ವಿಷ್ಣು ಸಹಸ್ರನಾಮ (1000 ಹೆಸರುಗಳು) ಅರ್ಥದೊಂದಿಗೆ (ಅರ್ಥಸಹಿತ, ಪಠಣ, ಸ್ತೋತ್ರ) | Vishnu Sahasranama with meaning in Kannada
ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.
ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!
ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.
#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.
“ವಿಷ್ಣು ಸಹಸ್ರನಾಮ (1000 ಹೆಸರುಗಳು) ಅರ್ಥದೊಂದಿಗೆ (ಅರ್ಥಸಹಿತ, ಪಠಣ, ಸ್ತೋತ್ರ) | Vishnu Sahasranama with meaning in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.
‘ವಿಷ್ಣು ಸಹಸ್ರನಾಮ’ ಎಂದರೆ ಭಗವಂತ ವಿಷ್ಣುವಿನ 1000 ಹೆಸರುಗಳು ಎಂದರ್ಥ. ಆದರೆ ಭಗವಂತ ವಿಷ್ಣುವಿಗೆ ಕೇವಲ 1000 ಹೆಸರುಗಳಿವೆ ಎಂದು ಇದರ ಅರ್ಥವಲ್ಲ. “ಈ ಭೂಮಿಯ ಮೇಲಿನ ಮಣ್ಣಿನ ಕಣಗಳ ಸಂಖ್ಯೆಯನ್ನು ನಾವು ಸುಲಭವಾಗಿ ಎಣಿಸಬಹುದು.
ಆದರೆ ಭಗವಮತ ವಿಷ್ಣುವಿನ ಹೆಸರುಗಳ ಸಂಖ್ಯೆಯನ್ನು ಎಣಿಸುವುದು ಕಷ್ಟ” ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಇದು ಭಗವಂತ ವಿಷ್ಣುವಿನ ಶ್ರೇಷ್ಠತೆ. ಇದನ್ನು ಯಾರು ಮತ್ತು ಯಾವಾಗ ಬರೆದಿರುವುದು? ಹೌದು, ಇದನ್ನು ಮಹಾಭಾರತದ ಮಹಾಗ್ರಂಥದಲ್ಲಿ ಶ್ರೀ ವೇದ ವ್ಯಾಸರು ಬರೆದಿದ್ದಾರೆ.
ಇದನ್ನು ಮಹಾನ್ ಮನುಷ್ಯೋತ್ತಮರಾಗಿರುವ ಭೀಷ್ಮರು ಪುನಃ ಹೇಳಿದ್ದಾರೆ. ಭೀಷ್ಮ ಏಕಾದಶಿಯ ದಿನದಂದು, ಅಂದರೆ, ಭಗವಂತ ಶ್ರೀ ಕೃಷ್ಣನ ಸೂಚನೆಯ ಮೇರೆಗೆ ಮಾಘ ಮಾಸಾ (ತಿಂಗಳು) ಶುಕ್ಲ ಪಕ್ಷದ ಏಕಾದಶಿಯಂದು, ಮಹಾಭಾರತದಲ್ಲಿ ಮಹಾಭಾರತದ ಯುದ್ಧದ ನಂತರ ‘ಶರಶಯ್ಯದ’ (ಬಾಣಗಳ ಹಾಸಿಗೆ) ಮೇಲೆ ಮಲಗಿದ್ದ ಭೀಷ್ಮರು ಈ ದಿನ ಶ್ರೀ ವಿಷ್ಣು ಸಹಸ್ರನಮ ಸ್ತೋತ್ರವನ್ನು ಪಾಂಡವರಿಗೆ ಬಹಿರಂಗಪಡಿಸಿದರು.
ಭಗವಂತ ಶ್ರೀ ಕೃಷ್ಣನ ದೈವಿಕ ಪ್ರಸ್ತುತಿಯಲ್ಲಿ ಇದನ್ನು ಹೇಳಲಾಯಿತು.
ವಿಷ್ಣು ಸಹಸ್ರನಾಮ (1000 ಹೆಸರುಗಳು) ಅರ್ಥದೊಂದಿಗೆ (ಅರ್ಥಸಹಿತ, ಪಠಣ, ಸ್ತೋತ್ರ) ಕೆಳಗೆ ನೀಡಲಾಗಿದೆ:
ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || ೧ ||
ವಿಶ್ವಂ : ವಿಷ್ಣು ಸಹಸ್ರನಾಮ ಸರ್ವ ವೇದಗಳ ಸಾರ. ಇಲ್ಲಿ ‘ವಿ ‘ ಎಂದರೆ ಪಕ್ಷಿ ಅನ್ನುವ ಅರ್ಥವನ್ನೂ, ಶ್ವ ಎಂದರೆ ಚಲಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ . ಆದ್ದರಿಂದ ವೇದಗಳ ಅಭಿಮಾನಿ ದೇವತೆಯಾದ ಗರುಡನನ್ನು ತನ್ನ ವಾಹನವಾಗಿರಿಸಿಕೊಂಡಿರುವ ಭಗವಂತ ವಿಶ್ವ.
ವಿಷ್ಣು : ಸಾಮಾನ್ಯವಾಗಿ ವಿಷ್ಣು ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂದಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ ಅದರ ಸಂಸ್ಕ್ರತ ಪದ ವಿಷ್ಣು !! ವಿಷ್ಣು ಅಂದರೆ ಸರ್ವಶಬ್ದ ವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ.
ವಷಟ್ಕಾರ : ಭಗವಂತನನ್ನು ವಷಟ್ಕಾರ ಎಂದು ಕರೆಯುತ್ತಾರೆ ಎನ್ನುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ ವೈದಿಕ ಸಂಪ್ರದಾಯವಿರುವ ಪ್ರತಿಯೊಂದು ಮನೆಗಳಲ್ಲಿ ಅಗ್ನಿಹೋತ್ರ ಮಾಡುವುದು ನಿತ್ಯ ಕರ್ಮವಾಗಿತ್ತು. ಅಗ್ನಿಹೋತ್ರದಲ್ಲಿ ಭಗವಂತನಿಗೆ ಐದು ಮಂತ್ರಗಳಿಂದ (ಯಜ್ಞ ನಾಮಕ, ಯಜ್ಞ ಪುರುಷ, ಯಜ್ಞೇಶ್ವರ, ಯಜ್ಞ ಭಾವನ, ಯಜ್ಞ ಭೋಕ್ತ) ಆಹುತಿಯನ್ನು ಕೊಡುತ್ತಿದ್ದರು.
ಭೂತಭವ್ಯಭವತ್ಪ್ರಭುಃ : ಭಗವಂತ ಎಲ್ಲಾ ಕಾಲದಲ್ಲೂ ಈ ಲೋಕವನ್ನು ರಕ್ಷಿಸುತ್ತಿರುತ್ತಾನೆ. ಹಿಂದೆ ಅನಂತವಾಗಿ ಇದ್ದದ್ದು (ಭೂತಕಾಲದಲ್ಲಿ) ಮುಂದೆ ಬರುವ ಅನಂತ ಭವಿಷ್ಯತ್ ಕಾಲ ಹಾಗು ವರ್ತಮಾನ ಕಾಲದಲ್ಲಿ ಈ ಲೋಕವನ್ನು ರಕ್ಷಿಸುವವನು.
ಭೂತಕೃತ್ : ಸಂಸ್ಕೃತದಲ್ಲಿ ಕೃತ್ ಅನ್ನುವ ಪದಕ್ಕೆ ಎರಡು ಅರ್ಥವಿದೆ. ೧. ಸೃಷ್ಟಿ ೨. ಸoಹಾರ. ಅದೇ ರೀತಿ ಭೂತಗಳಲ್ಲಿ ಎರಡು ವಿಧ. ೧. ಅಚೇತನ ಭೂತ ಅಂದರೆ ಪಂಚಭೂತಗಳು (ಮಣ್ಣು ,ಬೆಂಕಿ, ನೀರು, ಗಾಳಿ ಮತ್ತು ಆಕಾಶ). | ೨. ಚೇತನ ಭೂತ ಅಂದರೆ ಪಂಚಭೂತಗಳಿಂದ ಆದ ಜೀವಗಳು.
ಭೂತಭೃತ್ : ಸೃಷ್ಟಿ-ಸ್ಥಿತಿ-ಲಯದಲ್ಲಿ ಪಂಚಭೂತಗಳ ಧಾರಣೆ ಮಾಡಿದವ,ಪಂಚಭೂತಾತ್ಮಕವಾದ ಬ್ರಹ್ಮಾಂಡ ಧಾರಣೆ ಮಾಡಿದವ, ಪಂಚಭೂತಗಳಿಂದಾದ ಪಿಂಡಾ0ಡ ಧಾರಣೆ ಮಾಡಿದವ, ಪಿಂಡಾ0ಡದಲ್ಲಿರುವ ಜೀವವನ್ನು ಧಾರಣೆ ಮಾಡಿದವ ಮತ್ತು ಮುಕ್ತಿಯನ್ನು ಪಡೆದ ಜೀವವನ್ನು ಧಾರಣೆ ಮಾಡಿದವ.
ಭಾವಾಯ : ಸೃಷ್ಟಿ-ಸ್ಥಿತಿ-ಲಯ ಇದು ಭಗವಂತನ ಗುಣ. ಆತ ಸಚ್ಚಿದಾನ೦ದ. ಹುಟ್ಟು-ಸಾವು ನೈಸರ್ಗಿಕ ಕ್ರಿಯೆ.
ಸಾವು ಹುಟ್ಟಿನ ಮೂಲ, ಹುಟ್ಟು ಸಾವಿನ ಮೂಲ. ಭಗವಂತ ಎಂದೆಂದಿಗೂ ಶಾಶ್ವತವಾಗಿ ಇರುವವನು.
ಭಾವ ಅಂದರೆ ಸಚ್ಚಿದಾನ೦ದ ಸ್ವರೂಪ.
ಭೂತಾತ್ಮಾ : ಪಂಚಭೂತಗಳಲ್ಲಿ ವ್ಯಾಪಿಸಿದವ, ಬ್ರಹ್ಮಾಂಡದಲ್ಲಿ ವ್ಯಾಪಿಸಿದವ, ಪಿಂಡಾ0ಡದಲ್ಲಿ ತುಂಬಿರುವವ,ಎಲ್ಲಾ ಜೀವದಲ್ಲಿ ಅಂತರ್ಯಾಮಿ ಆಗಿ ತುಂಬಿರುವವ.ಭೂತಿಯನ್ನು( ಉನ್ನತಿ) ಹೊಂದಿದ ಜೀವಿಗಳಿಗೆ ಮುಕ್ತಿಯನ್ನು ಕರುಣಿಸುವವ ಭೂತಾತ್ಮಾ. | ಭೂತಭಾವನಃ : ಸೃಷ್ಟಿ-ಸ್ಥಿತಿ-ಸoಹಾರಗಳಿಗೆ ಕಾರಣವಾದವ ,ಜೀವಿಗಳಿಗೆ ಸುಖ-ದುಃಖ ಕೊಡುವವ ಭೂತಭಾವನಃ.
ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ |
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋಽಕ್ಷರ ಏವ ಚ || ೨ ||
ಪೂತಾತ್ಮಾ : ದ್ವೇಷಗಳ, ತ್ರಿಗುಣಗಳ ಸ್ಪರ್ಶವಿಲ್ಲದ ಪವಿತ್ರ ಸ್ವರೂಪನಾದ ಭಗವಂತ ಪೂತಾತ್ಮಾ. | ಪರಮಾತ್ಮಾ : ಆತ್ಮ- ಅಂದರೆ ->ದೇಹ ? ಅಲ್ಲ !!! ಭಾವನೆಗಳ ಗೂಡಾದ ಮನಸ್ಸು? ಅಲ್ಲ !! ಏಕೆಂದರೆ ಮನಸ್ಸಿನಿಂದ ಯೋಚಿಸುವುದರಿಂದ ಮನಸ್ಸನ್ನು ನಿಯಂತ್ರಿಸುವವ ಯಾರು ? ಅದೇ ಜೀವ -ಆತ್ಮ. ಆದರೆ ಈ ಜೀವವನ್ನು ನಿಯಂತ್ರಿಸುವ ಶಕ್ತಿ ಯಾರು ? ಆತನೇ -ಪರಮಾತ್ಮ (ಎಲ್ಲಾ ಆತ್ಮಗಳಿಗೂ ಪರಮವಾದ ಆತ್ಮ)
ಮುಕ್ತಾನಾಂ ಪರಮಾ ಗತಿಃ : ಚತುರ್ಮುಖನ ಆಯಸ್ಸು ನೂರು ಕಲ್ಪ.ಒಂದು ಕಲ್ಪ (काल्प / kālpa) ಅಂದರೆ 31 ಸಾವಿರದ 104 ಸಾವಿರ ಕೊಟಿ ವರ್ಷ .ಮಾನವನ ಸಾಧನೆ ಒಂದು ಕಲ್ಪ. ಮುಕ್ತಿ ಸ್ಥಿತಿಯಲ್ಲಿ ಮಾನವನ ಜೊತೆಗೆ ಚತುರ್ಮುಖ ಬ್ರಹ್ಮರು (ಮುಕ್ತಿಯಲ್ಲಿರುವ ಚತುರ್ಮುಖರು) ಮಾರ್ಗದರ್ಶಕನಾಗಿ ಇರುತ್ತಾರೆ.
ಅವ್ಯಯಃ (ಆಯ-ವ್ಯಯ) : ಎಲ್ಲಾ ವಸ್ತುವಿನ ಒಳಗಿದ್ದೂ(ಆಯ) ಏಕರೂಪನಾಗಿ ಇರುವವನು (ಆನೆ ಮತ್ತು ಇರುವೆ ಒಳಗೆ ಇರುವ ಭಗವಂತ ಒಬ್ಬನೇ ಬೇರೆ ಬೇರೆ ಅಲ್ಲ). ವ್ಯಯ ಅಂದರೆ ಕಮ್ಮಿ ಆಗುವುದು ,ಖರ್ಚು ,ನಾಶ ಇತ್ಯಾದಿ…… ಯಾವುದು, ಯಾವ ಕಾಲದಲ್ಲೂ ಕಡಿಮೆ ಆಗದೆ, ನಾಶವಾಗದೆ, ಅನಾದಿ-ಅನಂತ ಕಾಲದಲ್ಲಿ, ಏಕರೂಪನಾಗಿ ಇರುವ ಶಾಶ್ವತ ತತ್ವ .
ಪುರುಷಃ : ಪುರು+ಷಃ ಇದು ತುಂಬಾ ಪ್ರಮುಖವಾದ ನಾಮ. ವೇದದ ಸಾರಭೂತವಾದ ಪುರುಷ-ಸೂಕ್ತದಲ್ಲಿ ಬರುವಂತಹ ಸೂಕ್ತಗಳ ಪ್ರತಿಫಲದ ರೂಪವೇ ಭಗವಂತನ ಪುರುಷ ನಾಮಕವಾದ ರೂಪ. ಪುರು ಅಂದರೆ ಎಲ್ಲಕ್ಕಿಂತ ದೊಡ್ಡದು ಅನಂತ.
ಸಾಕ್ಷೀ : -ಎಲ್ಲವನ್ನು ಕಣ್ಣಾರೆ ಕಾಣಬಲ್ಲವ. ಭಗವಂತನ ಮುಂದೆ ನಾವು ಮುಚ್ಚಿಕೊಳ್ಳುವುದು ಏನೂ ಇಲ್ಲ .ಭಗವಂತನ ಮುಂದೆ ನಾವೆಲ್ಲರೂ ಬತ್ತಲು, ಆತನ ಮುಂದೆ ಮುಚ್ಚಿಟ್ಟುಕೊಂಡು ಮಾಡುವ ಯಾವ ಕೆಲಸವೂ ಇಲ್ಲ. ಭಗವಂತನ ಮುಂದೆ ನಾವು ಬತ್ತಲಾಗದೆ ಭಗವಂತ ನಮಗೆ ಎಂದೂ ಬಿಚ್ಚಿಕೊಳ್ಳುವೂದಿಲ್ಲ.
