ವಿಷ್ಣುವಿನ ವಿಭಿನ್ನ (ಅಜ್ಞಾತ) ಅವತಾರಗಳು | Unknown avatars of Vishnu in Kannada
ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣುವಿನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!
ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನಲ್ #BhagavanBhakthi ಗೆ ಚಂದಾದಾರರಾಗಿ.
ನನ್ನ ಆತ್ಮೀಯ ಸ್ನೇಹಿತರೇ, ಭಗವಂತ ಶ್ರೀ ವಿಷ್ಣುವು ಅನಂತ ಸಂಖ್ಯೆಯ ಅವತಾರಗಳನ್ನು ತೆಗೆದುಕೊಂಡಿದ್ದಾನೆ ಮತ್ತು ಭವಿಷ್ಯದಲ್ಲಿಯೂ ಕೂಡ ಅನಂತ ಸಂಖ್ಯೆಯ ಅವತಾರಗಳನ್ನು ತೆಗೆದುಕೊಳ್ಳುತ್ತಾನೆ.
ಈ ಭೂಮಿಯಲ್ಲಿ ಅಧರ್ಮವಾಗಿ (ಅನ್ಯಾಯ, ನೀಚತನ, ಇತ್ಯಾದಿ) ನಡೆದಾಗ, ಭಗವಂತ ಶ್ರೀ ವಿಷ್ಣುವು ಈ ಭೂಮಿಯ ಮೇಲೆ ಖಂಡಿತವಾಗಿಯೂ ಅವತಾರವನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾನೆ.
ಅವನ ಅವತಾರಗಳ ಮುಖ್ಯ ಉದ್ದೇಶವು ಅಧರ್ಮಿಗಳನ್ನು ನಾಶಮಾಡುವುದು ಮತ್ತು ಈ ಭೂಮಿಯಲ್ಲಿ ಧರ್ಮವನ್ನು ಪುನಃ ಸ್ಥಾಪಿಸುವುದು ಅಥವಾ ಎರಡೂ ಸಹ ಆಗಿರುತ್ತದೆ.
ಭಗವಂತ ಶ್ರೀ ವಿಷ್ಣುವು ಈ ಭೂಮಿಯಲ್ಲಿರುವ ಸಾಧುಗಳು (ಧರ್ಮದ ಅನುಯಾಯಿಗಳು), ಸಜ್ಜನರು (ಧಾರ್ಮಿಕ ಜನರು), ಭಕ್ತರು ಇತ್ಯಾದಿಗಳನ್ನು ಯಾವಾಗಲೂ ರಕ್ಷಿಸುತ್ತಾನೆ ಮತ್ತು ಹಾಗೆಯೇ ಅವನು ಸಾಧುಗಳು, ಸಜ್ಜನರು, ಭಕ್ತರು ಇತ್ಯಾದಿಗಳ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸುತ್ತಾನೆ.
ಈ ಪೋಸ್ಟ್ ದಶಾವತಾರ (10 ಅವತಾರಗಳು) ಹೊರತುಪಡಿಸಿ ಭಗವಂತ ಶ್ರೀ ವಿಷ್ಣುವಿನ ವಿವಿಧ (ಅಜ್ಞಾತ) ಅವತಾರಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ.
ಮೊದಲು ವಿಷ್ಣುವಿನ ವಿವಿಧ (ಅಜ್ಞಾತ) ಅವತಾರಗಳ ಹೆಸರುಗಳನ್ನು ತಿಳಿದುಕೊಳ್ಳೋಣ ಮತ್ತು ನಂತರ ವಿಷ್ಣುವಿನ ಅವತಾರಗಳ ಸಂಕ್ಷಿಪ್ತ ತಿಳುವಳಿಕೆಯನ್ನು ಪಡೆಯೋಣ.
ವಿಷ್ಣುವಿನ ವಿವಿಧ (ಅಜ್ಞಾತ) ಅವತಾರಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:
ಹಯಗ್ರೀವ
ವೇದವ್ಯಾಸ
ಮಹಿದಾಸ (ಐತರೇಯ)
ಯಜ್ಞ
ಕಪಿಲ
ಧನ್ವಂತರಿ
ಮೋಹಿನಿ
ದತ್ತಾತ್ರೇಯ
ಕುಮಾರ (ಸನತ ಕುಮಾರ)
ಹೃಷಭ
ಹಂಸ
ನಾರಾಯಣ, ಹರಿ ಮತ್ತು ಕೃಷ್ಣ ಇತ್ಯಾದಿ.
