಆದಾಗ್ಯೂ, ಈ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲು, ಮಹಾನ್ ಶ್ರೀ ವಿಷ್ಣು ಸಹಸ್ರನಾಮದ ಅರ್ಥವನ್ನು ಅರ್ಥಮಾಡಿಕೊಳ್ಳುವುದು ಮತ್ತು ನಮ್ಮ ಸಂಪೂರ್ಣ ಆಸಕ್ತಿ ಮತ್ತು ಶ್ರೇಷ್ಟ ಭಕ್ತಿಯಿಂದ ಪಠಿಸುವುದು ಬಹಳ ಮುಖ್ಯವಾಗಿರುತ್ತದೆ.
ವೇದಗಳಿಗೆ (ವೇದದ ಪ್ರತೀ ಪದಗಳಿಗೆ) ಕನಿಷ್ಠ ಮೂರು ಅರ್ಥಗಳಿವೆ, ಮಹಾಭಾರತ ಪದ್ಯಗಳಿಗೆ ಕನಿಷ್ಠ 10 ಅರ್ಥಗಳಿವೆ ಮತ್ತು ಮಹಾನ್ ಶ್ರೀ ವಿಷ್ಣು ಸಹಸ್ರನಾಮದ ಪ್ರತಿಯೊಂದು ಹೆಸರಿಗೆ ಕನಿಷ್ಠ ನೂರು ಅರ್ಥಗಳಿವೆ.
ಈ ಕಾರಣಕ್ಕಾಗಿಯೇ, ನಮ್ಮ ಮಹಾನ್ ಪೂರ್ವಜರು ಶ್ರೀ ಭಗವದ್ಗೀತೆ ಮತ್ತು ಶ್ರೀ ವಿಷ್ಣು ಸಹಸ್ರನಾಮವನ್ನು ಈ ಭೂಮಿಯಲ್ಲಿರುವ ಅತ್ಯಮೂಲ್ಯ ಗ್ರಂಥವೆಂದು ಪರಿಗಣಿಸಿದ್ದಾರೆ.
ಶರಪಂಜರ / ಶಯ್ಯ (ಬಾಣಗಳ ಹಾಸಿಗೆ) ಮೇಲೆ ಮಲಗಿದ್ದ ಶ್ರೀ ಭೀಷ್ಮಾಚಾರ್ಯರಿಗೆ ಧರ್ಮರಾಜ (ಯುಧಿಸ್ಠಿರ) ಹೀಗೆ ಕೇಳುತ್ತಾನೆ,
“ಅನಂತ ಅನಂತ ಬ್ರಹ್ಮಾಂಡಗಳ ನಿಜವಾದ ಭಗವಂತ ಯಾರು?
ಯಾರ ಸ್ತೂತಿ (ಹೆಸರುಗಳನ್ನು ಜಪಿಸುವುದು) ಮಾಡುವುದರಿಂದ ನಮಗೆ ಲಾಭವಾಗುತ್ತದೆ?
ಯಾರ ಮಹಿಮೆಯನ್ನು ಹಾಡಿದರೆ, ನಮಗೆ ಲಾಭವಾಗುತ್ತದೆ?
ಯಾರ ಅರ್ಚನೆ (ಒಂದು ರೀತಿಯ ಪೂಜಾ) ಮಾಡುವುದರಿಂದ ನಮಗೆ ಲಾಭವಾಗುತ್ತದೆ?
ಎಲ್ಲಾ ಧರ್ಮಗಳಲ್ಲಿ, ಅತ್ಯಂತ ಪ್ರಮುಖ ಧರ್ಮ ಯಾವುದು?
ಯಾರನ್ನು ಪ್ರಾರ್ಥಿಸಿದರೆ, ನಮ್ಮ ಎಲ್ಲಾ ಪಾಪಗಳು ಮತ್ತು ಸಾವಿನ ಚಕ್ರದಿಂದ ನಾವು ಮುಕ್ತವಾಗಬಹುದು?”