ಕ್ಷೇತ್ರಜ್ಞ : ಅಂದರೆ ಕ್ಷೇತ್ರವನ್ನು ತಿಳಿದವನು. ಕ್ಷೇತ್ರ ಅಂದರೆ ನಾವು ವಾಸ ಮಾಡುವ ನೆಲೆ . ನಾವು ವಾಸ ಮಾಡುವುದು ಈ ಬ್ರಹ್ಮಾಂಡದಲ್ಲಿ(ಚತುರ್ಮುಖನ ಕ್ಷೇತ್ರ) ಮತ್ತು ಜೀವದ ನೆಲೆ ಶರೀರ (ನಮ್ಮ ಕ್ಷೇತ್ರ). ಕ್ಷೇತ್ರಜ್ಞ ಅಂದರೆ ,ಈ ಬ್ರಹ್ಮಾಂಡವನ್ನು ಮತ್ತು ಈ ಶರೀರವನ್ನು ,ಈ ಪ್ರಪಂಚದ ರಹಸ್ಯವನ್ನು ಸಂಪೂರ್ಣ ತಿಳಿದವನು.
ಅಕ್ಷರ : ಅಕ್ಷರ ಅಂದರೆ ನಾಶವಿಲ್ಲದ್ದು ಲಿಪಿ ಅಕ್ಷರ ಅಲ್ಲ. ಲಿಪಿ ಕೇವಲ ಅಕ್ಷರದ ಪ್ರತೀಕ. ಲಿಪಿ ನಾಶವಾಗಬಹುದು ಆದರೆ ಅಕ್ಷರಗಳಿಗೆ ನಾಶವಿಲ್ಲ. ನಮ್ಮಿಂದ ಹೊರಹೊಮ್ಮುವ ಎಲ್ಲಾ ನುಡಿ ಈ ಆಕಾಶದಲ್ಲಿ ಧ್ವನಿಮುದ್ರಿತ ಆಗಿ ಶಾಶ್ವತವಾಗಿ ಇರುತ್ತದೆ.
ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ|
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ || ೩ ||
ಯೋಗೋ : ಜೀವದ ಜೊತೆಗೆ ನಿರಂತರವಾಗಿ ಇರುವ ಆಪ್ತ ಬಂಧು. | ಯೋಗವಿದಾಂ ನೇತಾ : -ಸರ್ವ ವೇದ ಮಂತ್ರಗಳನ್ನು ಬಲ್ಲವನಿಗೆ ನಾಯಕ. ಅಂದರೆ ಬ್ರಹ್ಮಾದಿ ದೇವತೆಗಳ ನಾಯಕ. | ಪ್ರಧಾನಪುರುಷೇಶ್ವರಃ : ಪ್ರಧಾನ ಅಂದರೆ “ಶ್ರೀ ” ಅಂದರೆ ಲಕ್ಷ್ಮಿ=> ಲಕ್ಷ್ಮಿಗೂ ಈಶ್ವರ ,ಬ್ರಹ್ಮ ವಾಯುರಿಗೂ ಈಶ್ವರ.
ನಾರಸಿಂಹವಪುಃ : ೧. ನರ ಮತ್ತು ಸಿಂಹ ರೂಪದಲ್ಲಿ ಕಂಬದಿಂದ ಉದ್ಭವಿಸಿ ಹಿರಣ್ಯಕಶಿಪುವಿನ ಸಂಹಾರ ಮಾಡಿದ ಭಗವಂತನ ರೂಪ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ, ಆದರೆ ನಾರಸಿಂಹವಪುಃ ಅನ್ನುವುದಕ್ಕೆ ವಿಶಿಷ್ಟವಾದ ಇತರ ಅರ್ಥವಿದೆ. ನಾರ+ ಸಿಂಹ; ನಾರ ಅಂದರೆ->ನರರಲ್ಲಿ ತುಂಬಿರುವ ಅಜ್ಞಾನ. ಸಿಂಹ ಅಂದರೆ ->ಸಿಮ್ಮತಿ.
ಶ್ರೀಮಾನ್ : ಭಗವಂತ ಶ್ರೀಮಂತ ! ; ೧> ಇಡೀ ವಿಶ್ವದ ಒಡೆತನ ಇರುವವನು ಅದ್ದರಿಂದ ಆತ ಶ್ರೀಮಾನ್. – ಶ್ರೀಹಿ ಅಂದರೆ ವೇದ ವಾಙ್ಮಯ; ೨> ಶ್ರೀಮಾನ್ ಅಂದರೆ ಸಮಸ್ತ ವೇದದಿಂದ ಪ್ರತಿಪಾದ್ಯನಾದವನು. -ಶ್ರೀ ಅಂದರೆ “ಲಕ್ಷ್ಮಿ” – ೩> ಶ್ರೀಮಾನ್ ಅಂದರೆ ಲಕ್ಷ್ಮೀಪತಿಯದ ಭಗವಂತ.
ಕೇಶವ : ಅಂದರೆ ಅತ್ಯಂತ ಸುಂದರವಾದ ಕೂದಲು ಉಳ್ಳವನು ಎಂದರ್ಥ. ಇದು ಭಗವಂತನ ಕೃಷ್ಣಾವತಾರದಲ್ಲಿ ಬಂದ ಹೆಸರು. ಕೃಷ್ಣಾವತಾರದಲ್ಲಿ ಕೃಷ್ಣ ತನ್ನ ಸುಂದರವಾದ ಗುಂಗುರು ಕೂದಲಿನ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುತ್ತಿದ್ದ. ಗಂಡಸರು, ಹೆಂಗಸರು, ಗೋವುಗಳು ಎಲ್ಲರೂ ಕೃಷ್ಣನಿಂದ ಆಕರ್ಷಣೆಗೆ ಒಳಗಾಗುತ್ತಿದ್ದರು .
ಪುರುಷೋತ್ತಮಃ : ಪುರುಷೋತ್ತಮ ಎನ್ನುವ ನಾಮದ ಅರ್ಥವನ್ನು ಭಗವದ್ಗೀತೆಯಲ್ಲಿ ಕಾಣಬಹುದು. ಪುರುಷೋತ್ತಮ ಎನ್ನುವ ನಾಮವನ್ನು ಮೂರು-ನಾಲ್ಕು ಬಗೆಯಿಂದ ಪ್ರಯೋಗಿಸುತ್ತಾರೆ. ಉತ್ತಮ ಪುರುಷ ; ಮಹಾ ಪುರುಷ ; ಪರಮ ಪುರುಷ, ಪುರುಷೋತ್ತಮ -ಎಲ್ಲವೂ ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತವೆ.
ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || ೪ ||
ಸರ್ವಃ : ವಿಶ್ವಂ ಮತ್ತು ಸರ್ವ- ಸಮಾನಾರ್ಥಕವಾದ ನಾಮಗಳು. ಭಗವಂತ ಸರ್ವ ಅಂದರೆ -ಸರ್ವಸಮರ್ಥ ;ಸರ್ವಗತ ; ಸರ್ವಗುಣ ಪೂರ್ಣ. ಸರ್ವ ಅಂದರೆ ಎಲ್ಲವನ್ನು ತಿಳಿದವನು , ಎಲ್ಲೆಡೆ ತುಂಬಿರುವವನು ,ಎಲ್ಲಾ ಕಾಲದಲ್ಲೂ ಇರುವವನು , ಎಲ್ಲಕ್ಕೂ ಕಾರಣನಾದವನು, ಪರಿಪೂರ್ಣನಾದವನು.
ಶರ್ವಃ : ಶರ್ವ ಅಂದರೆ ಸಮಸ್ತ ಜಗತ್ತನ್ನು ಸಂಹಾರ ಮಾಡುವವನು (ಆದ್ದರಿಂದ ಸಂಹಾರ ಶಕ್ತಿ- ಶಿವನನ್ನೂ ಶರ್ವ ಎಂದು ಕರೆಯುತ್ತಾರೆ). ಶರ್ವ ಅಂದರೆ ದುರ್ಜನರಿಗೆ, ಪಾಪಿಗಳಿಗೆ ದುಃಖವನ್ನು ಕೊಡುವವನು! | ಶಿವಃ : ಶ ಅಂದರೆ ಸುಖ ; ಶಿವ ಅಂದರೆ ಜ್ಞಾನಾನಂದ ಸ್ವರೂಪ, ಪರಮಮಂಗಳ ಸ್ವರೂಪ.
ಸ್ಥಾಣು : ಸ್ಥಾಣು ಅಂದರೆ ಚಲಿಸದ. ಭಗವಂತ ಸರ್ವಗತ ಅದ್ದರಿಂದ ಆತ ಸ್ಥಾಣು. ಆತ ಚಲಿಸದೆ ಮಲಗಿದ್ದರೂ, ಎಲ್ಲಾ ಕಡೆ ತಲುಪಬಲ್ಲ. ಏಕೆಂದರೆ ಬಿಂಬ ರೂಪವಾಗಿ ಪ್ರತಿಯೊಂದರಲ್ಲೂ ಭಗವಂತ ಇದ್ದಾನೆ. ಆತ ಆಕಾಶಕ್ಕಿಂತ ದೊಡ್ಡವ , ಪರಮಾಣುಗಿಂತ ಚಿಕ್ಕವ! (it moves and it moves not!!! ಚಲಿಸಿದಂತೆ ಕಾಣುವ ಚಲಿಸದೆ ಇರುವ ಸ್ವರೂಪ).
ಭೂತಾದಿ (ಸ್ಥಾಣುರ್ಭೂತಾದಿ) : ಭೂತಾದಿ ಅಂದರೆ ಎಲ್ಲಾ ಭೂತಗಳ ಆದಿ. ಎಲ್ಲಾ ಜೀವಗಳ, ಎಲ್ಲಾ ಜಡಗಳ ಆದಿ.
ಎಲ್ಲಾ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ಆದಿ ಕಾರಣನಾದವ ಭೂತಾದಿ.
ನಿಧಿರವ್ಯಯ : ಸ್ಥಾಣುರ್ಭೂತಾದಿರ್ನಿಧಿರವ್ಯಯಃ (ನಿಧಿರವ್ಯಯ). ನಿಧಿ+ಅವ್ಯಯಃ -> ನಿಧಿರವ್ಯಯ. ನಿಧಿ ಅಂದರೆ ಕೊಪ್ಪರಿಗೆ (ಹೂತಿಟ್ಟ ಸಂಪತ್ತು), ಭಗವಂತನ ಅರಿವೇ ಅತೀ ದೊಡ್ಡ ಕರಗದ-ಅಳಿಯದ (ಅವ್ಯಯ) ಸಂಪತ್ತು. ನಿಗೂಢವಾದ ಹೃದಯ ಗುಹೆಯೊಳಗೆ ಅಡಗಿರುವ (ಹೃತ್ಕಮಲ ಮದ್ಯ ನಿವಾಸಿ). ಅಪೂರ್ವ, ಅಮೂಲ್ಯವಾದ ನಿಧಿ.
ಸಂಭವೋ : ಸಂಭವಃ ಅಂದರೆ ಭಕ್ತರು ಕರೆದಾಗ ತಾನೇ ತಾನಾಗಿ ಸಂಭವಿಸುವವನು (ಭೂಮಿಗೆ ಇಳಿದು ಬರುವವನು). ಜಗತ್ತಿನ ಸೃಷ್ಟಿಗೆ ಕಾರಣನಾದವನು ಹಾಗು ಜಗತ್ತಿನ ಪಾಲನೆಗೊಸ್ಕರ ತಾನೇ ತಾನಾಗಿ ಅವತರಿಸುವವನು.
ಸಮೀಚೀನಃ ಭವಃ – ಶ್ರೇಷ್ಟವಾದ ಉನ್ನತಿ-ಮುಕ್ತಿ ಯಾರಿಂದ ಸಿಗುತ್ತದೋ ಅವನು ಸಂಭವ.
ಭಾವನೋ : ಭಾವನ್-ನಯತೀತಿ- ಭಾವನಃ. ಒಬ್ಬೊಬ್ಬರೊಳಗಿದ್ದು ಅವರ ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಭಾವನಃ
ಭಾವಂ+ನಯತಿ-ಭಾವನಃ (ಆನಂದ);ಭಾವಂ+ಅಪನಯತಿ-ಭಾವನಃ(ದುಃಖ) – ನಮ್ಮ ಸುಖ-ದುಃಖಕ್ಕೆ ಕಾರಣನಾದವನು ಭಾವನಃ.
ಭರ್ತಾ : ಭರ್ತಾ ಅಂದರೆ ಎಲ್ಲವನ್ನೂ ಹೊತ್ತವನು. ಇಡೀ ವಿಶ್ವವನ್ನು ಧರಿಸಿದವನು. | ಪ್ರಭವಃ : ಪ್ರ – ಎಲ್ಲಕ್ಕಿಂತ ಪ್ರಕೃಷ್ಟನಾಗಿರುವ ಭಗವಂತ; ವಿ-ಎಲ್ಲಕ್ಕಿಂತ ವಿಶಿಷ್ಟನಾಗಿರುವ ಭಗವಂತ ; ಯಃ- ಜ್ಞಾನ ಸ್ವರೂಪನಾದ ಭಗವಂತ. ಯಾರು ಎಲ್ಲಕ್ಕಿಂತ ದೊಡ್ಡವನೂ, ಯಾರಿಂದ ಎಲ್ಲರೂ ಎತ್ತರಕ್ಕೆ ಏರಲು ಸಾಧ್ಯವೂ ಅವನು ಪ್ರಭವಃ .
ಪ್ರಭುರೀಶ್ವರಃ : ಭಗವಂತ ಎಲ್ಲರ ಪ್ರಭು. ಈಶರು-ಅಂದರೆ ನಮ್ಮ ದೇಹ ಹಾಗು ಪ್ರಪಂಚಕ್ಕೆ ಸಂಬದ್ದಪಟ್ಟ ಅಭಿಮಾನಿ ದೇವತೆಗಳು. ಉದಾಹರಣೆಗೆ: ಶನಿ-ಪೃಥ್ವಿಯ ಅಭಿಮಾನಿ ದೇವತೆ; ಬುಧ-ನೀರಿನ ಅಭಿಮಾನಿ ದೇವತೆ; ಗಣಪತಿ-ಆಕಾಶದ ಅಭಿಮಾನಿ ದೇವತೆ;
ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || ೫ ||
ಸ್ವಯಂಭೂಃ : ಸ್ವಯಂಭೂಃ ಅಂದರೆ ತಾನೇ ತಾನಾಗಿ ಪೂರ್ಣವಾಗಿರುವವನು, ತನ್ನಿಂದ ತಾನೆ ಆವಿರ್ಭೂಥನಾಗುವವನು.
ನಮ್ಮ ಪೂರ್ಣತೆ ಇನ್ನೊಬ್ಬರು ಕೊಟ್ಟರೆ ಮಾತ್ರ, ಆದರೆ ಭಗವಂತ ಸ್ವಯಂಪೂರ್ಣ.
ಶಂಭುಃ : ಶಂ-ಭವತಿ ->ಆನಂದ ರೂಪ,ಶಂ-ಭವತಿ ಅನೇನ ->ಆನಂದ ಕೊಡುವವನು. (ಶಂ-ಅಂದರೆ ಆನಂದ – ಉದಾಹರಣೆಗೆ : ಹರಿಃ ಓಮ್ ಶಂ ನೋ ಮಿತ್ರಃ ಶಂ ವರುಣಃ ಶಂ ನೋ ಭವತ್ವರ್ಯಮಾ ಶಂ ನ ಇಂದ್ರೋ ಬೃಹಸ್ಪತಿಃ ಶಂ ನೋ ವಿಷ್ಣುರುರುಕ್ರಮಃ).
ಆದಿತ್ಯಃ : ಆದಿತ್ಯ ಅಂದರೆ ಅದಿತಿಯ ಮಗ ಎಂಬುದು ಒಂದು ಅರ್ಥ. ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ ಹಾಗು ದೇವತೆಗಳ ತಾಯಿ. ಅದಿತಿಗೆ ಹನ್ನೆರಡು ಮಂದಿ ಮಕ್ಕಳು ಹಾಗು ಅವರನ್ನು ದ್ವಾದಶಾದಿತ್ಯರು ಎಂದು ಕರೆಯುತ್ತಾರೆ –
ವಿವಸ್ವಾನ್, ಆರ್ಯಮಾನ್, ಪೂಷನ್, ತ್ವಷ್ಟೃ, ಸವಿತೃ, ಭಗ, ಧಾತ, ವಿದಾತ, ವರುಣ, ಮಿತ್ರ, ಶಕ್ರ, ಉರುಕ್ರಮ.
