ಸಂಸ್ಕೃತದಲ್ಲಿ ಸಂಬಂಧಗಳ (ಪರಿವಾರದವರ) ಹೆಸರು | Sanskrit relationship names in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣುವಿನ ಮತ್ತು ಶ್ರೀ ಶಿವನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ಬನ್ನಿ ಸ್ನೇಹಿತರೆ, ಇಂದು ನಾವು “ಸಂಸ್ಕೃತದಲ್ಲಿ ಸಂಬಂಧಗಳ (ಪರಿವಾರದವರ) ಹೆಸರು” – ಇದನ್ನು ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ಅರ್ಥಮಾಡಿಕೊಳ್ಳೋಣ!

ಸಂಸ್ಕೃತ ಭಾಷೆಯೆ ಅದ್ಭುತ. ಈ ಭಾಷೆಯೆಂತಹ ಭಾಷೆ ಇಡೀ ಜಗತ್ತಿನಲ್ಲಿ ಬೇರೊಂದಿಲ್ಲ. ಈ ಭಾಷೆಯನ್ನು ದೇವರ ಭಾಷೆ ಎಂದು ಕರೆಯುತ್ತಾರೆ. ಏಕೆಂದರೆ, ಸ್ವತಃ ಈ ಭಾಷೆಯನ್ನು ದೇವಲೋಕದಲ್ಲಿಯೂ ಸಹ ಮಾತನಾಡುತ್ತಾರೆ.

ಸ್ವಯಂ ವೈಕುಂಠದಲ್ಲಿ, ಸತ್ಯಲೋಕದಲ್ಲಿ, ಸ್ವರ್ಗದಲ್ಲಿ ಮತ್ತಿತ್ತರೆ ಲೋಕಗಳಲ್ಲೂ ಸಹ ಈ ಶ್ರೇಷ್ಠ ಭಾಷೆಯನ್ನು ಪ್ರಯೋಗಿಸುತ್ತಾರೆ.

ನಮ್ಮ ಸಂಸ್ಕೃತ ಭಾಷೆಯೇ ಅನನ್ಯ ಮತ್ತು ಅತ್ಯದ್ಭುತ ಭಾಷೆ.

ಬನ್ನಿ ನಾವು ಸಂಸ್ಕೃತದಲ್ಲಿ ಸಂಬಂಧಗಳ ಹೆಸರುಗಳೇನು ಎಂದು ತಿಳಿದುಕೊಳ್ಳೋಣ.

ಸಂಸ್ಕೃತದಲ್ಲಿ ಸಂಬಂಧಗಳ (ಪರಿವಾರದವರ) ಹೆಸರುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:

ಸಂಬಂಧ (ಕನ್ನಡದಲ್ಲಿ) – ಸಂಬಂಧ (ಸಂಸ್ಕೃತದಲ್ಲಿ) (ಕನ್ನಡ ಲಿಪಿ)

ತಂದೆಪಿತಾ / ಪಿತರಂ (ವಸು) / ಜನಕ / ಪಿತೃ / ತಾತ / ಪಿತೃಕ / ಜನ್ಮದ / ದೇಹಕರ / ವಲಿಪ / ದೇಹಕೃತ್ / ಶರೀರಕರ್ತೃ / ಕ್ಷಾನ್ತು / ವಪ್ತೃ

ತಾಯಿಮಾತ, ಮಾತರಂ (ವಸು) / ಜನನೀ / ಅಂಬಾ / ಜನಯಿತ್ರೀ / ಮಾತೃ / ಮಾತೃಕಿ / ಜನ್ಮದಿ / ದೇಹಕರಿ / ವಲಿಪಿ