ಈಗ, ಕೆಳಗೆ ನೀಡಿರುವಂತೆ ಮೇಲಿನ ಎಲ್ಲಾ ಅವತಾರಗಳ ಸಂಕ್ಷಿಪ್ತ ತಿಳುವಳಿಕೆಯನ್ನು ನಾವೀಗ ಅರಿಯೋಣ:
ಹಯಗ್ರೀವ : ಹಯಗ್ರೀವನ ಈ ಅವತಾರದಲ್ಲಿ ವಿಷ್ಣುವು ಮಧು ಮತ್ತು ಕೈಟಭ ಎಂಬ ಇಬ್ಬರು ರಾಕ್ಷಸರನ್ನು ಸಂಹರಿಸುತ್ತಾನೆ.
ಶ್ರೀಮದ್ ಭಾಗವತ ಪುರಾಣವು ಹೇಳುವಂತೆ, ಭಗವಂತ ಶ್ರೀ ಹಯಗ್ರೀವ (ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿ ಎಂದೂ ಕರೆಯುತ್ತಾರೆ) ಮಧು ಮತ್ತು ಕೈಟಭ ಎಂಬ ಇಬ್ಬರು ರಾಕ್ಷಸರನ್ನು ಸಂಹರಿಸುತ್ತಾನೆ, ಏಕೆಂದರೆ ಈ ಇಬ್ಬರು ರಾಕ್ಷಸರು ಬ್ರಹ್ಮ ದೇವರಿಂದ ದೈವಿಕ ವೇದಗಳನ್ನು ಕದ್ದಿರುತ್ತಾರೆ.
ಮಧು ಮತ್ತು ಕೈಟಭ ಎಂಬ ರಾಕ್ಷಸರ ದೇಹಗಳನ್ನು 2 * 6 ಬಾರಿ, ಅಂದರೆ 12 ತುಂಡುಗಳಾಗಿ ವಿಘಟಿಸಲಾಗುತ್ತದೆ.
ಅಂದರೆ, ಎರಡು ತಲೆಗಳು, ಎರಡು ಮುಂಡಗಳು, ನಾಲ್ಕು ತೋಳುಗಳು ಮತ್ತು ನಾಲ್ಕು ಕಾಲುಗಳು. ಇವುಗಳು ಭೂಮಿಯ ಹನ್ನೆರಡು ಭೂಕಂಪನ ಫಲಕಗಳನ್ನು ಪ್ರತಿನಿಧಿಸುತ್ತವೆ ಎಂದು ಪರಿಗಣಿಸಲಾಗಿದೆ.
ವೇದವ್ಯಾಸ : ಜಗತ್ತು ಸನಾತನ ಧರ್ಮದ ಎಲ್ಲಾ ಅಮೂಲ್ಯವಾದ ಶಾಸ್ತ್ರಗಳನ್ನು ಕಳೆದುಕೊಂಡಿರುತ್ತದೆ, ಆಗ ಭಗವಂತ ಶ್ರೀ ವಿಷ್ಣುವು, ಶ್ರೀ ವೇದವ್ಯಾಸ ದೇವರ ಅವತಾರವನ್ನು ತೆಗೆದುಕೊಳ್ಳುತ್ತಾನೆ ಮತ್ತು ಹೀಗಾಗಿ ಅವನು ಪುನಃ ಎಲ್ಲಾ ಶಾಸ್ತ್ರಗಳನ್ನು ಮತ್ತೆ ರಚಿಸುತ್ತಾನೆ.
ಶ್ರೀ ವೇದವ್ಯಾಸ ದೇವರು, ಯುಧಿಷ್ಠಿರ (ಧರ್ಮರಾಯ – ಪಾಂಡವರಲ್ಲಿ ಮೊದಲನೆಯವರು) ಹುಟ್ಟುವ 600 ವರ್ಷಗಳ ಮೊದಲೇ ಜನಿಸಿರುತ್ತಾರೆ.
ಮಹಾಭಾರತ ಆಗುವ ಸುಮಾರು 600 ವರ್ಷಗಳ ಹಿಂದೆಯೇ, ಮಹಾಭಾರತ, ವೇದಗಳು, ಪುರಾಣಗಳು ಇತ್ಯಾದಿಗಳನ್ನು ಶ್ರೀ ವೇದವ್ಯಾಸ ದೇವರು ರಚನೆ ಮಾಡಿದ್ದರು.
ಶ್ರೀ ವೇದವ್ಯಾಸ ದೇವರು ಇನ್ನೂ ಸಹ ಈ ಭೂಮಿಯ ಮೇಲೆ ಬದರಿನಾಥದಲ್ಲಿ ವಾಸಿಸುತ್ತಿದ್ದಾರೆ (ಆ ಪ್ರದೇಶವನ್ನು ಮಹಾ ಬದರಿಕಾಶ್ರಮ ಎಂದೂ ಕರೆಯುತ್ತಾರೆ).