ಇವರೇ ಆ ಹನ್ನೆರಡು ಮಂದಿ ಆದಿತ್ಯರು ಈ ಹನ್ನೆರಡು ದೇವತೆಗಳೇ ವರ್ಷದ ಹನ್ನೆರಡು ಮಾಸದ ದೇವತೆಗಳು. ಇವರಲ್ಲಿ ಒಬ್ಬ ಸೂರ್ಯ, ಒಬ್ಬ ವರುಣ, ಮತ್ತೊಬ್ಬ ಮಿತ್ರ, ಮತ್ತೊಬ್ಬ ಇಂದ್ರ, ಹಾಗೇ ಕೊನೇ ಮಗನೇ ವಿಷ್ಣು – ವಾಮನ ರೂಪಿ ಭಗವಂತ.
ಪುಷ್ಕರಾಕ್ಷೋ : ಪುಷ್ಕರ ಅಂದರೆ ಕಮಲ, ಅಕ್ಷ ಅಂದರೆ ಕಣ್ಣು. ಪುಷ್ಕರಾಕ್ಷ ಅಂದರೆ ನೀರನ್ನು ಹೀರುವ ಬಳ್ಳಿಯಲ್ಲಿ ಈಗಷ್ಟೇ ಅರಳಿದ ಕಮಲದಂತೆ ಅರಳುಗಣ್ಣು ಉಳ್ಳವನು. ‘ಅರಳುಗಣ್ಣು’ ಅಂದರೆ ಆನಂದಮಯ ವ್ಯಕ್ತಿತ್ವ ಎಂದರ್ಥ- ಭಗವಂತ ಅನಂದಮಯಪೂರ್ಣ.
ಮಹಾಸ್ವನಃ : ಮಹಾ ಅಂದರೆ ಮಹತ್ತಾದ. ಸ್ವನ ಅಂದರೆ ನಾದ. ಎಲ್ಲಕ್ಕಿಂತ ಮಹತ್ತಾದ ನಾದವಾದ ವೇದವನ್ನು ಸೃಷ್ಟಿ ಮಾಡಿದವನು ಮಹಾಸ್ವನ. ಮಹಾ+ಅಸು+ಅನ=ಮಹಾಸ್ವನ. ಅಸು ಅಂದರೆ ‘ಇಂದ್ರಿಯ’, ಮಹಾ-ಅಸು ಅಂದರೆ ‘ಅತ್ಯಂತ ಮುಖ್ಯ ಇಂದ್ರಿಯ’, ಅನ ಅಂದರೆ ‘ಚಲನೆ’.
ಅನಾದಿನಿಧನಃ : ಆದಿ-ಅಂತ ಇಲ್ಲದವನು , ಹುಟ್ಟು-ಸಾವು ಇಲ್ಲದವನು. ಪ್ರಾಣ(ಅನ) ನಲ್ಲಿ ಇದ್ದು, ಸೃಷ್ಟಿ-ಸಂಹಾರಕ್ಕೆ ಕಾರಣನಾದವನು- ಅನಾದಿನಿಧನಃ.
ಧಾತಾ : ಧಾತಾ ಅನ್ನುವ ಭಗವಂತನ ನಾಮ ಈ ಕೆಳಗಿನ ಅರ್ಥವನ್ನು ಕೊಡುತ್ತದೆ- ಅ) ಇಡೀ ಜಗತ್ತನ್ನು ಧಾರಣೆ ಮಾಡುವ ಮತ್ತು ಪೋಷಣೆ ಮಾಡುವ ಶಕ್ತಿ ಉಳ್ಳವನು. ಆ) ಎಲ್ಲರಿಗೂ ಏನು ಬೇಕೂ ಅದನ್ನು ಕೊಟ್ಟವನು. ಇ)ಎಲ್ಲಾ ನಾಮವನ್ನು ಧರಿಸಿದವ (ಎಲ್ಲಾ ದೇವತೆಗಳ ಹೆಸರೂ ಅವನ ಹೆಸರು!) ಮತ್ತು ಧಾನ ಮಾಡಿದವನು.
ವಿಧಾತಾ : ಸಂಸಾರ ಅವಸ್ತೆಯಲ್ಲಿ ಮಾತ್ರ ಅಲ್ಲ, ವಿಶಿಷ್ಟ ಅವಸ್ಥೆಯಲ್ಲಿಯೂ ಭಗವಂತ ಧಾತಾ ಅದ್ದರಿಂದ ಆತ ವಿಧಾತಾ. 45. ಧಾತುರುತ್ತಮಃ : ಧಾತುಹು ಎಂದರೆ ಚತುರ್ಮುಖ, ಧಾತುರುತ್ತಮಃ ಅಂದರೆ ಚತುರ್ಮುಖ ಬ್ರಹ್ಮನಿಗಿಂತ ಉತ್ತಮನಾಗಿರುವವನು ಎಂದರ್ಥ.
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋಽಮರಪ್ರಭುಃ |
ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠಃ ಸ್ಥವಿರೋ ಧ್ರುವಃ || ೬ ||
ಅಪ್ರಮೇಯೋ : ಅಪ್ರಮೇಯ ಎಂದರೆ ಕೈಗೆಟುಕದ, ನಮ್ಮ ಬುದ್ದಿಯಿಂದ ಅಳೆಯಲು ಅಸಾಧ್ಯವಾದ, ಆದರೂ ತಿಳಿಯಲು ಸಾದ್ಯವಾದವ ಎಂದರ್ಥ. ಉದಾಹರಣೆಗೆ – ಸಮುದ್ರದ ನೀರು ಸಂಪೂರ್ಣ ನಮ್ಮ ಕೈಗೆಟಕದು. ಆದರೆ ನಮ್ಮಿಂದಾದಷ್ಟು ನಾವು ತಂದು ಮನೆಯಲ್ಲಿ ಶೇಖರಿಸಿಡಬಹುದು ಮತ್ತು ತಿಳಿಯಬಹುದು.
ಹೃಷೀಕೇಶಃ : ಭಗವಂತನನ್ನು ಹುಡುಕುತ್ತಾ ಹೋದರೆ, ಆತ ಕ್ಷಿತಿಜದಂತೆ ದೂರ ದೂರ ಹೋಗುತ್ತಾನೆ. ಅದ್ದರಿಂದ ಅವನನ್ನು ಎಲ್ಲೆಲ್ಲೋ ಹುಡುಕುವ ಬದಲು ನಿಂತಲ್ಲೇ ನಿಂತು ನಿನ್ನೊಳಗೆ ಹುಡುಕು. ನಿನ್ನ ಹೃತ್ಕಮಲದಲ್ಲೇ ಅವನಿದ್ದಾನೆ. ಹೃಷೀಕಗಳಿಗೆ ಈಶ ಹೃಷೀಕೇಶ-ಹೃಷೀಕ ಅಂದರೆ ಇಂದ್ರಿಯಗಳು. ಆತ ಇಂದ್ರಿಯಗಳ ಸ್ವಾಮಿ. ಆತನನ್ನು ಇಂದ್ರಿಯದಿಂದ ನೋಡದೆ, ಇಂದ್ರಿಯದಲ್ಲಿ ನೋಡು.
ಪದ್ಮನಾಭ : ತಾವರೆರೂಪದ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ ಯಾರ ನಾಭಿಯಿಂದ ಸೃಷ್ಟಿಯಾಗಿದೆಯೋ , ಅವನು ಪದ್ಮನಾಭ. ಈ ಸೃಷ್ಟಿಯ ಕಾರಣಪುರುಷ. | ಅಮರಪ್ರಭುಃ : “ಮರರು” ಅಂದರೆ ಮರಣ ಹೊಂದುವವರು. “ಅಮರರು” ಅಂದರೆ ಮರಣವಿಲ್ಲದವರು ಎಂದರ್ಥ. ಮರಣ ಕೇವಲ ಬೌದ್ಧಿಕ ಶರೀರಕ್ಕೆ ಹೊರತು ಸೂಕ್ಷ್ಮ ಶರೀರಕ್ಕಲ್ಲ. ಮುಕ್ತಿ ಪಡೆದ ಎಲ್ಲಾ ಜೀವರು ಅಮರರು.
ಬ್ರಹ್ಮಾದಿ-ದೇವತೆಗಳು ಅಮೃತಪಾನದಿಂದ ಅಮರರೆನಿಸಿದ್ದರೂ ಕೂಡ , ಅವರಿಗೂ ಹಲವು ಕಲ್ಪಗಳ ನಂತರ ಮರಣ-ಮೋಕ್ಷವಿದೆ. ಆದರೆ ಬ್ರಹ್ಮಾದಿ-ದೇವತೆಗಳ ಆಯಸ್ಸು ಧೀರ್ಘವಾದ್ದರಿಂದ ಅವರನ್ನು ಅಮರರು ಎನ್ನುತ್ತಾರೆ. ಇಲ್ಲಿ ಅಮರಪ್ರಭು ಎಂದರೆ- ಮುಕ್ತಿ ಪಡೆದ ಜೀವ ಹಾಗು ಬ್ರಹ್ಮಾದಿ-ದೇವತೆಗಳ ಒಡೆಯ(ಪ್ರಭು) ಎಂದರ್ಥ.
ವಿಶ್ವಕರ್ಮಾ : ವಿಶ್ವಕರ್ಮ ಎಂದರೆ ಈ ವಿಶ್ವದ ವಿನ್ಯಾಸಕಾರ ಎಂದರ್ಥ. ಪ್ರಾಚೀನ ಗ್ರಂಥಗಳಲ್ಲಿ ಈ ವಿಶ್ವವನ್ನು ಐವತೈದು ಅವಯವಗಳಿರುವ, ಹಾಗು ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಎರಡು ಹಣ್ಣುಗಳಿರುವ ಒಂದು ಮರವನ್ನಾಗಿ ವರ್ಣಿಸಿದ್ದಾರೆ. ಇಲ್ಲಿ ಪ್ರವೃತ್ತಿ ಎಂದರೆ ನಮಗೆ ಬೆನ್ನು ಹಾಕಿ ನಿಂತಿರುವ ಬೌದ್ಧಿಕ ಸುಖದ ಬೆನ್ನು ಹತ್ತುವ ಕರ್ಮ ಜೀವಿ, ಹಾಗು ನಿವೃತ್ತಿ ಎಂದರೆ ಬೌದ್ಧಿಕ ಸುಖಕ್ಕೆ ಬೆನ್ನು ಹಾಕಿ ಮೊಕ್ಷದತ್ತ ಪ್ರಯಾಣಿಸುತ್ತಿರುವವ ಎಂದರ್ಥ.
ಮನುಃ : ಮನ್ವಂತರಗಳನ್ನು ಮನು ಎಂದೂ ಕರೆಯುತ್ತಾರೆ. ಮನುಗಳು (ಮನ್ವಂತರಗಳು) ಹದಿನಾಲ್ಕು. ಅವುಗಳೆಂದರೆ:
1 ) ಸ್ವಾಯಂಭುವ ಮನು, 2) ಸ್ವರೋಚಿಶ ಮನು, 3) ಉತ್ತಮ ಮನು , 4) ತಪಾಸ ಮನು (ಗಜೇಂದ್ರ ಮೋಕ್ಷ) 5) ರೈವತ ಮನು, 6) ಚಕ್ಷುಶ ಮನು , 7) ವೈವಸ್ವತ ಮನು (ಈಗ ನಡೆಯುತ್ತಿರುವುದು),8) ಸಾವರಣಿ ಮನು,
9) ದಕ್ಷ ಸಾವರಣಿ ಮನು , 10) ಬ್ರಹ್ಮ ಸಾವರಣಿ ಮನು, 11) ಧರ್ಮ ಸಾವರಣಿ ಮನು ,12) ಮೇರು ಸಾವರಣಿ ಮನು, 13) ದೇವ ಸಾವರಣಿ ಮನು ,14) ಇಂದ್ರ ಸಾವರಣಿ ಮನು. ಯಾವುದರ ಮೂಲಕ ಮನನ ಮಾಡುತ್ತೇವೋ ಅವನು ಮನು (ಮನನ ಮಾಡುವುದು ಮಂತ್ರಗಳ ಮೂಲಕ . ಅದ್ದರಿಂದ ಮನು ಅಂದರೆ ಮನುವಿನೊಳಗಿದ್ದು (ಮಂತ್ರಗಳಲ್ಲಿ ಮತ್ತು ಮನ್ವಂತರಗಳಲ್ಲಿ ಇದ್ದು) , ಮನುವಾಗಿ, ಎಲ್ಲವನ್ನೂ ಬಲ್ಲ ಭಗವಂತ!
ತ್ವಷ್ಟೃ : ತ್ವಷ್ಟೃ – ಅಂದರೆ ಉಳಿಯಿಂದ ಮರವನ್ನು ಕೆತ್ತುವ ಶಿಲ್ಪಿ ಎನ್ನುವ ಅರ್ಥವನ್ನು ಕೊಡುತ್ತದೆ. ಈ ಹಿಂದೆ ವಿಶ್ವಕರ್ಮ ನಾಮಕನಾಗಿ ಭಗವಂತನನ್ನು ಶ್ರೇಷ್ಟ ವಿನ್ಯಾಸಕಾರನಾಗಿ ನೋಡಿದ್ದೇವೆ. ಇಲ್ಲಿ ತ್ವಷ್ಟೃ ಅಂದರೆ ಮಣ್ಣು , ನೀರು ಮತ್ತು ಬೆಂಕಿಯೆಂಬ ಉಳಿಯಿಂದ , ಅದ್ಬುತ ಸೌಂದರ್ಯದಿಂದ ಕೂಡಿದ ಈ ವಿಶ್ವವನ್ನು ಕೆತ್ತಿದ ಅಪೂರ್ವ ಶಿಲ್ಪಿ ಎಂದರ್ಥ.
ಸ್ಥವಿಷ್ಠ : ಸ್ಥವಿಷ್ಠ ಅಂದರೆ ಸ್ಥೂಲಕಾಯ ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ವಿವಿದತೆಯಾತ್-ವಿಷ್ಟಥಿ ಅಂದರೆ ಆಕಾಶದಂತೆ ಸ್ಥೂಲನಾಗಿರುವವ, ಆದರೆ, ಅನಂತ ರೂಪದಲ್ಲಿ ಅನಂತ ವಸ್ತುವಿನಲ್ಲಿ ಅದ್ವಿತೀಯ, ಅನನ್ಯ, ಅನುಪಮ ರೂಪಕನಾಗಿ ತುಂಬಿರುವವನು. ಈ ಪ್ರಪಂಚದಲ್ಲಿ ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿಲ್ಲ.
ಭಗವಂತನ ಅದ್ವಿತೀಯ ಅಖಂಡ ವಿನ್ಯಾಸಕ್ಕೆ ಉತ್ತಮ ಉದಾಹರಣೆ ಮನುಷ್ಯನ ಬೆರಳಚ್ಚು (Finger print) ಒಬ್ಬನ ಬೆರಳಚ್ಚು ಇನ್ನೊಬ್ಬನಿಗಿಂತ ಬಿನ್ನ ! ಇದು ಸಾಮಾನ್ಯ ವಿನ್ಯಾಸವಲ್ಲ. ಈ ರೀತಿ ಅಖಂಡವಾಗಿ ಉಹಿಸಲೂ ಅಸಾಧ್ಯವಾದ ಅದ್ಭುತ ಕಾಯನಾದ ಭಗವಂತ ಸ್ಥವಿಷ್ಠ.
ಸ್ಸ್ಥವಿರೋ ಧ್ರುವಃ : ಸ್ಥವಿರೋ ಧ್ರುವ ಅಂದರೆ- ಮೇಲೆ ಹೇಳಿರುವ ಇಷ್ಟೊಂದು ವೈವಿದ್ಯತೆಗಳಿಂದ ಎಲ್ಲಾ ಆಕಾರದಲ್ಲೂ ಇದ್ದು ನಿರ್ವೀಕಾರನಾಗಿರುವ ಭಗವಂತ.
ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುದ್ಧಾಮ ಪವಿತ್ರಂ ಮಂಗಲಂ ಪರಮ್ || ೭ ||
ಅಗ್ರಾಹ್ಯಃ : ಭಗವಂತ ಅನಂತ ವಿಶ್ವದಲ್ಲಿ ಅನಂತ ರೂಪದಲ್ಲಿ ತುಂಬಿದ್ದರೂ ಕೂಡ ಆತ ನಿರ್ವೀಕಾರ! ಇದನ್ನು ಹೇಗೆ ಊಹಿಸುವುದು ಅನ್ನುತೀರ ? ಇಲ್ಲ , ಮನುಷ್ಯನ ಮನಸ್ಸಿನಿಂದ ಅವನನ್ನು ಸಂಪೂರ್ಣ ಗ್ರಹಿಸಲು ಅಸಾದ್ಯ. ಏಕೆಂದರೆ ಆತ ಅಗ್ರಾಹ್ಯ – ಗ್ರಹಿಸಲು ಅಸಾದ್ಯವಾದವನು.
ಶಾಶ್ವತಃ : ಭಗವಂತ ಎಂದೂ ಯಾವುದೇ ಬದಲಾವಣೆಗೆ ಒಳಪಡದೆ, ಎಂದೆಂದೂ ಶಾಶ್ವತವಾಗಿರುವವನು.
ಅದ್ದರಿಂದ ಅವನು ಶಾಶ್ವತ. | ಕೃಷ್ಣ : ಕೃಷ್ಣ ಎನ್ನುವುದು ಮೇಲ್ನೋಟಕ್ಕೆ (1) ವಾಸುದೇವ ದೇವಕಿಯರಲ್ಲಿ ಹುಟ್ಟಿದ (ಅವತರಿಸಿದ) ಭಗವಂತನ ಹೆಸರು. ಆದರೆ (2) ಕೃಷ್ಣ ಎನ್ನುವುದು ಭಗವಂತನ ಮೂಲ ರೂಪದ ಹೆಸರೂ ಹೌದು.
ಲೋಹಿತಾಕ್ಷಃ : ಲೋಕ+ಹಿತ+ಅಕ್ಷ – ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ ತಾವರೆಯಂತಹ ಅರಳುಗಣ್ಣು ಉಳ್ಳವನು ಎಂದರ್ಥ. ಈ ನಾಮದ ಅರ್ಥವನ್ನು ತಿಳಿಯಬೇಕಾದರೆ ನಾವು ಭಗವಂತ ಕೊಪೋದ್ರಿಕ್ತನಾದ ಕೆಲವು ಘಟನೆಗಳನ್ನು ನೋಡಬೇಕಾಗುತ್ತದೆ.
ಪ್ರತರ್ದನಃ : ಭಾಷೆಯಲ್ಲಿ, ಬರವಣಿಗೆಯಲ್ಲಿ, ‘ಸಂಕ್ಷಿಪ್ತ’ ಉಪಯೋಗಿಸುವುದು ಮೂಲತಃ ಬಂದಿದ್ದು ಸಂಸ್ಕೃತದಿಂದ. ಸಂಸ್ಕೃತ ಗ್ರಂಥಗಳಲ್ಲಿ ವಿಶೇಷವಾಗಿ, ಪದದ ಸಂಕ್ಷಿಪ್ತ ರೂಪವನ್ನು ಉಪಯೋಗಿಸುತ್ತಾರೆ. ಪ್ರತರ್ದನ ಎನ್ನುವ ಪದವನ್ನು ಈ ಕೆಳಗಿನಂತೆ ಬಿಡಿಸಬಹುದು. 1) ಪ್ರ+ತರ್ದನ 2) ಪ್ರ+ತರ್ದ+ನಯತಿ.
ಪ್ರ+ತರ್ದನ – ಇಲ್ಲಿ ‘ಪ್ರ’ ಎನ್ನುವುದು ಪ್ರಕ್ರುಷ್ಟರು ಎನ್ನುವ ಪೂರ್ಣ ಪದದ ಸಂಕ್ಷಿಪ್ತ ರೂಪ. ಪ್ರತರ್ದನಃ ಅಂದರೆ ಪ್ರಕ್ರುಷ್ಟರಿಗೆ ಹಿಂಸೆ ಕೊಡುವ ದುಷ್ಟ ಶಕ್ತಿಯನ್ನು ನಿರ್ಮೂಲ ಮಾಡುವವನು ಎಂದರ್ಥ.
ಪ್ರಭೂತ : ಭೂಮ ಎಂದರೆ ಪರಿಪೂರ್ಣತೆ. ಪ್ರಭೂತಿ ಎಂದರೆ ಭೂತಿಗಲ್ಲಿ ಪ್ರಕ್ರುಷ್ಟವಾದ ಸ್ಥಿತಿ. ಪ್ರಭೂತ ಎಂದರೆ ಪರಿಪೂರ್ಣವಾದ ಆನಂದಸ್ವರೂಪನಾದ ಭಗವಂತ. | ತ್ರಿಕಕುಬ್ದಾಮ (ಪ್ರಭೂತಸ್ತ್ರಿಕಕುಬ್ಧಾಮ) : ತ್ರಿ+ ಕಕುತ್+ ಧಾಮ. ತ್ರಿ ಅಂದರೆ ಮೂರು, ಕಕುತ್ ಅಂದರೆ ಶಿಕೆ ಅಥವಾ ತುತ್ತ-ತುದಿ, ಧಾಮ ಅಂದರೆ ನೆಲೆಸಿರುವವನು. ತ್ರಿಕಕುಬ್ದಾಮ ಅಂದರೆ ಮೂರು ಶಿಕೆಗಳಲ್ಲಿ ನೆಲೆಸಿರುವವನು.
ಪವಿತ್ರಂ : ಈ ದೇಹದಿಂದ ಭಗವಂತ ಹೊರಟು ಹೋದ ಮೇಲೆ ಈ ದೇಹ ಅಪವಿತ್ರವಾಗುತ್ತದೆ. ಆದ್ದರಿಂದ ಎಲ್ಲವನ್ನು ಪವಿತ್ರಗೊಳಿಸುವ ಶಕ್ತಿಯುಳ್ಳವನು “ಪವಿತ್ರ”. ಆದರೆ ಈ ಬೌದ್ದಿಕ ಶರೀರ ಸಂಪೂರ್ಣ ಪವಿತ್ರವಲ್ಲ. ದೇಹ ಕೆಸರಿನಲ್ಲಿ ಅರಳಿದ ತಾವರೆಯಂತೆ. ಈ ದೇಹದಲ್ಲಿರುವ ಕೆಸರು ಅನೇಕ!
ನಿಜವಾದ ಪಾವಿತ್ರ್ಯತೆ ಸಿಗುವುದು ಈ ದೇಹದಿಂದ ಹೊರಟು ಹೋದ ಮೇಲೆ. ಶಾಶ್ವತವಾದ ಪಾವಿತ್ರ್ಯ ಮೋಕ್ಷದಲ್ಲಿ. ಇಂತಹ ಪಾವಿತ್ರ್ಯವಾದ ಮೋಕ್ಷವನ್ನು ಕರುಣಿಸುವ ಭಗವಂತ “ಪವಿತ್ರಂ”.
ಮಙ್ಗಲಂ (ಮಂಗಲಂ) ಪರಮ್ : ಮಙ್ಗಲಂ ಅಂದರೆ ಕಲ್ಯಾಣ. ಕಲ್ಯಾಣ ಅಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು ಎಂದರ್ಥ. ಸಾಮಾನ್ಯವಾಗಿ ಮದುವೆಗೆ ಕಲ್ಯಾಣ ಎನ್ನುತ್ತಾರೆ. ಮದುವೆಯ ನಂತರ ಧರಿಸುವ ತಾಳಿಯನ್ನು “ಮಂಗಳ ಸೂತ್ರ” ಎನ್ನುತ್ತಾರೆ. ಆದರೆ ಎಲ್ಲಾ ಮದುವೆಯು ಮಂಗಲವಲ್ಲ.
ಯಾವ ವಿವಾಹದಿಂದ ಗಂಡು ಮತ್ತು ಹೆಣ್ಣು ಎತ್ತರಕ್ಕೆ ಏರುತ್ತಾರೋ ಅಂತಹ ಮದುವೆ ಮಾತ್ರ ಕಲ್ಯಾಣ. ನಮ್ಮನ್ನು ಅದಃಪತನಕ್ಕೆ ಒಯ್ಯುವ ಮದುವೆ ಅಮಂಗಲ. ಜನ-ಸಾಮಾನ್ಯರು ಸಾಮಾನ್ಯವಾಗಿ ಸಾವನ್ನು ಅಮಂಗಲ ಎಂದು ತಿಳಿಯುತ್ತಾರೆ. ಆದರೆ ಮೋಕ್ಷ ಪ್ರಧಾನವಾದ ಸಾವು ಮಂಗಲ. ಆತ್ಮಹತ್ಯೆ ಅಮಂಗಲ.
ಇಹಕರ್ಮ- ಅಂದರೆ ತನ್ನೆಲ್ಲ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು-ಮಂಗಲ. (ಪಾಂಡವರು ಮಾಡಿದ ಕರ್ಮ); ಪರಕರ್ಮ- ಅಂದರೆ ತನ್ನ ಸ್ವಾರ್ಥಕ್ಕಾಗಿ ಮಾಡುವ ಕರ್ಮ-ಅಮಂಗಲ. ಕೇವಲ ಮೇಲಕ್ಕೇರುವುದು ಮಂಗಲವಲ್ಲ, ಕೆಳಕ್ಕೆ ಇಳಿಯದ ದಾರಿಯಲ್ಲಿ ಸಾಗುವುದು ಮಂಗಲ-ಅದೇ ಮೋಕ್ಷ. ಆದ್ದರಿಂದ ಭಗವಂತ ಮಂಗಲ ಮತ್ತು ನಮ್ಮನ್ನು ಮಂಗಲದತ್ತ ನಡೆಸುವವನು- ಅದ್ದರಿಂದ ಆತ ಮಙ್ಗಲಂ ಪರಮ್.
ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ |
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ || ೮ ||
ಈಶಾನಃ : ಈಶ ಅಂದರೆ ನಮ್ಮನ್ನು ನಿಯಂತ್ರಿಸುವ ಪರಮ ಶಕ್ತಿಗಳು. ಈಶಾನಃ ಅಂದರೆ ಈ ಪರಮಶಕ್ತಿಗಳ ಒಡೆಯ. |
ಪ್ರಾಣದಃ : ಪ್ರಾಣ+ದಃ – ಇಲ್ಲಿ ದಃ ಅನ್ನುವ ಪದಕ್ಕೆ “ಕೊಡುವವನು” ಮತ್ತು “ಕಸಿದುಕೊಳ್ಳುವವನು” ಎನ್ನುವ ತದ್ವಿರುದ್ದವಾದ ಎರಡು ಅರ್ಥವಿದೆ. ಪ್ರಾಣದಃ ಅಂದರೆ ನಮಗೆ ಈ ದೇಹದಲ್ಲಿ ಪ್ರಾಣಶಕ್ತಿಯನ್ನು ತುಂಬಿ, ಇಂದ್ರಿಯಗಳನ್ನು ಕೊಟ್ಟು , ಬದುಕಿಗೆ ಬೇಕಾದ ಕಲೆಯನ್ನು ದಯಪಾಲಿಸಿ (ಕೊಡುವುದು ); ಕೊನೆಗೆ ಬೌದ್ದಿಕ ಶರೀರವನ್ನು ಕಸಿದುಕೊಂಡು -ಮುಕ್ತಿಯನ್ನು ದಯಪಾಲಿಸುವವನು ಎಂದರ್ಥ.
ಪ್ರಾಣೋ : ಪ್ರ+ಆ+ಣ= ಪ್ರಾಣ. ಪ್ರ-ಅಂದರೆ ಪ್ರಕ್ರುಷ್ಟವಾದ, ದುಃಖ ಸ್ಪರ್ಶವಿಲ್ಲದ, ನಿರ್ದಿಷ್ಟವಾದ; ಆ-ಅಂದರೆ ಪರಿಪೂರ್ಣನಾದ; ಣ- ಅಂದರೆ ಅನಂದಮಯನಾದ ಎಂದರ್ಥ. ಆದ್ದರಿಂದ ಭಗವಂತ ಪ್ರಾಣ. ಇನ್ನು ಆಣ ಅಂದರೆ ವಾಗ್ದೇವಿ ಎಂದರ್ಥ. ಅದ್ದರಿಂದ ವಾಗ್ದೇವಿಯಲ್ಲಿ ನೆಲೆಸಿ, ಎಲ್ಲಾ ವೇದ ವಾಣಿಗಳಲ್ಲಿ ಸನ್ನಿಹಿತನಾಗಿದ್ದು , ಜಗತ್ತಿನ ಎಲ್ಲಾ ಚೇಷ್ಟೆಗಳನ್ನೂ ನಿಯಂತ್ರಿಸುವ ಭಗವಂತ ಪ್ರಾಣಃ .
ಜ್ಯೇಷ್ಠಃ : ಜ್ಯೇಷ್ಠಃ ಅಂದರೆ ಹಿರಿಯ ಎಂದರ್ಥ. ಎಲ್ಲಾ ಪ್ರಾಣ ತತ್ವಗಳನ್ನು ಸೃಷ್ಟಿ ಮಾಡಿ ನಿಯಂತ್ರಿಸುವ ಭಗವಂತ-ಜ್ಯೇಷ್ಟ. | ಶ್ರೇಷ್ಠಃ : ಶ್ರೇಷ್ಠತೆ ವಯಸ್ಸಿನಿಂದ ಬರುವುದಲ್ಲ. ಕೆಲವರು ಜ್ಞಾನದಲ್ಲಿ ಶ್ರೇಷ್ಟರು, ಕೆಲವರು ಹಣದಲ್ಲಿ ಶ್ರೇಷ್ಟರು, ಇನ್ನು ಕೆಲವರು ಭಲದಲ್ಲಿ ಶ್ರೇಷ್ಟರು. ಈ ರೀತಿ ಏಲ್ಲಿ ಭಗವಂತನ ವಿಶಿಷ್ಟವಾದ ತೇಜಸ್ಸಿನ ಸನ್ನಿದಾನವಿದೆಯೋ ಅಲ್ಲಿ ಶ್ರೇಷ್ಠತೆ ಇರುತ್ತದೆ. ಇಂತಹ ಶ್ರೇಷ್ಟತೆಯನ್ನು ದಯಪಾಲಿಸುವ ತಂದೆ ಶ್ರೇಷ್ಠಃ
ಪ್ರಜಾಪತಿಃ : ಚತುರ್ಮುಖನಿಗೆ ಪ್ರಜಾಪತಿ ಎನ್ನುವ ಹೆಸರಿದೆ. ಅಂತಹ ಚತುರ್ಮುಖನೋಳಗಿದ್ದು ಸಮಸ್ತ ಜೀವಕೋಟಿಯ ಪಾಲನೆ ಮಾಡುವ ಭಗವಂತ ಪ್ರಜಾಪತಿ. | ಹಿರಣ್ಯಗರ್ಭೋ : ಇಲ್ಲಿ ಹಿರಣ್ಯ ಅಂದರೆ ಚಿನ್ನ ಅಥವಾ ಬಂಗಾರ ಎನ್ನುವ ಅರ್ಥವನ್ನು ಕೊಡುತ್ತದೆ. ಈ ಹಿಂದೆ ಬ್ರಹ್ಮಾಂಡವನ್ನು ಕಮಲ ರೂಪದ ಬ್ರಹ್ಮನ ಮೊಟ್ಟೆ ಎಂದು ವರ್ಣಿಸಿರುವುದನ್ನು ನೋಡಿದ್ದೇವೆ.