ತಾತ (ತಂದೆಯ ತಂದೆ)ಪಿತಾಮಹಂ (ರುದ್ರ) / ಪಿತಾಮಹ / ಅಶೃಮುಖ / ಆರ್ಯಕ / ಆರ್ಯಿಕ / ಪಿತಾಮ

ಅಜ್ಜಿ (ತಂದೆಯ ತಾಯಿ)ಪಿತಾಮಹಿಂ (ರುದ್ರ) / ಪಿತಾಮಹೀ / ಮಾತೃಕ

ತಾಯಿಯ ತಂದೆಮಾತಾಮಹಂ / ಮಾತಾಮಹ

ತಾಯಿಯ ತಾಯಿಮಾತಾಮಹೀಂ / ಮಾತಾಮಹಿ

ಮುತ್ತಾತ (ತಂದೆಯ ತಾತ) – ಪ್ರಪಿತಾಮಹಂ / ಪ್ರಪಿತಾಮಹ / ವೃದ್ಧಪ್ರಧಾನ / ವೃದ್ಧಪ್ರಪಿತಾಮಹ

ಮುತ್ತಜಿ (ತಂದೆಯ ತಾಯಿ) – ಪ್ರಪಿತಾಮಹೀ / ಪ್ರಪಿತಾಮಹೀಂ / ವೃದ್ಧಪ್ರಧಾನಿ / ವೃದ್ಧಪ್ರಪಿತಾಮಹೀಂ

ಮುತ್ತಾತ (ತಾಯಿಯ ತಾತ) – ಪ್ರಮಾತಾಮಹಂ / ಪ್ರಮಾತಾಮಹ / ವೃದ್ಧಪ್ರಧಾನ / ವೃದ್ಧಪ್ರಮಾತಾಮಹ

ಮುತ್ತಜಿ (ತಾಯಿಯ ತಾಯಿಯ ಅಮ್ಮ) – ಪ್ರಮಾತಾಮಹೀ / ಪ್ರಮಾತಾಮಹೀಂ / ವೃದ್ಧಪ್ರಧಾನಿ / ವೃದ್ಧಪ್ರಮಾತಾಮಹೀಂ

ಗಂಡ – ಪತಿ / ಆರ್ಯಪುತ್ರ / ಭರ್ತಾ / ಕಾಂತ / ಕಮಿತೃ / ಆರ್ಯಸುತ / ಭರ್ತೃಕ / ನಾಯಕ / ವಲ್ಲಭ / ರತಗುರು /

ಇಷ್ಟ / ಧನಿಕ / ಕ್ಷೇತ್ರಿನ್‌ / ರುಚ್ಯ / ಭೋಕ್ತೃ / ರಮಣ / ಈಶ / ಧರ್ಮಕೀಲ / ಬಂಧು / ಕಾರ / ಈಶ್ವರ

ಹೆಂಡತಿ – ಪತ್ನಿ / ಆರ್ಯಪುತ್ರಿ / ನಾಯಕಿ / ವಲ್ಲಭಿ / ಪಲೀ / ಜಾಯಾ / ಭಾರ್ಯಾ / ಲಕ್ಷ್ಮಿ / ನಾರೀಕ / ಊಢಾ / ರಮಣಿ / ಈಶ್ವರಿ / ಕಾರಕಿ / ಧರ್ಮಕೀಲಿ

ಮಗ – ಪುತ್ರ / ದಾರಕ / ತನಯ / ಕುಮಾರ / ತಾತಿ

ಮಗಳು – ಪುತ್ರಿ / ದುಹಿತೃ / ಕನ್ಯಕಾ / ಸಮರ್ಧುಕಾ / ಜಾ / ಕುಮಾರಿ / ಸ್ವಜಾ / ಧೀತಾ / ಅಜ್ಞಜಾ

ಅಳಿಯ – ಜಾಮಾತಾ / ಜಾಮಾತೃ / ಯಾಮಾತೃ / ವಿಜಾಮಾತೃ / ವಿಟ್ಪತಿ / ಸುತಾಪತಿ / ವಿವಾಹ್ಯ / ಕನ್ಯಾಪತಿ / ಕನ್ಯಾಭತೃ / ಕನ್ಯಾವೇದಿನ್‌ / ಜನ್ಯ

