ಗೋವು (ಹಸು) ಪ್ರದಕ್ಷಿಣೆಯ ಮಹಿಮೆ | ಹಸುವಿಗೆ ಪ್ರದಕ್ಷಿಣೆ ಏಕೆ ಮಾಡಬೇಕು | Why should we do Pradakshine of Cow (Kannada) | Gau (Cow / Hasu) Pradakshine mahime (unknown facts) in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ಗೋವು (ಹಸು) ಪ್ರದಕ್ಷಿಣೆಯ ಮಹಿಮೆ | ಹಸುವಿಗೆ ಪ್ರದಕ್ಷಿಣೆ ಏಕೆ ಮಾಡಬೇಕು | Why should we do Pradakshine of Cow (Kannada) | Gau (Cow / hasu) Pradakshine mahime (unknown facts) in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.

ನಮ್ಮ ಹಿಂದೂ ಧರ್ಮದಲ್ಲಿ ಗೋ ಮಾತೆಗೆ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ. ಗೋ ಮಾತೆಯ (ಹಸುವಿನ) ಹಾಲಿನಿಂದ ನಮಗೆ ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆ, ಗಿಣ್ಣು, ಕೆನೆ, ಐಸ್ ಕ್ರೀಮ್ ಮತ್ತು ವಿವಿಧ ಉತ್ಪನ್ನಗಳು ದೊರಕುತ್ತದೆ.

ಆಧುನಿಕ ಕೈಗಾರಿಕಾ ಪ್ರಕ್ರಿಯೆಗಳು ಹಾಲನ್ನು ಕೆಸೀನ್, ಹಾಲೊಡಕು ಪ್ರೋಟೀನ್, ಲ್ಯಾಕ್‌ಟೋಸ್, ಮಂದಗೊಳಿಸಿದ ಹಾಲು, ಪುಡಿಮಾಡಿದ ಹಾಲು ಮತ್ತು ಇತರ ಅನೇಕ ಆಹಾರ-ಸೇರ್ಪಡೆಗಳು ಮತ್ತು ಕೈಗಾರಿಕಾ ಉತ್ಪನ್ನಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ.

ಇಂದು ನಾವು ವರಾಹಪುರಾಣದಿಂದ ಒಂದು ಶ್ಲೋಕವನ್ನು ತೆಗೆದುಕೊಳ್ಳುವುದರ ಮೂಲಕ, ಗೋ ಪ್ರದಕ್ಷಿಣೆ ಮಾಡಿದರೆ ಏನು ಲಾಭ ಎಂದು ತಿಳಿಯೋಣ.

ಶ್ರೀ ವರಾಹ ಸ್ವಾಮಿ ಅಥವಾ ಶ್ರೀ ಭೂವರಾಹ (ವರಹ) ದೇವರು ಭಗವಂತ ಶ್ರೀಮಾನ್‌ ನಾರಾಯಣನ ಒಂದು ಅವತಾರ.

ಶ್ರೀ ವರಾಹ ಸ್ವಾಮಿಗೂ (ಶ್ರೀ ಭೂವರಾಹ ಸ್ವಾಮಿ) ಮತ್ತೆ ಶ್ರೀಮಾನ್‌ ನಾರಾಯಣನಿಗೆ ಯಾವುದೇ ಅಂತರವಿಲ್ಲ. ಇಬ್ಬರೂ ಒಬ್ಬರೇ, ಆದರೆ, ಬೇರೆ ಬೇರೆಯ ಅವತಾರಗಳು.

ಬನ್ನಿ ಗೆಳಯರೆ, ನಾವು ಈಗ ಶ್ರೀವರಾಹ ಪುರಾಣದಿಂದ ಗೋ ಮಾತೆಗೆ ಪ್ರದಕ್ಷಿಣೆ ಮಾಡಿದರೆ ಏನು ಲಾಭ ಎಂದು ತಿಳಿಯೋಣ.

ಶ್ರೀ ವರಾಹ ಪುರಾಣದಲ್ಲಿ, ಶ್ರೀವರಾಹದೇವರು ಭೂದೇವಿಗೆ ಹೇಳಿದ ಗೋಪ್ರದಕ್ಷಿಣೆಯ ಮಹಿಮೆಯ ಶ್ಲೋಕವನ್ನು ಕೆಳಗಡೆ ನೀಡಲಾಗಿದೆ:

ಕಲ್ಯಮುತ್ಥಾಯ ಯೋ ಮರ್ತ್ಯಃ ಕುರ್ಯಾತ್‌ ತಾಸಾಂ ಪ್ರದಕ್ಷಿಣಮ್‌ |
ಪ್ರದಕ್ಷಿಣೀಕೃತಾ ತೇನ ಪೃಥಿವೀ ಸ್ಯಾದ್‌ ವಸುಂದರೇ ||