ಈ ಎಲ್ಲಾ ಪ್ರಶ್ನೆಗಳಿಗೆ, ಈ ಅನಂತ ಅನಂತ ಬ್ರಹ್ಮಾಂಡಗಳಲ್ಲಿ “ಶ್ರೀ ವಿಷ್ಣು ಸಹಸ್ರನಾಮ” ಮಾತ್ರ ಉತ್ತರ ಮತ್ತು ಅತ್ಯಂತ ಹೆಚ್ಚು ಪ್ರಯೋಜನಕಾರಿ ಮಂತ್ರವಾಗಿದೆ ಎಂದು ಶ್ರೀ ಭೀಷ್ಮಾಚಾರ್ಯರು ಹೇಳುತ್ತಾರೆ.
ಶ್ರೀ ಭೀಷ್ಮಾಚಾರ್ಯರು, ಯುಧಿಷ್ಠಿರನಿಗೆ ಹೀಗೆ ಹೇಳುತ್ತಾರೆ,
“ದುರ್ಯೋಧನನು, ಆ ಲಾಕ್ಷಾಗೃಹಕ್ಕೆ ರಾತ್ರಿಯಲ್ಲಿ ಬೆಂಕಿ ಹಚ್ಚುವ ಮೂಲಕ ನಿಮ್ಮನ್ನೆಲ್ಲರನ್ನೂ ಕೊಲ್ಲಲು ಆ ಅರಮನೆಯಲ್ಲಿ ಉಳಿಯುವಂತೆ ಮಾಡಿದನು.
ಆದರೆ ವಿದುರನ ದೂರದೃಷ್ಟಿಯು ನಿಮ್ಮನ್ನು ಸಾವಿನ ಪಂಜರದಿಂದ ರಕ್ಷಿಸಿತು. ನೀವೆಲ್ಲರೂ, ಯಾವುದೇ ತೊಂದರೆಗೆ ಒಳಗಾಲಿಲ್ಲ ಎಂದು ತಿಳಿದುಕೊಂಡ ನಾನು ಅತ್ಯಂತ ಸಂತೋಷದ ವ್ಯಕ್ತಿಯಾಗಿದ್ದೆ.
ಯಾವ ಸಂತೋಷವಾಗಲಿ ಅಥವಾ ದುಃಖವಾಗಲಿ, ನಾನು ನನ್ನ ಎಲ್ಲಾ ಆಲೋಚನೆಗಳನ್ನು ನನ್ನ ತಾಯಿ ಶ್ರೀ ಗಂಗಾ ದೇವಿಯೊಂದಿಗೆ ಹಂಚಿಕೊಳ್ಳುತ್ತಿದ್ದರೆ, ನನಗೆ ಯಾವಾಗಲೂ ಶಾಂತಿ ದೊರೆಕುತ್ತಿತ್ತು”.
ಶ್ರೀ ಭೀಷ್ಮಾಚಾರ್ಯರು ಮುಂದುವರಿಸುತ್ತಾರೆ,
“ಒಮ್ಮೆ ಬೆಳಗಿನ ಜಾವ, ನಾನು ನನ್ನ ಕೈಯಲ್ಲಿ ಒಂದು ಊರುಗೋಲನ್ನು ಹಿಡಿದುಕೊಂಡು, ನನ್ನ ತಾಯಿಯ ತೊಡೆಯ ಮೇಲೆ ಮಲಗಲು ನಡೆಯುತ್ತಿದ್ದೆ, ಆದರೆ ಆ ಸಮಯದಲ್ಲೂ ಸಹ ನಾನು ನೀವು ಪಂಚ ಪಾಂಡವರ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದ್ದೆ.
ಜೀವನದುದ್ದಕ್ಕೂ ನೀವು ಅನುಭವಿಸಿದ ನಿಮ್ಮ ಕಷ್ಟಗಳ ಬಗ್ಗೆ ನಾನು ಯೋಚಿಸುತ್ತಿದ್ದೆ, ಆದರೆ ಆ ಸಮಯದಲ್ಲಿ ಒಂದು ಊಸರವಳ್ಳಿ ನನ್ನ ಊರುಗೋಲಿಗೆ ಸಿಕ್ಕಿಹಾಕಿಕೊಂಡಿತ್ತು ಮತ್ತು ನೋವಿನಿಂದ ಬಳಲುತ್ತಿತ್ತು”.