ಮಹಾ ಬದರಿಕಾಶ್ರಮ ಎಂದು ಕರೆಯಲ್ಪಡುವ ಈ ಸ್ಥಳವು ಕಲಿಯುಗದ ಸಾಮಾನ್ಯ ಮಾನವರಿಗೆ ಪ್ರವೇಶಿಸಲಾಗುವುದಿಲ್ಲ.
ಮಹಿದಾಸ (ಐತರೇಯ) : ಹಿಂದೂ ಶಾಸ್ತ್ರಗಳ ಪ್ರಕಾರ, ಶ್ರೀ ಮಹಿದಾಸ (ಭಗವಂತ ಶ್ರೀ ವಿಷ್ಣುವಿನ ಅವತಾರ) ಋಷಿ ವಿಶಲರ ಮಗ.
ಋಷಿ ವಿಶಲ, ಅನೇಕ ಹೆಂಡತಿಯರನ್ನು ಹೊಂದಿದ್ದರು, ಅವರಲ್ಲಿ ಶ್ರೀ ಮಹಿದಾಸನ ತಾಯಿ “ಇತರಾ” (इतरा / itarā) ಎಂದು.
ಇತರಾ ದೇವಿ ಕೆಳಜಾತಿಯಿಂದ ಬಂದವರು ಮತ್ತು ತನ್ನ ಮಗನಿಗೆ ತನ್ನ ಆಯ್ಕೆಮಾಡಿದ ದೇವತೆಯಾದ ಮಹಿಯ (ಭೂಮಿ ದೇವಿ) ಹೆಸರಿಟ್ಟಳು.
ಶ್ರೀ ಮಹಿದಾಸನು, ಭಗವಂತ ಶ್ರೀ ವಿಷ್ಣುವಿನ ಅವತಾರವಾಗಿ ತನ್ನ ಮಹಾನ್ ಮತ್ತು ಸಹಜವಾದ ಯೋಗ್ಯತೆಯೊಂದಿಗೆ, ಎಲ್ಲಾ ಸನಾತನ ಧರ್ಮದ ಶಾಸ್ತ್ರಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಕಲಿತನು.
ಶ್ರೀ ಮಹಿದಾಸನು ಇತರಾ ದೇವಿಯರ ಮಗನಾದ ಕಾರಣ ಐತರೇಯ ಎಂದೂ ಕರೆಯುತ್ತಾರೆ.
ಹೀಗಾಗಿ, ಶ್ರೀ ಮಹಿದಾಸ ಅಥವಾ ಐತರೇಯ ಅವರು ರಚಿಸಿದ ಶಾಸ್ತ್ರಗಳಿಗೆ ಐತರೇಯ ಬ್ರಾಹ್ಮಣ ಮತ್ತು ಅರಣ್ಯಕ ಎಂದು ಹೆಸರಿಸಿದರು, ಏಕೆಂದರೆ, ತನ್ನ ತಾಯಿಯ ಪ್ರೀತಿಯ ನೆನಪಿಗಾಗಿ ಮತ್ತು ಅವರ ತಾಯಿ ಇತರಾ ದೇವಿಯರ ಗೌರವಾರ್ಥವಾಗಿ.
ಯಜ್ಞ : ಭಗವಂತ ಶ್ರೀ ವಿಷ್ಣುವು “ಯಜ್ಞ” ಎಂದು ಕರೆಯಲ್ಪಡುವ ಮತ್ತೊಂದು ಅವತಾರವನ್ನು ತೆಗೆದುಕೊಂಡಿದ್ದಾನೆ.
ಯಜ್ಞ ಹೆಸರಿನಲ್ಲಿ ಅವತಾರ ತೆಗೆದುಕೊಂಡ ಭಗವಂತ ಶ್ರೀ ವಿಷ್ಣುವು ‘ರುಚಿ ಪ್ರಜಾಪತಿ’ ಎಂಬ ಋಷಿಯ ಮತ್ತು ತಾಯಿ ಆಕುತಿ ದೇವಿಯ (ಕೆಲವರು ಇದನ್ನು ಅಗೂತಿ ಎಂದು ಉಚ್ಚರಿಸುತ್ತಾರೆ) ಮಗನಾಗಿ ಹುಟ್ಟಿದನು.
ಭಗವಂತ ಶ್ರೀ ವಿಷ್ಣುವು, ಭಗವಂತ ಶ್ರೀ ಯಜ್ಞದ ಅವತಾರದಲ್ಲಿ ತನ್ನ ತಾಯಿಯನ್ನು ಜ್ಞಾನೋಪದೇಶವನ್ನು (ದೈವಿಕ ಜ್ಞಾನ) ನೀಡಿದನು.
ಸ್ವಯಂಭುವ ಮನುವಿನ (ಸ್ವಯಂಭುವ ಮನ್ವಂತರ) ಅವಧಿಯಲ್ಲಿ, ಸ್ವರ್ಗದ ರಾಜ ಮತ್ತು ದೇವತೆಗಳ ರಾಜನ ಹುದ್ದೆಗೆ ಅರ್ಹ ಶ್ರೀ ಇಂದ್ರ ದೇವರು ಇರಲಿಲ್ಲ.