ಸೊಸೆ – ಪುತ್ರವಧು / ವಿಧುಟೀ / ಜನೀ / ಜನಿಕಾ / ಜಾಮೀ

ಮೊಮ್ಮಗ (ಮಗನ ಮಗ) – ಪೌತ್ರ / ಪುತ್ರಪುತ್ರ / ನಪ್ತೃ / ಸುತಸುತ / ನಪಾತ್‌

ಮೊಮ್ಮಗ (ಮಗಳ ಮಗ) – ಪೌತ್ರ / ದೌಹಿತ್ರ / ಪುತ್ರಿಪುತ್ರ / ನಪ್ತೃ / ಪುತ್ರಿಸುತ / ನಪಾತ್‌

ಮೊಮ್ಮಗಳು (ಮಗನ ಮಗಳು) – ಪೌತ್ರಿ / ನಪಾತೀ / ನಪಾತ್‌ / ಪುತ್ರಪುತ್ರಿ / ಸುತಾತ್ಮಜಾ

ಮೊಮ್ಮಗಳು (ಮಗಳ ಮಗಳು) – ದೌಹಿತ್ರೀ / ನಪಾತೀ / ನಪಾತ್‌ / ಪುತ್ರಿಪುತ್ರಿ / ಪುತ್ರಿಆತ್ಮಜಾ

ಸಹೋದರ – ಭ್ರಾತೃ / ಸಹೋದರ / ಭ್ರಾತೃಕ / ಜಾಮಿ / ಕೇಶಟ / ಬಾಂದವ / ಬಂಧು / ದಾಯಬಂಧು /

ಕನಿಷ್ಠ (ತಮ್ಮ) / ಅನುಜ (ತಮ್ಮ) / ಜ್ಯೇಷ್ಠ (ದೊಡ್ಡಣ್ಣ) / ಪಿತೃವ್ಯ (ತಂದೆಯ ಸಹೋದರ) /

ದೇವರ (ಗಂಡನ ತಮ್ಮ) / ಭಿನ್ನೋದರ (ಮಲ ಸಹೋದರ) / ಸಾಪತ್ನ್ಯ (ಮಲ ಸಹೋದರ) / ವೈಮಾತ್ರಕ (ಮಲ ಸಹೋದರ) / ಅನ್ಯಮಾತೃಜ (ಮಲ ಸಹೋದರ / ಬೇರೆಯ ತಾಯಿ) /

ಭ್ರಾತೃಭಾಂಡ (ಅವಳಿ ಸಹೋದರ) / ಅಗ್ರಿಮ (ದೊಡ್ಡಣ್ಣ) / ಅಗ್ರಜನ್ಮನ್‌ (ದೊಡ್ಡಣ್ಣ) / ಅರ್ಕ (ದೊಡ್ಡಣ್ಣ) / ಅಗ್ರಿಯ (ದೊಡ್ಡಣ್ಣ) / ಪಿತ್ರ‍್ಯ (ಎಲ್ಲರಿಗಿಂತ ದೊಡ್ಡಣ್ಣ) /

ವಾಕ್ಕೀರ (ಹೆಂಡತಿಯ ಸಹೋದರ) / ವಾರಕೀರ (ಹೆಂಡಿತಯ ಸಹೋದರ) / ವಾರ್ಗರ (ಹೆಂಡತಿಯ ಸಹೋದರ) /

ರಯಾಲ (ಹೆಂಡತಿಯ ಸಹೋದರ) / ಕುಂಭಿಲ (ಹೆಂಡತಿಯ ಸಹೋದರ) /

ಆತ್ಮನೀನ (ಹೆಂಡತಿಯ ಸಹೋದರ) / ಸ್ಯಾಲ (ಹಂಡಿತಿಯ ಸಹೋದರ) / ಆತ್ಮವೀರ (ಹಿಂಡತಿಯ ಸಹೋದರ) /

ಸನಾಭ (ಗರ್ಭಾಶಯದ ಸಹೋದರ) / ಯವೀಯಸ್‌ (ತಮ್ಮ) / ದಹರ (ತಮ್ಮ) /

ಲಘುಭ್ರಾತೃ (ತಮ್ಮ) / ಅನುಜನ್ಮನ್‌ (ತಮ್ಮ) / ಜಘನ್ಯಜ (ತಮ್ಮ) / ಅನುಜಾತ (ತಮ್ಮ) / ಸಯೋನಿ (ಗರ್ಭಾಶಯದ ಸಹೋದರ) / ಸೂನು (ತಮ್ಮ) / ಅವರಜ (ತಮ್ಮ) /

ಯವಿಷ್ಠ (ತಮ್ಮ) / ಕ್ಷುಲ್ಲತಾತಕ (ತಂದಯ ಸಹೋದರ) / ಪಿತೃಭ್ರಾತೃ (ತಂದೆಯ ಸಹೋದರ) / ಮಾತೃಕೇಸಟ (ತಾಯಿಯ ಸಹೋದರ) / ಮಾತುಲ (ತಾಯಿಯ ಸಹೋದರ) /

