ಶ್ರೀ ರಾಮನ ವಂಶಾವಳಿ (ವಂಶವೃಕ್ಷ) | Sri Rama’s Genealogy (Family Tree) in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ಶ್ರೀರಾಮನ ವಂಶಾವಳಿ (ವಂಶವೃಕ್ಷ) | Sri Rama’s Genealogy (Family Tree) in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಭಗವಂತ ಶ್ರೀ ಹರಿ, ಭಗವಂತ ಶ್ರೀ ರಾಮನಾಗಿ ದಶಾವತಾರದಲ್ಲಿ ಏಳನೇ ಅವತಾರವಾಗಿ ಈ ಭೂಮಿಯ ಮೇಲೆ ಅವತರಿಸುತ್ತಾನೆ. 

ತಂದೆ ದಶರಥ ಹಾಗೂ ತಾಯಿ ಕೌಸಲ್ಯೆಯ ಮಗನಾಗಿ, ಸೂರ್ಯವಂಶದಲ್ಲಿ (ರಘು ವಂಶ, ಇಕ್ಷ್ವಾಕುವಿನ ವಂಶ, ಎಂದೂ ಸಹ ಈ ಮಹತ್ತರವಾದ ವಂಶವನ್ನು ಕರೆಯಲಾಗುತ್ತದೆ.) ಭಗವಂತ ಶ್ರೀ ರಾಮನ ವಂಶ ಮೊದಲು ಪ್ರಾರಂಭವಾಗಿದ್ದು ಸ್ವಯಂ ಭಗವಂತ ಶ್ರೀ ಹರಿಯಿಂದಲೇ.

(ಇಲ್ಲಿ ಭಗವಂತ ಶ್ರೀ ರಾಮ, ಶ್ರೀ ಹರಿ, ಶ್ರೀ ಕೃಷ್ಣ ಎಲ್ಲರೂ ಒಬ್ಬರೆ, ಆದರೆ ಬೇರೆಯ ಬೇರೆಯ ಅವತಾರಗಳು ಅಷ್ಟೆ.)

ಎಡಗಡೆ: ಶ್ರೀ ರಾಮ, ಸೀತಾದೇವಿ, ಹನುಮಂತ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನ). ಬಲಗಡೆ: ದಶರಥ ರಾಜನು ಪುತ್ರಕಾಮೇಷ್ಠಿ ಯಜ್ಞವನ್ನು ಮಾಡುತ್ತಿರುರುವುದು.)

ಶ್ರೀ ರಾಮನ ವಂಶವೃಕ್ಷ ಹೀಗಿದೆ:

ಶ್ರೀ ಹರಿಯ ಮಗ ಶ್ರೀ ಬ್ರಹ್ಮ ದೇವರು | ಶ್ರೀ ಬ್ರಹ್ಮ ದೇವರ ಮಗ ಮರೀಚ | ಮರೀಚಿಯ ಮಗ ಕಾಶ್ಯಪ | ಕಾಶ್ಯಪರ ಮಗ ಸೂರ್ಯ | ಸೂರ್ಯನ ಮಗ ಮನು | ಮನುವಿನ ಮಗ ಇಕ್ಷ್ವಾಕು | 

ಇಕ್ಷ್ವಾಕುವಿನ ಮಗ ಕುಕ್ಷಿ | ಕುಕ್ಷಿಯ ಮಗ ವಿಕುಕ್ಷಿ | ವಿಕುಕ್ಷಿಯ ಮಗ ಬಾಣ | ಬಾಣನ ಮಗ ಅನರಣ್ಯ | ಅನರಣ್ಯನ ಮಗ ಪೃಥು | ಪೃಥುವಿನ ಮಗ ತ್ರಿಶಂಕು |

ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ) | ದುಂಧುಮಾರುವಿನ ಮಗ ಮಾಂಧಾತ | ಮಾಂಧಾತುವಿನ ಮಗ ಸುಸಂಧಿ | ಸುಸಂಧಿಯ ಮಗ ಧೃವಸಂಧಿ | ಧೃವಸಂಧಿಯ ಮಗ ಭರತ |

ಭರತನ ಮಗ ಅಶೀತಿ | అಶೀತಿಯ ಮಗ ಸಗರ | ಸಗರನ ಮಗ ಅಸಮಂಜಸ* | ಅಸಮಂಜಸನ ಮಗ ಅಂಶುಮಂತ | ಅಂಶುಮಂತನ ಮಗ ದಿಲೀಪ | ದಿಲೀಪನ ಮಗ ಭಗೀರಥ | ಭಗೀರಥನ ಮಗ ಕಕುತ್ಸು |

ಕಕುತ್ಸುವಿನ ಮಗ ರಘು | ರಘುವಿನ ಮಗ ಪ್ರವುರ್ಧ | ಪ್ರವುರ್ಧನ ಮಗ ಶಂಖನು | ಶಂಖನುವಿನ ಮಗ ಸುದರ್ಶನ | ಸುದರ್ಶನನ ಮಗ ಅಗ್ನಿವರ್ಣ | 