ಹೀಗಾಗಿ, ಭಗವಂತ ಶ್ರೀ ವಿಷ್ಣು, ಸ್ವತಃ ಯಜ್ಞನಾಗಿ ಅವತರಿಸುತ್ತಾನೆ ಮತ್ತು ಶ್ರೀ ಇಂದ್ರನ ಹುದ್ದೆಯನ್ನು ಅಲಂಕರಿಸುತ್ತಾನೆ.
ಕಪಿಲ : ಭಗವಂತ ವಿಷ್ಣುವು ಕಪಿಲನ ಈ ಅವತಾರವನ್ನು ಋಷಿ ಕರ್ದಮ (ತಂದೆ) ಮತ್ತು ದೇವಹೂತಿ ದೇವಿಯ (ತಾಯಿ) ಮಗನಾಗಿ (10 ನೇ ಮಗು) ತೆಗೆದುಕೊಳ್ಳುತ್ತಾನೆ.
ಭಗವಂತ ಶ್ರೀ ವಿಷ್ಣು, ಭಗವಂತ ಶ್ರೀ ಕಪಿಲನ ಅವತಾರವಾಗಿ ತನ್ನ ತಾಯಿ ದೇವಹೂತಿ ದೇವಿಗೆ ಸಾಂಖ್ಯ ಶಾಸ್ತ್ರ ಎಂಬ ಶ್ರೇಷ್ಠ ಶಾಸ್ತ್ರದಿಂದ ಜ್ಞಾನೋಪದೇಶ ಮಾಡಿದನು.
ವೇದಗಳ ಪ್ರಕಾರ, ಋಷಿ ಕರ್ದಮರು ಭಗವಂತ ಶ್ರೀ ವಿಷ್ಣುವಿನಿಂದ ವರವನ್ನು ಪಡೆದುಕೊಳ್ಳುತ್ತಾರೆ, ಭಗವಂತ ಶ್ರೀ ಕಪಿಲ ತನ್ನ (ಕರ್ದಮನ ಮಗ) ಮಗನಾಗಿ ಜನಿಸುತ್ತಾನೆ.
ಇದಾದ ನಂತರ, ಋಷಿ ಕರ್ದಮರು ತಪಸ್ಸು ಮತ್ತು ವೇದಾಧ್ಯಯನದ ಸಂಶೋಧನೆಗಾಗಿ ಕಾಡಿಗೆ ಹೋಗಲು ನಿರ್ಧರಿಸುತ್ತಾರೆ.
ಋಷಿ ಕರ್ದಮರಿಗೆ 9 ಹೆಣ್ಣು ಮಕ್ಕಳಿದ್ದರು ಮತ್ತು ಈ 9 ಹೆಣ್ಣುಮಕ್ಕಳು ವೇದಗಳಲ್ಲಿ ಉನ್ನತ ಅರ್ಹತೆ ಹೊಂದಿದ್ದರು ಮತ್ತು ಮಹಾನ್ ಋಷಿಗಳನ್ನು ಮದುವೆಯಾಗುತ್ತಾರೆ.
ಧನ್ವಂತರಿ : ದೇವತೆಗಳನ್ನು ರಕ್ಷಿಸಲು ಭಗವಂತ ಶ್ರೀ ವಿಷ್ಣುವು ಭಗವಂತ ಧನ್ವಂತರಿಯ ಅವತಾರವನ್ನು ತೆಗೆದುಕೊಳ್ಳುತ್ತಾನೆ.
ಅಮೃತ ಮಂಥನದ (ಸಮುದ್ರ ಮಂಥನ) ಸಮಯದಲ್ಲಿ, ಭಗವಂತ ಶ್ರೀ ವಿಷ್ಣುವಿನ ಈ ದೈವಿಕ ಅವತಾರ, ಅಂದರೆ, ಭಗವಂತ ಧನ್ವಂತರಿಯು ದೈವಿಕ ಅಮೃತವನ್ನು (ಅಮೃತದ ಕಲಶ) ತರುತ್ತಾನೆ.
ಭಗವಂತ ಧನ್ವಂತರಿಯು ವಾರಣಾಸಿಯ ರಾಜನಾಗಿದ್ದನು (ಕಾಶಿ, ಬನಾರಸ್, ಇತ್ಯಾದಿ ಎಂದೂ ವಾರಣಾಸಿಯನ್ನು ಕರೆಯುತ್ತಾರೆ). ಭಗವಂತ ಧನ್ವಂತರಿಯನ್ನು “ಕಾಶಿಯ ದಿವೋದಶ ರಾಜ” ಎಂದು ಗುರುತಿಸಲಾಗುತ್ತದೆ.