ಈ ಬ್ರಹ್ಮಾಂಡ ಭಗವಂತನ ಉದರದಿಂದ ನಿರ್ಮಾಣವಾಯಿತು ಎನ್ನುವುದನ್ನು “ನಾಭಿ-ಕಮಲ” ರೂಪದಲ್ಲಿ ಕಲ್ಪಿಸಲಾಗಿದೆ. ಕವಿಯ ಕಲ್ಪನೆಯಂತೆ, ಈ ಬ್ರಹ್ಮಾಂಡವನ್ನು ದೂರದಲ್ಲಿ ನಿಂತು ನೋಡಿದರೆ – ನೂರು ಸೂರ್ಯರು ಒಮ್ಮೆಲೇ ಉದಯಿಸಿದರೆ ಹೇಗೆ ಕಾಣಬಹುದೋ ಹಾಗೆ ಚಿನ್ನದ ಮೊಟ್ಟೆಯಂತೆ ಕಾಣಬಹುದು. ಇಂತಹ ಅಪೂರ್ವವಾದ ಸೃಷ್ಟಿಯನ್ನು ತನ್ನ ಉದರಲ್ಲಿ ದರಿಸಿರುವವನು ಹಿರಣ್ಯಗರ್ಭ.
ಭೂಗರ್ಭೋ : ಇಲ್ಲಿ ಭೂ ಅಂದರೆ ಪ್ರಕೃತಿ ಹಾಗು ಭೂಮಿ ಎನ್ನುವ ಅರ್ಥವನ್ನು ಕೊಡುತ್ತದೆ. ಈ ಪ್ರಕೃತಿಯನ್ನು ಹಾಗು ಅದರ ಒಂದು ಭಾಗವಾದ ಭೂಮಿಯನ್ನು ತನ್ನ ಒಡಲಲ್ಲಿ ಹೊತ್ತವನು ಭೂಗರ್ಭ. ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಸಂಕರ್ಷಣ ಶಕ್ತಿ ಎನ್ನುತ್ತಾರೆ.
ಸಂಕರ್ಷಣ ಆದಿಶೇಷನ ಅನ್ವರ್ಥ ನಾಮ. ಭಗವಂತನ ಸೇವಕನಾದ ಸಂಕರ್ಷಣ ಈ ಭೂಮಿಯನ್ನು ನಿಯಮಬದ್ದವಾಗಿ ಹಿಡಿದಿಟ್ಟು ಕಾಪಾಡುತ್ತಿದ್ದಾನೆ ಆದ್ದರಿಂದ ಈ ಭೂಮಿಯ ಸೃಷ್ಟಿಕರ್ತ ಹಾಗು ಸಂರಕ್ಷಕನಾದ ಭಗವಂತ ಭೂಗರ್ಭ.
ಮಾಧವೋ : ‘ಮಾ’ ಅಂದರೆ ಮಾತೆ ಲಕ್ಷ್ಮಿ, ಆದ್ದರಿಂದ ಮಾಧವ ಅಂದರೆ ಲಕ್ಷ್ಮೀಪತಿ ಭಗವಂತ. ಇನ್ನು ‘ಮಾ’ ಅಂದರೆ ಜ್ಞಾನ ಕೂಡ ಹೌದು. ಭಗವಂತ ಜ್ಞಾನದ ಒಡೆಯ ಅದ್ದರಿಂದ ಆತ ಮಾದವ. ಶ್ರೀಕೃಷ್ಣ ಅವತಾರದಲ್ಲಿ ಭಗವಂತ ಮದುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾದವ ಎಂದೂ ಕರೆಯುತ್ತಾರೆ.
ಮಧುಸೂದನಃ : ಮಧು ಅಂದರೆ ಕಾಮ (Sex), ಬಯಕೆ (Desire), ಆನಂದ (Ultimate bliss) ಎನ್ನುವ ಅನೇಕ ಅರ್ಥವನ್ನು ಕೊಡುತ್ತದೆ. ಕಾಮ (ಮಧು) ವೇ ಕ್ರೋದ (ಕೈತಪ)ಕ್ಕೆ ಕಾರಣ. ಈ ಮದು-ಕೈತಪರು ನಮ್ಮೊಳಗಿದ್ದು ನಮ್ಮೆಲ್ಲ ಕಷ್ಟ-ಕಾರ್ಪಣ್ಯಕ್ಕೆ ಮೂಲ ಕಾರಣಕರ್ತರಾಗಿದ್ದರೆ. ಈ ಮಧು-ಕೈತಪರಿಂದ ನಮಗೆ ಮುಕ್ತಿ ದೊರೆಯಬೇಕಿದ್ದರೆ ನಾವು ಭಗವಂತನ ಮೊರೆ ಹೋಗಬೇಕು. ಆತನೊಬ್ಬನೇ ಈ ಮಧುವನ್ನು ಸೂದಿಸಬಲ್ಲ (ನಾಶಮಾಡಬಲ್ಲ). ಆದ್ದರಿಂದ ಭಗವಂತ ಮಧುಸೂದನ.
ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ |
ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್ || ೯ ||
ಈಶ್ವರೋ : ವಿಷ್ಣು ಸಹಸ್ರನಾಮದಲ್ಲಿ ಕೆಲವೊಂದು ನಾಮಗಳು ಒಂದಕ್ಕಿಂತ ಹೆಚ್ಚು ಭಾರಿ ಪುನರಾವರ್ತನೆ ಆಗಿರುವುದನ್ನು ನಾವು ಕಾಣುತ್ತೇವೆ. ಈಶ್ವರ ಅನ್ನುವ ನಾಮ ಕೂಡ ಎರಡು ಬಾರಿ ಪುನರಾವರ್ತನೆ ಆಗಿದೆ. ವಿಷ್ಣು ಸಹಸ್ರನಾಮದಲ್ಲಿ ಬರುವ ಒಂದೊಂದು ನಾಮಕ್ಕೆ ನೂರು ಅರ್ಥವಿದೆಯಂತೆ.
ಒಂದು ವೇಳೆ ಒಂದು ನಾಮ ಎರಡು ಬಾರಿ ಬಂದರೆ, ಆ ನಾಮಕ್ಕೆ ಇನ್ನೂರು ಅರ್ಥಗಳಿವೆ ಎಂದು ತಿಳಿಯಬೇಕಾಗುತ್ತದೆ. ಆದರೆ ಇಷ್ಟೊಂದು ಅರ್ಥವನ್ನು ಕಂಡುಕೊಳ್ಳುವುದು ಸಾಮಾನ್ಯರಿಗೆ ಅಸಾದ್ಯ. ಇಲ್ಲಿ ಈಶ್ವರ ಎಂದರೆ ಜಗತ್ತನ್ನು ನಿಯಂತ್ರಿಸುವ ಎಲ್ಲಾ ಶಕ್ತಿಗಳ ಈಶ ಎಂದರ್ಥ.
ವಿಕ್ರಮೀ : ಈ ನಾಮದ ವಿಶ್ಲೇಷಣೆ ಮಾಡಲು ನಾವು ಭಗವಂತನ ವಾಮನ ಅವತಾರದ ಕಥೆಯನ್ನು ಒಮ್ಮೆ ಮೆಲುಕು ಹಾಕಬೇಕಾಗುತ್ತದೆ. ನಿಮಗೆ ತಿಳಿದಿರುವಂತೆ ವಾಮನ ರೂಪಿ ಭಗವಂತ, ಮಹಾ ದಾನಿ ಬಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ.
ಶುಕ್ರಾಚಾರ್ಯರ ವಿರೋಧವನ್ನು ಲೆಕ್ಕಿಸದೆ ಬಲಿ ವಾಮನನಿಗೆ ದಾನ ಮಾಡಲು ಮುಂದಾಗುತ್ತಾನೆ. ಆಗ ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಮಿಯನ್ನೂ ಮತ್ತು ಎರಡನೇ ಹೆಜ್ಜೆಯಿಂದ ಆಕಾಶವನ್ನು ಆವರಿಸಿದಾಗ, ಮೂರನೇ ಹೆಜ್ಜೆಗೆ ಬಲಿ ತನ್ನ ತಲೆಯನ್ನು ಅರ್ಪಿಸಿ ಪಾತಳವನ್ನು ಸೇರಿ ಉದ್ದಾರವಾಗುತ್ತಾನೆ.
ಈ ಕಾರಣಕ್ಕಾಗಿ ಭಗವಂತನನ್ನು ‘ತ್ರಿವಿಕ್ರಮ’ ಎನ್ನುತ್ತಾರೆ. ಈ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಈ ಕೆಳಗಿನಂತೆ ಅರ್ಥೈಸಬಹುದು. ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆದ್ಯಾತ್ಮಿಕವಾಗಿ ಬಲಿಷ್ಟರಾಗಬೇಕು.
ಉಪಾಸನೆಯಲ್ಲಿ ಪ್ರಮುಖವಾಗಿ ಮೂರೂ ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ) ಮೂರ್ತಿಯನ್ನು ದೇವರು ಎಂದು ಆರಾದಿಸುವುದು. ಎರಡನೆಯದು ಉಪಾಸನೆ ಮಾಡುತ್ತಾ ಮಾಡುತ್ತಾ , ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೆ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು.
ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ, ಹಾಗು ಭಗವಂತ ನಮ್ಮನ್ನು ಉದ್ದರಿಸುತ್ತಾನೆ. ಈ ಮೇಲಿನ ಮೂರು ವಿಕ್ರಮಗಳಿಂದ ನಮ್ಮನ್ನು ಉದ್ದರಿಸುವ ಭಗವಂತ ವಿಕ್ರಮೀ.
ಧನ್ವೀ : ಧನ್ವೀ ಅಂದರೆ ಧನುರ್ಧಾರೀ. ಅಂದರೆ ಧನುಸ್ಸನ್ನು ಕೈಯಲ್ಲಿ ಹಿಡಿದಿರುವವನು. ಇಲ್ಲಿ ಧನುಸ್ಸು ದುಷ್ಟ ನಿಗ್ರಹದ ಸಂಕೇತ. ಧರ್ಮದ ಸಂಸ್ಥಾಪನೆಗಾಗಿ ಕೈಯಲ್ಲಿ ಆಯುದ ಹಿಡಿದಿರುವ ಭಗವಂತ ಧನ್ವೀ. ಭಗವಂತನಿಗೆ ಯಾವುದೇ ವಿಶೇಷ ಆಯುದದ ಅಗತ್ಯವಿಲ್ಲ. ಇಲ್ಲಿ ದುಷ್ಕರ್ಮದ ನಾಶಕನಾಗಿರುವ ಭಗವಂತನನ್ನು ಧನ್ವೀ ಎನ್ನುತ್ತಾರೆ.
ಮೇಧಾವೀ : ಮೇಧಾ ಅಂದರೆ ಸ್ಮರಣಶಕ್ತಿ. ಯಾವುದನ್ನು ಕೇಳುತ್ತೇವೂ, ಯಾವುದನ್ನೂ ಓದುತ್ತೇವೂ, ಅದನ್ನು ಶಾಶ್ವತವಾಗಿ ಮಸ್ತಕದಲ್ಲಿಟ್ಟುಕೊಳ್ಳುವುದು. ಮನಸ್ಸು ಬಯಸುತ್ತದೆ, ಬುದ್ದಿ ನಿಶ್ಚಯವಾಗಿ ಗ್ರಹಿಸುತ್ತದೆ, ಚಿತ್ತ ನೆನಪಿಡುತ್ತದೆ. ಗ್ರಹಿಸಿದ ವಿಷಯವನ್ನು ಶಾಶ್ವತವಾಗಿ ನೆನಪಿನಲ್ಲಿಡುವವರು ಮೇದಾವಿಗಳು. ಭಗವಂತ ಸ್ವತಃ ಮೇದಾವಿ ಹಾಗು ನಮಗೆ ಚಿತ್ತವನ್ನು ಕರುಣಿಸುವವ.
ವಿಕ್ರಮಃ : ವಿಕ್ರಮ ಅಂದರೆ ಕ್ರಮವಿಲ್ಲದವನು!!! ಅಂದರೆ ಭಗವಂತನು ಯಾವುದೇ ಕ್ರಮದ ನಿರ್ಭಂದಕ್ಕೆ ಒಳಗಾಗಿಲ್ಲ. ಅವನು ನಡೆದ ದಾರಿಯಲ್ಲವೂ ನಮಗೆ ಕ್ರಮ.
ಕ್ರಮಃ : ಮೇಲೆ ಹೇಳಿದಂತೆ ಭಗವಂತ ವಿಕ್ರಮ, ಆದರೆ ಆತ ನಿರ್ಮಿಸಿರುವ ಈ ಸೃಷ್ಟಿ ಸಂಪೂರ್ಣ ಕ್ರಮಬದ್ದವಾಗಿದೆ. ಅಂದರೆ ಸಂಪೂರ್ಣ ಗಣಿತಬದ್ದವಾಗಿದೆ. ಪ್ರತಿಯೊಂದು ಗ್ರಹದ ಚಲನೆ ಗಣಿತಬದ್ದವಾಗಿದೆ. ಯಾವಾಗ ಗ್ರಹಣವಾಗಿದೆ, ಯಾವಾಗ ಗ್ರಹಣವಾಗುತ್ತದೆ ಎನ್ನುವುದನ್ನು ಕರಾರುವತ್ತಾಗಿ ಗಣಿತದಿಂದ ತಿಳಿಯಬಹುದು. ಇಂತಹ ಕ್ರಮಬದ್ದವಾದ ಸೃಷ್ಟಿಯ ಕರ್ತನಾದ ಭಗವಂತ ಕ್ರಮಃ.
ಅನುತ್ತಮೋ : ಭಗವಂತನ ಹೆಜ್ಜೆ ಆನೆಯ ಹೆಜ್ಜೆಯಂತೆ. ಇತರ ಎಲ್ಲಾ ಹೆಜ್ಜೆಗಳು ಅದರ ವ್ಯಾಪ್ತಿಯ ಒಳಗೆ ಸೀಮಿತ. ಅನುತ್ತಮ ಅಂದರೆ ಉತ್ತಮರಲ್ಲಿ ಉತ್ತಮ. ಅವನಿಂದ ಉತ್ತಮರು ಯಾರೂ ಇಲ್ಲ.ಅದ್ದರಿಂದ ಆತ ಅನುತ್ತಮ.
ದುರಾಧರ್ಷಃ : ಧರ್ಷಣೆಗೆ ನಿಲುಕದೇ ಇರುವುದು ದುರಾಧರ್ಷ. ಭಗವಂತನನ್ನು ನಲುಗಿಸುವುದು, ವಿಚಲಿತಗೊಳಿಸುವುದು ಅಸ್ಸಾದ್ಯ. ಆತ ತನ್ನ ಕ್ರಮದಿಂದ, ತನ್ನ ತೀರ್ಮಾನದಿಂದ, ತನ್ನ ಸ್ಥಾನದಿಂದ ವಿಚಲಿತಗೋಳ್ಳಲಾರ. ಅದ್ದರಿಂದ ಭಗವಂತ ದುರಾಧರ್ಷ.
ಕೃತಜ್ಞಃ : ಮೇಲಿನ ಕೆಲವು ನಾಮಗಳಲ್ಲಿ ನಾವು ಭಗವಂತನಿಗೆ ಕ್ರಮವಿಲ್ಲ, ಅವನ ಕ್ರಮವನ್ನು ಯಾರೂ ಮೀರಲಾರರು, ಅವನು ಅನುತ್ತಮ, ದುರಾಧರ್ಷ… ಇತ್ಯಾದಿ ಅರ್ಥಗಳನ್ನು ನೋಡಿದೆವು. ಇಗ ನಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಭಗವಂತ ಏಕೆ ಪಕ್ಷಪಾತಿ?