ಮಾತೃರ್ಭ್ರಾತೃ (ತಾಯಿಯ ಸಹೋದರ) / ಪಿತೃವ್ಯ (ತಂದೆಯ ಸಹೋದರ) / ದೇತೃ (ಗಂಡನ ಸಹೋದರ) / ನಾಗರ (ಗಂಡನ ಸಹೋದರ)

ಸಹೋದರಿ – ಭಗಿನೀ / ಸಹೋದರಿ / ಸೋದರ್ಯ / ಜಾಮಿ / ಯಾಮಿ / ಷ್ವಸಾ / ಸ್ವಸೃ / ಭಗ್ನೀ / ಪಿತೃಭಗಿನೀ (ತಂದೆಯ ಸಹೋದರಿ) / ಮಾತೃಭಗಿನೀ (ತಾಯಿಯ ಸಹೋದರಿ) /

ಅಗ್ರಜಾ (ದೊಡ್ಡಕ್ಕ) / ಜ್ಯೆಷ್ಠಾ (ದೊಡ್ಡಕ್ಕ) / ಅತ್ತಿಕಾ (ದೊಡ್ಡಕ್ಕ) / ಸ್ಯಾಲೀ (ಹಿಂಡತಿಯ ಸಹೋದರಿ) / ಅನುಜಾ (ತಂಗಿ) / ಪಿತೃಷ್ವೇಸಾ (ತಂದೆಯ ಸಹೋದರಿ) /

ಮಾತೃಷ್ವೇಸಾ (ತಾಯಿಯ ಸಹೋದರಿ) / ನನಾಂದಾ (ಗಂಡನ ಸಹೋದರಿ) / ವೈಮಾತ್ರೆಯೀ (ಮಲ ಸಹೋದರಿ) /

ಅರ್ತಿಕಾ (ದೊಡ್ಡಕ್ಕ) / ಅಗ್ರಜಾ (ದೊಡ್ಡಕ್ಕ) / ಪೂರ್ವಜಾ (ದೊಡ್ಡಕ್ಕ) / ಆಂತಿಕಾ (ದೊಡ್ಡಕ್ಕ) / ಅನುಜಾ (ತಂಗಿ)

ದೊಡ್ಡಪ್ಪ / ಚಿಕ್ಕಪ್ಪ / ಮಾವ ಇತ್ಯಾದಿ – ಮಾಮ (ತಾಯಿದ ಸಹೋದರ) / ಮಾಮಕ (ತಾಯಿದ ಸಹೋದರ) /

ಪಿತೃವ್ಯ (ತಂದೆಯ ಸಹೋದರ) / ಮಾಮಕೇಸರ (ತಾಯಿಯ ಸಹೋದರ) /

ಮಾತೃಕ (ತಾಯಿಯ ಸಹೋದರ) / ಮಾತುಲ (ತಾಯಿಯ ಸಹೋದರ) / ಮಾತುಲಕ (ತಾಯಿಯ ಸಹೋದರ) /

ತಾತಗು (ತಂದೆಯ ದೊಡ್ಡಣ್ಣ) / ರಿಕ್ಯಹಾರಿನ್‌ (ತಾಯಿದ ಸಹೋದರ) / ಪ್ರತಿತೃವ್ಯ (ತಂದೆಯ ತಂದೆಯ ಸಹೋದರ)

ದೊಡ್ಡಮ್ಮ / ಚಿಕ್ಕಮ್ಮ / ಅತ್ತೆ ಇತ್ಯಾದಿ – ಪಿತೃಭಗಿನೀ (ತಂದೆಯ ಸಹೋದರಿ) / ಪಿತೃವ್ಯ (ತಂದೆಯ ಸಹೋದರಿ) /

ಮಾತುಲಾನೀ (ತಾಯಿಯ ಸಹೋದರಿ) / ಮಾತೃಭಗಿನೀ (ತಾಯಿಯ ಸಹೋದರಿ) / ಪಿತೃಷ್ವೇಸಾ (ತಂದೆಯ ಸಹೋದರಿ)

ಸಹೋದರನ ಸಂಬಂಧ – ಖರಿತ (ಸಹೋದರನ ಮಗ) / ಭ್ರಾತೃಜ (ಸಹೋದರನ ಮಗ) / ಪ್ರಜಾವತೀ (ಸಹೋದರನ ಹೆಂಡತಿ) / ಭ್ರಾತೃಜಾ (ಸಹೋದರನ ಮಗಳು) /