ಭಾರತದಲ್ಲಿ ತಮ್ಮ ಮತ್ತು/ಅಥವಾ ಇತರರಿಗೆ ಆರೋಗ್ಯಕರ ಜೀವನಕ್ಕಾಗಿ ಆಶೀರ್ವಾದವನ್ನು ಕೋರಿ ಭಗವಂತ ಧನ್ವಂತರಿಯನ್ನು ಪೂಜಿಸುವುದು, ವಿಶೇಷವಾಗಿ ಧನ್ತೆರಸ್ ಅಥವಾ ಧನ್ವಂತರಿ ತ್ರಯೋದಶಿಯಂದು (“ರಾಷ್ಟ್ರೀಯ ಆಯುರ್ವೇದ ದಿನ”) ಇದನ್ನು ಆಚರಿಸಲಾಗುತ್ತದೆ.
ಮೋಹಿನಿ : ಭಗವಂತ ಶ್ರೀ ವಿಷ್ಣುವು ಮೋಹಿನಿ ರೂಪದ ಈ ಅವತಾರವನ್ನು ದೇವತೆಗಳಿಗೆ ದೈವಿಕ ಅಮೃತವನ್ನು ಕುಡಿಸಲು ತೆಗೆದುಕೊಳ್ಳುತ್ತಾನೆ.
ಮೋಹಿನಿ ಎಂಬ ಹೆಸರು “ಮೋಹ” (मोह / mōha) ಎಂಬ ಕ್ರಿಯಾಪದದಿಂದ ಬಂದಿದೆ, ಇದರ ಅರ್ಥ “ಆಕರ್ಷಿಸುವುದು, ಮೋಡಿಮಾಡುವುದು, ಗೊಂದಲಕ್ಕೆ ಒಳಪಡಿಸುವುದು, ಇತ್ಯಾತಿ ಅರ್ಥವನ್ನು ಹೊಂದಿದೆ” ಮತ್ತು ಇಲ್ಲದೆ, ಅಕ್ಷರಶಃ “ಭ್ರಮೆಯನ್ನು ಹುಟ್ಟಿಹಾಕುವುದು” ಎಂದು ಇದರ ಅರ್ಥವಾಗಿದೆ.
ದತ್ತಾತ್ರೇಯ : ಭಗವಂತ ಶ್ರೀ ವಿಷ್ಣುವು “ದತ್ತಾತ್ರೇಯ” ಎಂದು ಕರೆಯಲ್ಪಡುವ ಮತ್ತೊಂದು ಅವತಾರವನ್ನು ಮಹರ್ಷಿ ಅತ್ರಿ (ತಂದೆ) ಮತ್ತು ತಾಯಿ ಅನಸೂಯಾ ದೇವಿಯ ಮಗನಾಗಿ ಅರ್ಹ ಆತ್ಮಗಳಿಗೆ ಜ್ಞಾನೋಪದೇಶವನ್ನು (ದೈವಿಕ ಜ್ಞಾನ) ನೀಡುವುದಕ್ಕಾಗಿ ತೆಗೆದುಕೊಳ್ಳುತ್ತಾನೆ.
ಕೆಲವರು ಈ ಭಗವಂತ ಶ್ರೀ ವಿಷ್ಣುವಿನ ಅವತಾರವನ್ನು 3 ತಲೆಗಳ್ಳುಳ್ಳ ದೇವರು ಎಂದು ಗೊಂದಲಗೊಳಿಸುತ್ತಾರೆ, ಇದು ಸಂಪೂರ್ಣವಾಗಿ ತಪ್ಪಾಗಿದೆ.
ಭಗವಂತ ದತ್ತಾತ್ರೇಯನಿಗೆ ಕೇವಲ ಒಂದು ಮುಖವಿದೆ ಮತ್ತು ಇತರ ಇಬ್ಬರು ಶ್ರೀ ಚಂದ್ರ ಮತ್ತು ಋಷಿ ದೂರ್ವಾಸ.
ಇಲ್ಲಿ ಚಂದ್ರ ಎಂದರೆ, ಶ್ರೀ ಬ್ರಹ್ಮ ದೇವರ ಒಂದು ಅಂಶ / ಭಾಗ ಅವತಾರವಾಗಿದೆ – ಏಕೆಂದರೆ, ಶ್ರೀ ಬ್ರಹ್ಮ ದೇವರು ಭೂಮಿಯಲ್ಲಿ ನೇರ ಅವತಾರವನ್ನು ತೆಗೆದುಕೊಳ್ಳುವುದಿಲ್ಲ.
ಮತ್ತು, ಋಷಿ ದೂರ್ವಾಸ, ಶಿವನ ಅವತಾರ.