ಒಬ್ಬ ಬಡವ, ಒಬ್ಬ ಶ್ರೀಮಂತ,ಒಬ್ಬರಿಗೆ ಸುಖ, ಇನ್ನೊಬ್ಬರಿಗೆ ಕಷ್ಟ … ಏಕೆ ಹೀಗೆ? ಈ ಪ್ರಶ್ನೆಗೆ ಉತ್ತರವೇ ಕ್ರತಜ್ಞ ನಾಮದ ಅರ್ಥ. ಕ್ರತಜ್ಞ ಎಂದರೆ ಏನನ್ನೂ ಮರೆಯದೆ ಮರಳಿ ಕೊಡುವವನು ಎಂದರ್ಥ. ನಾವು ಏನನ್ನು ಮಾಡಿದ್ದೆವೂ, ಆ ಕರ್ಮ ಫಲಕ್ಕನುಗುಣವಾಗಿ ಫಲವನ್ನು ಕೊಡುವ ಭಗವಂತ ಕ್ರತಜ್ಞ
ಕೃತಿ : ಭಗವಂತನ ಜ್ಞಾನ, ಭಲ, ಕ್ರೀಯೆ ಎಲ್ಲವೂ ಆತನ ಸ್ವರೂಪ ಆದ್ದರಿಂದ ಆತ ಕೃತಿ. ಆತ್ಮವಾನ್ : ಆತ್ಮದ ಸ್ಥೂಲವಾದ ಅರ್ಥ ಶರೀರ. ಭಗವಂತನಿಗೆ ಮಣ್ಣು, ನೀರು ಮತ್ತು ಬೆಂಕಿಯಿಂದಾದ, ಒಂದು ದಿನ ಬಿದ್ದು ಹೋಗುವ ಶರೀರ ಅಥವಾ ಆಕಾರವಿಲ್ಲ. ಅವನು ವಿಶ್ವಾಕಾರ. ಆತ ಯಾವ ರೂಪದಲ್ಲಿ ಕೂಡ ಕಾಣಿಸಿಕೊಳ್ಳಬಲ್ಲ. ಜ್ಞಾನ ಆತನ ಸ್ವರೂಪ. ಆತ ಎಲ್ಲಾ ಆತ್ಮರ ತಂದೆ. ಆದ್ದರಿಂದ ಭಗವಂತ ಆತ್ಮವಾನ್.
ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ |
ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಃ ಸರ್ವದರ್ಶನಃ || ೧೦ ||
ಸುರೇಶಃ : ಸುರರು ಅಂದರೆ ದೇವತೆಗಳು. ಭಗವಂತ ಸುರರ-ಈಶ ಆದ್ದರಿಂದ ಆತ ಸುರೇಶ.
ಶರಣಂ : ಶರಣು ಅಂದರೆ ಮೂಲತಃ ಆಶ್ರಯ ಅನ್ನುವ ಅರ್ಥವನ್ನು ಕೊಡುತ್ತದೆ. ಆದರೆ ವಾಡಿಕೆಯಲ್ಲಿ ಈ ಅರ್ಥ ತಪ್ಪಿಹೋಗಿ ವಿಪರೀತ ಅರ್ಥದಲ್ಲಿ ಪ್ರಚಲಿತದಲ್ಲಿದೆ. ಮೂಲ ಅರ್ಥದ ಪ್ರಕಾರ ದೇವರು ನಮಗೆ ಶರಣು ಹೊರತು ನಾವು ದೇವರಿಗೆ ಶರಣಾಗಲು ಸಾದ್ಯವಿಲ್ಲ. ಅಂದರೆ ದೇವರೇ ನಮಗೆ ಆಶ್ರಯದಾತನೇ ಹೊರತು ನಾವು ದೇವರಿಗೆ ಆಶ್ರಯದಾತರಾಗಲು ಸಾದ್ಯವಿಲ್ಲ. ಆದ್ದರಿಂದ ಎಲ್ಲಾ ಜೀವ ಜಂತುಗಳಿಗೂ ಆಶ್ರಯದಾತನಾದ ಭಗವಂತ ಶರಣು.
ಶರ್ಮ : ಶರ್ಮ ಅಂದರೆ ಆನಂದ. ಜ್ಞಾನಾನಂದಮಯನಾದ ಭಗವಂತ ಎಂದರ್ಥ. ವಿಶ್ವರೇತಾಃ : ಭಗವಂತನ ರೇತಸ್ಸಿನಿಂದ ಈ ವಿಶ್ವ ಸೃಷ್ಟಿಯಾದ್ದರಿಂದ ಆತನನ್ನು ವಿಶ್ವರೇತಾ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಆದರೆ ಈ ನಾಮಕ್ಕೆ ಇನ್ನೂ ಹೆಚ್ಚಿನ ಅರ್ಥವಿದೆ.
ರೇತನ್ ಅಂದರೆ ಆನಂದ ರೂಪ ಎಂದರ್ಥ. ವಿಶ್ವರೇತಾ ಎಂದರೆ ಜೀವಕೂಟಿಯ ಆನಂದದಲ್ಲಿ ಪರಿಪೂರ್ಣ ಆನಂದ ರೂಪ ಎಂದರ್ಥ. ರೇತಸ್ಸು ಅಂದರೆ ಸಾರಭೂತವಾದದ್ದು ಎನ್ನುವ ಅರ್ಥವನ್ನೂ ಕೊಡುತ್ತದೆ. ಆದ್ದರಿಂದ ಇಡೀ ಬ್ರಹ್ಮಾಂಡದಲ್ಲಿ ಸಾರಭೂತನಾಗಿರುವ ಭಗವಂತ ವಿಶ್ವರೇತಾ.
ಪ್ರಜಾಭವಃ : ಧರ್ಮದ ಮಾರ್ಗದಲ್ಲಿ, ಜ್ಞಾನದ ಹಸಿವಿನಿಂದ, ಭಗವಂತನಲ್ಲಿ ಶರಣುಕೂರಿ ಬಂದ ಭಕ್ತರನ್ನು ಇಲ್ಲಿ ಪ್ರಜಾ ಎಂದು ಕರೆದಿದ್ದಾರೆ. ಭವ ಅಂದರೆ ಆನಂದವನ್ನು ದಯಪಾಲಿಸುವುದು ಎಂದರ್ಥ. ಆದ್ದರಿಂದ ಪ್ರಜಾಭವ ಅಂದರೆ ಧರ್ಮ ಮತ್ತು ಜ್ಞಾನ ಮಾರ್ಗದಲ್ಲಿರುವವರಿಗೆ ಆನಂದಪ್ರದನಾದ ಭಗವಂತ ಎಂದರ್ಥ.
ಅಹಃ : ಅಹಃ ಅಂದರೆ ಮೇಲ್ನೋಟದ ಅರ್ಥ ‘ನಾನು’ . ಪ್ರತಿಯೊಂದು ಮಾತಿನಲ್ಲೂ ನಾವು ‘ನಾನು’ ಅನ್ನುವ ಪದವನ್ನು ಉಪಯೋಗಿಸುತ್ತೇವೆ. ಈಗ ‘ನಾನು’ ಅನ್ನುವ ಪದವನ್ನು ಸ್ವಲ್ಪ ಆಳವಾಗಿ ಯೋಚಿಸಿ. ನಾನು ಅಂದರೆ ನನ್ನ ಕೈ , ಕಾಲು, ತಲೆ,ಹೃದಯ ……. ನನ್ನ ದೇಹ ??
ಅಲ್ಲ !!! ನನ್ನ ಉಸಿರು? ಅದೂ ಅಲ್ಲ !! ನನ್ನ ಜೀವ ……..?? ಅಲ್ಲ. ಏಕೆಂದರೆ ಈ ಜೀವವನ್ನು ನೆಡೆಸುವವನು ಯಾರು ? ಅವನೇ ಬಿಂಬ ರೂಪಿ ಭಗವಂತ. ಆದ್ದರಿಂದ ಆತ ಅಹಃ . ಒಂದು ಕೆಲಸವನ್ನು ನಾನು ಮಾಡಿದೆ… ನನ್ನಿಂದಾಯಿತು ಎಂದು ಜಂಬ ಪಡುವ ನಾವು, ಆ “ನಾನು” ಅಂದರೆ ನನ್ನೊಳಗೆ ಕುಳಿತ ಭಗವಂತ ಅನ್ನುವುದನ್ನು ಸಂಪೂರ್ಣ ಮರೆತಿರುತ್ತೇವೆ!
ಅಹಃ ಅನ್ನುವುದಕ್ಕೆ ಇನ್ನೊಂದು ಅರ್ಥ ಬೆಳಕು. ಅಂದರೆ ಬೆಳಕಿನ ಮೂಲವಾದ ಸೂರ್ಯನಲ್ಲಿ ತುಂಬಿ ಜಗತ್ತನ್ನು ಬೆಳಗುವವವನು. ಅದ್ದರಿಂದ ಪಿಂಡಾಂಡದಲ್ಲಿ ಬಿಂಬರೂಪಿಯಾಗಿ, ನಿಸರ್ಗದಲ್ಲಿ ಸೂರ್ಯಕಿರಣ ರೂಪದಲ್ಲಿ ತುಂಬಿರುವ ಭಗವಂತ ಅಹಃ.
ಸಂವತ್ಸರೋ : ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷ ಎಂದು ಅರ್ಥ.ಈ ಒಂದು ಸಂವಸ್ಸರದಲ್ಲಿ 360 ಹಗಲು ಹಾಗು 360 ರಾತ್ರಿಗಳಿರುತ್ತವೆ. ಇಂತಹ ನೂರು ಸಂವಸ್ಸರಗಳು ಮನುಷ್ಯನ ಆಯಸ್ಸು ( 36,000 ಹಗಲು ಹಾಗು 36,೦೦೦ ರಾತ್ರಿ).
ಮನುಷ್ಯ ದೇಹ 72,000 ನಾಡಿಗಳಿಂದ ಹಾಗು 360 ಅಸ್ಥಿಗಳಿಂದ ತುಂಬಿದೆ (ಅದಕ್ಕಾಗಿ ಯಜ್ಞ ಕುಂಡ ತಯಾರಿಸುವಾಗ 360 ಇಟ್ಟಿಗೆಗಳನ್ನು ಉಪಯೋಗಿಸುತ್ತಾರೆ, 360 ಅಸ್ಥಿಗಳಿಂದ ತುಂಬಿದ ಈ ದೇಹವೇ ಒಂದು ಕುಂಡ) . ಈ ಎಲ್ಲಾ ನಾಡಿಗಳಲ್ಲಿ ತುಂಬಿರುವ ಕಾಲನಿಯಾಮಕನಾದ ಹಾಗು ಶರೀರ ನಿಯಾಮಕನಾದ ಭಗವಂತ ಸಂವತ್ಸರ.
ವ್ಯಾಲಃ : ನಿಘಂಟಿನಲ್ಲಿ ವ್ಯಾಲ ಅನ್ನುವ ಪದ ಈ ಕೆಳಗಿನ ಅರ್ಥವನ್ನು ಕೊಡುತ್ತದೆ. ಮತ್ತೇರಿದ ಆನೆ, ಬುಸುಗುಡುವ ಸರ್ಪ ಅಥವಾ ಹೊಂಚು ಹಾಕಿ ಬಲಿತೆಗೆದುಕೊಳ್ಳಲು ಕಾದಿರುವ ಕ್ರೂರ ವ್ಯಾಘ್ರ. ಮೇಲಿನ ಅರ್ಥವನ್ನು ಓದಿ ಗಾಬರಿಯಾಗಬೇಡಿ. ಭಗವಂತ ವಿ+ಆ+ಲಾ.
ಅಂದರೆ ಎಲ್ಲಾ ದೋಷಗಳನ್ನು ನಾಶ ಮಾಡುವವನು, ಪ್ರಳಯ ಕಾಲದಲ್ಲಿ ಎಲ್ಲವೂ ಅವನಲ್ಲಿ ಲೀನವಾಗುತ್ತವೆ. ಮೇಲ್ನೋಟಕ್ಕೆ ಪ್ರಳಯ ಒಂದು ಭಯಂಕರ ಕ್ರೀಯೆ ಆದರೂ ಕೂಡ, ಈ ಕ್ರಿಯೆಯಲ್ಲಿ ಭಗವಂತ ಎಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸಿ , ಜೀವಕ್ಕೆ ವಿಶ್ರಾಂತಿ ಕೊಟ್ಟು, ಮರುಸೃಷ್ಟಿ ಕಾಲದಲ್ಲಿ ಪುನಃ ಜೀವರನ್ನು ಈ ಪ್ರಪಂಚಕ್ಕೆ ಪ್ರೀತಿಯಿಂದ ಕಳುಹಿಸಿಕೊಡುತ್ತಾನೆ! ಇಂತಹ ಅದ್ಬುತವಾದ ಶಕ್ತಿ-ವ್ಯಾಲ.
ಪ್ರತ್ಯಯ : ಪ್ರತ್ಯಯ ಅಂದರೆ ಜ್ಞಾನಸ್ವರೂಪನಾಗಿ, ಪ್ರತಿಯೊಂದನ್ನೂ ತಿಳಿದವ ಹಾಗು ಪ್ರತಿಯೊಂದರೊಳಗೂ ಇರುವವನು (Omnipresent , Omniscience).
ಸ್ಸರ್ವದರ್ಶನಃ : ಭಗವಂತ ವಿಶ್ವಚಕ್ಷು, ವಿಶ್ವತೂಮುಖ. ಆತ ಪ್ರತಿಯೊಂದನ್ನೂ ಕಣ್ಣಾರೆ ಕಾಣುತ್ತಿರುತ್ತಾನೆ. ಅವನಿಂದ ಯಾವುದನ್ನೂ ಮುಚ್ಚಿಡಲು ಸಾದ್ಯವಿಲ್ಲ. ಸರ್ವ ವೇದ-ಶಾಸ್ತಗಳು ಯಾರನ್ನು ವರ್ಣಿಸುತ್ತವೂ ಅಂತಹ ಭಗವಂತ ಸರ್ವದರ್ಶನಃ.
ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ |
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಃಸೃತಃ || ೧೧ ||
ಅಜಃ : ಅಜಃ ಅಂದರೆ ಯಾರಿಂದಲೂ ಹುಟ್ಟದವನು, ಆದರೆ ಎಲ್ಲರಲ್ಲೂ ಹುಟ್ಟುವವನು ಎಂದರ್ಥ. ತದ್ವಿರುದ್ದವಾದ ಅರ್ಥ ಎನ್ನುತೀರಾ? ಹೌದು, ಭಗವಂತ ಯಾರಿಂದಲೋ ಹುಟ್ಟಿ ಬರುವ ವಸ್ತುವಲ್ಲ. ಆದರೆ ಬಿಂಬ ರೂಪನಾಗಿ ಪ್ರತಿಯೊಂದು ಗರ್ಭದಲ್ಲಿ ನೆಲೆಸಿ ಏಕ ಕಾಲದಲ್ಲಿ ಅನೇಕ ರೂಪಿಯಾಗಿ ಹುಟ್ಟುವವನು.
ಗರ್ಭಿಣಿಯ ಹೊಟ್ಟೆ ಹಾಗು ದೇವರ ಗುಡಿಯಲ್ಲಿ ಮುಖ್ಯ ಮೂರ್ತಿ ಇರುವ ಸ್ಥಳ -ಇವೆರಡನ್ನೂ “ಗರ್ಭ” ಎನ್ನುವ ಏಕಪದದಿಂದ ಸಂಬೋದಿಸುತ್ತಾರೆ (ಬೇರೆ ಪದ ಲಬ್ಯವಿಲ್ಲ). ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿಯಲ್ಲಿ, ಆಹ್ವಾನ ಮಾಡಿದಾಗ ದೇವರ ಆಗಮನವಾದರೆ, ಗರ್ಭಿಣಿಯ ಗರ್ಭದಲ್ಲಿ ಭಗವಂತ ಬಿಂಬರೂಪನಾಗಿ ನೆಲಸಿ ಜನಿಸುತ್ತಾನೆ. ಇಂತಹ ಭಗವಂತ ಅಜಃ.
ಸರ್ವೇಶ್ವರಃ : ಯಾರು ತನ್ನನ್ನು ಭಕ್ತಿಯಿಂದ ಕರೆಯುತ್ತಾರೂ ಅಂತವರಿಗೆ ಸದಾಕಾಲ ಲಬ್ಯವಿರುವ, ಎಲ್ಲಾ ಈಶ್ವರರ-ಈಶ್ವರ ಸರ್ವೇಶ್ವರ. | ಸಿದ್ಧಃ : ಈ ಜಗತ್ತಿನಲ್ಲಿರುವ ಎಲ್ಲಾ ಶಾಸ್ತ್ರ ಹಾಗು ವೇದಗಳು ಸರ್ವ ಸಿದ್ದನಾದ ಭಗವಂತನನ್ನು ಹಾಗು ಅವನ ತತ್ವಗಳನ್ನು ತಿಳಿಸುತ್ತವೆ. ಈ ಎಲ್ಲಾ ವೇದ-ಶಾಸ್ತ್ರಗಳ ಮೂಲನಾಗಿರುವ, ಭಕ್ತರ ಹೃದಯನಿವಾಸಿ ಭಗವಂತ ಸಿದ್ದ.