“ನಾನು ತುಂಬಾ ಆಳವಾದ ಆಲೋಚನೆಯಲ್ಲಿ ತೊಡಗಿದ್ದರಿಂದ, ನನ್ನ ಶಾಂತಿ ಭಂಗವಾದಂತಾಯಿತು. ಈ ಕಾರಣಕ್ಕಾಗಿ, ಎರಡನೇ ಬಾರಿ ಯೋಚಿಸದೆಯೇ ನಾನು ಆ ಊಸರವಳ್ಳಿಯನ್ನು ನನ್ನ ಊರುಗೋಲು ಬಳಸಿ ದೂರಕ್ಕೆಸೆದೆ.
ಅದು ಮುಳ್ಳಿನ ಪೊದೆಯ ಮೇಲೆ ಬಿದ್ದು ಕೂಗಲು ಪ್ರಾರಂಭಿಸಿತು”,
“ಓ ಪುಣ್ಯಾತ್ಮನೆ, ದಯೆಮಾಡಿ ನಿಲ್ಲಿಸಿ. ನಿಮಗೆ ನನ್ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ನೀವು ನನ್ನನ್ನು ಎಸೆಯುತ್ತಿದ್ದೀರಿ. ನೀವು ಮಾಡುತ್ತಿರುವುದು ಸರಿಯೇ, ದಯವಿಟ್ಟು ನನಗೆ ಹೇಳಿ?”
ಇದನ್ನು ಕೇಳಿದ ನಂತರ ನಾನು (ಶ್ರೀ ಭೀಷ್ಮಾಚಾರ್ಯರು) ಹೀಗೆ ಹೇಳಿದೆ,
“ನೀನೇ ಸ್ವತಃ ನನ್ನ ಊರುಗೋಲಿನಲ್ಲಿ ಸಿಕ್ಕಿಕೊಂಡಿದ್ದೆ, ನಾನು ಮಾಡಿದ ತಪ್ಪೇನೂ ಇಲ್ಲ”.
ಇದಕ್ಕೆ ಅದು (ಊಸರವಳ್ಳಿ) ಹೀಗೆ ಉತ್ತರಿಸಿತು,
“ಓ ಪುಣ್ಯಾತ್ಮನೆ, ನಾನು ನಿಮ್ಮ ಊರುಗೋಲಿನಲ್ಲಿ ಸಿಕ್ಕಿಕೊಂಡಿದ್ದು ನಿಜ. ಆದರೆ, ನೀವು ನನ್ನ ಅವಸ್ಥೆಯ ಬಗ್ಗೆ ಸ್ವಲ್ಪವೂ ಕರುಣೆ ತೋರಲಿಲ್ಲ.
ನನ್ನ ನೋವಿನ ಆಹಾಕಾರವನ್ನು ಕೇಳಿದ ನಂತರವೂ, ನೀವು ನನ್ನನ್ನು ಮುಳ್ಳಿನ ಪೊದೆಯ ಮೇಲೆ ಎಸೆದಿದ್ದೀರಿ. ನೀವು ಮಾಡಿದ್ದು ಸರಿಯೇ?
ಈ ಕಾರಣಕ್ಕಾಗಿ, ನಾನು ಇದೀಗ ಅನುಭವಿಸುತ್ತಿರುವ ಅದೇ ನೋವನ್ನು ನೀವು ಸಹ ಅನುಭವಿಸಬೇಕಾಗುತ್ತದೆ. ನಿಮ್ಮ ಕೊನೆಯ ಸಮಯ ಹತ್ತಿರ ಬಂದಾಗ, ನೀವು ನನ್ನಂತೆಯೇ ಬಾಣಗಳ ಹಾಸಿಗೆಯ ಮೇಲೆ ಮಲಗುತ್ತೀರಿ.
ಹಾಗೆ ಹೇಳುವು ಮೂಲಕ, ಊಸರವಳ್ಳಿ ನನ್ನನ್ನು ಶಪಿಸಿತು”.