ಎಲ್ಲಾ 3 ಅವತಾರಗಳು, ಅಂದರೆ ಭಗವಂತ ದತ್ತಾತ್ರೇಯ, ಶ್ರೀ ಚಂದ್ರ ಮತ್ತು ಋಷಿ ದೂರ್ವಾಸರು ವಿಭಿನ್ನ ಮತ್ತು ವಿಶಿಷ್ಟ ವ್ಯಕ್ತಿಗಳು ಮತ್ತು ಒಂದೇ ದೇಹವನ್ನು ಹೊಂದಿರುವುದಿಲ್ಲ, ಆದರೆ ವಾಸ್ತವವಾಗಿ ಈ ಮೂವರೂ 3 ವಿಭಿನ್ನ ಮತ್ತು ವಿಶಿಷ್ಟವಾದ ದೇಹಗಳನ್ನು ಹೊಂದಿದ್ದಾರೆ.
To know “Is Dattatreya confluence of Brahma, Vishnu and Mahesh | Lord Dattatreya has 3 faces or 1 face“, click the below link:
Is Dattatreya confluence of Brahma, Vishnu and Mahesh | Lord Dattatreya has 3 faces or 1 face
ಕುಮಾರ (ಸನತ ಕುಮಾರ) : ಭಗವಂತ ಶ್ರೀ ವಿಷ್ಣುವು ಕುಮಾರ ಅಥವಾ ಸನತ ಕುಮಾರ ಎಂದು ಕರೆಯಲ್ಪಡುವ ಅವತಾರವನ್ನು ತೆಗೆದುಕೊಳ್ಳುತ್ತಾನೆ.
ಮಹಾನ್ ಋಷಿ ಪುಂಗವಾಸ್ ಭಗವಂತ ಶ್ರೀ ವಿಷ್ಣುವನ್ನು ಪ್ರಾರ್ಥಿಸಿದಾಗ, ಅವರು (ಭಗವಂತ ಶ್ರೀ ವಿಷ್ಣುವು) ಸುಂದರವಾದ ಕುಮಾರನ ರೂಪದಲ್ಲಿ ಋಷಿ ಪುಂಗವಾಸ್ ಮುಂದೆ ಕಾಣಿಸಿಕೊಂಡರು ಮತ್ತು ಋಷಿ ಪುಂಗವಾಸಿಗೆ ಜ್ಞಾನೋಪದೇಶದಿಂದ (ದೈವಿಕ ಜ್ಞಾನ) ಅನುಗ್ರಹಿಸಿದರು.
[ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, 4 ಸನತ ಕುಮಾರರ ಅವತಾರ ಬೇರೆಯದ್ದು ಮತ್ತು ಈ ಕುಮಾರನ (ಸನತ ಕುಮಾರ) ಅವತಾರವು ವಿಭಿನ್ನವಾದದ್ದು].
ಹೃಷಭ : ಭಗವಂತ ಶ್ರೀ ವಿಷ್ಣುವು ಜ್ಞಾನೋಪದೇಶವನ್ನು (ದೈವಿಕ ಜ್ಞಾನ) ನೀಡಲು ಶ್ರೀ ಹೃಷಭನ ಅವತಾರವನ್ನು ತೆಗೆದುಕೊಳ್ಳುತ್ತಾನೆ.
ಹಿಂದೂ ಧರ್ಮದಲ್ಲಿ (ಸನಾತನ ಧರ್ಮ), ಭಾಗವತ ಪುರಾಣದಲ್ಲಿ ನೀಡಿರುವಂತೆ ಭಗವಂತ ಶ್ರೀ ವಿಷ್ಣುವಿನ ಅವತಾರಗಳಲ್ಲಿ ಶ್ರೀ ಋಷಭನು ಒಂದು.
ಈ ಅವತಾರವು ಜೈನ ಧರ್ಮದ ಮೊದಲ ತೀರ್ಥಂಕರನಂತೆಯೇ ಇದೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ.
ಭಗವಂತ ಶ್ರೀ ವಿಷ್ಣುವಿನ ಈ ಅವತಾರ, ಅಂದರೆ, ಶ್ರೀ ಹೃಷಭನು, ಹೃಷಭನ ಹೆಸರಿನಲ್ಲಿ ರಾಜ ಕುಮಾರ (ರಾಜಕುಮಾರ) ಆಗಿದ್ದನು, ನಂತರ ಅವನು ಎಲ್ಲವನ್ನೂ ತ್ಯಜಿಸಿ, ಸನ್ಯಾಸ ಆಶ್ರಮವನ್ನು ಪ್ರವೇಶಿಸಿದನು.