ಸಿದ್ಧಿಃ : ಸಮಸ್ತ ಪುರುಷಾರ್ಥ ಸಿದ್ದಿ ಯಾರಿಂದ ಆಗುತ್ತದೋ ಅವನು ಸಿದ್ದಿ. ಸಮಸ್ತ ಕಾರ್ಯಗಳ ಸಿದ್ದಿದಾಯಕನಾದ ಭಗವಂತ ಸಿದ್ದಿ. ಸರ್ವಾದಿ : ಎಲ್ಲವುದರ ಆದಿ, ಎಲ್ಲವುದರ ಮೊದಲು ಇರುವವ, ಹಾಗು ಎಲ್ಲವನ್ನೂ ಸ್ವೀಕರಿಸುವ ಭಗವಂತ ಸರ್ವಾದಿ.
ಅಚ್ಯುತಃ : ಎಲ್ಲವನ್ನೂ ಸ್ವೀಕರಿಸಿ, ಎಲ್ಲವನ್ನೂ ನಾಶಮಾಡಿ(ಪ್ರಳಯ), ಯಾವುದೇ ಚ್ಯುತಿ ಇಲ್ಲದೇ ಅನಂತವಾಗಿ ಅಖಂಡವಾಗಿ ಇರುವ ಭಗವಂತ ಅಚ್ಯುತ. ವಿ. ಸೂ: ಸ್ಸ್ಥವಿರೋ ಧ್ರುವಃ ಅನ್ನುವ ನಾಮವನ್ನು ನಾವು ಏಕ ನಾಮವಾಗಿ ವಿಶ್ಲೇಷಿಸಿದ್ದೇವೆ. ಆದರೆ ಇದು ಸ್ಥವಿರ ಹಾಗು ದ್ರುವ ಅನ್ನುವ ಎರಡು ನಾಮ ಕೂಡ ಹೌದು.
ಹೀಗೆ ಎರಡು ನಾಮವಾಗಿ ನೋಡಿದಾಗ ಮೇಲಿನ ‘ಅಚ್ಯುತ’ ನಾಮ ಭಗವಂತನ 101 ನೇ ನಾಮವಾಗುತ್ತದೆ. ಮೊದಲ 12 ನಾಮಗಳು ಅಥರ್ವವೇದವನ್ನೂ, ಇಪ್ಪತ್ನಾಲ್ಕರವರಿಗಿನ ನಾಮ ಋಗ್ವೇದವನ್ನೂ, ಹಾಗು 101 ರ ತನಕ ಬರುವ ನಾಮಗಳು ಯಜುರ್ವೆದವನ್ನೂ ಪ್ರತಿಪಾದಿಸುತ್ತವೆ.
ಈ ಮೇಲಿನ 101 ನಾಮಗಳ ಅರ್ಥ ಸಹಿತ ಪಾರಾಯಣ-ಮೂರು ಅಮೂಲ್ಯ ವೇದಗಳ ಪಾರಾಯಣಕ್ಕೆ ಸಮಾನ. ಮುಂದೆ ಬರುವ ನಾಮಗಳು ಸಾಮವೇದವನ್ನು ಪ್ರತಿಪಾದಿಸುತ್ತವೆ. ಮುಂದಿನ ದಿನಗಳಲ್ಲಿ ಉಳಿದ 899 ನಾಮಾರ್ಥವನ್ನು ತಿಳಿಯಲು ಅವಕಾಶ ಮಾಡಿಕೊಡಬೇಕಾಗಿ, ಆ ಪರಬ್ರಹ್ಮ ಮೂರ್ತಿಯಲ್ಲಿ ಬೇಡೋಣ. ಈ ಅಮೂಲ್ಯ ನಾಮರ್ಥವನ್ನು ಅರಿತ ನಿಮಗೆಲ್ಲರಿಗೂ ಆ ಭಗವಂತನು ಸನ್ಮಂಗಳವನ್ನುಂಟುಮಾಡಲಿ.
ವೃಷಾಕಪಿ : ಮೇಲ್ನೋಟಕ್ಕೆ ವೃಶ+ಕಪಿ=ವೃಷಾಕಪಿ, ಅಂದರೆ ನಾವು ಬಾಯಾರಿ ಬಳಲಿದಾಗ ನಮ್ಮ ಪೀಪಾಸವನ್ನು ತಣಿಸುವವ.(ವೃಶ ಅಂದರೆ ಮಳೆ ಸುರಿಸುವವನು, ಕಪಿ (ಕಂ+ಪಾಯತೆ) -ಅಂದರೆ ನೀರು ಕುಡಿಸುವವನು). ವೃಷಾ- ‘ಧರ್ಮ ಸ್ವರೂಪ’, ‘ನಮ್ಮ ಅಭಿಷ್ಟದ ಮಳೆ ಸುರಿಸುವವ’ ಎನ್ನುವ ಅರ್ಥವನ್ನೂ ಕೂಡ ಕೊಡುತ್ತದೆ.
ಅಕಪಿ ಅಂದರೆ ದುಃಖ ನಿವಾರಕ ಎಂದರ್ಥ. ಆದ್ದರಿಂದ ವೃಷಾಕಪಿ ಅಂದರೆ ನಮ್ಮ ಮೇಲೆ ಧರ್ಮದ ಮೂಲಕ ಅಭಿಷ್ಟದ ಮಳೆಗರೆದು, ನಮ್ಮ ಮನಸ್ಸಿನ ದುಃಖ ದುಗುಡವನ್ನು ನಿವಾರಿಸಿ, ಪೂರ್ಣಾನಂದವನ್ನು ಕೊಟ್ಟು, ತಾನೂ ಪೂರ್ಣಾನಂದವನ್ನು ಅನುಭವಿಸುವವನು ಎಂದರ್ಥ.
ಅಮೇಯಾತ್ಮಾ : ನಮ್ಮ ಮನಸ್ಸು ಬುದ್ದಿಗೆ ಒಂದು ಸೀಮೆ ಇದೆ. ಅದರಿಂದಾಚೆಗೆ ನಾವು ಗ್ರಹಿಸಲಾರೆವು. ಭಗವಂತನನ್ನು ನಮ್ಮ ಬುದ್ದಿಯಿಂದ ಅಳೆಯಲು ಅಸಾದ್ಯ, ಅದ್ದರಿಂದ ಆತ ಅಮೇಯಾತ್ಮಾ. ಭಗವಂತ ನಮಗೆ ತಿಳಿಯಲು ಅಸಾದ್ಯವಾದರೂ ಕೂಡ ಆತ ಅಣುವಿನಲ್ಲಿ ಅಣುವಾಗಿ ನಮ್ಮೊಳಗೇ ತುಂಬಿದ್ದಾನೆ.
ಆತ ಸೂಕ್ಷ್ಮಾತಿ ಸೂಕ್ಷ್ಮನೂ ಹೌದು. ನಮಗೆ ತಿಳಿದಿರುವುದು- ಮಣ್ಣು, ನೀರು, ಬೆಂಕಿ, ಗಾಳಿ ,ಆಕಾಶ, ಹಾಗು ಈ ಪಂಚಭೂತಗಳಿಂದಾದ ವಸ್ತುಗಳು ಮಾತ್ರ. ಆದರೆ ಭಗವಂತ ಇವೆಲ್ಲಕ್ಕಿಂತಲೂ ಬೇರೆ. ಆದ್ದರಿಂದ ನಮ್ಮ ಜೀವಸ್ವರೂಪನಾದ ಭಗವಂತನ ಕಲ್ಪನೆ ನಮಗಿಲ್ಲ. ಭಗವಂತನನ್ನು ನಮ್ಮ ಒಳಗಣ್ಣಿನಿಂದ ನೋಡುವ ಪ್ರಯತ್ನ ಮಾಡಬೇಕೇ ಹೊರತು, ಹೊರ ಪ್ರಪಂಚದಲ್ಲಿ ಹುಡುಕಿ ಪ್ರಯೋಜನವಿಲ್ಲ.
ಸರ್ವಯೋಗವಿನಿಸ್ಸೃತಃ : ಇಲ್ಲಿ ಯೋಗ ಅಂದರೆ ಸಂಬಂಧ ಅಥವಾ ಉಪಾಯ ಎನ್ನುವ ಅರ್ಥವನ್ನು ಕೊಡುತ್ತದೆ. ನಾವು ಏಲ್ಲಿ ಇರುತ್ತೇವೂ ಅದರ ಸಂಬಂಧದಲ್ಲಿರುತ್ತೇವೆ. ಭಗವಂತ ಎಲ್ಲಾಕಡೆ ಇದ್ದಾನೆ, ಆದರೆ ಅವನು ಯಾವುದಕ್ಕೂ ಅಂಟಿಕೊಂಡಿಲ್ಲ.
ಇದಕ್ಕೆ ಉತ್ತಮ ಉದಾಹರಣೆ ಎಂದರೆ ಆಕಾಶ. ಮಣ್ಣು, ನೀರು, ಬೆಂಕಿ ಅಥವಾ ಗಾಳಿ ಇದನ್ನು ಮುಟ್ಟಿದಾಗ ಅಂಟಿಕೊಳ್ಳುತ್ತದೆ, ಆದರೆ ಆಕಾಶ ಎಲ್ಲಾಕಡೆ ಇದ್ದರೂ ಕೂಡಾ, ಯಾವುದಕ್ಕೂ ಅಂಟಿಕೊಂಡಿಲ್ಲ. ಭಗವಂತ ಕೂಡ ಹೀಗೆ. ಎಲ್ಲಾಕಡೆ ಇದ್ದರೂ ಕೂಡ ಯಾವುದನ್ನೂ ಅಂಟಿಸಿಕೊಳ್ಳದವನು. ಆದ್ದರಿಂದ ಭಗವಂತ ಸರ್ವಯೋಗವಿನಿಸ್ಸೃತ.
ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಂಮಿತಃ ಸಮಃ |
ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ || ೧೨ ||
ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ |
ಅಮೃತಃ ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ || ೧೩ ||
ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ |
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿಃ || ೧೪ ||
ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ |
ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ || ೧೫ ||
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ |
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || ೧೬ ||
ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ |
ಅತೀಂದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ || ೧೭ ||
ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ |
ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ || ೧೮ ||
ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ |
ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ || ೧೯ ||
ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂಗತಿಃ |
ಅನಿರುದ್ಧಃ ಸದಾನಂದೋ ಗೋವಿಂದೋ ಗೋವಿದಾಂಪತಿಃ || ೨೦ ||
ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ |
ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ || ೨೧ ||
ಅಮೃತ್ಯುಃ ಸರ್ವದೃಕ್ ಸಿಂಹಃ ಸಂಧಾತಾ ಸಂಧಿಮಾನ್ ಸ್ಥಿರಃ |
ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ || ೨೨ ||
ಗುರುರ್ಗುರುತಮೋ ಧಾಮ ಸತ್ಯಃ ಸತ್ಯಪರಾಕ್ರಮಃ |
ನಿಮಿಷೋಽನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ || ೨೩ ||
ಅಗ್ರಣೀರ್ಗ್ರಾಮಣೀಃ ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ |
ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ || ೨೪ ||
ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ |
ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ || ೨೫ ||
ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ |
ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ || ೨೬ ||
ಅಸಂಖ್ಯೇಯೋಽಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ |
ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ || ೨೭ ||
ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರಃ |
ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ || ೨೮ ||
ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ |
ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ || ೨೯ ||
ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ |
ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ || ೩೦ ||
ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ |
ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ || ೩೧ ||
ಭೂತಭವ್ಯಭವನ್ನಾಥಃ ಪವನಃ ಪಾವನೋಽನಲಃ |
ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || ೩೨ ||
ಯುಗಾದಿಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ |
ಅದೃಶ್ಯೋಽವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್ || ೩೩ ||
ಇಷ್ಟೋ ವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ |
ಕ್ರೋಧಹಾ ಕ್ರೋಧಕೃತ್ ಕರ್ತಾ ವಿಶ್ವಬಾಹುರ್ಮಹೀಧರಃ || ೩೪ ||
ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ |
ಅಪಾಂನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಠಿತಃ || ೩೫ ||
ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ |
ವಾಸುದೇವೋ ಬೃಹದ್ಭಾನುರಾದಿದೇವಃ ಪುರಂದರಃ || ೩೬ ||
ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ |
ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ || ೩೭ ||
ಪದ್ಮನಾಭೋಽರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್ |
ಮಹರ್ದ್ಧಿಋ೯ದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ || ೩೮ ||
ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿಃ |
ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ || ೩೯ ||
ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಃ ಸಹಃ |
ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ || ೪೦ ||
ಉದ್ಭವಃ ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ |
ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ || ೪೧ ||
ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ |
ಪರರ್ದ್ಧಿಃ ಪರಮಃ ಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷೇಣಃ || ೪೨ ||
ರಾಮೋ ವಿರಾಮೋ ವಿರಜೋ ಮಾರ್ಗೋ ನೇಯೋ ನಯೋಽನಯಃ |
ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋ ಧರ್ಮವಿದುತ್ತಮಃ || ೪೩ ||
ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ |
ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ೪೪ ||
ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ |
ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ || ೪೫ ||
ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ |
ಅರ್ಥೋಽನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || ೪೬ ||
ಅನಿರ್ವಿಣ್ಣಃ ಸ್ಥವಿಷ್ಠೋ ಭೂರ್ಧರ್ಮಯೂಪೋ ಮಹಾಮಖಃ |
ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ ಕ್ಷಾಮಃ ಸಮೀಹನಃ || ೪೭ ||
ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂಗತಿಃ |
ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಮ್ || ೪೮ ||
ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ |
ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ || ೪೯ ||
ಸ್ವಾಪನಃ ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್ |
ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ || ೫೦ ||
ಧರ್ಮಕೃದ್ಧರ್ಮಗುಬ್ಧರ್ಮೀ ಸದಸತ್ ಕ್ಷರಮಕ್ಷರಮ್ |
ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣಃ || ೫೧ ||
ಗಭಸ್ತಿನೇಮಿಃ ಸತ್ತ್ವಸ್ಥಃ ಸಿಂಹೋ ಭೂತಮಹೇಶ್ವರಃ |
ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ || ೫೨ ||
ಉತ್ತರೋ ಗೋಪತಿರ್ಗೋಪ್ತಾ ಜ್ಞಾನಗಮ್ಯಃ ಪುರಾತನಃ |
ಶರೀರಭೂತಭೃದ್ಭೋಕ್ತಾ ಕಪೀಂದ್ರೋ ಭೂರಿದಕ್ಷಿಣಃ || ೫೩ ||
ಸೋಮಪೋಽಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ |
ವಿನಯೋ ಜಯಃ ಸತ್ಯಸಂಧೋ ದಾಶಾರ್ಹಃ ಸಾತ್ತ್ವತಾಂಪತಿಃ || ೫೪ ||
ಜೀವೋ ವಿನಯಿತಾ ಸಾಕ್ಷೀ ಮುಕುಂದೋಽಮಿತವಿಕ್ರಮಃ |
ಅಂಭೋನಿಧಿರನಂತಾತ್ಮಾ ಮಹೋದಧಿಶಯೋಽಂತಕಃ || ೫೫ ||
ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ |
ಆನಂದೋ ನಂದನೋ ನಂದಃ ಸತ್ಯಧರ್ಮಾ ತ್ರಿವಿಕ್ರಮಃ || ೫೬ ||
ಮಹರ್ಷಿಃ ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿಃ |
ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗಃ ಕೃತಾಂತಕೃತ್ || ೫೭ ||
ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ |
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರಃ || ೫೮ ||
ವೇಧಾಃ ಸ್ವಾಂಗೋಽಜಿತಃ ಕೃಷ್ಣೋ ದೃಢಃ ಸಂಕರ್ಷಣೋಽಚ್ಯುತಃ |
ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ || ೫೯ ||
ಭಗವಾನ್ ಭಗಹಾಽಽನಂದೀ ವನಮಾಲೀ ಹಲಾಯುಧಃ |
ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ || ೬೦ ||
ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ |
ದಿವಃಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ || ೬೧ ||
ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ |
ಸನ್ಯಾಸಕೃಚ್ಛಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಮ್ || ೬೨ ||
ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ |
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ || ೬೩ ||
ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ |
ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂವರಃ || ೬೪ ||
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || ೬೫ ||
ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ |
ವಿಜಿತಾತ್ಮಾ ವಿಧೇಯಾತ್ಮಾ ಸತ್ಕೀರ್ತಿಶ್ಚಿನ್ನಸಂಶಯಃ || ೬೬ ||
ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಃ ಸ್ಥಿರಃ |
ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ || ೬೭ ||
ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ |
ಅನಿರುದ್ಧೋಽಪ್ರತಿರಥಃ ಪ್ರದ್ಯುಮ್ನೋಽಮಿತವಿಕ್ರಮಃ || ೬೮ ||
ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ |
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ || ೬೯ ||
ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ |
ಅನಿರ್ದೇಶ್ಯವಪುರ್ವಿಷ್ಣುರ್ವೀರೋಽನಂತೋ ಧನಂಜಯಃ || ೭೦ ||
ಬ್ರಹ್ಮಣ್ಯೋ ಬ್ರಹ್ಮಕೃದ್ ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ |
ಬ್ರಹ್ಮವಿದ್ ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ || ೭೧ ||
ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ |
ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿಃ || ೭೨ ||
ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ |
ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ || ೭೩ ||
ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ |
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ || ೭೪ ||
ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || ೭೫ ||
ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋಽನಲಃ |
ದರ್ಪಹಾ ದರ್ಪದೋ ದೃಪ್ತೋ ದುರ್ಧರೋಽಥಾಪರಾಜಿತಃ || ೭೬ ||
ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್ |
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ || ೭೭ ||
ಏಕೋ ನೈಕಃ ಸವಃ ಕಃ ಕಿಂ ಯತ್ತತ್ಪದಮನುತ್ತಮಮ್ |
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ || ೭೮ ||
ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ |
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ || ೭೯ ||
ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ |
ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || ೮೦ ||
ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂ ವರಃ |
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ || ೮೧ ||
ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿಃ |
ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್ || ೮೨ ||
ಸಮಾವರ್ತೋ(ಽ)ನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ |
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ || ೮೩ ||
ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ |
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ || ೮೪ ||
ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ |
ಅರ್ಕೋ ವಾಜಸನಃ ಶೃಂಗೀ ಜಯಂತಃ ಸರ್ವವಿಜ್ಜಯೀ || ೮೫ ||
ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ |
ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ || ೮೬ ||
ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋಽನಿಲಃ |
ಅಮೃತಾಂಶೋಽಮೃತವಪುಃ ಸರ್ವಜ್ಞಃ ಸರ್ವತೋಮುಖಃ || ೮೭ ||
ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ |
ನ್ಯಗ್ರೋಧೋಽದುಂಬರೋಽಶ್ವತ್ಥಶ್ಚಾಣೂರಾಂಧ್ರನಿಷೂದನಃ || ೮೮ ||
ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ |
ಅಮೂರ್ತಿರನಘೋಽಚಿಂತ್ಯೋ(ಽ)ಭಯಕೃದ್ಭಯನಾಶನಃ || ೮೯ ||
ಅಣುರ್ಬೃಹತ್ ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ |
ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || ೯೦ ||
ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ |
ಆಶ್ರಮಃ ಶ್ರಮಣಃ ಕ್ಷಾಮಃ ಸುಪರ್ಣೋ ವಾಯುವಾಹನಃ || ೯೧ ||
ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ |
ಅಪರಾಜಿತಃ ಸರ್ವಸಹೋ ನಿಯಂತಾ ನಿಯಮೋ ಯಮಃ || ೯೨ ||
ಸತ್ತ್ವವಾನ್ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |
ಅಭಿಪ್ರಾಯಃ ಪ್ರಿಯಾರ್ಹೋಽರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || ೯೩ ||
ವಿಹಾಯಸಗತಿ ರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ |
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ || ೯೪ ||
ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋಽಗ್ರಜಃ |
ಅನಿರ್ವಿಣ್ಣಃ ಸದಾಮರ್ಷೀ ಲೋಕಾಧಿಷ್ಠಾನಮದ್ಭುತಃ || ೯೫ ||
ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ |
ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || ೯೬ ||
ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ |
ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ || ೯೭ ||
ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ ಕ್ಷಮಿಣಾಂವರಃ |
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ || ೯೮ ||
ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ |
ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ || ೯೯ ||
ಅನಂತರೂಪೋಽನಂತಶ್ರೀರ್ಜಿತಮನ್ಯುರ್ಭಯಾಪಹಃ |
ಚತುರಸ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ || ೧೦೦ ||
ಅನಾದಿರ್ಭೂರ್ಭುವೋ ಲಕ್ಷ್ಮೀಃ ಸುವೀರೋ ರುಚಿರಾಂಗದಃ |
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ || ೧೦೧ ||
ಆಧಾರನಿಲಯೋ ಧಾತಾ ಪುಷ್ಪಹಾಸಃ ಪ್ರಜಾಗರಃ |
ಊರ್ಧ್ವಗಃ ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ || ೧೦೨ ||
ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ |
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || ೧೦೩ ||
ಭೂರ್ಭುವಃ ಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ |
ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನಃ || ೧೦೪ ||
ಯಜ್ಞಭೃದ್ ಯಜ್ಞಕೃದ್ ಯಜ್ಞೀ ಯಜ್ಞಭುಗ್ ಯಜ್ಞಸಾಧನಃ |
ಯಜ್ಞಾಂತಕೃದ್ ಯಜ್ಞಗುಹ್ಯಮನ್ನಮನ್ನಾದ ಏವ ಚ || ೧೦೫ ||
ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ |
ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || ೧೦೬ ||
ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ |
ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || ೧೦೭ ||
|| ಶ್ರೀ ಸರ್ವಪ್ರಹರಣಾಯುಧ ಓಂ ನಮ ಇತಿ ||
ವನಮಾಲೀ ಗದೀ ಶಾರ್ಜ್ಗೀ ಶಂಖೀ ಚಕ್ರೀ ಚ ನಂದಕೀ |
ಶ್ರೀಮಾನ್ ನಾರಾಯಣೋ ವಷ್ಣುರ್ವಾಸುದೇವೋಭಿರಕ್ಷತು ||
|| ಫಲ ಶೃತಿ ||
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್ || ೧ ||
ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ |
ನಾಶುಭಂ ಪ್ರಾಪ್ನುಯಾತ್ಕಿಂಚಿತ್ ಸೋಽಮುತ್ರೇಹ ಚ ಮಾನವಃ || ೨ ||
ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೆತ್ |
ವೈಶ್ಯೋ ಧನಸಮೃದ್ಧಃ ಸ್ಯಾಚ್ಛೂದ್ರಃ ಸುಖಮವಾಪ್ನುಯಾತ್ || ೩ ||
ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಮರ್ಥಾರ್ಥೀ ಚಾರ್ಥಮಾಪ್ನುಯಾತ್ |
ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಪ್ರಾಪ್ನುಯಾತ್ ಪ್ರಜಾಮ್ || ೪ ||
ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ |
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ || ೫ ||
ಯಶಃ ಪ್ರಾಪ್ನೋತಿ ವಿಪುಲಂ ಜ್ಞಾತಿಪ್ರಾಧಾನ್ಯಮೇವ ಚ |
ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್ || ೬ ||
ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ |
ಭವತ್ಯರೋಗೋ ದ್ಯುತಿಮಾನ್ ಬಲರೂಪಗುಣಾನ್ವಿತಃ || ೭ ||
ರೊಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ |
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ || ೮ ||
ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ || ೯ ||
ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ |
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್ || ೧೦ ||
ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ || ೧೧ ||
ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ |
ಯುಜ್ಯೇತಾತ್ಮಸುಖಕ್ಷಾಂತಿಶ್ರೀಧೃತಿಸ್ಮೃತಿಕೀರ್ತಿಭಿಃ || ೧೨ ||
ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ |
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ || ೧೩ ||
ದ್ಯೌಃ ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ |
ವಾಸುದೇವಸ್ಯ ವೀರ್ಯೆಣ ವಿಧೃತಾನಿ ಮಹಾತ್ಮನಃ || ೧೪ ||
ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ |
ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್ || ೧೫ ||
ಇಂದ್ರಿಯಾಣಿ ಮನೋ ಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ |
ವಾಸುದೇವಾತ್ಮಕಾನ್ಯಾಹುಃ ಕ್ಷೇತ್ರಂ ಕ್ಷೇತ್ರಜ್ಞ ಏವ ಚ || ೧೬ ||
ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಪತೇ |
ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ || ೧೭ ||
ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ |
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ || ೧೮ ||
ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿ ಕರ್ಮ ಚ |
ವೇದಾಃ ಶಾಸ್ತ್ರಾಣಿ ವಿಜ್ಞಾನಮೇತತ್ ಸರ್ವಂ ಜನಾರ್ದನಾತ್ || ೧೯ ||
ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ |
ತ್ರೀನ್ ಲೋಕಾನ್ ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ || ೨೦ ||
ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ |
ಪಠೇದ್ಯ ಇಚ್ಛೇತ್ ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ || ೨೧ ||
ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಮ್ |
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ || ೨೨ ||
|| ನ ತೇ ಯಾಂತಿ ಪರಾಭವಂ ಓಂ ನಮ ಇತಿ ||
ಅರ್ಜುನ ಉವಾಚ
ಪದ್ಮಪತ್ರ ವಿಶಾಲಕ್ಷ ಪದ್ಮನಾಭ ಸುರೋತ್ತಮ |
ಭಕ್ತಾನಾಮನುರಕ್ತಾನಾಂ ತ್ರಾತಾ ಭವ ಜನಾರ್ದನ ||
ಶ್ರೀ ಭಗವಾನುವಾಚ
ಯೋ ಮಾಂ ನಾಮಸಹಸ್ರೇಣ ಸ್ತೋತುಮಿಚ್ಛತಿ ಪಾಂಡವ |
ಸೋಹಮೇಕೇನ ಶ್ಲೋಕೇನ ಸ್ತುತ ಏನ ನ ಸಂಶಯಃ ||
|| ಸ್ತುತ ಏವ ನ ಸಂಶಯಃ ಓಂ ನಮ ಇತಿ ||
ವ್ಯಾಸ ಉವಾಚ
ವಾಸನಾದ್ವಾಸುದೇವಸ್ಯ ವಾಸಿತಂ ತೇ ಜಗತ್ತ್ರಯಮ್ |
ಸರ್ವಭೂತನಿವಾಸೋಸಿ ವಾಸುದೇವ ನಮೋಸ್ತುತೇ ||
|| ಶ್ರೀ ವಾಸುದೇವ ನಮೋಸ್ತುತ ಓಂ ನಮ ಇತಿ ||
ಪಾರ್ವತ್ಯುವಾಚ
ಕೇನೋಪಾಯೇನ ಲಘುನಾ ವಿಷ್ಣೋರ್ನಾಮಸಹಸ್ರಕಮ್ |
ಪಠ್ಯತೇ ಪಂಡಿತೈರ್ನಿತ್ಯಂ ಶ್ರೋತುವಿಚ್ಚಾಮ್ಯಹಂ ಪ್ರಭೋ ||
ಈಶ್ವರ ಉವಾಚ
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮತತ್ತುಲ್ಯುಂ ರಾಮನಾಮ ವರಾನನೇ ||
|| ಶ್ರೀರಾಮನಾಮ ವರಾನನ ಓಂ ನಮ ಇತಿ ||
ಬ್ರಹ್ಯೋವಾಚ
ನಮೋಸ್ತ್ವನಂತಾಯ ಸಹಸ್ರಮೂರ್ತಯೇ
ಸಹಸ್ರಪಾದಾಕ್ಷಿಶಿರೋರುಬಾಹವೇ |
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ
ಸಹಸ್ರಕೋಟಿಯುಗಧಾರಿಣೇ ನಹಃ ||
|| ಶ್ರೀ ಸಹಸ್ರಕೋಟಿಯುಗಧಾರಿಣಿ ಓಂ ನಮ ಇತಿ ||
ಸಂಜಯ ಉವಾಚ
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶೀರ್ವಿಜಯೋ ಭೂತಿರ್ದ್ರುವಾ ನೀತಿರ್ಮತಿರ್ಮಮ ||
ಶ್ರೀ ಭಗವಾನುವಾಚ
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ಮಹಾಮ್ಯಹಮ್ ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕ್ರುತಾಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||
ಆರ್ತಾ ವಿಷಣ್ಣಾಶಿಥಿಲಾಶ್ಚ ಭೀತಾಃ
ಘೋರೇಷು ಚ ವ್ಯಾದಿಷು ವರ್ತಮಾನಾಃ |
ಸಂಕೀರ್ತ್ಯ ನಾರಾಯಣಶಬ್ದಮಾತ್ರಂ
ವಿಮುಕ್ತದುಃಖಾಃ ಸುಖಿನೋ ಭವಂತಿ ||
ಯದಕ್ಷರ ಪದಭ್ರಷ್ಟ ಮಾತ್ರಾಹೀನಂ ತು ಯದ್ಬವೇತ್ |
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಸ್ತುತೇ ||
ಕಾಯೇನ ವಾಚಾ ಮನಸೇಂದ್ರಿಯೇರ್ವಾ
ಬುದ್ದ್ಯಾತ್ಮ ನಾವ ಪ್ರಕೃತೇ ಸ್ವಾಭಾವತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ
ಶ್ರೀಮನ್ನಾರಾಯಣಾಯೇತಿ ಸಮರ್ಪಯಾಮಿ ||
ಇದನ್ನು ಮುಂದುವರಿಸಲಾಗುವುದು. ದಯವಿಟ್ಟು ಸ್ವಲ್ಪ ಸಮಯದ ನಂತರ ಪುನಃ ಈ ಪೋಸ್ಟ್‌ಗೆ ವಿಸಿಟ್ ಕೊಡಿ.
ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.
To watch videos on #Hinduism #Sanskrit language, SUBSCRIBE to my YouTube channel from this below link:
#BhagavanBhakthi YouTube channel
“ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:
ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ
To full list of “Chandravanshi Kings (Chandravamsha) (Lunar dynasty) family tree (members) names“, kindly click the below link:
Chandravanshi Kings (Chandravamsha) (Lunar dynasty) family tree (members) names
To know more about “Pandavas information (facts)“, please click the below link:
To full list of “Suryavanshi (Solar dynasty) (Suryavamsha) family tree (members) names“, kindly click the below link:
Suryavanshi Kings (Solar dynasty) (Suryavamsha) family tree (members) names
ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.
ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.
ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.
ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್ ಮಾಡಿಕೊಳ್ಳಿ.
ಏಕೆಂದರೆ “ಶೇರ್ ಮಾಡುವುದೆಂದರೆ ಕೇರ್ ಮಾಡುವುದು ಎಂದರ್ಥ”.
#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.
ವಂದನೆಗಳು!
ಶ್ರೀ ಗುರುಭ್ಯೋ ನಮಃ
ಶ್ರೀ ರಾಘವೇಂದ್ರಾಯ ನಮಃ
ಶ್ರೀ ಕೃಷ್ಣಾರ್ಪನಮಸ್ತು
Share in Social Media
Good
ಶ್ರೀ ಶ್ರೀಪಾದರವರೆ,
ನಿಮ್ಮ ಕಾಮೆಂಟ್ಗಾಗಿ ಧನ್ಯವಾದಗಳು.
ಶುಭಮಸ್ತು!
ಶುಭ ವಾಗಲಿ, ಧನ್ಯವಾದಗಳು ಸರ್ 🙏
ಶ್ರೀ ನಾಗೇಶ್ ಅಡಿಗರೇ, ನಿಮ್ಮ ಕಾಮೆಂಟ್ಗಾಗಿ ಧನ್ಯವಾದಗಳು. ಶುಭಮಸ್ತು!