कल्यमुत्थाय यो मर्त्यः कुर्यात् तासां प्रदक्षिणम् |
प्रदक्षिणीकृता तेन पृथिवी स्याद् वसुंदरे ||

kalyamut’thāya yō martyaḥ kuryāt‌ tāsāṁ pradakṣiṇam‌ |
pradakṣiṇīkr̥tā tēna pr̥thivī syād‌ vasundarē ||

ಮೇಲಿನ ಶ್ಲೋಕದ ಅರ್ಥ: ಬೆಳಿಗ್ಗೆಯೇ ಎದ್ದು ಗೋವಿಗೆ ಪ್ರದಕ್ಷಿಣೆ ಮಾಡಿ, ನಮಸ್ಕಾರ ಮಾಡಿದರೆ, ಇಡಿಯ ಭೂಮಿಗೆ ಪ್ರದಕ್ಷಿಣೆ ಮಾಡಿದ ಫಲ ದೊರೆಯುತ್ತದೆ.

ಪ್ರದಕ್ಷಿಣೇನ ಚೈಕೇನ ಶ್ರದ್ಧಾಯುಕ್ತೇನ ತತ್‌-ಕ್ಷಣಾತ್‌ | ದಶಜನ್ಮಕೃತಂ ಪಾಪಂ ತಸ್ಯ ನಶ್ಯತ್ಯಸಂಶಯಮ್‌ ||

प्रदक्षिणेन चैकेन श्रद्धायुक्तेन तत्-क्षणात् | देशजन्मकृतं पापं तस्य नश्यत्यसंशयम् ||

pradakṣiṇēna caikēna śrad’dhāyuktēna tat‌-kṣaṇāt‌ | daśajanmakr̥taṁ pāpaṁ tasya naśyatyasanśayam‌ ||

ಮೇಲಿನ ಶ್ಲೋಕದ ಅರ್ಥ: ಮನಸ್ಸನ್ನು ಎಲ್ಲೆಲ್ಲೋ ಹೋಗುವಂತೆ ಮಾಡಿ ಅಥವಾ ಕಾಟಾಚಾರಕ್ಕೆ ನಮಸ್ಕಾರ ಮಾಡುವುದಲ್ಲವೇ ಅಲ್ಲ.

ಭಕ್ತಿ ಪೂರ್ವಕವಾಗಿ ಮತ್ತು ಶ್ರದ್ಧೆಯಿಂದ, ಗೋವಿನಲ್ಲಿರುವ ಎಲ್ಲಾ ದೇವತೆಗಳ ಚಿಂತನೆ ಮಾಡುತ್ತ ಪ್ರದಕ್ಷಿಣೆ ಮತ್ತು ನಮಸ್ಕಾರ ಮಾಡಿದರೆ, ಹತ್ತು ಜನ್ಮಗಳಲ್ಲಿ ಮಾಡಿದ ಪಾಪ ಆ ಒಂದು ಪ್ರದಕ್ಷಿಣೆ ಮತ್ತು ನಮಸ್ಕಾರದಿಂದ ನಾಶವಾಗುತ್ತದೆ, ಇದರ ಬಗ್ಗೆ ಸಂಶಯವಿಲ್ಲ ಎಂದು ಭಗವಂತ ಶ್ರೀವರಾಹ ದೇವರು ತನ್ನ ಪತ್ನಿಯಾದ ಶ್ರೀಭೂದೇವಿಗೆ ಶ್ರೀವರಾಹ ಪುರಾಣದಲ್ಲಿ ಹೇಳುತ್ತಿದ್ದಾರೆ.

ಅನಂತ ಜೀವರಾಶಿಗಳ ಕರ್ಮಕ್ಕೆ ಫಲವನ್ನು ನೀಡುವ ಶ್ರೀಮನ್‌ ನಾರಾಯಣನೇ (ಶ್ರೀವರಾಹ / ಶ್ರೀಭೂವರಾಹ ಸ್ವಾಮಿ) ಸಾಕ್ಷಾತ್ತಾಗಿ ಹೇಳಿದ ಮಾತಿದು.

ಹಿಂದೂ ಧರ್ಮದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಿಂದೂ ಧರ್ಮದ ಮಾಹಿತಿಗಳು ಕನ್ನಡದಲ್ಲಿ

“ಘಾಟಿ ಸುಬ್ರಹ್ಮಣ್ಯದ ಮಹಾತ್ಮೆ” ಯನ್ನು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ: ಘಾಟಿ ಸುಬ್ರಹ್ಮಣ್ಯದ ಮಹಾತ್ಮೆ

To know about “Sri Raghavendra Swamy salient features, basics”, visit this link: Sri Raghavendra Swamy salient features, basics

To get more knowledge about Ekadashi and fasting, visit this link: What is Ekadashi fasting meaning and importance

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಶ್ರೀ ರಾಘವೇಂದ್ರಾಯ ನಮಃ

ಶ್ರೀ ಕೃಷ್ಣಾರ್ಪನಮಸ್ತು

Subscribe / Follow us
Share in Social Media

Leave a Reply

Your email address will not be published. Required fields are marked *