ಮತ್ತೆ ನಂತರ, ಋಷಭನು ಸನತ ಕುಮಾರರಂತಹ ಋಷಿಗಳಿಗೆ (ಸನಕ ಕುಮಾರ, ಸನಾತನ ಕುಮಾರ, ಸನಂದನ ಕುಮಾರ ಮತ್ತು ಸನತ್ ಕುಮಾರ) ಜ್ಞಾನೋಪದೇಶವನ್ನು (ದೈವಿಕ ಜ್ಞಾನ) ನೀಡಿದನು.
ಹಂಸ : ಭಗವಂತ ಶ್ರೀ ವಿಷ್ಣುವು ಹಂಸ, ಅಂದರೆ, ಹಂಸ ಪಕ್ಷಿಯ ಅವತಾರವನ್ನು ತೆಗೆದುಕೊಳ್ಳುತ್ತಾನೆ.
ಹಿಂದೂ ಧರ್ಮದಲ್ಲಿ (ಸನಾತನ ಧರ್ಮ), ನಿಂಬರ್ಕರ ಸಂಪ್ರದಾಯದ ಮೊದಲ ಗುರು ಶ್ರೀ ಹಂಸ ದೇವರು (ಶ್ರೀ ಹಂಸ ಭಗವಾನ್).
ಭಗವಂತ ಹಂಸ ಸ್ವತಃ ಭಗವಂತ ಶ್ರೀ ವಿಷ್ಣುವಿನ ಅವತಾರಗಳಲ್ಲಿ ಒಬ್ಬರು.
ಸತ್ಯಯುಗದಲ್ಲಿ, ಭಗವಂತ ಶ್ರೀ ವಿಷ್ಣುವು ಸ್ವತಃ “ಚತುರ್ಭುಜ” ರೂಪದಲ್ಲಿ, ಅಂದರೆ, ಶಂಖ, ಸುದರ್ಶನ ಚಕ್ರ, ಗದೆ ಮತ್ತು ಕಮಲವನ್ನು ಹಿಡಿದುಕೊಂಡು ಅವತಾರವನ್ನು ತೆಗೆದುಕೊಳ್ಳುತ್ತಾನೆ.
ಹೀಗೆ, ಭಗವಂತ ಶ್ರೀ ವಿಷ್ಣುವು ಹಂಸ ಹೆಸರಿನಲ್ಲಿ ಬ್ರಹ್ಮನ ಮಕ್ಕಳಾದ ಸನಕಾದಿ ಋಷಿಗಳಿಗೆ ವೇದಗಳನ್ನು ಬೋಧಿಸಲು ಭೂಮಿಗೆ ಇಳಿಯುತ್ತಾನೆ.
ಇಲ್ಲಿ ಸನಕಾದಿ ಮುನಿಗಳು ಅಥವಾ ಋಷಿಗಳು ಎಂದರೆ 4 ಸನಾತ ಕುಮಾರರು ಹೆಸರುಗಳು ಹೀಗಿವೆ, ಸನಕ ಕುಮಾರ, ಸನಾತನ ಕುಮಾರ, ಸನಂದನ ಕುಮಾರ ಮತ್ತು ಸನತ ಕುಮಾರ.
ಮತ್ತು ಅವರ (4 ಸನತ ಕುಮಾರರು) ಪ್ರಾರ್ಥನೆಗೆ ಉತ್ತರವಾಗಿ, ಭಗವಂತ ಶ್ರೀ ವಿಷ್ಣುವು ಅವರ ಮುಂದೆ ಹಂಸ ಪಕ್ಷಿಯ ರೂಪದಲ್ಲಿ ಕಾಣಿಸಿಕೊಂಡರು ಮತ್ತು ಅವರಿಗೆ ಜ್ಞಾನೋಪದೇಶವನ್ನು (ದೈವಿಕ ಜ್ಞಾನ) ನೀಡಿದರು.
ನಾರಾಯಣ, ಹರಿ ಮತ್ತು ಕೃಷ್ಣ : ಭಗವಂತ ಶ್ರೀ ವಿಷ್ಣುವು ಶ್ರೀ ಯಮದೇವರ ಮಗನಾಗಿ ಭಗವಂತ ನಾರಾಯಣ, ಭಗವಂತ ಹರಿ ಮತ್ತು ಭಗವಂತ ಕೃಷ್ಣನ ಅವತಾರಗಳನ್ನು ತೆಗೆದುಕೊಳ್ಳುತ್ತಾನೆ.
ಭಗವಂತ ನಾರಾಯಣನು, ನರ ನಾರಾಯಣರಲ್ಲಿ, ನಾರಾಯಣ. ನರ ಮತ್ತು ನಾರಾಯಣ, ಇಂದಿಗೂ ದೈವಿಕ ಬದರಿನಾಥದಲ್ಲಿ (ನಾರಾಯಣ ಬದರಿಕಾಶ್ರಮ) ನೆಲೆಸಿದ್ದಾರೆ.