ಜ್ಯೇಷ್ಠಭವಿಕಾ (ದೊಡ್ಡಣ್ಣನ ಹೆಂಡತಿ) / ಆತ್ಮಬಂಧು (ತಾಯಿಯ ಸಹೋದರನ ಮಗ) / ಪಿತೃವ್ಯಪುತ್ರ (ತಂದೆಯ ಸಹೋದರನ ಮಗ) /

ಭ್ರಾತೃವ್ಯ (ತಂದೆಯ ಸಹೋದರನ ಮಗ) / ಯಾತಾನನಾನ್ದೃ (ತಂದೆಯ ಸಹೋದರನ ಹೆಂಡತಿ)

ಸಹೋದರಿಯ ಸಂಬಂಧ – ಸ್ವಸ್ರೀಯ (ಸಹೋದರಿಯ ಮಗ) / ಭಾಗಿನೇಯಕ (ಸಹೋದರಿಯ ಮಗ) /

ಭಗಿನೀಸುತ (ಸಹೋದರಿಯ ಮಗ) / ಭಗಿನೀಯ (ಸಹೋದರಿಯ ಮಗ) /

ಕುತಪ (ಸಹೋದರಿಯ ಮಗ) / ಯಾಮೇಯ (ಸಹೋದರಿಯ ಮಗ) / ಜಾಮೇಯ (ಸಹೋದರಿಯ ಮಗ) /

ಭಗಿನೀಭರ್ತೃ (ಸಹೋದರಿಯ ಗಂಡ) / ಭಾಮ (ಸಹೋದರಿಯ ಗಂಡ) /

ಭಾಮಕ (ಸಹೋದರಿಯ ಗಂಡ) / ಆಬುತ್ತ (ಸಹೋದರಿಯ ಗಂಡ) / ಭಾವುಕ (ಸಹೋದರಿಯ ಗಂಡ) /

ಗ್ರಾಮಹಾಸಕ (ಸಹೋದರಿಯ ಗಂಡ) / ಭಗಿನೇಯೀ (ಸಹೋದರಿಯ ಮಗಳು) /

ಸ್ವಸ್ರೀಯಾ (ಸಹೊದರಿಯ ಮಗಳು) / ಕಷ್ಟಭಾಗಿನೇಯ (ಹೆಂಡಿತಯ ಸಹೋದರಿಯ ಮಗ) / ಪಿತೃಷ್ವಸ್ರೀಯ (ತಂದೆಯ ಸಹೋದರಿಯ ಮಗ) / ಆತ್ಮಬಂಧು (ತಾಯಿಯ ಸಹೋದರಿಯ ಮಗ) /

ಮಾತೃಷ್ವಸೇಯ (ತಾಯಿಯ ಸಹೋದರಿಯ ಮಗ) / ಪೈತೃಷ್ವಸೇಯ (ತಂದೆಯ ಸಹೋದರಿಯ ಮಗ) /

ಸ್ವಾಸ್ರೀಯ (ಸಹೋದರಿಯ ಮಗನ ಮಗ) / ನಾನಾನ್ದ್ರ (ಗಂಡನ ಸಹೋದರಿಯ ಮಗ) /

ಪೈತೃಷ್ವಸೇಯೀ (ತಂದೆಯ ಸಹೋದರಿಯ ಮಗಳು) / ಮಾತೃಷ್ವಸೇಯೀ (ತಾಯಿದ ಸಹೋದರಿಯ ಮಗಳು) / ಆತ್ಮಬಂಧು (ತಂದೆಯ ಸಹೋದರಿಯ ಮಗ)

ಸ್ನೇಹ ಸಂಬಂಧ – ಸಖೀ (ಸ್ನೇಹಿತೆ) / ಮಿತ್ರ (ಸ್ನೇಹಿತ) / ಸ್ನೇಹಿತ (ಸ್ನೇಹಿತ) / ಆತ್ಮೀಯಸ್ನೇಹಿತ (ಅತ್ಯಂತ ನಿಖರದ ಸ್ನೇಹಿತ) /

ಸವಯಸ್‌ (ಸ್ನೇಹಿತ) / ಆಪ್ತ (ಸ್ನೇಹಿತ) / ಸಂಸರ್ಗಿನ್‌ (ಸ್ನೇಹಿತ) / ಉತ್ತರಸಾಧಕ (ಸ್ನೇಹಿತ) / ಸುಹಾರ್ದ್‌ (ಸ್ನೇಹಿತ) /