ಆ ಹೊತ್ತಿಗೆ, ನನ್ನ ಗಂಭೀರ ತಪ್ಪಿನ ಬಗ್ಗೆಯೂ ನನಗೆ ಅರಿವಾಗಿತ್ತು. ಕ್ಷಮೆಯಾಚಿಸುವ ಮೂಲಕ, ನಾನು ಊಸರವಳ್ಳಿಯ ಕಡೆಗೆ ವೇಗವಾಗಿ ಓಡಲು ಪ್ರಾರಂಭಿಸಿದೆ.
ಆದರೆ ನಾನು ಆ ಊಸರವಳ್ಳಿ ಕಡೆಗೆ ತಲುಪುವ ಹೊತ್ತಿಗೆ, ಅಪಾರ ರಕ್ತಸ್ರಾವ ಆಗಿದ್ದ ಕಾರಣದಿಂದಾಗಿ, ಅದರ ರಕ್ತವನ್ನು ಕಳೆದುಕೊಳ್ಳುವ ಮೂಲಕ ಅದು ಆಗಲೇ ಕೊನೆಯ ಉಸಿರನ್ನು ತೆಗೆದುಕೊಂಡಿತ್ತು.
ಶ್ರೀ ಭೀಷ್ಮಾಚಾರ್ಯರಿಗೆ, ಮಹಾನ್ ಶ್ರೀ ವಿಷ್ಣು ಸಹಸ್ರನಾಮದ ಶಕ್ತಿಯ ಬಗ್ಗೆ ಸ್ವತಃ ಅತ್ಯುತ್ತಮವಾಗಿ ತಿಳಿದಿತ್ತು. ಅವರು ಮಹಾನ್ ಶ್ರೀ ವಿಷ್ಣು ಸಹಸ್ರನಾಮವನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದರು.
ಈ ಮಹಾನ್ ಧರ್ಮದ ಪ್ರಕಾರವಾಗಿರುವ ಶಕ್ತಿಯೊಂದಿಗೆ, ಮಹಾನ್ ಶ್ರೀ ವಿಷ್ಣು ಸಹಸ್ರನಾಮವನ್ನು ಜಪಿಸುವ ಮೂಲಕ, ಶ್ರೀ ಭೀಷ್ಮಾಚಾರ್ಯರು ಸಾವು ಮತ್ತು ಎಲ್ಲಾ ರೋಗಗಳನ್ನು ದೂರವಿಟ್ಟಿದ್ದರು.
ಅದೇ ಸಮಯದಲ್ಲಿ, ಶ್ರೀ ಭೀಷ್ಮಾಚಾರ್ಯರ ಮಹಾನ್ ಭಕ್ತಿಯನ್ನು ತಿಳಿದುಕೊಳ್ಳುವ ಮೂಲಕ ಪರಮಾತ್ಮ ಶ್ರೀ ಕೃಷ್ಣ, ಅವರನ್ನು ಭೇಟಿಯಾಗಲು ಬಂದಿದ್ದರು,
ಮತ್ತು ಸ್ವಯಂ ಭಗವಾನ್ ಶ್ರೀ ಕೃಷ್ಣನ ದರ್ಶನ ಮತ್ತು ಸ್ಪರ್ಶವನ್ನು (ಸ್ಪರ್ಶದ ಭಾವನೆ) ಪಡೆಯುವ ಶ್ರೇಷ್ಟ ಅವಕಾಶವನ್ನೂ ಸಹ ಶ್ರೀ ಭೀಷ್ಮಾಚಾರ್ಯರಿಗೆ ನೀಡಿದ್ದರು.