(ನಾರಾಯಣ ಬದರಿಕಾಶ್ರಮವು ಸಾಮಾನ್ಯ ಜನರಿಗೆ ಪ್ರವೇಶಿಸಲಾಗುವುದಿಲ್ಲ).
ಈ ಎಲ್ಲಾ ಅವತಾರಗಳು, ಅಂದರೆ ನಾರಾಯಣ, ಹರಿ ಮತ್ತು ಕೃಷ್ಣ ಮೂಲ ನಾರಾಯಣ, ಹರಿ ಮತ್ತು ಕೃಷ್ಣ (ದೇವಕಿ ಮತ್ತು ವಸುದೇವ ಪುತ್ರ) ಅವತಾರಗಳಿಗಿಂತ ಭಿನ್ನವಾಗಿವೆ.
ಆದರೆ, ಭಗವಂತ ಶ್ರೀ ವಿಷ್ಣು ಅಥವಾ ಅವನ ಯಾವುದೇ ಅವತಾರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು.
ತಾಪಸ : ಈ ಅವತಾರ ಭಗವಂತ ಶ್ರೀ ವಿಷ್ಣುವು ಸತ್ಯಯುಗದಲ್ಲಿ ಗ್ರಹದ (ಮೊಸಳೆ) ಹಿಡಿತದಿಂದ ಗಜವನ್ನು (ಆನೆ) ರಕ್ಷಿಸಲು ತೆಗೆದುಕೊಳ್ಳುತ್ತಾನೆ.
ಗ್ರಹ (ಮೊಸಳೆ), ಗಜದ (ಆನೆ) ಕಾಲು ಹಿಡಿದು ನದಿಯೊಳಗೆ ಗಜನನ್ನ (ಆನೆ) ಎಳೆಯುತ್ತಿರುತ್ತದೆ. ಈ ಸಮಯದಲ್ಲಿ, ಗಜ (ಆನೆ) ಭಗವಂತ ಶ್ರೀ ವಿಷ್ಣುವನ್ನು ರಕ್ಷಿಸಲು ಪ್ರಾರ್ಥಿಸುತ್ತಾನೆ.
ಹೀಗೆ ಭಗವಂತ ಶ್ರೀ ವಿಷ್ಣುವು ತಾಪಸ ಅವತಾರವನ್ನು ತೆಗೆದುಕೊಳ್ಳುತ್ತಾನೆ, ಶ್ರೀ ಗರುಡ ದೇವರ ಮೇಲೆ ಬಂದು ಗಜವನ್ನು (ಆನೆ) ಗ್ರಹದ (ಮೊಸಳೆ) ಹಿಡಿತದಿಂದ ರಕ್ಷಿಸುತ್ತಾನೆ.
ಅಂತಿಮವಾಗಿ, ಭಗವಂತ ಶ್ರೀ ವಿಷ್ಣುವು ಗಜಕ್ಕೆ (ಆನೆ) ದೈವಿಕ ಮೋಕ್ಷವನ್ನು (ಮುಕ್ತಿ) ನೀಡುತ್ತಾನೆ, ಅಂದರೆ ವೈಕುಂಠದಲ್ಲಿ ಒಂದು ಸ್ಥಳವನ್ನು ಒದಗಿಸುತ್ತಾನೆ. ಈ ವಿದ್ಯಮಾನವನ್ನು “ಗಜೇಂದ್ರ ಮೋಕ್ಷ” ಎಂದು ಕರೆಯಲಾಗುತ್ತದೆ.
ಭಗವಂತ ಶ್ರೀ ವಿಷ್ಣುವಿನ ವಿಭಿನ್ನ (ಅಜ್ಞಾತ) ಅವತಾರಗಳ ಬಗ್ಗೆ ತಿಳಿದುಕ್ಕೊಳ್ಳಲು, ಈ ಕೆಳಗಿನ YouTube ವಿಡಿಯೋ ಲಿಂಕ್ ಅನ್ನು ಕ್ಲಿಕ್ ಮಾಡಿ (In English):
ಹಿಂದೂ ಧರ್ಮದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:
ಹಿಂದೂ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ
To know more about Kashi (Varanasi / Banaras), please click the below link:
What are Kashi (Varanasi) unknown facts, significance
ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.
ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.
ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.
ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್ ಮಾಡಿಕೊಳ್ಳಿ.
ಏಕೆಂದರೆ “ಶೇರ್ ಮಾಡುವುದೆಂದರೆ ಕೇರ್ ಮಾಡುವುದು ಎಂದರ್ಥ”.
#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.
ವಂದನೆಗಳು!
ಶ್ರೀ ಗುರುಭ್ಯೋ ನಮಃ
ಶ್ರೀ ರಾಘವೇಂದ್ರಾಯ ನಮಃ
ಶ್ರೀ ಕೃಷ್ಣಾರ್ಪನಮಸ್ತು