ವಲ್ಲಭ (ಸ್ನೇಹಿತ) / ಸುರಭಿ (ಸ್ನೇಹಿತೆ) / ವನುಸ್‌ (ಸ್ನೇಹಿತ) / ಸಹಚಾರಿಣೀ (ಸ್ನೇಹಿತೆ) / ಅದ್ವೇಷ್ಟೃ (ಸ್ನೇಹಿತ) / ವಿಹತಿ (ಸ್ನೇಹಿತ) /

ಪರಸ್ಪರಜ್ಞ (ಸ್ನೇಹಿತ) / ಪ್ರಿಯ (ಸ್ನೇಹಿತ) / ಭರಣ್ಯು (ಸ್ನೇಹಿತ) / ಅನುಕಂಪ್ಯ (ಸ್ನೇಹಿತ) / ಲೋಕಬಂಧು (ಜಗತ್ತಿನ ಸ್ನೇಹಿತ) / ಅಭ್ಯಂತರಕ (ಆತ್ನೀಯ ಸ್ನೇಹಿತ) /

ಹಿತಮಿತ್ರ (ಪರೋಪಕಾರಿ ಸ್ನೇಹಿತ) / ಅಧಿಮಿತ‍್ರ (ಸಾಂದರ್ಭಿಕ ಸ್ನೇಹಿತ) / ಪ‍್ರಿಯಸಖ (ಬಾಯ್‌ ಫ್ರೆಂಡ್‌) / ಪ್ರಿಯಸಖೀ (ಗರ್ಲ್‌ ಫ್ರೆಂಡ್‌)

ಗುರುಗಳ ಸಂಬಂಧ – ಗುರು (ಗುರುಗಳು) / ಗುರುಪುತ್ರ (ಗುರುಗಳ ಮಗ) / ಗುರುಪತ್ನಿ (ಗುರುಗಳ ಹೆಂಡತಿ) / ಗುರುಪುತ್ರಿ (ಗುರುಗಳ ಮಗಳು) /

ಆಚಾರ್ಯಜಾಯಾ (ಗುರುಗಳ ಹೆಂಡತಿ) / ಗುರುಯೋಷಿತ್‌ (ಗುರುಗಳ ಹೆಂಡತಿ) / ಮಹಾಮಾತ್ರೀ (ಮಹಾ ಗುರುಗಳ ಹೆಂಡತಿ)

ಈ ಪೋಸ್ಟ್‌ನಲ್ಲಿ ಇನ್ನೂ ಹಚ್ಚಿನ ಮಾಹಿತಿಯನ್ನು ನಿಯಮಿತವಾಗಿ ಸೇರಿಸಲಾಗುವುದು. ದಯವಿಟ್ಟು ಸ್ವಲ್ಪ ಸಮಯದ ನಂತರ ಪುನಃ ಭೇಟಿ ನೀಡಿ.

ಸಂಸ್ಕೃತ ಮತ್ತು ಹಿಂದೂ ಧರ್ಮದ ಬಗ್ಗೆ ಇನ್ನು ಹೆಚ್ಚಿಗೆ ತಿಳಿದುಕೊಳ್ಳಲು, ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

ಸಂಸ್ಕೃತ ಮತ್ತು ಹಿಂದೂ ಧರ್ಮದ ಬಗ್ಗೆ ಮಾಹಿತಿ

To watch videos on #Hinduism #Sanskrit language, SUBSCRIBE to my YouTube channel from this below link:

#BhagavanBhakthi YouTube channel

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ 

ಶ್ರೀ ರಾಘವೇಂದ್ರ ಸ್ವಾಮಿ ಗುರುಭ್ಯೋ ನಮಃ

ಶ್ರೀ ಕೃಷ್ಣಾಯ ನಮಃ

ಶ್ರೀ ಕೃಷ್ಣಾರ್ಪಣಮಸ್ತು

Subscribe / Follow us
Share in Social Media

2 Comments

  • Raveendrachri .s

    ನಮಸ್ಕಾರ ನಿಮ್ಮಶ್ರಮಕ್ಕೆ ನನ್ನ.ಪ್ರಣಾಮ ಸಲ್ಲಿಸಿ ದ್ದೇನೆ

Leave a Reply

Your email address will not be published. Required fields are marked *