ಅಗ್ನಿವರ್ಣನ ಮಗ ಶೀಘ್ರವೇದ | ಶೀಘ್ರವೇದನ ಮಗ ಮರು | ಮರುವಿನ ಮಗ ಪ್ರಶಿಷ್ಯಕ | ಪ್ರಶಿಷ್ಯಕನ ಮಗ ಅಂಬರೀಶ | ಅಂಬರೀಶನ ಮಗ ನಹುಶ | 

ನಹುಶನ ಮಗ ಯಯಾತಿ | ಯಯಾತಿಯ ಮಗ ನಾಭಾಗ | ನಾಭಾಗನ ಮಗ ಅಜನ | ಅಜನ ಮಗ ದಶರಥ* | ದಶರಥನ ಮಗ ಭಗವಂತ ಶ್ರೀ ರಾಮ

ರಾಮನಿಗೆ ಲವ-ಕುಶರೀರ್ವರು ಮಕ್ಕಳು | ಭರತನಿಗೆ ತಕ್ಷ-ಪುಷ್ಕಲರು.. | ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು.. | ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು.. |

ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..

ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..

ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ. | ಅವನಿಂದ ನಿಷಧ | ನಭ | ಪುಂಡರೀಕ | ಕ್ಷೇಮಧನ್ವಾ | ದೇವಾನೀಕ | ಅನೀಹ | ಪಾರಿಯಾತ್ರ |

ಬಲಸ್ಥಲ | ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ. | ಇವನ ಮಗ ಖಗಣ | ವಿಧೃತಿ | 

ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡೆದ.

ಹಿರಣ್ಯನಾಭನ ಮಗ ಪುಷ್ಯ | ಧ್ರುವಸಂಧಿ | ಸುದರ್ಶನ | ಅಗ್ನಿವರ್ಣ | ಶೀಘ್ರ |

ಮರು: ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ.ಈಗಲೂ ಈ ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿವಾಸಿಸುತ್ತಿದ್ದಾನೆ.ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ.

ಮರುವಿನ ಮಗ ಪ್ರಸುಶ್ರುತ | ಸಂಧಿ | ಅಮರ್ಷಣ | ಮಹಸ್ವಂತ | ವಿಶ್ವಸಾಹ್ವ | ಪ್ರಸೇನಜಿತ್ | ತಕ್ಷಕ |

ಬೃಹದ್ಬಲ-ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ.

ಬೃಹದ್ಬಲನ ಮಗ ಬೃಹದ್ರಣ | ಉರುಕ್ರಿ | ವತ್ಸವೃದ್ಧ | ಪ್ರತಿವ್ಯೋಮ | ಭಾನು | ದಿವಾಕ | ಸಹದೇವ | ಬೃಹದಶ್ವ | ಭಾನುಮಂತ |

ಪ್ರತೀಕಾಶ್ವ | ಸುಪ್ರತೀಕ | ಮರುದೇವ | ಸುನಕ್ಷತ್ರ | ಪುಷ್ಕರ | ಅಂತರಿಕ್ಷ | ಸುತಪಸ | ಅಮಿತ್ರಜಿತ್ | ಬೃಹದ್ರಾಜ | ಬರ್ಹಿ | ಕೃತಂಜಯ |

ರಣಂಜಯ | ಸಂಜಯ | ಶಾಕ್ಯ | ಶುದ್ಧೋದ | ಲಾಂಗಲ | ಪ್ರಸೇನಜಿತ್ | ಕ್ಷುದ್ರಕ | ರಣಕ | ಸುರಥ…

ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು. ಇವರೆಲ್ಲರೂ ಇಕ್ಷ್ವಾಕು ವಂಶಸಂಭೂತರು.

ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು.

ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.

To watch videos on #Hinduism #Sanskrit language, SUBSCRIBE to my YouTube channel from this below link:

#BhagavanBhakthi YouTube channel

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ

To full list of “Chandravanshi Kings (Chandravamsha) (Lunar dynasty) family tree (members) names“, kindly click the below link:

Chandravanshi Kings (Chandravamsha) (Lunar dynasty) family tree (members) names

To know more about “Pandavas information (facts)“, please click the below link:

Pandavas information (facts)

To full list of “Suryavanshi (Solar dynasty) (Suryavamsha) family tree (members) names“, kindly click the below link:

Suryavanshi Kings (Solar dynasty) (Suryavamsha) family tree (members) names

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಶ್ರೀ ರಾಘವೇಂದ್ರಾಯ ನಮಃ

ಶ್ರೀ ಕೃಷ್ಣಾರ್ಪನಮಸ್ತು

Share in Social Media

1 Comment

  • Devaraja

    ನಮ್ಮ ಪುರಾಣ ಪುರುಷರ ಎಂದರೆ ವ್ಯಾಸರ ತಂದೆ ಯಾರು ಭಗೀರಥನ ತಂದೆ ಯಾರು ನಮ್ಮ ಪುಣ್ಯ ಪುರುಷರ ವಂಶವೃಕ್ಷಗಳು ಬೇಕಾಗಿರುತ್ತದೆ

Leave a Reply

Your email address will not be published. Required fields are marked *