ಶ್ರೀ ಭೀಷ್ಮಾಚಾರ್ಯರು ಹೀಗೆ ಹೇಳುತ್ತಾರೆ, “ನಾ ವಾಸುದೇವ ಭಕ್ತಾನಂ ಅಶುಭಂ ವಿದ್ಯತೆ ಕ್ವಚಿತ್” ಎಂದು:
ಅಂದರೆ, ಶ್ರೇಷ್ಟ ಭಕ್ತಿಯೊಂದಿಗೆ ಪ್ರತಿದಿನ ಮಹಾನ್ ಶ್ರೀ ವಿಷ್ಣು ಸಹಸ್ರನಾಮವನ್ನು ಓದುವ ಯಾರಿಗಾದರೂ,
ಆತನ / ಆಕೆಯ ಜೀವಿತಾವಧಿಯಲ್ಲಿ ಯಾವುದೇ ರೀತಿಯ ಸಣ್ಣ ಕಷ್ಟಗಳು, ರೋಗಗಳು ಇತ್ಯಾದಿಗಳೂ ಸಹ ಎಂದಿಗೂ ಉಂಟಾಗುವುದಿಲ್ಲ ಎಂದು ಇದರರ್ಥ.
ಅಷ್ಟೇ ಅಲ್ಲ, ಶ್ರೇಷ್ಟ ಭಕ್ತಿಯೊಂದಿಗೆ ಪ್ರತಿದಿನ ಮಹಾನ್ ಶ್ರೀ ವಿಷ್ಣು ಸಹಸ್ರನಾಮವನ್ನು ಓದುವ ಯಾರಿಗಾದರೂ, ಆತನ / ಆಕೆಯ ಜೀವಿತಾವಧಿಯಲ್ಲಿ ಒಂದೇ ಒಂದು ದಿನವೂ ಸಹ ಅಶುಭ ವಿಷಯವೂ ಉಂಟಾಗುವುದಿಲ್ಲ.
ಅಂತಹ ಜನರಿಗೆ ಅಪಮೃತ್ಯು, ಸಾವು, ವೃದ್ಧಾಪ್ಯ, ಅಥವಾ ಯಾವುದೇ ಕಾಯಿಲೆ ಅಥವಾ ಯಾವುದೇ ರೀತಿಯ ಭಯವಿರುವುದಿಲ್ಲ.
“ಇದಲ್ಲದೆ, ಪ್ರಾಮಾಣಿಕ ಮತ್ತು ಶ್ರೇಷ್ಟ ಭಕ್ತಿಯಿಂದ, ಶ್ರದ್ಧಾಭಕ್ತಿಯಿಂದ ಪ್ರತಿದಿನ ಮಹಾನ್ ಶ್ರೀ ವಿಷ್ಣು ಸಹಸ್ರನಾಮವನ್ನು ಭಕ್ತಿಯಿಂದ ಪಠಣ ಮಾಡಿದರೆ, ಭಗವಂತ ಶ್ರೀ ಕೃಷ್ಣ ನಮಗೆ ಅಂತಿಮ ಮುಕ್ತಿ / ಮೋಕ್ಷವನ್ನೂ ಸಹ ನೀಡುತ್ತಾರೆ”.
ನಮಗೆ ಇನ್ನೇನು ಬೇಕು. ಮುಕ್ತಿ / ಮೋಕ್ಷ ಎಂದರೆ ಈ ಭೌತಿಕ ಜೀವನದ ಬಂಧನದ ಸ್ವಾತಂತ್ರ್ಯ ಮತ್ತು ನೇರವಾಗಿ ವೈಕುಂಠಕ್ಕೆ ಹೋಗುವುದು ಎಂದರ್ಥ.
ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.
To watch videos on #Hinduism #Sanskrit language, SUBSCRIBE to my YouTube channel from this below link:
#BhagavanBhakthi YouTube channel
“ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:
ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ
ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.
ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.
ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.
ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್ ಮಾಡಿಕೊಳ್ಳಿ.
ಏಕೆಂದರೆ “ಶೇರ್ ಮಾಡುವುದೆಂದರೆ ಕೇರ್ ಮಾಡುವುದು ಎಂದರ್ಥ”.
#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.
ವಂದನೆಗಳು!
ಶ್ರೀ ಗುರುಭಯೋ ನಮಃ
ಶ್ರೀ ಕೃಷ್ಣಾಯ ನಮಃ
ಶ್ರೀಕೃಷ್ಣಾರ್ಪಣಮಸ್ತು
Share in Social Media
Thanks a lot.
Keep in touch. Shubhamastu!